Posts

Showing posts from September, 2026

ಗಣ

ಗಣ * ಗಾಢ ನಿದ್ರೆ. ಕನಸು. ಅಲರಾಂ ಸೌಂಡಿಗೆ ಬೆಚ್ಚಿ ಕಣ್ಣು ಬಿಟ್ಟೆ. ಕತ್ತಲು. ಕಾಣುತ್ತಿದ್ದ ಕನಸು ಮರೆಯದಂತೆ ಮತ್ತೊಮ್ಮೆ ನೆನಪಿಸಿಕೊಂಡೆ. ಸುಮಾರು ನಲವತ್ತು ವರ್ಷ ಮುಂಚೆ ನಡೆದ ಸಣ್ಣ ಘಟನೆ- ಕನಸಿನಲ್ಲಿ! ಆ ಘಟನೆ ಮರೆಯುವುದಿಲ್ಲ..., ಆದರೆ ಈಗ ಕನಸಾಗಿ ಬಂದಿದ್ದರ ಅರ್ಥವೇನಿರಬಹುದು? ನನಗಾಗ ಹತ್ತು ವರ್ಷ ವಯಸ್ಸು. ಐದನೇ ತರಗತಿಯಲ್ಲಿ ಓದುತ್ತಿದ್ದೆ. ಮಧ್ಯಾಹ್ನದ ಊಟದ ಸಮಯ. ಶಾಲೆಯ ಹಿಂಬಾಗದಲ್ಲಿ ಸ್ಮಶಾನ! ಗೆಳೆಯರು ಬರುವುದಿಲ್ಲವಾದ್ದರಿಂದ- ಒಬ್ಬನೇ ಕಾಂಪೌಂಡ್ ಹಾರಿ ಸ್ಮಾಶನಕ್ಕೆ ಹೋದೆ. ಅಲ್ಲೊಂದು ಹುಣಸೇ ಮರ. ಅದನ್ನು ಹತ್ತಿ ಹುಣಸೆ ಹಣ್ಣುಗಳನ್ನು ಕಿತ್ತು ಕೆಳಗಿಳಿದೆ. ಮರದ ಬುಡದಲ್ಲಿ ಕುಳಿತು ಹಣ್ಣೊಂದನ್ನು ಚಪ್ಪರಿಸುತ್ತಿದ್ದೆ. ಮರದ ಎಲೆಗಳ ಗಲಗಲ ಶಬ್ದದೊಂದಿಗೆ ಹದ್ದಿನ ಶಬ್ದವೂ ಕೇಳಿಸಿ ತಲೆಯೆತ್ತಿ ನೋಡಿದೆ. ಎಂತಹಾ ಅದ್ಭುತ ದೃಶ್ಯ! ಸಣ್ಣಸಣ್ಣ ಎಲೆಗಳ ನಡುವಿನಿಂದ ಕಾಣಿಸುತ್ತಿದ್ದ ಸೂರ್ಯ! ಆ ಸೂರ್ಯನ ಮಧ್ಯಭಾಗದಲ್ಲಿರುವಂತೆ..., ಹದ್ದು- ನೆರಳಿನಂತೆ! ನಡುಮಧ್ಯಾಹ್ನದ ಸೂರ್ಯನನ್ನು ನೇರವಾಗಿ ನೋಡಲಾಗದು, ಆದರೆ ಮರದ ಎಲೆಗಳ ನಡುವಿನಿಂದ..., ಹದ್ದಿನ ಮರೆಯಲ್ಲಿ..., ಕಣ್ಣು ಚಿಕ್ಕದು ಮಾಡಿ- ನೋಡಬಹುದು! ಅತ್ಯಂತ ಏಕಾಗ್ರಚಿತ್ತನಾಗಿ ಅದನ್ನೇ ನೋಡುತ್ತಿದ್ದೆ. ಮೈ ಹಗುರಾದಂತೆ..., ನನ್ನಿಂದ ನಾನು ಬೇರೆಯಾದಂತೆ- ಭಾವ! ಎದ್ದೇಳಲು ಶ್ರಮಿಸಿದವನು ತಲೆ ತಿರುಗಿದಂತಾಗಿ ಅಲ್ಲಿಯೇ ಬಿದ್ದುಬಿಟ್ಟೆ. ನಂತರ ಎಷ್ಟುಹೊತ್ತು ಮೂರ್ಚಿತನಾಗಿ ...