Posts

Showing posts from July, 2020

ಕಥೆಗಾರನ ಕಥೆ- ಕಥೆ

ಕಥೆಗಾರನ ಕಥೆ ಕಥೆಗಾರ ನಾನು ! ಆದ್ದರಿಂದ ಬರೆಯುತ್ತಲೇ ಇರಬೇಕು ! ಬೇರೆ ವಿಧಿಯಿಲ್ಲ , ಯಾರು ಓದಿದರೂ ಬಿಟ್ಟರೂ - ಬರೆಯುವುದು ನನ್ನ ಧರ್ಮ ! ಸಾಮಾನ್ಯವಾಗಿ ಕಥೆಗಳಲ್ಲಿ ಕಥೆಗಾರನನ್ನು ಹುಡುಕುವುದು ವಾಡಿಕೆ ! ಸಿಗಲಾರ ! ಆದರೂ ಕಂಡುಕೊಂಡಿದ್ದೇ ಅವನು ಅನ್ನುವ ನಂಬಿಕೆ ಇದ್ದೇ ಇರುತ್ತದೆ ! ಆದ್ದರಿಂದ ಇಂದು ಕಥೆಗಾರನ ಕಥೆಯನ್ನು ಹೇಳೋಣ ಅಂದುಕೊಂಡಿದ್ದೇನೆ ! ಬರೆಯುತ್ತಿರುವುದು ಗಂಡು ಪ್ರಾಣಿಯಾದ್ದರಿಂದ ..., ಇದು ..., ಕಥೆಗಾರನ ಕಥೆ ! ಬರೆಯುವವನ ಜೀವನಕ್ಕೆ ಸಂಬಂಧ ಪಡದೇ ಇದ್ದರೂ ಅವನು ಹೇಗೆ ಕಥೆ ಬರೆಯಬಲ್ಲ ಅನ್ನುವ ಕಥೆ ! * ಮನೆಯಮುಂದೆ ಕುಳಿತಿದ್ದೇನೆ . ಕುರ್ಚಿಯಲ್ಲಿ ಕುಳಿತು - ಎಡಗಾಲನ್ನು ಸ್ಟೂಲ್ ಮೇಲಿಟ್ಟು - ಯಾಕೆಂದು ಕೇಳಬೇಡಿ - ಮುರಿದಿದೆ !- ಪಕ್ಕದ ಮತ್ತೊಂದು ಸ್ಟೂಲಿನ ಮೇಲೆ ಬರೆಯಲು ಕಾಗದ - ಪೆನ್ನು - ಜೊತೆಗೆ ಟೀ ! ಕೈಯ್ಯಲ್ಲಿ ಸಿಗರೇಟಿದೆ ಅನ್ನೋಣ ಅನ್ನುವ ಆಸೆ ! ಆದರೆ ನಾನು ಸಿಗರೇಟು ಸೇದಲಾರೆ !- ಕುಳಿತು ಏನು ಬರೆಯಲಿ ಅನ್ನುವ ಯೋಚನೆಯಲ್ಲಿ ದೂರದ ಬೆಟ್ಟವನ್ನೇ ನೋಡುತ್ತಿದ್ದೇನೆ ! ಬೆಟ್ಟವನ್ನು ನೋಡಿದರೆ ಕಥೆ ಬರುತ್ತದೆಯೇ ? ಬರಬೇಕು ! ಕಥೆಯೂ ಕಾದಂಬರಿಯೂ ಕವಿತೆಯೂ ಮಹಾಕಾವ್ಯವೂ .., ಬರಬೇಕು ! ಆದರೆ ಬರುತ್ತಿಲ್ಲ ! ಹೆಂಡತಿ ನಾಲ್ಕನೇ ಟೀಯನ್ನು ತಂದಿಟ್ಟು ನನ್ನನ್ನು ನೋಡಿ ಮುಗುಳುನಕ್ಕು ಹೊರಟು ಹೋದಳು ! ಗೇಲಿ ಮಾಡಿದಳೇ ? ಮಾಡಲಾರಳು ! ಅವಳಿ...