ಶ್ರೀ-ನಾದಿಯಾ!

ಆಶ್ಚರ್ಯದಿಂದ ಅವನನ್ನೇ ನೋಡಿದೆ. ಅ-ವ-ನ ಕಣ್ಣಿನಲ್ಲಿ ನಾಚಿಕೆ!

“ಪ್ಯಾಂಟ್ ತೆಗಿ!” ಎಂದೆ.

ಎಷ್ಟು ಹಿಂಜರಿಯುತ್ತಾನೆ..., ಇದೇ ಮೊದಲೇನೋ ಅನ್ನುವಂತೆ!!

“ಎಂತದೆ ಹಾಗೆ ನೋಡ್ತಿ?!” ಎಂದ- ಪ್ಯಾಂಟ್ ತೆಗೆಯುವ ಯಾವ ಲಕ್ಷಣಗಳೂ ಕಾಣಿಸಲಿಲ್ಲ!

“ಪ್ಯಾಂಟ್ ತೆಗಿ ಅಂದ್ರೆ ಒಳ್ಳೆ ಹೆಣ್ಮಕ್ಳ್‌ತರ ನಾಚ್ಕೋತಿದೀಯ?!” ಅಂದೆ.

“ನಾಚಿಕೆಯೇನು ಹೆಣ್ಣುಮಕ್ಕಳ ಸ್ವತ್ತಾ? ನಮಗೂ ನಾಚಿಕೆ ಮರ್ಯಾದೆಯೆಲ್ಲಾ ಇದೆ!” ಎಂದ.

“ಇಷ್ಟುದಿನ ಇಲ್ಲದ್ದು???” ಎಂದು ಒತ್ತಿ ಕೇಳಿದೆ.

“ಇಷ್ಟುದಿನ ನಾನೆಲ್ಲೆ ನಿನ್ನಮುಂದೆ ಪ್ಯಾಂಟ್‌ಬಿಚ್ಚಿ ನಿಂತಿದೀನಿ?” ಎಂದ.

ತೇಲುಗಣ್ಣುಮಾಡಿದೆ. ಎಲಾ ಇವನಾ....! ಎಷ್ಟುಸಾರಿ ಸೇರಿರ್ತೀವಿ? ಹತ್ತು? ಇಪ್ಪತ್ತು? ಮೂವತ್ತು.....?! ಸೇರಬೇಕೆಂದರೆ ಬೆತ್ತಲಾಗದೆ ಹೇಗೆ??? ಅವನ ಅಜ್ಜೀನಾ ಬಡಿಯ- ನಾಟಕ ಮಾಡ್ತಾನೆ!

ಯೋಚನೆ ನಿಂತಿತು...! ಏನೋ ಅನುಮಾನ...! ನಿಜಾ....!

ಭೇಟಿಯಾಗುತ್ತೇವೆ..., ಮಾತುಕತೆಯಾಗುತ್ತದೆ..., ಯಾವುದೋ ಸಂದರ್ಭದಲ್ಲಿ ಆ ಕ್ರಿಯೆಗೆ ಜಾರುತ್ತೇವೆ..., ಯಾವುದೇ ಮುಜುಗರವಿಲ್ಲದೆ 'ನನ್ನ' ಬಟ್ಟೆಗಳನ್ನು ಕಳಚಿ- ಉಂಗುಷ್ಟದಿಂದ ನೆತ್ತಿಯವರೆಗೆ ಮುದ್ದುಮಾಡಿ ನ-ನ್ನ-ನ್ನುಪ್ರಿಪೇರ್ ಮಾಡುತ್ತಾನೆ..., ನಾನೇ, ಇನ್ನು ತಡೆದುಕೊಳ್ಳಲಾಗದು ಅನ್ನುವ ಹಂತದಲ್ಲಿ..., ಅವನನ್ನು..., ಬಟ್ಟೆ ತೆಗೆಯುತ್ತಿದ್ದೇನೆನ್ನುವ ಅರಿವೇ ಇಲ್ಲದಂತೆ- ತೆಗೆದು- ಸೆಳೆದುಕೊಳ್ಳುತ್ತೇನೆ..., ಆವರಿಸಿಕೊಳ್ಳುತ್ತಾನೆ..., ಸಂತೃಪ್ತಿಯಿಂದ ಮಲಗುವಾಗ ಯಾವುದೋ ಸಮಯದಲ್ಲಿ ಬಟ್ಟೆ ಧರಿಸಿರುತ್ತಾನೆ!

ಅವನಾಗಿ ಅವನು ತನ್ನ ಬಟ್ಟೆಗಳನ್ನು ತೆಗೆಯುವುದಿರಲಿ..., ಬೆತ್ತಲಾಗುವುದಿರಲಿ..., ನನ್ನಮುಂದೆ ಬಟ್ಟೆ ಬದಲಿಸಿದ ನಿದರ್ಶನವೂ ಇಲ್ಲ!

“ಎಂತ?” ಎಂದ ಮಂಚದಮೇಲೆ ನನ್ನ ಪಕ್ಕ ಕುಳಿತು.

“ಇವತ್ತು ನೀನು ನನ್ನ ಮುಂದೆ ಪೂರ್ತಿ ಬೆತ್ತಲಾಗಿ ನಿಲ್ಲದ ಹೊರತು ನಮ್ಮನಡುವೆ ಯಾವುದೇ ಮಾತುಕತೇನೂ ಇಲ್ಲ- ಏನೂ ಇಲ್ಲ!” ಎಂದೆ.

ಆಕರ್ಷಕವಾಗಿ ನಕ್ಕ!

“ಸರಿ!” ಎಂದ.

ಪಿತ್ತ ನೆತ್ತಿಗೇರಿತು!

“ಅಲ್ಲಾ ಮಾರಾಯ..., ನೀನು ಟಾಪ್‌ಲೆಸ್ ಆಗಿರೋ ಅದೆಷ್ಟೋ ಫೋಟೋಗಳನ್ನ ನೋಡಿದೀನಿ- ಪಬ್ಲಿಕ್ ಆಗಿ ಪೋಸ್ಟ್ ಮಾಡಿರ್ತೀಯ! ಕಥೆಗಳಲ್ಲಿ..., ಅವಳನ್ನು ಬೆತ್ತಲುಮಾಡಿದೆ, ಕಾಲಗಲಿಸಿದಳು, ಅಲ್ಲಿ ಮುತ್ತುಕೊಟ್ಟೆ, ಇಲ್ಲಿ ಮುತ್ತುಕೊಟ್ಟೆ ಹಾಗೆ ಮಾಡಿದೆ ಹೀಗೆ ಮಾಡಿದೆ ಅಂತ ನಾಚಿಕೆಮಾನಮರ್ಯಾದಿ ಇಲ್ಲದೆ ಬರೀತೀಯ? ಚರ್ಚೆಗೆ ಇಳಿದರೆ ಗಂಡು- ಹೆಣ್ಣು ಅದೂ ಇದೂ ಅಂತ ಯಾವ ಹಂತಕ್ಕೂ ಮಾತಾಡ್ತೀಯ? ಅದೆಷ್ಟು ಹೆಂಗಸರೊಂದಿಗೆ ಸೇರಿದ್ದೀಯೋ ಏನೋ..., ಯಕಃಶ್ಚಿತ್ ಒಬ್ಬಳು ವೇಶ್ಯೆ- ನನ್ನಮುಂದೆ ಬೆತ್ತಲಾಗೋಕೆ ಆಗಲ್ವ? ನಿಜ ಹೇಳು ಯಾರಮುಂದೂ ಆಗಿಲ್ವ? ಅಷ್ಟು ಕಷ್ಟಾನ?” ಎಂದೆ.

“ಮರಿ...! ದೇವಸ್ಥಾನಗಳಲ್ಲಿ ಗಂಡಸರು ಶರ್ಟ್‌ ಹಾಕಲ್ಲ- ಚಿಕ್ಕಂದಿನಿಂದ ಪ್ರಾಕ್ಟೀಸ್... ಜೊತೆಗೆ ಪೋಸ್ಟ್ ಮಾಡಿರೋ ಫೋಟೋಗಳೂ ದೇವಸ್ಥಾನಗಳದ್ದೇ ಹೊರತು ನಿನ್ನಜೊತೆ ಸೇರುವಾಗಿನದಲ್ಲ!! ಕಥೆಗಳಲ್ಲಿ ಅವನನ್ನು ಕೊಂದೆ, ಇವನ ಕತ್ತು ಕುಯ್ದೆ, ಕರಳು ಬಗೆದೆ ಅಂತೆಲ್ಲಾ ಬರೀತೀನಿ! ಹಾಗಂತ ಒಂದು ಇಲಿಯನ್ನು ಕೊಲ್ಲಬೇಕಾಗಿ ಬಂದಾಗ ಹೊಟ್ಟೆ ತೊಳೆಸುತ್ತೆ- ಇದಕ್ಕೇನು ಹೇಳ್ತಿ?” ಎಂದ.

ಅವನ ಪಕ್ಕದಿಂದ ಎದ್ದು ಅವನ ಮುಂದೆ ಮಂಡಿಯೂರಿ ಕುಳಿತು ಪಾದ ಮುಟ್ಟಿದೆ...,

“ಅಡ್ಡಬಿದ್ದೆ ಮಹಾಪ್ರಭು! ಆಶೀರ್ವದಿಸಿ!” ಎಂದೆ.

“ಶೀಘ್ರವೇ ಸುಮಂಗಲಿಯಾಗಿ...., ದೀರ್ಘಸುಮಂಗಲೀಭವ!” ಎಂದ.

ವಿಹ್ವಲಳಾಗಿ ಅವನನ್ನು ನೋಡಿದೆ. ಮುಗುಳುನಕ್ಕ!

“ಇದಕ್ಕೇನ ಈ ಕಥೆ ನನ್ನಿಂದ ಹೇಳಿಸುತ್ತಿರುವುದು?” ಕೇಳಿದೆ.

