Posts

Showing posts from March, 2026

ಇನ್ನೂರು!

ಸಮಯ ಎಷ್ಟಾಗಿರಬಹುದು? ಹನ್ನೆರಡು? ಒಂದು? ಎರಡು? ಊಹೆ ಸಿಗಲಿಲ್ಲ. ಮಲಗುವಾಗ ರಾತ್ರಿ ಹತ್ತಾಗಿತ್ತು! ಮಲಗಿದ್ದಷ್ಟೇ ನೆನಪು..., ಉಸಿರು ಕಟ್ಟಿದಂತಾಗಿ ಎಚ್ಚರಗೊಂಡೆ! ಕನಸು! ಏನು ಕನಸು? ಯಾರೋ ನನ್ನ ಮುಖಕ್ಕೆ ದಿಂಬನ್ನು ಇಟ್ಟು ಒತ್ತುತ್ತಿದ್ದಾರೆ! ಎಚ್ಚರಗೊಂಡು..., ಕತ್ತಲೆಗೆ ಕಣ್ಣು ಹೊಂದಿಸಿ ನೋಡಿದರೆ..., ಅವಳು ನನ್ನ ಕಾಲಬಳಿ..., ಮಂಚದ ತುದಿಯಲ್ಲಿ..., ಬೆನ್ನು ತೋರಿಸಿ ಕುಳಿತಿದ್ದಾಳೆ- ನೆರಳಿನಂತೆ! ದಿಂಬು ಒತ್ತಿದ ಸೂಚನೆಗಳೇನೂ ಇಲ್ಲ! ಒತ್ತುವವಳೂ ಅಲ್ಲ! ನಮಗೆ ಕತ್ತಲೇ ಇಷ್ಟ! ಬೆನ್ನು ಪೂರ್ತಿ ಹರಡಿರುವ ಕೂದಲು..., ನಾನು ಹಾಕಿದ್ದ ಟೇಬಲ್‌ಫ್ಯಾನಿನ ಗಾಳಿಗೆ ಹಾರಾಡುತ್ತಿದೆ. “ಯಾವಾಗ ಬಂದೆ?” ಎಂದು ಕೇಳಿದೆ. ಅವಳೇನೂ ಮಾತನಾಡಲಿಲ್ಲ. ಕುಳಿತುಕೊಂಡೇ ನಿದ್ರೆ ಮಾಡಿದಳೇನೋ ಅನ್ನಿಸಿ ಎದ್ದೆ. “ಏಳಬೇಡ..., ಮಲಗು!” ಎಂದಳು. ಅವಳನ್ನೇ ನೋಡುತ್ತಾ ಮಲಗಿದೆ. “ಯಾವಾಗ ಶುರು ಮಾಡುತ್ತಿ ನಿನ್ನ ಕರ್ಮ?” ಎಂದಳು. “ನೀನೇ ನಾನಾದಾಗ!” ಎಂದೆ. “ನಿನಗೆ ಬಿಡುಗಡೆ ಕೊಡಬೇಕು ಅಂದುಕೊಂಡಿದ್ದೇನೆ!” ಎಂದಳು. “ಬಂಧಿಸಿಕೊಂಡಿದ್ದರೆ ತಾನೆ ಬಿಡುಗಡೆ?” ಎಂದೆ. “ಬಂಧಿಸಿಕೊಂಡು ಬಿಡುಗಡೆ! ಒಪ್ಪಿಸಿಕೊಳ್ಳುತ್ತೀಯ?” ಎಂದಳು. ನಾನೇನೂ ಮಾತನಾಡಲಿಲ್ಲ. ನನ್ನೆಡೆಗೆ ತಿರುಗಿದಳು. ನೆರಳು ರೂಪದ ಅವಳು..., ನನ್ನ ಇನ್ನೂರನೇ ಕಥೆ! “ಇನ್ನುಮುಂದೆ ನನ್ನ ಹೊರತು ನಿನಗೆ ಯಾರೂ ಇರುವುದಿಲ್ಲ! ಇಷ್ಟುದಿನ ನೆರಳಿನಂತೆ ನಿನ್ನ ಜೊತೆಯಲ್ಲಿದ್ದೆ..., ಇನ್ನುಮುಂದೆ ಆತ್ಮದ...

