Posts

Showing posts from June, 2026

ಮಾತಾದ್ವೈತ

ಭಯಂಕರ ಡಿಪ್ರೆಶನ್! ಬ್ರಹ್ಮಾಂಡದೊಂದಿಗೆ ಮಾತಾಡಿದ ಹೊರತು ಡಿಪ್ರೆಶನ್ ಹೋಗುವುದಿಲ್ಲ! ಅಮ್ಮನೊಂದಿಗೆ ಮಾತಿಗೆ ಕುಳಿತೆ! * ಅಮ್ಮ ಸಮುದ್ರ ಅಮ್ಮ ಪರ್ವತ ಅಮ್ಮ ಪ್ರಪಂಚ ಅಮ್ಮ ಬ್ರಹ್ಮಾಂಡ ಕೊನೆಗೆ..., ಅಮ್ಮ- ಅಮ್ಮ! * ಅಮ್ಮ- ಮಗ ಪರಮಾತ್ಮ- ಜೀವಾತ್ಮ! ಇಷ್ಟೇ..., ಅದ್ವೈತ ತತ್ತ್ವ!!

ಪ್ರಖ್ಯಾತ ಸಾಹಿತಿಯ- ಕಥೆ!

ನನ್ನ ಬದುಕಿನಲ್ಲಿ ನಾನು ವೈಯುಕ್ತಿಕವಾಗಿ ಪರಿಚಯವಾದ ಮೊಟ್ಟ ಮೊದಲ "ಪ್ರಖ್ಯಾತ" ಬರಹಗಾರ ಆತ! ಆತನ ನಂತರ ಯಾವೊಬ್ಬ ಪ್ರಖ್ಯಾತರನ್ನು ಭೇಟಿಯಾಗಲೂ ನಾನು ಶ್ರಮಿಸಿದವನಲ್ಲ! ವಿಐಪಿ-ಗಳಿಗೂ ನನಗೂ ಆಗಿಬರುವುದಿಲ್ಲ!!! ನಾನು ಯಾರೊಬ್ಬರ ಕಣ್ಣಿಗೂ ಬೀಳದೆ ಕತ್ತಲಲ್ಲಿಯೇ ಬದುಕಲು ಇಷ್ಟಪಡುವವ! ಈ ಬ್ಯುಸಿ ಪ್ರಪಂಚದಲ್ಲಿ..., ಬ್ಯುಸಿಯಾಗಿರುವ ಎಲ್ಲರಿಗೂ ನಾನೊಂದು ಹೊರೆ ಅನ್ನುವುದು ನನ್ನ ಅಭಿಪ್ರಾಯ! ಅದೇ ಕಾರಣಕ್ಕೆ ಅವರಿಂದ- ಬ್ಯುಸಿ ಪ್ರಪಂಚದಿಂದ ದೂರವಾಗಿ ಬದುಕುತ್ತಿರುವವ! ಆ ನಾನು..., ಆ ಸಾಹಿತಿಗೆ ಕೊಟ್ಟ ಮಹತ್ವ ಅತಿಯಾಯಿತೇನೋ ಅನ್ನಿಸಿದ್ದು- ಆತನಿಂದ ನಾನು ಅವಜ್ಞೆಗೆ ಒಳಗಾದಾಗ!! ಆದ ಅವಜ್ಞೆಯನ್ನು ಕಥೆಯಂತೆ ಬರೆದಿದ್ದೆ! ಆ ಕಥೆ ಆತನಿಗೆ ತಲುಪಿರಬಹುದಾ?! ಈ ಊಹೆಯಲ್ಲಿ ಒಂದುರೀತಿಯ ಪೈಶಾಚಿಕ ಆನಂದವಿದೆ! ಊಹೆ ಯಾಕೆ?! ಫೇಸ್‌ಬುಕ್‌ನಲ್ಲಿ ಆತನ ಪ್ರೊಫೈಲ್ ಹುಡುಕುತ್ತಿದ್ದೆ. ಎಷ್ಟು ಹುಡುಕಿದರೂ ಸಿಗಲಿಲ್ಲ! ಆಶ್ಚರ್ಯವಾಯಿತು! ಅಮ್ಮನ ಅಕೌಂಟ್‌ನಲ್ಲಿ ಹುಡುಕಿದೆ. ಮೊದಲ ಮೂರಕ್ಷರ ಟೈಪ್ ಮಾಡುವಷ್ಟರಲ್ಲಿ ಪ್ರತ್ಯಕ್ಷವಾಯಿತು! ಗೆಳಯನ ಅಕೌಂಟ್‌ನಲ್ಲಿ ಹುಡುಕಿಸಿದೆ- ಮೂರಕ್ಷರ ಟೈಪ್ ಮಾಡುವಷ್ಟರಲ್ಲಿ ಪ್ರತ್ಯಕ್ಷ! ಇನ್ನೂ ಮೂವರು ನಾಲ್ವರಲ್ಲಿ ಹುಡುಕಿಸಿದೆ- ಹೆಸರು ಬಂತು!! ನನಗೆ ಮಾತ್ರ ಬರಲಿಲ್ಲ! ನ-ನ-ಗೆ ಮಾತ್ರ ಆತನ ಫೇಸ್‌ಬುಕ್ ಅಕೌಂಟ್ ಕಾಣಿಸುತ್ತಿಲ್ಲವೆಂದರೆ??? ಓದಿ ಅಭಿಪ್ರಾಯ ಹೇಳಿ, ಓದಿ ತಪ್ಪುಗಳನ್ನು ತಿದ್ದಿಕೊಡಿ ಎಂದು ಹೇ...