“ಅಲ್ಲ..., ಈ ಕಥೆ ಹೇಳಬೇಕಾದ ಸಮಯಕ್ಕೆ ನಾನು ಇರುವುದಿಲ್ಲ- ಅದಕ್ಕೆ!” ಎಂದ.

ಅವನನ್ನೇ ದಿಟ್ಟಿಸಿ ನೋಡಿದೆ. ಅದೇ ನಗು..., ಕಣ್ಣಿನಲ್ಲಿ ಅದೇ ಹೊಳಪು..., ನನಗೆ ಗೊತ್ತಿಲ್ಲದ ಯಾವ ರಹಸ್ಯವಿದೆ ಈ ಪ್ರಪಂಚದಲ್ಲಿ ಅನ್ನುವ ಅಹಂಕಾರ! ತನ್ನ ಸಾವಿನ ವಿಷಯದಲ್ಲಾದರೂ....!

*

ನನ್ನ ಹೆಸರು ನಾದಿಯಾ! ವಯಸ್ಸು ಇಪ್ಪತ್ತೆಂಟು! ಯಾಕೆ ಈ ಹುಚ್ಚು ಹುಟ್ಟಿತು ಎಂದು ಕೇಳಿದರೆ..., ದುಡ್ಡಿಗಾಗಿ! ಬೇರೆ ರೀಸನ್ ಏನೂ ಇಲ್ಲ! ಸುಲಭವಾಗಿ ದುಡ್ಡುಮಾಡುವ ದಾರಿ! ಕುಟುಂಬ, ಮಹಾಕಷ್ಟ, ಬೇರೆ ದಾರಿಯಿಲ್ಲದೆ..., ಅನ್ನುವಂತಾ ನಾನ್ಸೆನ್ಸ್ ಕಾರಣಗಳನ್ನೇನೂ ಹೇಳುವುದಿಲ್ಲ! ದುಡ್ಡಿಗಾಗಿ ನಾನು ಆರಿಸಿಕೊಂಡ ಸುಲಭ ಮಾರ್ಗ- ಅಷ್ಟೆ!

ಬೇರೆ ಯಾರಬಗ್ಗೆಯೂ ಇಲ್ಲಿ ಹೇಳುವುದಿಲ್ಲ..., ಎಷ್ಟುಜನ? ಯಾರ್ಯಾರು? ಎಲ್ಲಿ? ಯಾರೊಂದಿಗೆ ಎಷ್ಟುದುಡ್ಡು ಅನ್ನುವುದೆಲ್ಲ ಬಿಟ್ಟು ಇವನಬಗ್ಗೆ ಮಾತ್ರ ಹೇಳುತ್ತೇನೆ.

ಅವನನ್ನು ಶ್ರೀ ಎಂದು ಕರೆಯೋಣ!

ಮೆಸೆಂಜರ್‌ನಲ್ಲಿ ಹಾಯ್! ಎಂದು ಮೆಸೇಜ್ ಮಾಡಿದ್ದೆ.

“ಯಾರಿದು?” ಎಂದು ಕೇಳಿದ.

“ಮಾತನಾಡಲು ಐನೂರು, ವೀಡಿಯೋ ಕಾಲ್‌ಗೆ ಮೂರುಸಾವಿರ!” ಎಂದೆ.

ಮಾರನೆಯ ದಿನ ರಿಪ್ಲೆ ಬಂತು...,

“ನಾನಾಗಿ ನಿನ್ನ ಮಾತನಾಡಿಸಲಿಲ್ಲ- ನಿನ್ನ ಪ್ರೊಫೈಲ್‌ಗೂ ಬರಲಿಲ್ಲ! ನಿನ್ನ ಯಾವುದೇ ಪೋಸ್ಟ್‌ಗೆ ಲೈಕ್‌ಕೊಡಲಿಲ್ಲ, ಕಮೆಂಟ್‌ಮಾಡಲಿಲ್ಲ! ನೀನು ಯಾರೆಂದೇ ನನಗೆ ಗೊತ್ತಿಲ್ಲ- ಯಾರಿಗೂ! ಫೇಕ್‌ಅಕೌಂಟ್! ನೀನಾಗಿ ಮೆಸೇಜ್‌ಮಾಡಿದ್ದೀಯ! ಸೋ..., ಇಷ್ಟು ಹೇಳುವ ಅಧಿಕಾರವಿದೆ ಅಂದುಕೊಳ್ಳುತ್ತೇನೆ...., ನಿನ್ನಂತಾ ಸೂಳೆಯಬಗ್ಗೆ ನನಗೆ ಯಾವ ಆಸಕ್ತಿಯೂ ಇಲ್ಲ! ನಿಜವಾದ ಗಂಡಸರನ್ನು ನೀನು ನೋಡಿಲ್ಲ! ನಿನಗೆ ಸ್ಪಂದಿಸುವ ಯಾರೇ ಆದರೂ ಗಂಡಸುತನವಿಲ್ಲದ ಹೇಡಿಗಳಾಗಿರುತ್ತಾರೆ- ನಿನಗೆ ಅವರೇ ಸರಿ!”

ಒಂದು ವಾರ ಬೇಕಾಯಿತು ಸುಧಾರಿಸಿಕೊಳ್ಳಲು! ಇಷ್ಟು ನೇರವಾಗಿ ಹೀಗೆ ಬೈಯ್ಯಬಹುದಾ? ಸೂಳೆ ಅನ್ನುವ ಪದ..., ಈಗ ಅರಗಿಸಿಕೊಂಡಿದ್ದೇನೆ- ಒಪ್ಪಿದ್ದೇನೆ! ಅವನು ಹೇಳುವಾಗ ಆದ ನೋವು...! ನಾವು ಮಾಡುವುದು ತಪ್ಪಲ್ಲ ಅದನ್ನು ಇನ್ನೊಬ್ಬರು ಹೇಳುವುದು ತಪ್ಪು- ಅನ್ನುವುದಕ್ಕೆ ಅರ್ಥ ಈಗ ಗೊತ್ತಾಯಿತು!

ನರಳಿಬಿಟ್ಟೆ! ಅವನಮೇಲೆ ಅಸಾಧ್ಯ ಕೋಪ ಬಂತು. ಸೇಡು ತೀರಿಸಿಕೊಳ್ಳಬೇಕೆನ್ನುವ ಭಾವ!

ಬೇಡದಿದ್ದರೆ ಬೇಡ ಅನ್ನಬಹುದಿತ್ತು! ಇಗ್ನೋರ್ ಮಾಡಬಹುದಿತ್ತು! ಈರೀತಿ ರಿಪ್ಲೆ ಕೊಡುವ ಅಗತ್ಯವೇನಿತ್ತು?

ಸ್ವಲ್ಪ ದಿನಗಳ ನಂತರ ನನ್ನ ನಿಜವಾದ ಅಕೌಂಟ್‌ನಿಂದ ಫ್ರೆಂಡ್‌ರಿಕ್ವೆಸ್ಟ್ ಕಳಿಸಿದೆ. ಅವನ ಬರಹಗಳಿಗೆ ಕಮೆಂಟ್ ಮಾಡತೊಡಗಿದೆ. ಇನ್ಬಾಕ್ಸ್‌ನಲ್ಲಿ ಚರ್ಚೆಗಳಾದವು. ಬರಹದ- ವಿಷಯಗಳಿಗೆ ಸಂಬಂಧಿಸಿದ ಚರ್ಚೆಗಳೇ ಹೊರತು ಅವನ ಕಡೆಯಿಂದ ವೈಯುಕ್ತಿಕ ವಿಷಯಗಳ ಆಸಕ್ತಿ ಕಾಣಿಸಲಿಲ್ಲ. ನಾನಾಗಿ ಪರಿಚಯ ಹೇಳಿಕೊಂಡೆ, ಅವನಬಗ್ಗೆ ವಿಚಾರಿಸಿದೆ.

ಅವನಬಗ್ಗೆಯಂತೂ ಏನು ಕೇಳಿದರೂ ಯಾವುದೇ ಹಿಂಜರಿಕೆಯಿಲ್ಲದೆ ಹೇಳುತ್ತಿದ್ದ. ಹಾಗೆಂದು ಅದೇ ಕುತೂಹಲ ನನ್ನಬಗ್ಗೆ ತೋರಿಸುತ್ತಿರಲಿಲ್ಲ- ಪಿರಿಪಿರಿಯಾಗುತ್ತಿತ್ತು!

ಫೋನ್‌ನಂಬರ್ ಕೇಳುತ್ತಾನೆ, ಭೇಟಿಯಾಗಬೇಕು ಅನ್ನುತ್ತಾನೆ ಅನ್ನುವ ಕಲ್ಪನೆಗಳೆಲ್ಲಾ ಭ್ರಮೆಗಳಾಗಿಯೇ ಉಳಿಯಿತು! ಕೊನೆಗೆ...,

“ವಾಟ್ಸಪ್‌ಲಿ ಒಂದು ಹಾಯ್‌ ಹೇಳು!” ಎಂದು ಹೇಳಿ ನನ್ನ ಫೋನ್‌ನಂಬರ್ ಕೊಟ್ಟೆ!

“ಇದು ನನ್ನ ನಂಬರ್!” ಎಂದು ಹೇಳಿ ಅವನ ನಂಬರ್ ಕೊಟ್ಟ- ನಾನೇ ಮೆಸೇಜ್ ಮಾಡಿದೆ!

ಮೆಸೇಜ್‌ಗಳು ಕಾಲ್‌ಗಳಾಗಿ, ಮಾತುಕತೆಗಳಾಗಿ..., ದಿನಗಳು, ವಾರಗಳು, ತಿಂಗಳುಗಳು, ವರ್ಷ....! ಕೊನೆಗೆ ನಾನೇ....,

“ಭೇಟಿಯಾಗಬೇಕು ಅನ್ನಿಸುತ್ತಿದೆ!” ಎಂದೆ.

“ಅದಕ್ಕೇನು? ಮನೇಗೆ ಬಾ...!” ಎಂದ.