ಶಾಂತಿಪ್ರಿಯರು!

“ಭಾರತ- ಪಾಕೀಸ್ಥಾನ ಕ್ರಿಕೆಟ್‌ನಲ್ಲಿ ಯಾರು ಗೆದ್ದರು ಯಾರು ಸೋತರು ಅನ್ನುವುದು ನನಗೆ ಮುಖ್ಯವಲ್ಲ! ಅದೊಂದು ಗೇಂ- ಅಷ್ಟೆ! ಆದರೆ ಪಂದ್ಯ ಮುಗಿಸಿದ ನಂತರ ಅವರಿಗೆ ಶೇಖ್‌ಹ್ಯಾಂಡ್ ಕೊಡದಿರುವುದು ತಪ್ಪು!” ಎಂದಳು ಗೆಳತಿ. “ಎಂತದೇ...! ಅಮಾಯಕ ಪ್ರವಾಸಿಗಳ ಪ್ಯಾಂಟ್ ಬಿಚ್ಚಿಸಿ ಅವರ ಮತವನ್ನು ಗುರುತಿಸಿ ಗುಂಡಿಟ್ಟು ಕೊಂದವರಬಗ್ಗೆ ಹೀಗೆ ಹೇಳಬಹುದೇ? ರೇಪ್ ಮಾಡಿದವನಿಗೆ ಶೇಖ್‌ಹ್ಯಾಂಡ್ ಕೊಡುವುದು ದೊಡ್ಡತನ ಅನ್ನುತ್ತಿದ್ದೀಯ?” ಎಂದು ಕೇಳಿದೆ. “ಯಾರೋ ಒಬ್ಬರು ಹಾಗೆ ಮಾಡಿದರೆಂದು ಎಲ್ಲರನ್ನೂ ಹಾಗೆ ಹೇಳಬಹುದೇ?” ಎಂದು ಕೇಳಿದಳು.  * ಪ್ರತ್ಯಕ್ಷವಾಗಿ ಕಂಡ..., ಅನುಭವಕ್ಕೆ ಬಂದ..., ವರ್ತಮಾನದ ವಾಸ್ತವಗಳಿಂದಲೇ ಕಲಿಯದ ನಾವು ಇತಿಹಾಸದಿಂದ ಕಲಿಯುತ್ತೇವೆಯೇ? ಭ್ರಮೆ!! ಆದ್ದರಿಂದ..., ಒಂದು ಕಥೆ ಹೇಳಬೇಕು ಅಂದುಕೊಂಡಿದ್ದೇನೆ! ವಿವರಿಸಿದರೆ ಸಾವಿರ ಪುಟಗಳನ್ನು ಮೀರಬಹುದಾದ ಕಥೆಯನ್ನು ಮೂರುನಾಲ್ಕು ಪುಟಗಳು ಮೀರದಂತೆ ಹೇಳಲೊಂದು ಶ್ರಮ! ಈ ಕಥೆಯಿಂದ ಕಲಿತವರು ಕಲಿತರು ಕಲಿಯದವರು ಮುಂದೆ ಕಲಿಯುತ್ತಾರೆ! ಕಥೆ ಶುರುವಾಗುವುದು ಸುಮಾರು ಏಳನೇ ಶತಮಾನದಲ್ಲಿ ವ್ಯಕ್ತಿಯೊಬ್ಬ ಬರೆದ ಒಂದು ನಿಯಮ ಪುಸ್ತಕದೊಂದಿಗೆ. ಆತನೊಬ್ಬ ಶಾಂತಿಪ್ರಿಯ ಮತಾಚಾರ್ಯ- ಅಂತೆ! ತನ್ನ ನಂಬಿಕೆಯ ಹೊರತು ಉಳಿದದ್ದೆಲ್ಲವೂ ಸುಳ್ಳು ಅನ್ನುವ..., ಆ ನಂಬಿಕೆಗಳಿಗೆ ಅನುಗುಣವಾಗಿದ್ದರೆ ಏನು ಫಲ..., ವಿರುದ್ಧವಾದರೆ ಏನು ಫಲ ಎಂದು ವಿವರಿಸಿರುವ ಆ ಪುಸ್ತಕ ಈ ಆಧುನಿಕ ಯುಗದಲ್ಲೂ ...

