Posts

Showing posts from August, 2019

ಕಥೆ- ಕಥೆ

ಕಥೆ ಕಥೆ . ಜೀವನಾನುಭವ ಮತ್ತು ಕಲ್ಪನೆಗಳ ಮಿಶ್ರಣ ! ಏನು ಹೇಳಿದರೂ ಕಥೆಯೇ ! ಅದನ್ನು ಎಷ್ಟು ರಸವತ್ತಾಗಿ ಹೇಳುತ್ತೇವೆ ಅನ್ನುವುದು ಮುಖ್ಯ ! ನಡೆದದ್ದನ್ನು ಮಾತ್ರ ಹೇಳಿದರೆ ವಾಸ್ತವ ಕಥೆ ! ಕಲ್ಪನೆಯನ್ನು ಮಾತ್ರ ಹೇಳಿದರೆ ಕಾಲ್ಪನಿಕ ಕಥೆ ! ಕೆಲವೊಮ್ಮೆ .... ವಾಸ್ತವವನ್ನು ಹೇಳಿದರೆ ಯಾರೂ ನಂಬುವುದಿಲ್ಲ - ಅಸಾಧ್ಯ ಅನ್ನುತ್ತೇವೆ ! ಕೆಲವೊಮ್ಮೆ .... ಕಲ್ಪನೆಯನ್ನು ಹೇಳಿದರೆ ವಾಸ್ತವಕ್ಕಿಂತಲೂ ಹೆಚ್ಚಾಗಿ ನಂಬುತ್ತೇವೆ !! ಕೆಲವು ವಿಷಯಗಳನ್ನು ನಂಬಲಾಗುವುದಿಲ್ಲ ! ಆದರೂ ನಡೆದಿರುತ್ತದೆ ! ಕೆಲವು ವಿಷಯಗಳು ಕಲ್ಪನೆಯಾಗಿರುತ್ತದೆ ! ಆದರೂ ನಂಬುತ್ತೇವೆ ! ಕಥೆ .... ಹೇಳುತ್ತಿರುವುದು ಕಲ್ಪನೆಯೋ ವಾಸ್ತವವೋ .... ಎರಡರ ಮಿಶ್ರಣವೋ .... ಒಟ್ಟಿನಲ್ಲಿ .... ಇದೊಂದು ಕಥೆ ! * ಪ್ರಪಂಚದಲ್ಲಿಯೇ ಅತ್ಯಂತ ಬಲಯುತವಾದದ್ದು ಏನು ? ಹುಚ್ಚು ಪ್ರಶ್ನೆ ! ಬಲವನ್ನು ಅಳೆಯುವುದು ಹೇಗೆ ? ಒಬ್ಬೊಬ್ಬರಿಗೆ ಒಂದೊಂದು ! ಒಂದೊಂದು ಸಂದರ್ಭದಲ್ಲಿ ಒಂದೊಂದು .....! ಆದರೂ .... ಪ್ರಪಂಚದಲ್ಲಿ ಅತ್ಯಂತ ಬಲಯುತವಾದದ್ದು ಏನು ? ಮನುಷ್ಯನ ಮನಸ್ಸು ! ಮನುಷ್ಯ ಮನಸ್ಸಿನಷ್ಟು ಪ್ರಬಲವಾದದ್ದು ಪ್ರಂಪಚದಲ್ಲಿಯೇ ಇನ್ನೊಂದಿಲ್ಲ - ನನ್ನ ನಂಬಿಕೆ ! ಇಲ್ಲದಿರುವುದನ್ನು ಸೃಷ್ಟಿಸಬಲ್ಲದು ಮನಸ್ಸು ... ಇರುವುದನ್ನು ಸರ್ವನಾಶ ಮಾಡಬಲ್ಲದು ಮನಸ್ಸು ! ಹೀಗೆ ........