Posts

Showing posts from July, 2026

ಹೋಟೆಲ್ ಸಿತಾರ

  ಹೋಟೆಲ್ ಸಿತಾರ- ಪಾಲಕ್ಕಾಡ್! ಸೂಪರ್ ಎಕಾನಮಿ ರೂಂ ಬುಕ್ ಮಾಡಿದ್ದೆ. ಅಂದರೆ ಅತಿ ಕಡಿಮೆ ಬೆಲೆಯ ರೂಂ! ನಾಲಕ್ಕನೆಯಬಾರಿ ಈ ಹೋಟೆಲ್‌ಗೆ ಬರುತ್ತಿರುವುದು! ಒಬ್ಬನೇ... ಮೂರನೆಯ ಮಹಡಿಯಲ್ಲಿ ರೂಂ. ಭರ್ಜರಿ ಮಳೆ. ಬರಗಾಲ ಡಿಕ್ಲೇರ್ ಆಗಿತ್ತು! ಜೊತೆಗೆ..., ಜೂನ್ ಮುಗಿದರೂ ಮಳೆ ಬಂದಿರಲಿಲ್ಲವಾದ್ದರಿಂದ..., ಮಳೆಯೇ ಬರುವುದಿಲ್ಲ ಅನ್ನುವ ಅತಿಯಾದ ನಂಬಿಕೆಯಿಂದ ಟೂ-ವೀಲರ್‌ನಲ್ಲಿಯೇ ಬಂದಿದ್ದೆ. ಹಸನೂರು ಚೆಕ್‌ಪೋಸ್ಟ್ ದಾಟಿ ಬನ್ನಾರಿ ಹೇರ್‌ಪಿನ್ ಕರ್ವ್‌ಗಳಲ್ಲಿ ಗಾಡಿ ಓಡಿಸುವಾಗ ಶುರುವಾಯಿತು ಮಳೆ! ಎಲ್ಲಿ ನಿಲ್ಲಿಸುವುದು? ನನಗೇನೂ ಮಳೆಯಲ್ಲಿ ಗಾಡಿ ಓಡಿಸುವುದು ಹೊಸದಲ್ಲ! ಒಮ್ಮೆ ಒದ್ದೆಯಾದರೆ ಮುಗಿಯಿತು..., ತಲುಪಬೇಕಾದ ಜಾಗ ತಲುಪಿದಮೇಲೆಯೇ ನಿಲ್ಲಿಸುವುದು! ಮಧ್ಯದ ಟಿ-ಬ್ರೇಕ್ ಇದ್ದೇ ಇರುತ್ತೆ ಹೊರತು..., ಮಳೆ ಅನ್ನುವ ಕಾರಣಕ್ಕೆ ಎಲ್ಲೂ ನಿಂತುಕೊಳ್ಳುವುದಿಲ್ಲ! ಆದರೂ ಇಷ್ಟು ಮಟ್ಟಿನ ಮಳೆಯಲ್ಲಿ ಇದೇ ಮೊದಲು! ಪಾಲಕ್ಕಾಡ್‌ವರೆಗೂ ಗ್ಯಾಪ್‌ಏ ಇಲ್ಲದಂತೆ! ಹೋಟೆಲ್ ತಲುಪಿ ರಿಸಪ್ಷನ್ ಬಳಿ ಹೋದಾಗ ಪರಿಚಯದ ನಗು. ಒದ್ದೆಯಾದ ನನ್ನನ್ನು ಕಂಡು ಕೀ ತೆಗೆದುಕೊಟ್ಟು..., “ಮೊದಲು ಫ್ರೆಶ್ಶಪ್ಪಾಗಿ ಬನ್ನಿ, ಫಾರ್ಮಾಲಿಟೀಸ್ ಆಮೇಲೆ ನೋಡ್ಕೋಳೋಣ!” ಎಂದರು. “ಎಷ್ಟು ಹೊತ್ತಿಗೆ ಬರೋಕೆ ಹೇಳಿದ್ದಾರೆ?!” ಎಂದು ಕೇಳಿದೆ. “ಎಂಟು ಗಂಟೆಗೆ...!” ಎಂದರು. ಸಮಯವನ್ನು ನೊಡಿಕೊಂಡೆ. ಈಗ ಇನ್ನೂ ಐದು ಗಂಟೆ. ಟಕಟಕನೆ ಮೆಟ್ಟಿಲು ಹತ್ತಿ..., ನನ್ನ ಎಂದಿನ ರೂ...