“ಪ್ರೈವೇಟಾಗಿ!” ಎಂದೆ- ಕೋಪವನ್ನು ಅಡಗಿಸಿಕೊಂಡು!

ಕೆಲವು ಕ್ಷಣ ಮೌನ. ನಂತರ...,

“ಹೇಗೆ? ಭೇಟಿಯೆಂದರೆ? ಸುಮ್ಮನೆ ಸಿಗುವುದಾ? ಒಟ್ಟಿಗೆ ಟಿ ಕುಡಿಯುವುದಾ? ಸುತ್ತಾಡುವುದಾ? ಅಥವಾ ಸೆಕ್ಸ್...?” ಎಂದ.

ಒಂದು ದೀರ್ಘವಾದ ನಿಟ್ಟುಸಿರು ಬಿಟ್ಟು ಹೇಳಿದೆ...,

“ಅಷ್ಟೂ...!”

“ಸೆಕ್ಸ್‌ ಮಾಡಬೇಕೆಂದರೆ ಎಲ್ಲಿ? ಹೇಗೆ?” ಎಂದ.

ಎದುರಿಗೆ ಇದ್ದಿದ್ದರೆ ಅವನ ಮೂತಿ ಪಚಡಿ ಮಾಡ್ತಿದ್ದೆ!

“ಅರಮನೆ ಮುಂದೆ ಇರೋ ಮೈದಾನದಲ್ಲಿ ಮಾಡೋಣ ಬಾ..., ಎಲ್ಲರ ಎದುರು!” ಎಂದೆ.

ಅವನೇನೂ ಮಾತನಾಡಲಿಲ್ಲ. ಅವನ ಸಮಸ್ಯೆ ಅರ್ಥವಾಯಿತು!!!

“ಓಹ್! ಅದಾ ವಿಷಯ! ವ್ಯವಸ್ಥೆ ನಾನು ಮಾಡ್ತೀನಿ! ನೀನು ಜಸ್ಟ್‌ ಇಲ್ಲಿಗೆ ಬಾ- ಐಡಿಕಾರ್ಡ್ ಇಟ್ಕೋ ಸಾಕು- ಬಡವ!” ಎಂದೆ.

ಬಂದ. ನಿಜಕ್ಕೂ..., ಇಷ್ಟು ಆತ್ಮೀಯತೆ ನಾನಿದುವರೆಗೂ ಯಾರೊಂದಿಗೂ ಅನುಭವಿಸಿರಲಿಲ್ಲ. ಕಂಫರ್ಟ್ ಅಂದರೆ ಶ್ರೀ ಅಂತ ಹೆಸರು!

ಹಗಲೆಲ್ಲಾ ಸುತ್ತಾಡಿಸಿದೆ. ಸುತ್ತಾಡಿಸಿದೆ ಎಂದರೆ..., ನಾನಿರುವ ಸ್ಥಳದಲ್ಲಿ- ಅಷ್ಟು ಸ್ವತಂತ್ರವಾಗಿ ಹೇಗೆ ಅನ್ನುವ ಸಂದೇಹ ಬರಬಹುದು! ಊರಿನ ಹೆಸರು ಬೇಡ, ನಾನಿರುವುದು ನನ್ನ ಹುಟ್ಟೂರಿನಿಂದ ಮುನ್ನೂರು ಕಿಲೋಮೀಟರ್ ದೂರದಲ್ಲಿ! ಕೆಲಸ ಮಾಡುವ ಕಂಪೆನಿಯ ಪಿ.ಜಿ.ಯಲ್ಲಿ ವಾಸ! ಕೆಲಸ- ಊರವರ ಕಣ್ಣುಕಟ್ಟಲು, ಜೊತೆಗೆ ಪಿ.ಜಿ.ಗಾಗಿ!

ಅವನಿಗಾಗಿ ಹೋಟೆಲ್‌ ಒಂದರಲ್ಲಿ ರೂಂ ಬುಕ್ ಮಾಡಿದ್ದೆ. ಇಬ್ಬರಿಗೂ ಇದು ಮೊದಲ ಅನುಭವವಲ್ಲ. ಆದರೆ ಅವನು ಶ್ರೀ-ಯೂ, ನಾನು ನಾದಿಯಾ-ಳೂ ಆದ್ದರಿಂದ ಅನುಭವ ಹೊಸದಾಗಿತ್ತು.

ಅವನನ್ನು ಕೆಳಕ್ಕೆ ತಳ್ಳಿ ಅವನ ಮೇಲೇರಿ ಆವೇಶದಿಂದ ಚಲಿಸುವಾಗ ತೂರಿ ಬಂತು ಪ್ರಶ್ನೆ....,

“ಮಾತನಾಡಲು ಐನೂರು, ವೀಡಿಯೋ ಕಾಲ್‌ಗೆ ಮೂರುಸಾವಿರ ಅಂತ ಹೇಳಿದ ಫೇಕ್‌ಅಕೌಂಟ್‌ನ ಒಡತಿ ನೀನೇ ತಾನೆ?!”

ತೀರಾ ಅನಿರೀಕ್ಷಿತ ಪ್ರಶ್ನೆಯಾದ್ದರಿಂದ ತೂರಾಡಿದೆ!

“ಯಾ.... ಯಾ.... ಯಾರು? ಏ.... ಏನು...?” ಅನ್ನುವುದು..., 'ಅದು ನಾನೇ' ಅನ್ನುವ ಸ್ಪಷ್ಟ ಉತ್ತರವಾಯಿತು!

ಅವನನ್ನು ಅಲ್ಲಿಯೇ ಉಸಿರುಕಟ್ಟಿಸಿ ಕೊಲ್ಲಬೇಕು ಅನ್ನುವಷ್ಟು ಆವೇಶವುಂಟಾಯಿತು!

ಕಂಪಿಸುತ್ತಿರುವ ನನ್ನ ಮೈಯ್ಯನ್ನು ಒತ್ತಿ ಹಿಡಿದು ಕೇಳಿದ...,

“ಗೆದ್ದೆಯಾ? ನನ್ನ ಅರಿವಿನಂತೆ ಹೆಣ್ಣುಮಕ್ಕಳು ಅಷ್ಟು ಸುಲಭವಾಗಿ ಸೋಲು ಒಪ್ಪುವುದಿಲ್ಲ- ಸೇಡು ತೀರಿಸಿಕೊಳ್ಳುತ್ತಾರೆ! ತೀರಿಸಿಕೊಂಡೆಯಾ?”

ಅತಿ ಧಾರುಣವಾಗಿ ಸೋಲಿಸಿ ಕೇಳುತ್ತಿದ್ದಾನೆ- ಗೆದ್ದೆಯಾ?

*

ಮೂರು ದೀರ್ಘವಾದ ವರ್ಷಗಳು! ಒಂದುಪರ್ಸೆಂಟ್ ಕೂಡ ಅರ್ಥವಾಗದೆ ಹಾಗೇ ಉಳಿದುಬಿಟ್ಟಿದ್ದಾನೆ! ಆದರೆ...., ಆ-ದ-ರೆ..., ನನ್ನ ಫೇಕ್ ಅಕೌಂಟ್ ಡಿಲಿಟ್ ಮಾಡುವಷ್ಟು ನನ್ನಮೇಲೆ ಪ್ರಭಾವ ಬೀರಿದ್ದಾನೆ! 'ಆ' ಜೀವನದಿಂದ ಹೊರಬಂದು ನನ್ನತನವೆಂಬುದನ್ನು ಹೊಂದಿ..., ಅವನು ಕೆಟ್ಟವನಾ ಒಳ್ಳೆಯವನಾ?

ಇಷ್ಟು ದಿನ ಇಲ್ಲದ್ದು..., ಈಗ ಕೇಳುತ್ತಿದ್ದಾನೆ...,

“ಅಲ್ಲವೇ..., ಒಂದುವೇಳೆ ನಾನು ಮೂರುಸಾವಿರ ಕೊಟ್ಟು ವೀಡಿಯೋಕಾಲ್ ಮಾಡಿದ್ದರೆ- ಆಗಲೇ ನೀನು ಯಾರು ಅನ್ನೋದು ಗೊತ್ತಾಗ್ತಾ ಇತ್ತು ಅಲ್ವಾ?!!”

“ವೀಡಿಯೋ ಕಾಲ್ ಮಾಡುವಾಗ ಮುಖ ತೋರಿಸ್ತಾರೆ ಅಂತ ಯಾರು ಹೇಳಿದರು?” ಎಂದೆ ನಗುತ್ತಾ.

“ಅಂದ್ರೆ?” ಎಂದ- ಮುಗ್ಧನಂತೆ.

“ಮುಖ ಕಾಣದ ಹಾಗೆ ಬಾಡಿ ಮಾತ್ರ ತೋರಿಸ್ತೀವಿ!” ಎಂದೆ.

“ಇಶ್ಶೀ...! ಮುಖ ಇಲ್ಲದ ಬಾಡಿ ಮಾತ್ರ ನೋಡಿದ್ರೆ ಮೂಡ್ ಬರುತ್ತಾ? ಹೆಣ ನೋಡಿದ ಹಾಗೆ ಇರುತ್ತೆ!” ಎಂದ.

“ಮಹಾರಾಜ..., ಎಲ್ಲರೂ ನಿನ್ನಂತೆ ಅಂದುಕೊಳ್ಳಬೇಡ! ಬರೀ ಹೊಕ್ಕಳು ನೋಡಿದ್ರೆ ಸಾಕು ಸ್ಖಲಿಸಿಕೊಳ್ಳುವ ಗಂಡಸರು ನನಗೆ ಗೊತ್ತು!” ಎಂದೆ.

“ಬಿಡು...! ಸಡನ್ ಆಗಿ ಅದೊಂದು ಗೊಂದಲ ಹುಟ್ಟಿಬಿಡ್ತು- ಕೇಳಿದೆ!” ಎಂದ.

