ದೇವಿ
"ಚಂದ ಕಾಣಿಸುವ ಎಲ್ಲಾ ಹೆಣ್ಣೂ ನಿನಗೆ ಬೇಕ?" ಎಂದಳು.
"ಚಂದ ಕಾಣಿಸದ ಹೆಣ್ಣೂ ಇದ್ದಾಳ?" ಎಂದೆ.
ಅರ್ಥವಾಗದೆ ನೋಡಿದಳು.
"ಹೋಗಲಿ ಬಿಡು! ನಿನಗೆ ಬೇಕಾದ ಉತ್ತರವನ್ನೇ ಕೊಡುತ್ತೇನೆ! ನೋಡು ಪುಟ್ಟ..., ಹೆತ್ತು- ಎದೆಹಾಲೂಡಿಸಿದ ಅಮ್ಮನಿಂದ ಹಿಡಿದು..., ಅಮ್ಮನ ಸ್ಥಾನದಲ್ಲಿರುವ ಪ್ರತಿ ಹೆಣ್ಣೂ..., ಒಡಹುಟ್ಟಿ- ಕೈಹಿಡಿದು ನಡೆಸಿದ ಅಕ್ಕಂದಿರಿಂದ ಹಿಡಿದು..., ಅಕ್ಕ ತಂಗಿಯರ ಸ್ಥಾನದಲ್ಲಿರುವ ಪ್ರತಿ ಹೆಣ್ಣೂ..., ನನ್ನ ಕಾಮವನ್ನು ತಣಿಸುವ ಪ್ರೇಯಸಿಯರಿಂದ ಹಿಡಿದು..., ಕಾಮದ ಎಳೆಯೂ ಇಲ್ಲದೇ ಪ್ರೀತಿಸುವ ಗೆಳತಿಯರವರೆಗೆ..., ನನಗೇ ಹುಟ್ಟಿದ ಮಗಳಿಂದ ಹಿಡಿದು ಮಗಳ ಸ್ಥಾನದಲ್ಲಿರುವ ಪ್ರತೀಹೆಣ್ಣೂ ನನಗೆ ದೇವಿಯೇ...! ಪ್ರಶ್ನೆ..., ನನಗೆ ಎಲ್ಲರೂ ಬೇಕ ಅನ್ನುವುದಲ್ಲ..., ಹೆಣ್ಣಿಗೆ ನಾನು ಯಾವ ರೂಪದಲ್ಲಿ ಬೇಕು ಅನ್ನುವುದು!" ಎಂದೆ.
ಎಂದಿನಂತೆ..., ಮೂತಿ ತಿರುಗಿಸಿ ಎದ್ದು ಹೋದಳು!
ನಾನೂ ಹೋಗುತ್ತಿದ್ದೇನೆ...., ಒಂದು ಸಣ್ಣ ಅಜ್ಞಾತವಾಸ!
ಮುಗಿಸಿ ಬಂದು ಸಿಗೋಣ...!
ಓಂ ನಮಃ ಶಿವಾಯ ❤
ಅಬ್ಬಾ ಅದ್ಭುತ ಭಾವ ದೇವಿ ದೇವನ ಸಮಾಗಮ ಪ್ರಕೃತಿ ಪುರುಷನ ಪ್ರೇಮ ಪಲ್ಲವಿಸಿತು..ಕಥೆಯ ಕಥಾನಾಯಕಿಗೂ ಕಥಾನಾಯಕನಿಗೂ ಶುಭಾಶಯಗಳು 💐💐ಅಬ್ಬಾ ತನ್ನ ಸ್ಥಾನವನ್ನು ದೇವಿಗೆ ಬಿಟ್ಟುಕೊಟ್ಟ ಜೇಷ್ಠ ಮಾತೆ ಆ ಮಹಾತಾಯಿಗೆ ನನ್ನ ಕೋಟಿ ನಮನಗಳು 🙏🙏ಕಥೆಯಾದರೂ ಅದರ ಭಾವ ಅದರ ಸ್ಥಾನಕ್ಕೆ ಗೌರವಸಲ್ಲಿಸಲೇಬೇಕು 🙏🙏ತುಂಬಾ ಧನ್ಯವಾದಗಳು ತಮಗೂ ಸರ್ ಈ ಮಹೋನ್ನತ ಕಥೆ ಓದಲು ಕೊಟ್ಟಿದ್ದಕ್ಕೆ ನಾವು ಧನ್ಯರಾದೆವು 🙏🙏
ReplyDeleteಕನ್ನಡ ರಾಜ್ಯೋತ್ಸವದ ಶುಭಾಶಯಗಳು ಗುರುಗಳೇ 💐v
ReplyDeleteಏನು ಗುರುಗಳೇ ನಿಮ್ಮ ಬರಹನೆ ಬರಲಿಲ್ಲ ಈ ನಡುವೆ
ReplyDelete