ಇನ್ನೂರು!
ಸಮಯ ಎಷ್ಟಾಗಿರಬಹುದು? ಹನ್ನೆರಡು? ಒಂದು? ಎರಡು?
ಊಹೆ ಸಿಗಲಿಲ್ಲ.
ಮಲಗುವಾಗ ರಾತ್ರಿ ಹತ್ತಾಗಿತ್ತು!
ಮಲಗಿದ್ದಷ್ಟೇ ನೆನಪು..., ಉಸಿರು ಕಟ್ಟಿದಂತಾಗಿ ಎಚ್ಚರಗೊಂಡೆ!
ಕನಸು!
ಏನು ಕನಸು?
ಯಾರೋ ನನ್ನ ಮುಖಕ್ಕೆ ದಿಂಬನ್ನು ಇಟ್ಟು ಒತ್ತುತ್ತಿದ್ದಾರೆ!
ಎಚ್ಚರಗೊಂಡು..., ಕತ್ತಲೆಗೆ ಕಣ್ಣು ಹೊಂದಿಸಿ ನೋಡಿದರೆ..., ಅವಳು ನನ್ನ ಕಾಲಬಳಿ..., ಮಂಚದ ತುದಿಯಲ್ಲಿ..., ಬೆನ್ನು ತೋರಿಸಿ ಕುಳಿತಿದ್ದಾಳೆ- ನೆರಳಿನಂತೆ!
ದಿಂಬು ಒತ್ತಿದ ಸೂಚನೆಗಳೇನೂ ಇಲ್ಲ! ಒತ್ತುವವಳೂ ಅಲ್ಲ!
ನಮಗೆ ಕತ್ತಲೇ ಇಷ್ಟ!
ಬೆನ್ನು ಪೂರ್ತಿ ಹರಡಿರುವ ಕೂದಲು..., ನಾನು ಹಾಕಿದ್ದ ಟೇಬಲ್‌ಫ್ಯಾನಿನ ಗಾಳಿಗೆ ಹಾರಾಡುತ್ತಿದೆ.
“ಯಾವಾಗ ಬಂದೆ?” ಎಂದು ಕೇಳಿದೆ.
ಅವಳೇನೂ ಮಾತನಾಡಲಿಲ್ಲ.
ಕುಳಿತುಕೊಂಡೇ ನಿದ್ರೆ ಮಾಡಿದಳೇನೋ ಅನ್ನಿಸಿ ಎದ್ದೆ.
“ಏಳಬೇಡ..., ಮಲಗು!” ಎಂದಳು.
ಅವಳನ್ನೇ ನೋಡುತ್ತಾ ಮಲಗಿದೆ.
“ಯಾವಾಗ ಶುರು ಮಾಡುತ್ತಿ ನಿನ್ನ ಕರ್ಮ?” ಎಂದಳು.
“ನೀನೇ ನಾನಾದಾಗ!” ಎಂದೆ.
“ನಿನಗೆ ಬಿಡುಗಡೆ ಕೊಡಬೇಕು ಅಂದುಕೊಂಡಿದ್ದೇನೆ!” ಎಂದಳು.
“ಬಂಧಿಸಿಕೊಂಡಿದ್ದರೆ ತಾನೆ ಬಿಡುಗಡೆ?” ಎಂದೆ.
“ಬಂಧಿಸಿಕೊಂಡು ಬಿಡುಗಡೆ! ಒಪ್ಪಿಸಿಕೊಳ್ಳುತ್ತೀಯ?” ಎಂದಳು.
ನಾನೇನೂ ಮಾತನಾಡಲಿಲ್ಲ. ನನ್ನೆಡೆಗೆ ತಿರುಗಿದಳು. ನೆರಳು ರೂಪದ ಅವಳು...,
ನನ್ನ ಇನ್ನೂರನೇ ಕಥೆ!
“ಇನ್ನುಮುಂದೆ ನನ್ನ ಹೊರತು ನಿನಗೆ ಯಾರೂ ಇರುವುದಿಲ್ಲ! ಇಷ್ಟುದಿನ ನೆರಳಿನಂತೆ ನಿನ್ನ ಜೊತೆಯಲ್ಲಿದ್ದೆ..., ಇನ್ನುಮುಂದೆ ಆತ್ಮದಂತೆ ನಿನ್ನೊಳಗೆ ಸೇರಿಕೊಳ್ಳುತ್ತೇನೆ!” ಎಂದಳು.