“ವೀಡಿಯೋಕಾಲ್ ಅಂದರೆ ಬರೀ ಬಾಡಿ ತೋರಿಸುವುದಲ್ಲ ಮಾರಾಯ- ಬೇರೆಬೇರೆ ರೀತಿಯಲ್ಲಿ ಪ್ರಚೋದಿಸುವುದು!” ಎಂದು ಹೇಳಿ...,

“ಅದು ಬಿಡು..., ಈಗ ನನ್ನ ಗೊಂದಲ ಬಗೆಹರಿಸು!” ಎಂದೆ.

ಏನು ಅನ್ನುವಂತೆ ನೋಡಿದ.

“ಆ ಹೆಣ್ಣು ನಾನೇ ಅಂತ ಹೇಗೆ ಕಂಡುಹಿಡಿದೆ?” ಕೇಳಿದೆ.

“ಗೊತ್ತಿಲ್ಲವೇ...! ಒಂದು ಊಹೆ- ಅಷ್ಟೆ. ಆ ಸಮಯದಲ್ಲಿ ನನ್ನೊಂದಿಗೆ ಯಾರೂ ಅಷ್ಟು ಕಂಫರ್ಟ್ ಆಗಿ ಮಾತನಾಡುತ್ತಿರಲಿಲ್ಲ! ಮನಸ್ಸಿಗೆ ಹಿಂಸೆ ನೀಡುವ- ಅತಿ ವಾಸ್ತವಿಕವಾದ ನನ್ನ ಕಥೆಗಳನ್ನು ಓದಿಯೋ, ಅದಕ್ಕೆ ಸಂಬಂಧಪಟ್ಟ ಅವರ ಪ್ರಶ್ನೆಗಳಿಗೆ ನೇರಾನೇರವಾದ ನನ್ನ ಉತ್ತರಗಳನ್ನು ಅರಗಿಸಿಕೊಳ್ಳಲಾಗದೆಯೋ- ನಾನು ದೂರ ಇಡಬೇಕಾದವನು ಅನ್ನುವ ನಿರ್ಧಾರಕ್ಕೆ ಎಲ್ಲರೂ ಬಂದಿದ್ದರು! ಆ ಟೈಮಲ್ಲಿ ನೀನು ನಿನ್ನ ಫೇಕ್‌ಅಕೌಂಟ್‌ನಿಂದ ಮೆಸೇಜ್ ಮಾಡಿದೆ! ನಿಜಕ್ಕೂ..., ಏನನ್ಕೊಂಡಿದೀಯ ಗಂಡಸರೆಂದರೆ- ಅಂತಲೇ ಹಾಗೆ ರಿಪ್ಲೆ ಮಾಡಿದೆ. ಸ್ವಲ್ಪ ದಿನಕ್ಕೆ ಅಪರಿಚಿತ ಹೆಣ್ಣು- ನಿನ್ನ ನಿಜವಾದ ಅಕೌಂಟ್‌ನಿಂದ ಫ್ರೆಂಡ್‌ರಿಕ್ವೆಸ್ಟ್ ಬಂತು! ಕಥೆಗಳಬಗ್ಗೆ, ನನ್ನಬಗ್ಗೆ ಅತಿಯಾದ ಆಸಕ್ತಿ! ಯಾರಿಗೂ ಇಲ್ಲದ್ದು ಇವಳಿಗೆ ಯಾಕೆ- ಅನ್ನುವ ಯೋಚನೆ! ಆಮೇಲಾಮೇಲೆ ನೀನು ನನ್ನನ್ನ ನಿನ್ನ ಟ್ರಾಕ್‌ಗೆ ಎಳೆಯೋಕೆ ಶುರುಮಾಡಿದೆ- ಕಾರಣವಿಲ್ಲದೆ ಈ ರೀತಿಯ ಮಾತುಕತೆ ಬರುವುದಿಲ್ಲ ಅನ್ನಿಸಿತು! ಈ ರೀತಿ ಮಾತನಾಡಲು ಕಾರಣವಿರುವವರು ಯಾರಾದರೂ ಇದ್ದಾರಾ ಎಂದು ಚೆಕ್ ಮಾಡಿದೆ! ನಿನ್ನ ಫೇಕ್ ಅಕೌಂಟ್‌ಗೆ ಮೊದಲ ಅಂಕ! ಅದು ನೀನೇನಾ ಅಂತ ಬೇರೆ ಯಾವ ಸಂದರ್ಭದಲ್ಲಿ ಕೇಳಿದ್ದರೂ ನೀನು ಅಲ್ಲ ಅಂತ ಸಮರ್ಥಿಸುತ್ತಿದ್ದೆ- ಸಂದರ್ಭವನ್ನು ಮೇಂಟೇನ್ ಮಾಡುತ್ತಿದ್ದೆ! ಅದಕ್ಕೇ ಅನಿರೀಕ್ಷಿತವಾಗಿ ಕೇಳಿದೆ!” ಎಂದು ನಕ್ಕು...,

“ನಂತರದ್ದೆಲ್ಲಾ ಇತಿಹಾಸ!” ಎಂದ.

ಕೆಲವು ಕ್ಷಣ ನನ್ನಿಂದ ಮಾತು ಹೊರಡಲಿಲ್ಲ. ಅವನನ್ನೇ ನೋಡಿದೆ. ಮುಗುಳುನಕ್ಕ.

“ಸುಮ್ಮನೆ ಅಲ್ಲ ಎಲ್ಲರೂ ನಿನ್ನ ದೂರ ಇಟ್ಟಿರೋದು!” ಎಂದೆ.

“ನೀನೂ ಇಡ್ತೀಯ! ನನ್ನನ್ನು ದೂರ ಇಡುವ ಕೊನೆಯ ವ್ಯಕ್ತಿ!” ಎಂದ.

“ಕೊನೆಯ ವ್ಯಕ್ತಿ?” ಎಂದೆ ಅವನ ಕಣ್ಣನ್ನೇ ದಿಟ್ಟಿಸಿ ನೋಡುತ್ತಾ.

“ಹುಂ!” ಎಂದ.

“ಅಂದರೆ...? ನನ್ನ ನಂತರ ಯಾರೂ ನಿನ್ನ ಬದುಕಿಗೆ ಬರಲ್ಲ ಅಂತಾನ?” ಕೇಳಿದೆ- ನನ್ನೊಳಗೆ ಒಂದು ಸ್ವಲ್ಪ ಅಹಂ ಹುಟ್ಟಿತಾ?

“ಅಲ್ಲ! ಇಪ್ಪತ್ತು ವರ್ಷದಲ್ಲಿ ನನ್ನ ಅನುಭವಕ್ಕೆ ಬಂದ ಹೆಂಗಸರಬಗೆಗಿನ ಅಧ್ಯಯನದ ರಿಸಲ್ಟ್- ಕೊನೆಯ ರಿಸಲ್ಟ್ ನೀನು!” ಎಂದ.

ಅವನನ್ನೇ ನೋಡಿದೆ. ಏನಾದರೂ ಕೇಳಬೇಕು ಅನ್ನಿಸಿತು! ಏನು ಅನ್ನುವುದು ಹೊಳೆಯಲಿಲ್ಲ! ಅವನೇ ಹೇಳಿದ...,

“ಈ ಪ್ರಪಂಚದಲ್ಲಿ ಯಾರೂ ಕೆಟ್ಟವರಲ್ಲವೇ! ನಿನ್ನ ಮನಸ್ಸಿನ ಇಚ್ಛೆಗೆ ವಿರುದ್ಧವಾಗಿ ಪ್ರವರ್ತಿಸಿದರೆ ನಾನು ಕೆಟ್ಟವ! ಪ್ರಪಂಚದ ದೃಷ್ಟಿಗೆ ಅದು ಕೆಟ್ಟದ್ದಾ- ಅನ್ನುವುದು ಪ್ರಶ್ನೆ! ಆ ಕೆಟ್ಟವನನ್ನು ಹೇಗೆ ನಡೆಸಿಕೊಳ್ಳುತ್ತೀಯ ಅನ್ನುವುದರಮೇಲೆ ನಿನ್ನ ವ್ಯಕ್ತಿತ್ವವಿದೆ! ನೀನೇನೋ ಮದುವೆಯಾಗ್ತಿದೀಯ- ದೂರ ಹೋಗ್ತಿದೀಯ! ಆದರೆ ನಾನು ತುಂಬಾ ಇಷ್ಟಪಟ್ಟ, ಗೌರವಕೊಟ್ಟ, ಹಚ್ಚಿಕೊಂಡ ಕೆಲವರು ನನ್ನನ್ನು ಬಿಟ್ಟು ದೂರ ಹೋದರು! ಯಾಕೆ ಹೋದರು? ಹೋದವರು ಕೆಟ್ಟವರ? ಹೋಗದಿರುವವರು ಒಳ್ಳೆಯವರಾ? ಕೆಟ್ಟವನೆಂದು ಯಾಕೆ ನಿರ್ಧರಿಸಲ್ಪಟ್ಟೆ? ನಿನಗೆ ಗೊತ್ತಾ? ಕೆಲವೇ ಕೆಲವು ಲಕ್ಷಣಗಳಿಂದ ನಾವು ವ್ಯಕ್ತಿಗಳನ್ನು..., ಅವರು ಹೀಗೇನೆ ಎಂದು ನಿರ್ಧರಿಸಬಹುದು! ಕೆಲವೊಮ್ಮೆ ನಮ್ಮ ನಿರ್ಧಾರ ತಪ್ಪಲೂ ಬಹುದು ಅಂದುಕೋ- ನನಗಂತೂ ಇದುವರೆಗೆ ತಪ್ಪಾಗಿಲ್ಲ!! ನೋಡೋಣ ಇದುವರೆಗಿನ ನಮ್ಮ ಒಡನಾಟದಲ್ಲಿ ನಿನ್ನಬಗೆಗೆ ನಾನು ತಿಳಿದುಕೊಂಡಿವುರುವುದು ಸರಿಯೋ ತಪ್ಪೋ ಅಂತ! ನಾಡಿದ್ದು ನಿನ್ನ ಮದುವೆ! ಎಲ್ಲವೂ ಒಳ್ಳೆಯ ರೀತಿಯಲ್ಲಿ ಮುಗಿಯಲಿ! ಫಸ್ಟ್‌ನೈಟೆಲ್ಲಾ ಮುಗಿಸಿ ಬೆಳಗ್ಗೆ ಎದ್ದು ಮೈಲ್ ಚೆಕ್ ಮಾಡು! ನನ್ನನ್ನು ಬಿಟ್ಟು ಹೋದವರಬಗ್ಗೆ ಮಾಹಿತಿ ಇರುತ್ತದೆ. ಯಾಕೆ ಹೋದರು ಅಂತ ಮಾತ್ರ.... ಕೊನೆಗೆ ಮೂರೇ ಮೂರು ಪದಗಳಲ್ಲಿ ನಿನ್ನಬಗ್ಗೆಯೂ ಹೇಳಿರುತ್ತೀನಿ! ಆ ಮೈಲ್ ಓದಿ ಆದಮೇಲೆ ಈ ಕಥೆ ಬರಿ! ಅಲ್ಲಿರುವ ಬೇರೆಯವರ ಅಷ್ಟೂ ವಿವರಗಳನ್ನು ಕಾಪಿಪೇಸ್ಟ್ ಮಾಡ್ತೀಯೋ, ಸೆಲೆಕ್ಟ್ ಮಾಡಿ ಕೆಲವನ್ನು ಮಾತ್ರ ಹೇಳ್ತೀಯೋ ಅಥವಾ ಕಥೆಗೆ ಅವರಬಗ್ಗೆ ಹೇಳಬೇಕಾದ ಅಗತ್ಯವಿಲ್ಲ ಅಂತ ನಿನ್ನ ವಿಷಯವನ್ನು ಮಾತ್ರ ಹೇಳ್ತೀಯೋ ನಿನಗೆ ಬಿಟ್ಟಿದ್ದು!” ಎಂದ.