ಸ್ಕೆಚ್/ಪ್ಲಾನ್!

“ನಾಳೆ ಸಂಜೆಗೆ ಫಿಕ್ಸ್!” ಎಂದೆ. “ಪ್ಲಾನ್ ಅದೇನ?” ಎಂದು ಕೇಳಿದ ಕಥೆಗಾರ. “ಹಾ..., ನೀನು ಹೇಳಿದ್ದೆ..., ಆದ್ರೆ ಲಾರಿ ಅಲ್ಲ- ಬಸ್! ಬಸ್ ಆದ್ರೆ ಯಾರಿಗೂ ಜಾಸ್ತಿ ಡೌಟ್ ಆಗಲ್ಲ- ಆಕಸ್ಮಿಕ ಆಕ್ಸಿಡೆಂಟ್! ಸಿಸಿ ಕ್ಯಾಮೆರಾ ಇರೋಕಡೇನೇ ಮಾಡೋದು ಅಂತ...! ಎಲ್ಲಾ ಏರ್ಪಾಡು ಮಾಡಿ ಆಯಿತು!” ಎಂದೆ. ನಾವು ನಾಲ್ಕು ಜನ ಕುಳಿತಿದ್ದೆವು. “ಆದ್ರೂ..., ಯಾಕೆ ಅಂತ ಹೇಳಲೇ ಇಲ್ಲ ನೀನು!” ಎಂದ ಒಬ್ಬ. “ಹೇಳ್ತೀನಿ- ಈಗಲ್ಲ!” ಎಂದೆ. “ಇನ್ನೇನು ಹೊರಡೋದೇ ತಾನೆ?” ಎಂದ ಮತ್ತೊಬ್ಬ ಗೆಳೆಯ. “ಹಾ..., ನಾಳೆ ಇಲ್ಲೇ..., ಇದೇ ಟೈಂ!” ಎಂದೆ. “ಇರಿ..., ನಾಲಕ್ಕು ಟಿ ಹೇಳಿ ಬರ್ತೀನಿ! ಕುಡಿದು ಹೋಗೋಣ!” ಎಂದ ಕಥೆಗಾರ. ಅವನು ಎದ್ದು ಬಾಗಿಲು ದಾಟಿದಾಗ ಉಳಿದವರಿಗೆ ಹೇಳಿದೆ..., “ನನ್ನ ಬಗ್ಗೇನೇ ಕಥೆ ಬರೀತಾನೆ! ಏನ್ ಮಾತಾಡಿದ್ರೂ ಕಥೆ! ಮಾತಾಡದೆ ಇದ್ರೂ ಕಥೆ! ಕೂತ್ರೂ ಕಥೆ, ನಿಂತ್ರೂ ಕಥೆ! ಕೊನೆಗೆ ನಾನು ಸತ್ರೂ ಕಥೆ ಬರೀತಾನೆ!! ಸಾಕಾಗಿದೆ!! ನಾಳೆ ಸಂಜೆ ಇಲ್ಲಿಗೆ ಬರುವ ದಾರಿಯಲ್ಲಿ ಅವನ ಕಥೆ ಮುಗಿದಿರುತ್ತದೆ! ಅವನದೇ ಪ್ಲಾನ್...!”