ನನ್ನನ್ನು ಅಂಟಿ ಮಲಗಿದ್ದಷ್ಟೇ..., ಒಂದೆರಡುಕ್ಷಣ ಉಸಿರುಕಟ್ಟಿದಂತಾಗಿ..., ಹೃದಯ ಬಡಿತದ ವೇಗ ಅಸಾಮಾನ್ಯವಾಗಿ ಏರಿ..., ಅಸಾಧ್ಯ ಬೆವರು.
ಕೊನೆಗೆ...,
ಫ್ಯಾನಿನ ಶಬ್ದವೇ ಜೋಗುಳವಾಗಿ ಗಾಢ ನಿದ್ರೆ!
ಎಚ್ಚರವಾದಾಗ ಅಂತರಂಗದಲ್ಲಿ ಮೊಳಗುತ್ತಿದ್ದ ಮಾತೊಂದೇ...,
“ನೀನೇ ನಾನಾದಾಗ!”
ಇನ್ನೂರು ಅನ್ನೋದು ಕಥೆಗಳ ಸಂಖ್ಯೆ ಅನ್ನಲಾಗದ್ದಲ್ಲ, ಅದು ಕನಸುಗಳ ಅಥವ ನೀವು/ನಿಮ್ಮನ್ನು ಬೆಂಬತ್ತಿದ ಮಹಿಳಾ ಪಾತ್ರಗಳು ಆಗಿರಲುಬಹುದು, ಇಲ್ಲಿ, ಈ ಕನಸಲ್ಲಿ ನಿಮ್ಮ ಅಸಲಿ ಭಾವದರಸಿ ದಿಗ್ದರ್ಶಿಸಿದ್ದಾಳೆ, ನೆರಳು ಅಂದ್ರೆ ಜೊತೆಗಾತಿ, ಸಂಗಾತಿ, ಅನುಯಾಯಿ ಹಿಂಬಾಲಕಿ ಅಂತ ತೋರಿಸಿಕೊಟ್ಟಿದ್ದಾಳೆ, ಅತ್ಯುತ್ತಮವಾಗಿ ಕಥೆಯನ್ನು ಅರ್ಥವಾಗುವಂತೆ ಬರೆದಿದ್ದೀರಿ . ಒಂದು ಕನಸನ್ನು ಕೂಡ ಕಥೆಯಾಗಿ ಕಟ್ಟಿ ಕೊಡೋದರಲ್ಲಿ ನೀವು ನಿಷ್ಣಾತರು. ನಿಮ್ಮ ಬರಹಗಳಲ್ಲಿ ಇನ್ನೂರು ಎನಿಸಿದ ಈ ಕಥೆ ನಿಮ್ಮ ಬದುಕಿನ ಪ್ರಮುಖ ಮೈಲಿಗಲ್ಲು ಕೂಡ ಸೂಚಿಸುತ್ತದೆ. ಆನಂದಿಸಿ ✍️🙏🌿
ReplyDeleteಒಳ್ಳೆ ಕಥೆ ಆಯಿತು ಬರಿ ಕನಸೇ ಆಯಿತು ಕನಸಿನಲ್ಲಿ ಮಳೆ ಬಿದ್ದರೆ ನೆಲ ತೋಯ್ದಿತೆ ಈ ಕತೆಯನ್ನು ಆದರೂ ಚಾಮುಂಡಿ ಬೆಟ್ಟದಲ್ಲಿಟ್ಟು ಭೂತ ಭೇತಾಲಗಳ ಜೊತೆ ಇಟ್ಟು ಪೂಜೆ ಮಾಡಿ ನೆನಸಾಗಿಸಿ ಕೊಳ್ಳಿ 🤦ಇಂತಿ ನಿಮ್ಮಓದುಗ ದುರಂದರ ಅನಾಮಿಕ 🤦
ReplyDeleteನೈಜ ಆತ್ಮನುಬಂಧವಾಗಿದೆ ಈ ಶಾಶ್ವತ ಜೋಡಿದು ✍️👌🙏, ಅದಿರಲಿ ಅವಳಿಗೆ ಅವನ ಮೇಲೆ ಅದ್ಯಾಕೆ ಅಷ್ಟು ದುಸುಮುಸು, ಆ ಹೀರೋ ನೋಡಿದ್ರೆ ಅಂಟಿಕೊಂಡು ಮಲಗಿ ಬಿಡೋದಾ.., ಇನ್ನೂರು ಒಂದನೇ ಕಥೆಲೀ ಮುಂದೇನಾಗಬಹುದು ಬರೆಯಿರಿ.
ReplyDeleteMr four face National emblem, ನಿಮ್ಮ ಇನ್ನೂರಾ ಒಂದನೇ ಕಥೆಗಾಗಿ waiting... ಎಲ್ಲಿ ತಾವು ಕಥೆಗಳ ಸರದಾರ
ReplyDelete