ಮೈಲ್ ನೋಡುವುದರ ಹೊರತು ಈ ವಿಷಯದ ಬಗ್ಗೆ ಈಗ ಮಾತಾಡಿ ಪ್ರಯೋಜನವಿಲ್ಲ ಅನ್ನುವ ಅರಿವಿರುವುದರಿಂದ..., ಕೊನೆಯದಾಗಿ ಮತ್ತೊಮ್ಮೆ ಕೇಳಿದೆ....,

“ಮದುವೆಯಾಗುವುದಿಲ್ಲ ಅನ್ನುವ ನಿನ್ನ ನಿರ್ಧಾರ ಬದಲಾಗುವುದಿಲ್ಲವಾ?!”

ಅವನದ್ದು ಅದೇ ನಗು..., ಕಣ್ಣಿನಲ್ಲಿ ಅದೇ ಹೊಳಪು!

“ಬದಲಾಗುವಂತಿದ್ದರೆ ಅದನ್ನುನಿರ್ಧಾರ ಅಂತ ಯಾಕೆ ಹೇಳ್ತಾರ್ಯೆ? ಒಂದುಸಾರಿ ಮದುವೆಯಾಗಿ ಅನುಭವಿಸಿದ್ದು ಸಾಕು! ಹಾಗೆಂದು ಮತ್ತೆ ಮದುವೆಯಾದರೆ ಮೊದಲಿನ ಅದೇ ಅನುಭವವಾಗಬೇಕು ಅಂತಲ್ಲ..., ನೀನು ನನ್ನ ಪರ್ಫೆಕ್ಟ್ ಕೂಡ! ಆದರೆ ಈ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವ ಇಚ್ಛೆಯಿಲ್ಲ!” ಎಂದ.

“ಸರಿ..., ನಾಳೆ ಸಿಗೋಣ..., ಬದುಕಿರುವವರೆಗೆ ನೆನಪಿಟ್ಟುಕೊಳ್ಳುವಂತೆ..., ಕೊಟ್ಟ ಕೊನೆಯದಾಗಿ- ಬೇಕು ನೀನು!” ಎಂದೆ.

ಮುಗುಳುನಕ್ಕ!

*

ಎಷ್ಟು ಪ್ರಶಾಂತವಾಗಿ ನಿದ್ರಿಸುತ್ತಿದ್ದಾನೆ- ನೆಮ್ಮದಿ ಅನ್ನುವುದು ಅವನ ಹಕ್ಕು ಅನ್ನುವಂತೆ! ಕಾರಣಗಳನ್ನು ಹೇಳಿದ್ದಾನೆ..., ನನಗೆ ನಾನೆಂದರೆ ತುಂಬಾ ಇಷ್ಟವೇ..., ಜೀವನ ಪೂರ್ತಿ ನಾನು ನನ್ನೊಂದಿಗೆ ಇರಬೇಕಾದ್ದರಿಂದ- ಖುಷಿ ನನ್ನ ಆಯ್ಕೆಯೇ..., ನನ್ನ ಇಮೋಷನ್ ಬೇರೆಯವರನ್ನು ಅವಲಂಬಿಸಿಲ್ಲವೇ..., ಬಿಟ್ಟು ಹೋದವರಿಂದ ಕಳಚಿಕೊಳ್ಳುವುದರಲ್ಲಿ ನಾನು ನಿಸ್ಸೀಮನೆ..., ಪರಿಪೂರ್ಣವಾಗಿ ವಾಸ್ತವದಲ್ಲಿ- ವರ್ತಮಾನ ಕಾಲದಲ್ಲಿ ಬದುಕುವವನೇ..., ಬ್ಲಾ ಬ್ಲಾ ಬ್ಲಾ....!!!

“ಪ್ಲೀಸ್..., ಇನ್ನುಮೇಲೆ ಸಾಧ್ಯವೇ ಇಲ್ಲವಾದ್ದರಿಂದ..., ಒಂದೇ ಒಂದು ಸಾರಿ..., ನನ್ನಮುಂದೆ ಏನೂ ಹಾಕದೆ...., ಪ್ಲೀಸ್!” ಎಂದಿದ್ದೆ.

ಅವನು ತಲೆ ತಗ್ಗಿಸಿದ!

“ಪ್ಲೀಸ್, ಪ್ಲೀಸ್, ಪ್ಲೀಸ್....!” ಎಂದೆ.

ಅವನು ಮುಂದುವರೆಯುವಂತೆ ಕಾಣಲಿಲ್ಲ! ಇಷ್ಟು ನಾಚಿಕೆ ಇರುತ್ತದೆಯೇ? ಅದೊಂದು ವಿಷಯಕ್ಕೆ? ಮಿಲನವಾಗುವಾಗ ಅಬ್ಬರಿಸುವ, ಬೆವೆತು ಮುದ್ದೆಯಾಗುವಷ್ಟು ಹಿಂಸೆ ಕೊಡುವ ಅವನಿಗೆ ಯಕಃಶ್ಚಿತ್ ಒಬ್ಬಳು ಹೆಣ್ಣಿನಮುಂದೆ ಬೆತ್ತಲಾಗಲು ಇಷ್ಟು ಕಷ್ಟವೇ?

ಇರಬಹುದು ಕೆಲವೊಂದು ವ್ಯಕ್ತಿತ್ವಗಳು!

ಅವ ಮುಂದುವರೆಯುವುದಿಲ್ಲ ಅನ್ನಿಸಿದ್ದರಿಂದ ನಾನೇ ಮುಂದುವರೆದೆ..., ನಿಷೇಧಿಸಲಿಲ್ಲ!

ಬಾಹುಬಲಿಯಂತೆ...., ನನ್ನಮುಂದೆ..., ಆಜಾನುಬಾಹು!

ಅವನನ್ನೇ ನೋಡಿದೆ. ಇಲ್ಲ..., ಯಾವ ಕಾರಣಕ್ಕೂ ಸಂಯಮ ಸಾಧ್ಯವಿಲ್ಲ! ಬಿಸಿಯಾದೆ...! ಸೆಳೆದು ಅಪ್ಪಿಕೊಂಡೆ! ಅವನೊಳಗಿನ ರಾಕ್ಷಸ ಶಕ್ತಿಯನ್ನು ಆವಾಹಿಸಿಕೊಂಡೆ.

ಮನದೊಳಗೆ ತುಮುಲ! ಇವನು ನನ್ನವನು! ನನ್ನ ಶ್ರೀ! ನನ್ನ ಬದುಕಿಗೆ ಬರುವವರೆಗೆ ಹೇಗೋ ಏನೋ..., ಬಂದಮೇಲೆ ಬೇರೆ ಯಾರೂ ಇವನ ಬದುಕಿನಲ್ಲಿರಬಾರದು- ಅಂದುಕೊಂಡಿದ್ದೆ! ಮದುವೆಯಾಗೋಣವೆಂದರೆ ಆಗುವುದಿಲ್ಲ ಅನ್ನುತ್ತಾನೆ! ಬೇರೆಯವರೊಂದಿಗೆ ಸೇರಬೇಡವೆಂದರೆ- ನನ್ನ ಬದುಕನ್ನು ನಿಯಂತ್ರಿಸಬೇಡ ನಾನು ಸ್ವತಂತ್ರ ಅನ್ನುತ್ತಾನೆ! ನಿಯಮವಿಲ್ಲದವ ಅನ್ನುತ್ತಾನೆ! ನಾನು ಮದುವೆಯಾಗಿ ಒಂದೊಳ್ಳೆಯ ಕೌಟುಂಬಿಕ ಜೀವನ ನಡೆಸುವವಳಾಗಬೇಕು ಅಂತ ಆಸೆಯಂತೆ- ಅವನ ಆಸೆ ಮಾತ್ರ ನಡೆಯುವಂತೆ ಮಾಡುತ್ತಿದ್ದಾನೆ............ ನನ್ನಿಂದ ಕಳಚಿಕೊಳ್ಳಲು ನಾಟಕ- ದಾರಿ!!

ಇವನನ್ನು ಇಲ್ಲವಾಗಿಸಲು ನಿಜವಾದ ಕಾರಣ ಇದೇನ?

