ಪ್ರೇಮ- ಕಥೆ
ಪ್ರೇಮ ೧ ಆಕಸ್ಮಿಕವಾಗಿ ಆ ವ್ಯಕ್ತಿಯನ್ನು ಕಂಡೆ . ಎಷ್ಟು ದಿನದಿಂದ ಮಲಗಿದ್ದಾನೋ ತಿಳಿಯದು . ಕುಷ್ಟವೋ ಏನೋ ... ಮೈಯ್ಯೆಲ್ಲಾ ಗುಳ್ಳೆಗಳೆದ್ದು - ಕೀವು ಒಡೆದು - ಮಲಮೂತ್ರ ವಿಸರ್ಜನೆಯೆಲ್ಲಾ ಅಲ್ಲೇ ನಡೆದು ನಾರುತ್ತಿದೆ .! ಜನ - ಮೂಗುಮುಚ್ಚಿ ಅಸಹ್ಯದಿಂದ - ಅಸಹ್ಯ - ಮನುಷ್ಯನಿಗೆ ಮನುಷ್ಯನಬಗ್ಗೆ ಅಸಹ್ಯ ! ತಾನೂ ಮಲಮೂತ್ರ ವಿಸರ್ಜಿಸುವವನೇ - ತಿಂದ ಆಹಾರ , ಕುಡಿದ ನೀರೇ ಅದು - ಆದರೂ ಅಸಹ್ಯದಿಂದ ಹೋಗುತ್ತಿದ್ದಾರೆಯೇ ಹೊರತು ಯಾರೊಬ್ಬರೂ ಆತನನ್ನು ಗಮನಿಸುತ್ತಿಲ್ಲ ! ಯಾಕೆ ? ನಾನೂ ಕೂಡ ಏನು ಮಾಡಲಿ ಎಂದು ಯೋ - ಚಿ - ಸು - ತ್ತಾ ನಿಂತೆನೇ ಹೊರತು , ಚಲಿಸಲಿಲ್ಲ ! ಆಗ , ಚಿಕ್ಕ ಹುಡುಗನೊಬ್ಬ ಯಾವ ಯೋ - ಚ - ನೆ - ಯೂ - ಇ - ಲ್ಲ - ದೆ ಆ ವ್ಯಕ್ತಿಯಬಳಿಗೆ ನಡೆದ ! ವ್ಯಕ್ತಿ ಏನನ್ನೋ ಹೇಳಲು ಶ್ರಮಿಸುತ್ತಿದ್ದ . ಹುಡುಗ ಅರ್ಥವಾದಂತೆ ತಲೆಯಾಡಿಸಿ ತನ್ನ ಬ್ಯಾಗಿನಿಂದ ನೀರಿನ ಬಾಟಲಿಯನ್ನು ತೆಗೆದು ಆತನಿಗೆ ಕುಡಿಸಿದ . ನಂತರ ಆತನನ್ನು ಎಬ್ಬಿಸವ ಶ್ರಮದಲ್ಲಿದ್ದಾಗ ಅವರಬಳಿಗೆ ನಡೆದೆ . ಮತ್ತೊಂದು ಕೈಯ ಜೊತೆಸೇರುವಿಕೆಯಿಂದ - ಹುಡುಗ ಆಶ್ಚರ್ಯದಿಂದ ನನ್ನನ್ನು ನೋಡಿದ . ಮುಗುಳುನಕ್ಕೆ . ತನ್ನ ಬ್ಯಾಗಿನಿಂದ ಟಿಫನ್ ಬಾಕ್ಸನ್ನು ತೆಗೆಯುತ್ತಿದ್ದಾಗ ತಡೆದೆ . ಪಕ್ಕದ ಹೋಟೆಲಿನಿಂದ ತಿಂಡಿಯನ್ನು ತಂದೆ . ಆಂಬ್ಯುಲನ್ಸಿಗೆ ಫೋನ್ ಮಾಡಿದೆ . ಆತ ತಿಂಡಿ ತಿಂದು ಮುಗಿಸುವ ಸಮಯಕ್ಕೆ ಸರಿಯಾಗಿ ಆಂಬ್ಯುಲನ್ಸ್ ಬಂತು...