ವಿಧಿ- ಕಥೆ
ನಮ್ಮ ಬದುಕಿನಲ್ಲಿ ಏನು ನಡೆಯಬೇಕೋ ಅದು ನಡೆಯುತ್ತದೆ . ಯಾರನ್ನು ಸಂಧಿಸಬೇಕೋ ಅವರನ್ನು ಸಂಧಿಸುತ್ತೇವೆ . ಯಾರನ್ನು ಸಂಧಿಸಿದಾಗ ಏನು ನಡೆಯಬೇಕೋ ಅದು ನಡೆದೇ ನಡೆಯುತ್ತದೆ . ಕೆಲವೊಮ್ಮೆ ನಮ್ಮ ಜೀವನಕ್ಕೂ ಜೀವನದಲ್ಲಿ ನಡೆಯುತ್ತಿರುವುದಕ್ಕೂ ಯಾವುದೇ ಸಂಬಂಧ ಇರುವುದಿಲ್ಲ . ಆದರೂ ನಡೆಯುತ್ತದೆ ! ಅದೇ ವಿಧಿ - ಅಂತೆ ....!! ೧ ಸಮುದ್ರ ತೀರ . ಅಸ್ತಮಿಸುತ್ತಿರುವ ಸೂರ್ಯನನ್ನು ನೋಡುತ್ತಾ ಕುಳಿತಿದ್ದೇನೆ . ಪ್ರತಿ ದಿನ ಸಮುದ್ರ ತೀರದಲ್ಲಿ ಜನಸಂದಣಿಯಿಂದ ಬೇರೆಯಾಗಿ ಎರಡು ಗಂಟೆಗಳಕಾಲ ಕುಳಿತುಕೊಳ್ಳುವುದು ನನ್ನ ಹವ್ಯಾಸ . ಸ್ವಂತವಾಗಿ ಕಂಪೆನಿಯೊಂದನ್ನು ನಡೆಸುತ್ತಿರುವ ನನಗೆ ಒತ್ತಡ , ಅಸಹನೆ , ಕೋಪ ತಾಪಗಳಿಗೆ ಯಾವ ಕೊರತೆಯೂ ಇಲ್ಲ ! ಅದರಿಂದಲೆಲ್ಲಾ ಹೊರಬಂದು , ಯಾವ ಚಿಂತೆಗೂ ಎಡೆಗೊಡದೆ , ಎರಡು ಗಂಟೆಗಳ ಕಾಲ ಹೀಗೆ ಪ್ರಶಾಂತವಾಗಿ ಕಳೆಯುವುದರಲ್ಲಿ ನನಗೇನೋ ತೃಪ್ತಿ . ಅದೆಷ್ಟೇ ಒತ್ತಡವಿದ್ದರೂ , ಎಷ್ಟುದೊಡ್ದ ಕೆಲಸವಿದ್ದರೂ ಈ ಎರಡು ಗಂಟೆಗಳನ್ನು ನಾನು ಕಳೆದುಕೊಳ್ಳುವುದಿಲ್ಲ . ಸ್ವಲ್ಪ ಸಮಯದಲ್ಲಿಯೇ ಸೂರ್ಯ ಶುಭರಾತ್ರಿ ಹೇಳಿ ಹೊರಟುಹೋದ . ಕತ್ತಲು ಬೆಳಕಿನ ಆಟ ಅದ್ಭುತವಾಗಿದೆ . ಜನರೂ ಕೂಡ ಅವರವರ ಅ - ಸಹಜ ಪ್ರಪಂಚಕ್ಕೆ ಹೊರಟುಹೋದರು . ನಾನೂ ಎದ್ದೆ . ನೀರಿಗೆ ಇಳಿದು , ಸಮುದ್ರದ ವಿಶಾಲತೆಯನ್ನೊಮ್ಮೆ ಅಳೆದ...