ಪ್ರಖ್ಯಾತ ಸಾಹಿತಿಯ- ಕಥೆ!
ನನ್ನ ಬದುಕಿನಲ್ಲಿ ನಾನು ವೈಯುಕ್ತಿಕವಾಗಿ ಪರಿಚಯವಾದ ಮೊಟ್ಟ ಮೊದಲ "ಪ್ರಖ್ಯಾತ" ಬರಹಗಾರ ಆತ!
ಆತನ ನಂತರ ಯಾವೊಬ್ಬ ಪ್ರಖ್ಯಾತರನ್ನು ಭೇಟಿಯಾಗಲೂ ನಾನು ಶ್ರಮಿಸಿದವನಲ್ಲ!
ವಿಐಪಿ-ಗಳಿಗೂ ನನಗೂ ಆಗಿಬರುವುದಿಲ್ಲ!!!
ನಾನು ಯಾರೊಬ್ಬರ ಕಣ್ಣಿಗೂ ಬೀಳದೆ ಕತ್ತಲಲ್ಲಿಯೇ ಬದುಕಲು ಇಷ್ಟಪಡುವವ!
ಈ ಬ್ಯುಸಿ ಪ್ರಪಂಚದಲ್ಲಿ..., ಬ್ಯುಸಿಯಾಗಿರುವ ಎಲ್ಲರಿಗೂ ನಾನೊಂದು ಹೊರೆ ಅನ್ನುವುದು ನನ್ನ ಅಭಿಪ್ರಾಯ!
ಅದೇ ಕಾರಣಕ್ಕೆ ಅವರಿಂದ- ಬ್ಯುಸಿ ಪ್ರಪಂಚದಿಂದ ದೂರವಾಗಿ ಬದುಕುತ್ತಿರುವವ!
ಆ ನಾನು..., ಆ ಸಾಹಿತಿಗೆ ಕೊಟ್ಟ ಮಹತ್ವ ಅತಿಯಾಯಿತೇನೋ ಅನ್ನಿಸಿದ್ದು- ಆತನಿಂದ ನಾನು ಅವಜ್ಞೆಗೆ ಒಳಗಾದಾಗ!!
ಆದ ಅವಜ್ಞೆಯನ್ನು ಕಥೆಯಂತೆ ಬರೆದಿದ್ದೆ!
ಆ ಕಥೆ ಆತನಿಗೆ ತಲುಪಿರಬಹುದಾ?!
ಈ ಊಹೆಯಲ್ಲಿ ಒಂದುರೀತಿಯ ಪೈಶಾಚಿಕ ಆನಂದವಿದೆ!
ಊಹೆ ಯಾಕೆ?!
ಫೇಸ್‌ಬುಕ್‌ನಲ್ಲಿ ಆತನ ಪ್ರೊಫೈಲ್ ಹುಡುಕುತ್ತಿದ್ದೆ. ಎಷ್ಟು ಹುಡುಕಿದರೂ ಸಿಗಲಿಲ್ಲ! ಆಶ್ಚರ್ಯವಾಯಿತು! ಅಮ್ಮನ ಅಕೌಂಟ್‌ನಲ್ಲಿ ಹುಡುಕಿದೆ. ಮೊದಲ ಮೂರಕ್ಷರ ಟೈಪ್ ಮಾಡುವಷ್ಟರಲ್ಲಿ ಪ್ರತ್ಯಕ್ಷವಾಯಿತು! ಗೆಳಯನ ಅಕೌಂಟ್‌ನಲ್ಲಿ ಹುಡುಕಿಸಿದೆ- ಮೂರಕ್ಷರ ಟೈಪ್ ಮಾಡುವಷ್ಟರಲ್ಲಿ ಪ್ರತ್ಯಕ್ಷ! ಇನ್ನೂ ಮೂವರು ನಾಲ್ವರಲ್ಲಿ ಹುಡುಕಿಸಿದೆ- ಹೆಸರು ಬಂತು!!
ನನಗೆ ಮಾತ್ರ ಬರಲಿಲ್ಲ!
ನ-ನ-ಗೆ ಮಾತ್ರ ಆತನ ಫೇಸ್‌ಬುಕ್ ಅಕೌಂಟ್ ಕಾಣಿಸುತ್ತಿಲ್ಲವೆಂದರೆ???
ಓದಿ ಅಭಿಪ್ರಾಯ ಹೇಳಿ, ಓದಿ ತಪ್ಪುಗಳನ್ನು ತಿದ್ದಿಕೊಡಿ ಎಂದು ಹೇಳಿ ಕೊಟ್ಟಾಗ ಓದದ ನನ್ನಂತಾ ಹೊಸ ಕಥೆಗಾರನ ಕಥೆಯನ್ನು..., ಅವರೊಂದಿಗಿನ ಅನುಭವವನ್ನು ಕಥೆಯಾಗಿ ಬರೆದಾಗ- ಹೇಳದೆಯೇ ಓದಿದ್ದಾರೆಯೇ?!
ಸಾಮಾನ್ಯವಾಗಿ ಯಾರಾದರೂ ತಮ್ಮ ಕಥೆಯನ್ನು ಕೊಟ್ಟು ಓದಿ ಅಭಿಪ್ರಾಯ ಹೇಳಿ ಅಂದಾಗ..., ಕಥೆ ಓದಿ ನನ್ನ ಮನದಾಳದ ಅಭಿಪ್ರಾಯ ಹೇಳಿದರೆ- ಕಥೆಗಾರ ನನ್ನನ್ನು ದೂರ ಇಡುವುದು ವಾಡಿಕೆ!!
ಇಲ್ಲಿ ನಾನು ಬರೆದ ಕಥೆಗೆ ಅಭಿಪ್ರಾಯ ಕೇಳಿದರೆ- ನನ್ನನ್ನೇ ದೂರ ಇಡುವುದೇ?!!!!!
ವಿಚಿತ್ರ ಪ್ರಪಂಚ ಮಾರ್ರೆ!!!
Comments
Post a Comment