ಅಲ್ಲ....! ನನ್ನ ಬದುಕಿನ ರಹಸ್ಯಗಳನ್ನು ಅರಿತಿರುವ ಏಕೈಕ ವ್ಯಕ್ತಿ! ಯಾವತ್ತಿಗೂ ಕಂಟಕವೇ...........

ಅದಕ್ಕೇ...., ನಿದ್ರಿಸುವಂತೆ ಮಾಡಿದೆ...., ಪ್ರಶಾಂತವಾದ ಚಿರ ನಿದ್ರೆ!!!!!!!!!!!

*

ಮುಗಿಯಿತು ಮೊದಲರಾತ್ರಿ! ನನಗಲ್ಲ- ಗಂಡನಿಗೆ! ಪಾಪದ ಹುಡುಗ! ನನಗಿಂತ ನಾಲ್ಕು ವರ್ಷ ಕಿರಿಯ! ಮಾವನ ಮಗನೇ..., ಹಿಂದೆಬಿದ್ದು ಪೀಡಿಸಿ ಮನೆಯವರನ್ನು ಒಪ್ಪಿಸಿ....! ಒಪ್ಪದಿರಲು ಕಾರಣವೇನೂ ಕಾಣಿಸಲಿಲ್ಲ! ಶ್ರೀ-ಯೂ ಬಲವಂತ ಮಾಡಿದ್ದ!

ಶ್ರೀ-ಗೆ ಹೋಲಿಸಿಕೊಂಡರೆ ಸಪ್ಪೆ ಅನ್ನಿಸುತ್ತಾನೆ ಹೊರತು ಹೆಣ್ಣನ್ನು ತೃಪ್ತಿಪಡಿಸುವುದರಲ್ಲಿ ಇವನೂ ಕಡಿಮೆಯಾಗಲಾರ ಅನ್ನಿಸಿತು!

ಕಲಿಸುತ್ತಿದ್ದೇನೆ ಅನ್ನುವ ಅರಿವಿಲ್ಲದಂತೆ ಪ್ರಿಪೇರ್ ಮಾಡಬೇಕು- ಮೊಟ್ಟ ಮೊದಲ ಪ್ರಯತ್ನದಲ್ಲಿ ಇಷ್ಟು ಯಶಸ್ವಿಯಾಗಿದ್ದಾನೆಂದರೆ..., ಗೆಲ್ಲುತ್ತಾನೆ!

ನಿದ್ರೆಯಲ್ಲಿರುವ ಅವನಿಗೆ ಎಚ್ಚರವಾಗದಂತೆ ಎದ್ದೆ. ಸ್ನಾನಮುಗಿಸಿ ಬಂದಾಗ ಎದ್ದು ಕುಳಿತು ಫೋನ್ ನೋಡುತ್ತಿದ್ದ. ನನ್ನನ್ನು ಕಂಡು...,

“ಗುಡ್‌ಮಾರ್ನಿಂಗ್!” ಎಂದ.

ಮುಗುಳುನಕ್ಕು ಅವನ ಹತ್ತಿರವೇ ಕುಳಿತೆ.

“ಎದ್ದ ತಕ್ಷಣ ಎಂತ ಫೋನ್ ನೋಡೋದು?” ಎಂದೆ.

“ನಿನ್ನ ಫೋನ್ ಕಣ್ಮಣಿ! ಏನೋ ನೋಟಿಫಿಕೇಷನ್ ಬಂತು- ಮೈಲ್ ಇರಬೇಕು ನೋಡು!” ಎಂದ.

ಈ-ಗ ಅಂತಾ ರಹಸ್ಯಗಳೇನೂ ನನ್ನ ಫೋನ್‌ನಲ್ಲಿ ಇಲ್ಲವಾದ್ದರಿಂದ ಟೆನ್ಷನ್ ಆಗಲಿಲ್ಲ.

ಮೈಲ್ ಮಾಡಿರುತ್ತೇನೆ ಎಂದು ಹೇಳಿದ ಶ್ರೀ ನೆನಪಾದ. ಅವನೇ ಇಲ್ಲ- ಇನ್ನೆಂತ ಮೈಲ್ ಅನ್ನಿಸಿದರೂ..., ನೋಡಿದರೆ ಅವನದೇ ಮೈಲ್! ಸರಿಯಾಗಿ ಏಳೂವರೆ ಗಂಟೆಗೆ ಬಂದಿದೆ!!

*

ನಿಜ ಹೇಳಬೇಕೆಂದರೆ ನನ್ನ ಬಗೆಗಿನ ಅವನ 'ಮೂರು ಪದಗಳನ್ನು' ನೋಡಿದಾಗ ಈ ಕಥೆ ಹೇಳಬೇಕಾ ಅನ್ನಿಸಿದ್ದು ನಿಜ! ಆದರೆ ಅವನ ಆತ್ಮಶಾಂತಿಗೆ ಅಷ್ಟಾದರೂ ಮಾಡದಿದ್ದರೆ ಹೇಗೆ?!

ಅವನ ಮೈಲ್‌ಅನ್ನು ಹಾಗೇ ಕಾಪಿ ಪೇಸ್ಟ್ ಮಾಡಿದರೆ ನೂರು ಪುಟಗಳಾದರೂ ಆಗುತ್ತದೆ. ಆದ್ದರಿಂದ ಸಂಕ್ಷಿಪ್ತವಾಗಿ ವಿಷಯವನ್ನು ಮಾತ್ರ ಹೇಳುತ್ತೇನೆ- ಅವನೇ ಹೇಳುತ್ತಿರುವಂತೆ!

ನಾದಿಯಾ,

ಹೇಗಿದ್ದಿ ಎಂದು ಕೇಳುವುದಿಲ್ಲ! ನಿನ್ನೆ ತಾನೆ ಭೇಟಿಯಾದವಳನ್ನು ಹಾಗೆ ಕೇಳುವುದರಲ್ಲೇನು ಅರ್ಥ? ಹೊಸ ಬದುಕಿನ ಶುರು ಹೇಗಿತ್ತು- ಎಂದು ಕೇಳುತ್ತೇನೆ! ತೃಪ್ತಿಕರ ಅನ್ನುವ ನಂಬಿಕೆಯೊಂದಿಗೆ...,

ನನ್ನ ಆಸಕ್ತಿಯ ವಿಷಯ ಮನುಷ್ಯ ಮನಸ್ಸೇ! ಗಂಡಸರನ್ನು ನಾನು ಹೆಚ್ಚಾಗಿ ಕಲಿಯಬೇಕಾಗಿಲ್ಲ- ಪ್ರತಿ ಗಂಡಸಿನ ಲಕ್ಷಣವೂ ನನ್ನಲ್ಲಿದೆ! ಯಾವ ಗುಣವನ್ನು ಬಿಟ್ಟು, ಯಾವ ಗುಣವನ್ನು ಉಳಿಸಿಕೊಂಡು ನನ್ನನ್ನುನಾನು ಹೇಗೆ ರೂಪಿಸಿಕೊಳ್ಳುತ್ತೇನೆ ಅನ್ನುವುದಷ್ಟೆ ಇತರರಿಂದ ನನ್ನನ್ನು ಬೇರೆಯಾಗಿ ನಿಲ್ಲಿಸುವುದು!

ಬೇರೆ ಯಾರದೋ ಮಾತುಕೇಳಿ ಅವನೊಂದಿಗೆ ವರ್ತಿಸುತ್ತೇನೆ, ಅವನಿಗೆ ದ್ರೋಹ ಬಗೆಯುತ್ತೇನೆ ಎಂದು ನಂಬುವ ಕಾಂಜಿಪೀಂಜಿ ಗೆಳೆಯನೊಬ್ಬನ ಹೊರತು ಬೇರೆ ಯಾವೊಬ್ಬ ಗೆಳೆಯನೂ ನನ್ನಿಂದ ದೂರ ಹೋಗಿಲ್ಲ...! ಇಪ್ಪತ್ತೈದು ವರ್ಷದಿಂದ ಜೊತೆಗಿದ್ದಾನೆ..., ಈಗಲೂ ಅವನಿಗೆ ವಿವರಣೆಕೊಟ್ಟು ನನ್ನನ್ನು ಅರ್ಥ ಮಾಡಿಸಬೇಕು ಅನ್ನುವುದು ನನಗೆ ಒಪ್ಪಲಾಗದ ವಿಷಯ- ಅವನನ್ನೂ ಒಬ್ಬಳು ಹೆಣ್ಣಾಗಿ ಕನ್ಸಿಡರ್ ಮಾಡಿ- ಬಿಟ್ಟು ಮುಂದಕ್ಕೆ ಹೋಗುವುದಷ್ಟೆ!

ಇನ್ನು..., ನೀನೂ ಸೇರಿ ಹೆಂಗಸರ ವಿಷಯ! ಹೆಂಗಸರನ್ನು ಅರ್ಥಮಾಡಿಕೊಳ್ಳಲು ಬ್ರಹ್ಮನಿಂದಲೂ ಸಾಧ್ಯವಿಲ್ಲ ಅನ್ನುತ್ತಾರೆ! ಆದರೆ ನನಗೆ ಹಾಗಲ್ಲ! ಹೆಣ್ಣು ಅರ್ಥವಾಗುತ್ತಾಳೆ- ತಾಕುತ್ತಾಳೆ!