ಆಯ್ಕೆ

“ಅವನು..., ಆ ರಾಕ್ಷಸ ಬಂದು ನನ್ನ ಬದುಕನ್ನು ಸರ್ವನಾಶ ಮಾಡಿ ಹೋದ!” “ಹೇಗೆ?” “....” “ಹೋದ ಅನ್ನುತ್ತಿದ್ದೀಯ....! ಇನ್ನೇನು ಚಿಂತೆ?” “....” “ಅವ ನಿನ್ನ ಜೀವನ ಸರ್ವನಾಶ ಮಾಡುವಾಗ ನೀನೇನು ಮಾಡುತ್ತಿದ್ದೆ? ನಿನಗದರ ಅರಿವಾಗುತ್ತಿರಲಿಲ್ಲವಾ? ಅದಕ್ಕೆ ಯಾಕೆ ಅವಕಾಶ ಕೊಟ್ಟೆ?” “....” “ನಿನ್ನ ಜೀವನ ಸರ್ವನಾಶ ಮಾಡಿದ ಅವನ ಬದುಕು ಹೇಗಿದೆ?” “....” “ಹೀಗೆ ಮೌನವಾಗಿದ್ದರೆ ಏನರ್ಥ? ಮಾತಾಡು!” “ನಿನಗೆ ಅರ್ಥವಾಗುವುದಿಲ್ಲ!” “ಸರಿ...! ಇಷ್ಟು ಮಾತ್ರ ಯಾವತ್ತಿಗೂ ನೆನಪಿಟ್ಟುಕೋ....! ನಮ್ಮ ಬದುಕಿಗೆ ಪರಿಪೂರ್ಣವಾಗಿ ನಾವೇ ಹೊಣೆಗಾರರು! ಯಾರೋ ಬಂದು ನಮ್ಮ ಬದುಕನ್ನು ಹಾಳುಮಾಡಿದರೆಂದೋ ನಾಶ ಮಾಡಿದರೆಂದೋ ಹೇಳುವುದರಷ್ಟುದೊಡ್ಡ ಮೂರ್ಖತನ ಬೇರೆಯಿಲ್ಲ. ಅದು ಆತ್ಮವಿಶ್ವಾಸವಿಲ್ಲದ..., ಕೈಯ್ಯಲ್ಲಾಗದ ಹೇಡಿಗಳು ಹೇಳುವ ಮಾತು! ಹಾಗೆಯೇ..., ಯಾರೋ ಬಂದು ನಮ್ಮನ್ನು ಉದ್ದಾರ ಮಾಡುತ್ತಾರೆಂದು ಕಾಯುತ್ತಾ ಕೂರುವುದೂ....! ಒಬ್ಬರನ್ನು ನಾವು ನಂಬಿದ್ದರಿಂದಾಗಿ..., ಒಬ್ಬರಿಗೆ ನಾವು ಕೊಟ್ಟ ಮಹತ್ವದಿಂದಾಗಿ- ಸ್ಥಾನದಿಂದಾಗಿ..., ಒಂದು ಹಂತದಲ್ಲಿ..., ನಮ್ಮ ಬದುಕಿನಲ್ಲಿ ಅಲ್ಪ ಸ್ವಲ್ಪ ಏರುಪೇರು ಉಂಟಾಗಬಹುದಾಗಲಿ..., ನಮ್ಮ ಪರಿಪೂರ್ಣ ಬದುಕನ್ನು ನಿರ್ಧರಿಸುವ ಅವಕಾಶ ನಮಗೆ ಮಾತ್ರ! ನಾವು ನೆಮ್ಮದಿಯಾಗಿರಬೇಕೋ ಬೇಡವೋ..., ಗೆಲ್ಲಬೇಕೋ ಬೇಡವೋ..., ಕೊನೆಗೆ ನಮ್ಮ ಬದುಕನ್ನು ನಿರ್ಧರಿಸುವ ಅವಕಾಶವನ್ನು ಇನ್ನೊಬ್ಬರಿಗೆ ಕೊಡಬೇಕೋ ಬೇಡವೋ ಅನ್ನುವುದು ...