Posts

Showing posts from October, 2026

ದೇವಿ

 "ಚಂದ ಕಾಣಿಸುವ ಎಲ್ಲಾ ಹೆಣ್ಣೂ ನಿನಗೆ ಬೇಕ?" ಎಂದಳು. "ಚಂದ ಕಾಣಿಸದ ಹೆಣ್ಣೂ ಇದ್ದಾಳ?" ಎಂದೆ. ಅರ್ಥವಾಗದೆ ನೋಡಿದಳು. "ಹೋಗಲಿ ಬಿಡು! ನಿನಗೆ ಬೇಕಾದ ಉತ್ತರವನ್ನೇ ಕೊಡುತ್ತೇನೆ! ನೋಡು ಪುಟ್ಟ..., ಹೆತ್ತು- ಎದೆಹಾಲೂಡಿಸಿದ ಅಮ್ಮನಿಂದ ಹಿಡಿದು..., ಅಮ್ಮನ ಸ್ಥಾನದಲ್ಲಿರುವ ಪ್ರತಿ ಹೆಣ್ಣೂ..., ಒಡಹುಟ್ಟಿ- ಕೈಹಿಡಿದು ನಡೆಸಿದ ಅಕ್ಕಂದಿರಿಂದ ಹಿಡಿದು..., ಅಕ್ಕ ತಂಗಿಯರ ಸ್ಥಾನದಲ್ಲಿರುವ ಪ್ರತಿ ಹೆಣ್ಣೂ..., ನನ್ನ ಕಾಮವನ್ನು ತಣಿಸುವ ಪ್ರೇಯಸಿಯರಿಂದ ಹಿಡಿದು..., ಕಾಮದ ಎಳೆಯೂ ಇಲ್ಲದೇ ಪ್ರೀತಿಸುವ ಗೆಳತಿಯರವರೆಗೆ..., ನನಗೇ ಹುಟ್ಟಿದ ಮಗಳಿಂದ ಹಿಡಿದು ಮಗಳ ಸ್ಥಾನದಲ್ಲಿರುವ ಪ್ರತೀಹೆಣ್ಣೂ ನನಗೆ ದೇವಿಯೇ...! ಪ್ರಶ್ನೆ..., ನನಗೆ ಎಲ್ಲರೂ ಬೇಕ ಅನ್ನುವುದಲ್ಲ..., ಹೆಣ್ಣಿಗೆ ನಾನು ಯಾವ ರೂಪದಲ್ಲಿ ಬೇಕು ಅನ್ನುವುದು!" ಎಂದೆ. ಎಂದಿನಂತೆ...,  ಮೂತಿ ತಿರುಗಿಸಿ ಎದ್ದು ಹೋದಳು! ನಾನೂ ಹೋಗುತ್ತಿದ್ದೇನೆ...., ಒಂದು ಸಣ್ಣ ಅಜ್ಞಾತವಾಸ! ಮುಗಿಸಿ ಬಂದು ಸಿಗೋಣ...! ಓಂ ನಮಃ ಶಿವಾಯ ❤