ಹೀಗೊಂದು ಕಥೆ!

ಬೆಳಗ್ಗೆ ನಾಲ್ಕೂವರೆ. ಮನೆಯಿಂದ ಗಾಡಿಯಲ್ಲಿ ಬೆಟ್ಟದ ತಪ್ಪಲಿಗೆ ಹೋಗ್ತಿದ್ದೆ. ಸ್ಟೆಪ್ ಹತ್ತಲು. ಎಂದಿನಂತೆ ಸುಮಾರು ಹತ್ತಿಪ್ಪತ್ತು ನಾಯಿಗಳು. ಗಾಡಿ ಸ್ಪೀಡ್ ಇದ್ದರೆ ಅಟ್ಟಿಸುತ್ತದೆ. ಸ್ಲೋ ಮಾಡಿದರೆ, ನಿಲ್ಲಿಸಿದರೆ- ಓಡಿ ಹೋಗುತ್ತವೆ! ಒಂದು ತಿರುವಿನ ಬಳಿ ತಲುಪಿದಾಗ ಒಬ್ಬರು ಹೆಂಗಸು. ಪಾಪ ನಾಯಿಗಳನ್ನು ಕಂಡು ಹೆದರಿ ನಿಂತಿದ್ದಾರೆ. ಕಲ್ಲುಗಳನ್ನು ಆರಿಸಿಕೊಳ್ಳುತ್ತಿದ್ದಾರೆ. ಅವರನ್ನು ದಾಟಿ ಹೋದೆ. ತಿರುವು ತಿರುಗಿ ನಿಂತೆ. ಎರಡುನಿಮಿಷವಾದರೂ ಅವರು ಕಾಣಿಸಲಿಲ್ಲ. ಮನಸ್ಸು ತಡೆಯದೆ ವಾಪಸ್ ಬಂದೆ. ನಾಯಿಗಳು ಕಚ್ಚುತ್ತವೋ ಇಲ್ಲವೋ..., ಹೆದರಿಕೆಯಾಗುವುದು ನಿಜ. ನನಗಾದರೆ ಗೊತ್ತು..., ಪ್ರಾಕ್ಟೀಸ್ ಆಗಿದೆ- ಕಚ್ಚುವುದಿಲ್ಲ! ಅವರು ನಾಯಿಗಳನ್ನು ದಾಟಲಾಗದೆ ಚಡಪಡಿಸುತ್ತಿದ್ದಾರೆ. ಯಾರಿಗೋ ಫೋನ್ ಮಾಡುತ್ತಿದ್ದಾರೆ- ಧೈರ್ಯಕ್ಕೆ ಇರಬಹುದು! ನಾನು ಹೋಗಿ ನಾಯಿಗಳಿಗೂ ಅವರಿಗೂ ಅಡ್ಡ ನಿಂತೆ. ಹೆದರಿಕೆಯಿಂದಲೇ ಹೇಗೋ ದಾಟಿ ಹೋದರು. ಅವರು ತಿರುವು ತಿರುಗುವುದನ್ನೇ ಕಾಯುತ್ತಿದ್ದು ನಾನೂ ಹೊರಟೆ. ನಿಧಾನಕ್ಕೆ ಅವರನ್ನು ದಾಟಿ ಹೋಗುವಾಗ ಅವರು ಫೋನ್‌ನಲ್ಲಿ ಹೇಳುತ್ತಿರುವುದು ಕೇಳಿಸಿತು. “ನಾಯಿಗಳನ್ನ ಹೇಗೋ ಸಂಭಾಳಿಸಬಹುದು ಮನುಷ್ಯರನ್ನ ಕಷ್ಟ! ಅವ್ನು ಹಾಗೆ ಬಂದು ನಿಂತಾಗ ಜೀವ ಹೋದಂಗಾಯ್ತು! ಹಿಂದೆ ಯಾರೋ ಬಂದ್ರು ಅನ್ಸುತ್ತೆ ಹಾಗೇ ನಿಂತಿದ್ದ-” ಎಂದು ಹೇಳಿ ನನ್ನನ್ನು ಗಮನಿಸಿ..., “ಯಾಕೋ ಫಾಲೋ ಮಾಡ್ತಿದಾನೆ ಅನ್ನಿಸ್ತಿದೆ- ಹೆದರಿಕೆಯಾಗುತ್ತ...

