Posts

Showing posts from April, 2020

ವ್ಯಾಸ- ವೇದವ್ಯಾಸ- ಕಥೆ

ವ್ಯಾಸ ೧ “ ನೀನ್ಯಾಕೆ ಕಪ್ಪಾಗಿದ್ದೀಯ ?” “ ಹಾ ?” “ ಹಹ್ಹಾ .... ನೀನ್ಯಾಕೆ ಕಪ್ಪಾಗಿದ್ದೀಯೆ ?” “ ನನ್ಗೇನ್ ಗೊತ್ತು ! ಹೋಗಿ ನಮ್ಮಪ್ಪ ಅಮ್ಮನ್ನ ಕೇಳು !” “ ಛೆ ! ಇಬ್ರೂ ಬೆಳ್ಳಗಿದ್ದಾರೆ ... ಸುಮ್ನೆ ಅವರಿಬ್ಬರ ಮಧ್ಯೆ ಯಾಕೆ ಜಗಳ ತರೋಣ ?” “ ಜಗಳಾನಾ ...?” “ ಹೋಗ್ಲಿ ಬಿಡು .... ಏನಿದ್ರೂ ಅವರಿಗೆ ಥ್ಯಾಂಕ್ಸ್ ಅಂತೂ ಹೇಳ್ಬೇಕು !” “ ಯಾಕೆ ?” “ ಕಪ್ಪಗಿರೋದ್ಕೆ ತಾನೆ ನಾನು ನಿನ್ನ ಇಷ್ಟ ಪಟ್ಟಿದ್ದು ?” “ ಆಹಾ .... ನಾನೊಬ್ಳೇ ಅನ್ನೋಥರ ಹೇಳ್ತಿಯ ಮಗ್ನೆ ... ನನ್ಗೆಲ್ಲಾ ಗೊತ್ತು !” “ ಏನು ಗೊತ್ತು ?” “ ಭಾಮೆ ವಿಷ್ಯ !” “ ಹೇ ... ಅವ್ಳು ಬಿಳಿ ಕಣೆ !” “ ಅಂದ್ರೆ ? ಕಪ್ಪಗಿರೋಳು ನಾನೊಬ್ಳೆ ಅಂತ ?” “ ಹು !” “ ನಿನ್ತಲೆ ! ಅವ್ಳತ್ರ ಹೋಗಿ ಅವಳಿ ಮಕ್ಳು ಬೇಕು ಅಂದ್ಯಂತೆ ?” “ ಹು !” “ ನನ್ಹತ್ರಾನೂ ಹೇಳ್ದೆ !” “ ಹು !” “ ಹು ಹು ಅಂದ್ರೆ ?’ “ ಹೌದು ಅಂತ ! ನಿನ್ನಿಂದ ಎರಡು ಗಂಡ್ಮಕ್ಳು - ಅವ್ಳಿಂದ ಎರಡು ಹೆಣ್ಣು !” “ ಸಾಕ ?” “ ಹಾಗೇನಿಲ್ಲ .... ನಿನ್ಗೆ ಇನ್ನೂ ಬೇಕು ಅಂದ್ರೆ ನಾನ್ ರೆಡಿ !” “ ಯಪ್ಪಾ ! ಹೇಗೋ ? ಹೌ ? ನಮ್ಮಿಬ್ಬರ ಹೆಸರು ಹಿಡ್ಕೊಂಡು ಆಟ ಆಡ್ತೀಯ ಮಗ್ನೆ !” “ ನಾನಿಟ್ಟ ಹೆಸ್ರ ನಿಮ್ದು ?” “ ಕರ್ಮ ! ನೀನು ಹೀಗೆಲ್ಲಾ ಆಡ್ತಿದ್ರೂ ಸುಮ್ನೆ ಇದ್ದೀವಲ್ಲಾಂತ ಆಶ್ಚರ್ಯ ನನ್ಗೆ !” “ ಪ್ಯೂರ್ ಲವ್ವುಕಣೆ !” “ ಇ...