Posts

Showing posts from April, 2026

ಅಮ್ಮ ಮಗನ ಮುಗಿಯದ ಕಥೆ!

“ನಿನ್ನ ಅಮ್ಮ ಬಿಟ್ಟರೆ ನಿನ್ನನ್ನು ಸ್ವಲ್ಪವಾದರೂ ಅರ್ಥ ಮಾಡಿಕೊಂಡಿರುವುದು ನಾನೇ ಅಂದುಕೊಳ್ಳುತ್ತೇನೆ!” ಎಂದ ಗೆಳೆಯ. ಇವನ ಈ ಮಾತನ್ನು ಪೀಠಿಕೆಯಾಗಿ ತೆಗೆದುಕೊಂಡಿರುವುದಕ್ಕೂ, ಮುಂದೆ ನಾನು ಹೇಳಲಿರುವ ವಿಷಯಕ್ಕೂ ಏನು ಸಂಬಂಧವೋ ನನಗೆ ಗೊತ್ತಿಲ್ಲ! ಹಾಗಯೇ ಈ ವಿಷಯವನ್ನು ಬೇರೆ ಹೇಗೆ ಹೇಳಬೇಕೋ ಅದೂ ಗೊತ್ತಿಲ್ಲ! ವಿಷಯವನ್ನು ಹೇಳಿ ಮುಗಿಸಿದ ಮೇಲೆ ಪೀಠಿಕೆಯನ್ನು ಕನೆಕ್ಟ್ ಮಾಡುವಂತೆ ಏನಾದರೂ ಹೊಳೆಯಬಹುದೇನೋ ನೋಡೋಣ! ೧ ಇಪ್ಪತ್ತನೆಯ ವಯಸ್ಸಿನಿಂದ ಮೂವತ್ತ ನಾಲ್ಕನೆಯ ವಯಸ್ಸಿನವರೆಗೆ ನನ್ನ ತೂಕ ಅರವತ್ತೆಂಟು ಕೆ.ಜಿ! ಆಚೆಯಿಲ್ಲ, ಈಚೆಯಿಲ್ಲ! ನಂತರ ಕೊರೋನ ಬಂತು! ಜೊತೆಗೆ- ಆಕ್ಸಿಡೆಂಟ್ ಆಗಿ ಕಾಲಿನ ಲಿಗಮೆಂಟ್ ಕಟ್ ಆಯ್ತು! ಆಪರೇಷನ್ ಆಯ್ತು! ಒಂದು- ಒಂದೂವರೆ ತಿಂಗಳಿಗೆ ನನ್ನ ತೂಕ ಎಪ್ಪತ್ತ ಆರು ಕೆ.ಜಿ ಆಯ್ತು- ಎಂಟು ಕೆ.ಜಿ ಜಾಸ್ತಿ!!! ಡಾಕ್ಟರನ್ನು ಕೇಳಿದರೆ ಮುಂಚಿನಂತೆ ಚಾಮುಂಡಿ ಬೆಟ್ಟ ಹತ್ತಿ ಇಳಿಯುವಂತಾಗಲು ಮಿನಿಮಂ ಎರಡು ವರ್ಷವಾದರೂ ಬೇಕು ಅಂದರು! ಆರನೆಯ ತಿಂಗಳಿಗೇ ನಾನು ಬೆಟ್ಟ ಹತ್ತೋದು ಶುರು ಮಾಡಿದೆ! ವರ್ಷ ಐದಾರು ದಾಟಿದರೂ ನನ್ನ ತೂಕ ಎಪ್ಪತ್ತ ನಾಲ್ಕರಿಂದ ಕೆಳಗೆ ಇಳಿಯಲೇ ಇಲ್ಲ! ಈಗ..., ಈ ಅಸಾಧ್ಯವಾದ ಬೇಸಗೆಯಲ್ಲಿ..., ಬೆಟ್ಟ ಹತ್ತಲು ಹೋಗಿ ಕಾಲು ಉಳುಕಿಸಿಕೊಂಡು ಹತ್ತು ಹದಿನೈದು ದಿನದ ರೆಸ್ಟ್ ನಂತರ ತೂಕ ಚೆಕ್ ಮಾಡಿದರೆ...., ಎಪ್ಪತ್ತು ಕೆ.ಜಿ ಆಗಿದ್ದೇನೆ! ಅದನ್ನು ನೋಡಿದ ಅಮ್ಮ ಎದೆಯಮೇಲೆ ಕೈಯಿಟ್ಟು ಹೇಳಿದರು...,...