ಬದುಕು

ಬರೆದು ಮುಗಿಸಲಾಗದ..., ಆದರೆ..., ಬರೆಯದಿದ್ದರೂ ಮುಗಿಯುವ ಕಥೆ- ಬದುಕು!

ಶ್ರೀ-ನಾದಿಯಾ!

ಆಶ್ಚರ್ಯದಿಂದ ಅವನನ್ನೇ ನೋಡಿದೆ. ಅ-ವ-ನ ಕಣ್ಣಿನಲ್ಲಿ ನಾಚಿಕೆ! “ಪ್ಯಾಂಟ್ ತೆಗಿ!” ಎಂದೆ. ಎಷ್ಟು ಹಿಂಜರಿಯುತ್ತಾನೆ..., ಇದೇ ಮೊದಲೇನೋ ಅನ್ನುವಂತೆ!! “ಎಂತದೆ ಹಾಗೆ ನೋಡ್ತಿ?!” ಎಂದ- ಪ್ಯಾಂಟ್ ತೆಗೆಯುವ ಯಾವ ಲಕ್ಷಣಗಳೂ ಕಾಣಿಸಲಿಲ್ಲ! “ಪ್ಯಾಂಟ್ ತೆಗಿ ಅಂದ್ರೆ ಒಳ್ಳೆ ಹೆಣ್ಮಕ್ಳ್‌ತರ ನಾಚ್ಕೋತಿದೀಯ?!” ಅಂದೆ. “ನಾಚಿಕೆಯೇನು ಹೆಣ್ಣುಮಕ್ಕಳ ಸ್ವತ್ತಾ? ನಮಗೂ ನಾಚಿಕೆ ಮರ್ಯಾದೆಯೆಲ್ಲಾ ಇದೆ!” ಎಂದ. “ಇಷ್ಟುದಿನ ಇಲ್ಲದ್ದು???” ಎಂದು ಒತ್ತಿ ಕೇಳಿದೆ. “ಇಷ್ಟುದಿನ ನಾನೆಲ್ಲೆ ನಿನ್ನಮುಂದೆ ಪ್ಯಾಂಟ್‌ಬಿಚ್ಚಿ ನಿಂತಿದೀನಿ?” ಎಂದ. ತೇಲುಗಣ್ಣುಮಾಡಿದೆ. ಎಲಾ ಇವನಾ....! ಎಷ್ಟುಸಾರಿ ಸೇರಿರ್ತೀವಿ? ಹತ್ತು? ಇಪ್ಪತ್ತು? ಮೂವತ್ತು.....?! ಸೇರಬೇಕೆಂದರೆ ಬೆತ್ತಲಾಗದೆ ಹೇಗೆ??? ಅವನ ಅಜ್ಜೀನಾ ಬಡಿಯ- ನಾಟಕ ಮಾಡ್ತಾನೆ! ಯೋಚನೆ ನಿಂತಿತು...! ಏನೋ ಅನುಮಾನ...! ನಿಜಾ....! ಭೇಟಿಯಾಗುತ್ತೇವೆ..., ಮಾತುಕತೆಯಾಗುತ್ತದೆ..., ಯಾವುದೋ ಸಂದರ್ಭದಲ್ಲಿ ಆ ಕ್ರಿಯೆಗೆ ಜಾರುತ್ತೇವೆ..., ಯಾವುದೇ ಮುಜುಗರವಿಲ್ಲದೆ 'ನನ್ನ' ಬಟ್ಟೆಗಳನ್ನು ಕಳಚಿ- ಉಂಗುಷ್ಟದಿಂದ ನೆತ್ತಿಯವರೆಗೆ ಮುದ್ದುಮಾಡಿ ನ-ನ್ನ-ನ್ನುಪ್ರಿಪೇರ್ ಮಾಡುತ್ತಾನೆ..., ನಾನೇ, ಇನ್ನು ತಡೆದುಕೊಳ್ಳಲಾಗದು ಅನ್ನುವ ಹಂತದಲ್ಲಿ..., ಅವನನ್ನು..., ಬಟ್ಟೆ ತೆಗೆಯುತ್ತಿದ್ದೇನೆನ್ನುವ ಅರಿವೇ ಇಲ್ಲದಂತೆ- ತೆಗೆದು- ಸೆಳೆದುಕೊಳ್ಳುತ್ತೇನೆ..., ಆವರಿಸಿಕೊಳ್ಳುತ್ತಾನೆ..., ಸಂತೃಪ್ತಿಯಿಂದ ಮ...