ಸಮಸ್ಯೆ...., ಅರ್ಥವಾದ ಹೆಣ್ಣಿಗೆ ಅನುಸಾರವಾಗಿ ಬದುಕಲು ನನ್ನಿಂದ ಸಾಧ್ಯವಿಲ್ಲ! ಅವಳಿಗಾಗಿ ಬದಲಾಗದ ನನ್ನನ್ನು ಅವಳಿಗೆ ಬೇಡ! ಬೇಡ ಎಂದು ತೀರ್ಮಾನಿಸಿ ದೂರ ಹೋಗುವ ಅವಳ ನಿರ್ಧಾರಕ್ಕೆ ಗೌರವ ಕೊಡುವುದಷ್ಟೇ ನಾನು ಮಾಡಬಹುದಾದ್ದು! ನೆನಪಿರಲಿ..., ಹೆಂಡತಿ ಮತ್ತು ನಿನ್ನ ಹೊರತು ಇಲ್ಲಿ ಹೇಳಿರುವ ಯಾರೊಂದಿಗೂ ನನಗೆ ದೈಹಿಕ ಸಂಬಂಧವಿಲ್ಲ- ಗೆಳೆಯರೊಂದಿಗೆ ಹೇಗೋ..., ಹಾಗೇ- ಕೇವಲ ಒಡನಾಟವಷ್ಟೆ! ಆದರೂ ಬಿಟ್ಟು ಹೋಗಿದ್ದಾರೆ- ಯಾಕೆ?! ದೈಹಿಕ ಸಂಬಂಧವಿರುವವರ ಮಾಹಿತಿ ನನ್ನಿಂದ ಹೊರಕ್ಕೆ ಹೋಗುವುದಿಲ್ಲ- ಕಥೆ ಹೇಳುತ್ತಿರುವವಳು ನೀನಾದ್ದರಿಂದ- ನಿನ್ನೊಂದಿಗಿನದ್ದು ಹೊರತು!!

(ಈ ಕಥೆಗೆ..., ಅವನು ಕೊಟ್ಟಿರುವ ಹೆಂಗಸರ ವಿವರಗಳ ಅಗತ್ಯವೇನೂ ಇಲ್ಲ! ನನ್ನ ಬಗೆಗಿನ ಅವನ ಅಭಿಪ್ರಾಯ ಪರಿಣಾಮಕಾರಿ ಆಗಬೇಕೆಂದರೆ ಈ ಅಭಿಪ್ರಾಯಗಳು ಇದ್ದರೆ ಒಳ್ಳೆಯದೇನೋ- ಅಷ್ಟೆ! ಮೈಲ್‌ನಲ್ಲಿ ಪ್ರತಿಯೊಬ್ಬರ ಬಗೆಗಿನ ವಿವರವಾದ ಮಾಹಿತಿ ಕೊಟ್ಟಿದ್ದಾನೆ. ಒಬ್ಬೊಬ್ಬರ ಬಗ್ಗೆ ಮೂರು ನಾಲ್ಕು ಪುಟಗಳು- ಹೆಂಡತಿಯಬಗ್ಗೆ ಮಾತ್ರ ಹತ್ತು ಪುಟಗಳು! ಅಷ್ಟನ್ನೂ ಕಥೆಯಲ್ಲಿ ಬರೆಯಬೇಕಾದ ಅಗತ್ಯವಿಲ್ಲ! ಜೊತೆಗೆ..., ಒಬ್ಬಳು ಹೆಣ್ಣು ಅನ್ನುವ ಕಾರಣಕ್ಕೆ- ಆದಷ್ಟೂ ಉಳಿದವರ ವ್ಯಕ್ತಿತ್ವಕ್ಕೆ ಧಕ್ಕೆ ಬರದಂತೆ ಹೇಳಬೇಕಾದ್ದು ನನ್ನ ಹೊಣೆ ಕೂಡ! ಅವನಿಂದ ಎಲ್ಲರೂ ಯಾಕೆ ದೂರ ಹೋದರು ಅನ್ನುವುದಷ್ಟೆ ಇಲ್ಲಿ ಮ್ಯಾಟರ್- ಅವರನ್ನು ದೂಷಿಸುವುದಲ್ಲ! ದೂರ ಹೋಗದಿರಲು ಅವನ ಪ್ರಯತ್ನ ಇಲ್ಲ- ಪ್ರಯತ್ನಿಸುವುದಿಲ್ಲ ಅನ್ನುವುದು ಅವನ ವ್ಯಕ್ತಿತ್ವ ಅನ್ನುವುದು ಅವನ ವಾದ- ಯಾರೂ ಒಪ್ಪದ ವಾದ! ಇಪ್ಪತ್ತ ಮೂರು ಜನರಬಗ್ಗೆ ಮಾಹಿತಿ ಇದೆ..., ಕೆಲವೊಂದು ಸೇಂ-ಟು-ಸೇಂ ಅನ್ನಿಸಿದ್ದರಿಂದಲೂ, ಕೆಲವೊಂದು ಹೇಳಬೇಕಾದಷ್ಟು ಇಂಪಾರ್ಟೆಂಟ್ ಅಲ್ಲ ಅನ್ನಿಸಿದ್ದರಿಂದಲೂ ಕೇವಲ ಐದೋ ಆರೋ ಜನರ ಬಗ್ಗೆ ಮಾತ್ರ ಹೇಳುತ್ತಿದ್ದೇನೆ! ಇಲ್ಲಿ ಪಾಯಿಂಟ್..., ಅವನ ಜೀವನದಲ್ಲಿ ಅವನಿಂದ ದೂರ ಹೋದ ಗಂಡಸು ಅಥವಾ ಗೆಳೆಯ ಒಬ್ಬನೇ ಒಬ್ಬ ಅನ್ನುವುದು (ಅವನನ್ನು ಹೆಂಗಸರ ಗುಂಪಿಗೆ ಹಾಕಿಬಿಟ್ಟಿದ್ದಾನೆ!)- ಹೆಂಗಸರು ಅಥವಾ ಗೆಳತಿಯರು ಇಪ್ಪತ್ತ ಮೂರು ಜನ- ಅವನು ಓವರ್ ವ್ಯಾಲ್ಯು ಕೊಟ್ಟವರು ಅನ್ನುವುದು! ಉಳಿದಂತೆ ಬಿಟ್ಟು ಹೋದವರ ಹೊರತೂ ಅವನ ಗೌರವಕ್ಕೆ, ಪ್ರೀತಿಗೆ ಪಾತ್ರರಾದವರು ಹೆಚ್ಚೇ ಪ್ರಪಂಚದಲ್ಲಿ! ಬಿಟ್ಟು ಹೋದವರಬಗ್ಗೆ ಅದೇ ಗೌರವ ಇದೆ ಅನ್ನುವುದನ್ನು ಒತ್ತಿ ಹೇಳಿದ್ದಾನೆ)

1. “ನಿನ್ನ ಸಂಪಾದನೆಯಲ್ಲಿ ನನಗೊಂದು ಬ್ರಾ ಕೂಡ ಕೊಂಡುಕೊಳ್ಳಲಾಗುವುದಿಲ್ಲ- ಇನ್ನು ಕಾರು ಬಂಗ್ಲೆಗಳೆಲ್ಲಾ ಕನಸಿನ ಮಾತು!” ಎಂದು ಹೇಳಿ ಬಿಟ್ಟು ಹೋಗುವ ಹೆಂಡತಿಯನ್ನು ಉಳಿಸಿಕೊಳ್ಳಲು ನನಗೆ ಸಾಧ್ಯ- ನನ್ನ ಆಂಬಿಷನ್ ಮತ್ತು ವ್ಯಕ್ತಿತ್ವಗಳನ್ನು ಬಲಿ ಕೊಟ್ಟರೆ ಸಾಕು! ಹಾಗೆ ಬಲಿಕೊಡಬೇಕೆ ಬೇಡವೇ ಅನ್ನುವುದರಲ್ಲಿ ಗೊಂದಲವಿಲ್ಲದಿರುವುದೇ ನನ್ನ ವ್ಯಕ್ತಿತ್ವವಾದ್ದರಿಂದ ಬಿಟ್ಟು ಹೋದಳು- ಬೇರೆ ಛಾಯ್ಸ್ ಇಲ್ಲ!

2. “ಅವಳಬಗ್ಗೆ ಹೇಳು! ಅವಳ ಜೊತೆ ಸೆಕ್ಸ್ ಆಗಿದೆ ತಾನೆ? ನನಗೆ ಗೊತ್ತು..., ಹೇಳು, ಹೇಳು....! ನಾನು ಮಾತ್ರ ನನಗೆ ಸಂಬಂಧಪಟ್ಟ ಎಲ್ಲರಬಗ್ಗೆ ಹೇಳುತ್ತಿಲ್ವ? ಹಾಗೇ ನೀನೂ ಹೇಳು!” ಎಂದು ಹೇಳುವ ಗೆಳತಿಗೆ...,

“ಹಾಗೆ ಹೇಳುವುದು ನಿನ್ನ ಗುಣ! ಹೇಳದಿರುವುದು ನನ್ನ ಗುಣ!” ಎಂದು ಹೇಳುತ್ತೇನೆ!

ಈ ಕ್ಷುಲ್ಲಕ ಕಾರಣಕ್ಕಾಗಿ ನನ್ನನ್ನು ಬಿಟ್ಟು ಹೋಗುವ ಅವಳ ನಿರ್ಧಾರವನ್ನು ಗೌರವಿಸುವುದು- ನನ್ನ ವ್ಯಕ್ತಿತ್ವ!

3. “ನಾನು ಒಪ್ಪದಿರುವಾಗ ನನ್ನ ಗಂಡ ಬೇರೆಯವರ ಬಳಿ ಹೋಗುತ್ತಾನೆ! ನನಗದು ಗೊತ್ತು! ಆದರೂ ನನಗೇನೂ ಅದು ಸಮಸ್ಯೆ ಅಲ್ಲ!” ಎಂದಿದ್ದಳು.

“ಆತನಿಗೆ ಬೇಕಾದಾಗೆಲ್ಲಾ ನೀನೇ ಒಪ್ಪಿದರಾಯಿತಪ್ಪ!” ಎಂದಿದ್ದೆ.

“ಯಾಕೋ..., ಯಾವಾಗಲೂ ಒಪ್ಪಬೇಕು ಅನ್ನಿಸುವುದಿಲ್ಲ!” ಅಂದಿದ್ದಳು.

ಇದಕ್ಕೆ ನಾನೇನು ಹೇಳಲಿ? ಸುಮ್ಮನಾಗಿದ್ದೆ.

ಅದೇ ಹೆಣ್ಣು ಗಂಡನಿಗೆ ಯೂರಿನಲ್ ಪ್ರಾಬ್ಲಂ ಅಂದಾಗ...,

“ಯೂರಿನಲ್ ಪ್ರಾಬ್ಲಮ್‌ಆ? ಓಹೋ!?” ಅಂತ ಗೇಲಿ ಮಾಡಿ ನಗಾಡಿದ್ದೆ!

“ಯಾಕೆ ನಗಾಡಿದೆ? ನನಗೆ ಗೊತ್ತು ನೀನು ನನ್ನ ಶೀಲದಬಗ್ಗೆ ಡೌಟ್ ಪಡ್ತಿದೀಯ ಅಂತ!” ಎಂದು ಹೇಳಿ ನನ್ನನ್ನು ದೂರ ಇಟ್ಟರೆ- ಅದಕ್ಕೂ ನನ್ನ ಗೌರವವಿದೆ!

4. ಸಾಹಿತ್ಯವನ್ನು ಬ್ಯುಸಿನೆಸ್ ಮಾಡುವವನೊಬ್ಬ ನನ್ನದು ಸೇವೆ ಅಂದರೆ..., ನಿನ್ನದು ಬ್ಯುಸಿನೆಸ್ ಅನ್ನುತ್ತೇನೆ! ಅದು..., ಆತ ಅರೇಂಜ್ ಮಾಡಿದ ಸಾಹಿತ್ಯಕ ಪ್ರೋಗ್ರಾಂನಲ್ಲಿ, ಆತನಿಗೆ ದುಡ್ಡುಕೊಟ್ಟು, ಮಳಿಗೆ ಇಟ್ಟ ಗೆಳತಿಯ 'ಪರವಾಗಿ' ಹೇಳಿದ್ದು ಅನ್ನುವುದೂ ಅರ್ಥವಾಗದೆ..., ಆತನ ಪ್ರೋಗ್ರಾಂನಲ್ಲಿ ಮಳಿಗೆ ಇಟ್ಟಿದ್ದರಿಂದ ಅವಳನ್ನೂ ಸೇರಿ ಹೇಳಿದೆನೆಂದು- ನನ್ನನ್ನು ದೂರ ಇಡುವ ತೀರ್ಮಾನಕ್ಕೆ ಬಂದರೆ ಅವಳ ತೀರ್ಮಾನದ ಬಗ್ಗೆಯೂ ನನಗೆ ಗೌರವವಿದೆ!

5. ಇದು ನನಗೆ ತುಂಬಾ ನೋವು ಕೊಟ್ಟರೂ ಬೇರೆ ವಿಧಿಯಿಲ್ಲದೆ ಒಪ್ಪಬೇಕಾಗಿ ಬಂದ ಪ್ರಸಂಗ!

ಒಬ್ಬರು ತಾಯಿ..., ಅವರ ಮೇಲೆ ನನಗೆ ಅಪಾರ ಪ್ರೀತಿ. ಅವರ ವಿದ್ವತ್ತು, ಅವರ ವಯಸ್ಸು, ಅವರ ಮಾತೃತ್ವವೇ ಕಾರಣವಾಗಿ- ಕಾಲು ಮುಟ್ಟಿ ನಮಸ್ಕರಿಸುವಷ್ಟು ಗೌರವ. ಅವರೋ..., ನಾನು ಕಾಲು ಹಿಡಿಯಲು ಹೋದರೆ ಹಿಂದಕ್ಕೆ ಹೋಗುವಷ್ಟು ಸೌಜನ್ಯ ಇರುವವರು! ನನ್ನವಾದ...,

“'ನಾ-ನು' ನಿಮ್ಮ ಕಾಲು ಹಿಡಿಯುತ್ತಿದ್ದೇನೆಂದರೆ ಅದು ಕೂಡ ಒಂದು ಯೋಗ್ಯತೆಯೇ..., ಬೇಕಾಬಿಟ್ಟಿ ಎಲ್ಲರ ಕಾಲು ಹಿಡಿಯುವವನಲ್ಲ!- ಕಾಲು ಮುಟ್ಟಲು ಬಿಡಿ!” ಅನ್ನುವುದು.

ಆ ನಾನು..., ಅವರೊಂದಿಗೆ ಯಾವುದೋ ವಿಷಯದಬಗ್ಗೆ ಮಾತನಾಡುವಾಗ ಅವರ ಅಭಿಪ್ರಾಯಕ್ಕೆ ವಿರುದ್ಧವಾಗಿ ಮಾತನಾಡಿದೆ. ವಿಷಯದಬಗ್ಗೆ- ಅವರ ಸಮರ್ಥನೆಗೆ ನನ್ನ ವಿರೋಧ! ಅದು ನನಗೆ ಕೇವಲ ಚರ್ಚೆ ಮಾತ್ರ!

ಆದರೆ ಅದನ್ನು ಅವರು ತೆಗೆದುಕೊಂಡಿದ್ದು..., ನಾನು ಅವರನ್ನು ವೈಯುಕ್ತಿಕವಾಗಿ ನಿಂದಿಸಲು, ವ್ಯಂಗ್ಯವಾಡಲು, ಅವರ ವಯಸ್ಸಿಗೆ ಅಪಮಾನ ಮಾಡಲು, ಅವರನ್ನು ಬೇಕೆಂದೇ ನೋಯಿಸಲು ಮಾಡುತ್ತಿರುವ ವಾದ ಅನ್ನುವಂತೆ!!

ಅದು ಗೊತ್ತಾಗಿ- ಕ್ಷಮೆ ಕೇಳಿದರೆ ನಿನ್ನ ಕ್ಷಮೆ ಕೂಡ ವ್ಯಂಗ್ಯ ಎಂದು ಹೇಳಿ ಕ್ಷಮಿಸಲು ತಯಾರೇ ಇಲ್ಲದೆ ನನ್ನನ್ನು ದೂರ ಇಡುವ ತೀರ್ಮಾನಕ್ಕೆ ಬಂದರೆ...., ಏನು ಮಾಡುವುದು? ಅದನ್ನುಒಪ್ಪದೆಯೂ ಬೇರೆ ವಿಧಿಯಿಲ್ಲ!

(ಇನ್ನೂ ಹಲವರ ಬಗ್ಗೆ ಹೇಳಿದ್ದಾನೆ! ಬೋರು ಮ್ಯಾಟರ್‌ಗಳು, ಬ್ಯುಸಿಯ ಕಾರಣವಾಗಿ ದೂರ ಇಟ್ಟವರು, ಅವನೊಂದಿಗೆ ಮಾತನಾಡಿದರೇ ಸಾಕು ಕಳಂಕ ತಟ್ಟುತ್ತದೆ, ಇತರರಿಗೆ ಡೌಟ್ ಬರುತ್ತದೆ ಎಂದು ದೂರ ಇಟ್ಟವರು, ಅವನ ನಡತೆ ಒರಟು ಅನ್ನಿಸಿ ದೂರ ಇಟ್ಟವರು, ಒಟ್ಟು ಅವನು ಸಾಮಾಜಿಕ ಜೀವನಕ್ಕೆ ಅರ್ಹನಲ್ಲದವನು ಅನ್ನುವಂತೆ.... ಹೀಗೆ ಹೀಗೆ...!)

6. ಇನ್ನು ಕೊನೆಯದಾಗಿ ನೀನು..., ಇದು ಶೆಡ್ಯೂಲ್ಡ್ ಮೈಲ್! ಈ ಮೈಲ್ ನಿನಗೆ ಬೆಳಗ್ಗೆ ಏಳೂವರೆಗೆ ತಲುಪಿದ್ದರೆ..., ನಿನ್ನಬಗೆಗಿನ ನನ್ನ ಅಭಿಪ್ರಾಯ ಸರಿ ಅಂತ ಅರ್ಥ! ಅದರ ನಂತರ ತಲುಪಿದರೆ ತಪ್ಪು ಅಂತ! ಇಷ್ಟು ವರ್ಷದ ಒಡನಾಟದಿಂದ ಅರಿತುಕೊಂಡ ನಿನ್ನ ವ್ಯಕ್ತಿತ್ವದ ಪ್ರಕಾರ.... ಮೂರೇ ಮೂರು ಪದಗಳಲ್ಲಿ ಹೇಳುವುದಾದರೆ.....

“ನೀನು ನನ್ನ ಕೊಲ್ಲುತ್ತಿ!”

ಕಥೆ ಮುಗಿಯಿತು!

Comments

  1. ಚೆನ್ನಾಗಿದೆ ಸರ್ ಈಗಿನ ಹೆಣ್ಣಿನ ಇಗೋ ಮನಸ್ಥಿತಿ ಅವಳನ್ನು ಅವಳು ವೇಶ್ಯೆಯು ಅಲ್ಲ ಸೆಕ್ಸಿ ಗರ್ಲ್ಕ ಅಲ್ಲ ಸುಲಭವಾಗಿ ಸಂಪಾದಿಸುವ ಹಣದ ಹುಚ್ಚು ಬೆಳೆಸಿಕೊಂಡ ಹುಡುಗಿ.. ಆದರೆ ಅದರೊಳಗೆ ಇಳಿದರೆ ಎಷ್ಟು ಕ್ಲಿಷ್ಟಕರ ಅನ್ನೋದು ಅರಿವಾಗುತ್ತಿದೆ ಅವಳಿಗೆ. ಕಥೆ ಟ್ರ್ಯಾಕ್ ಬದಲಿಸಿದ ಹೆಣ್ಣುಗಳ ಮನಸ್ಥಿತಿ ಎಂತದ್ದು ಅಂತ ವಾಸ್ತವದಲ್ಲಿ ಕಣ್ಣಿಗೆ ಕಟ್ಟಿದoತಿದೆ..

    ReplyDelete

Post a Comment

Popular posts from this blog

ಇನ್ನೂರು!

ಹಾರರ್ ಥೀಂ

ದಾರಿಯಲ್ಲಿ ಸಿಕ್ಕವಳು!