Posts

Showing posts from May, 2022

ವಾಲ್ಮೀಕೀವೇದಾಂತ!

ವಾಲ್ಮೀಕೀ ವೇದಾಂತ ! * ಶೃಂಗಾರದಲ್ಲಿದ್ದ ಕ್ರೌಂಚ ಪಕ್ಷಿಗಳಲ್ಲಿ ಒಂದನ್ನು ಹೊಡೆದುರುಳಿಸಿದ ವ್ಯಾಧ ! ಅವನಿಗೆ ಮುಖ್ಯ - ಬೇಟೆ ! ಬೇಟೆ ಅವನ - ಧರ್ಮ ! ಪಕ್ಷಿಗಳ ಆನಂದವನ್ನು ತನ್ನದೇ ಆನಂದವೆಂಬಂತೆ ಅನುಭಾವಿಸುತ್ತಿದ್ದ ಕವಿ ಹೃದಯ ಮರುಗಿತು - ಅಯ್ಯೋ ಎಂದಿತು . ಸತ್ತ ಪಕ್ಷಿಯನ್ನು ಸುಟ್ಟು ತಿನ್ನಲು ತೆಗೆದುಕೊಂಡು ಹೋದ ವ್ಯಾಧ ! ಕ್ರೋಧಗೊಂಡ ಕವಿ ವ್ಯಾಧನನ್ನು ಶಪಿಸಿದ - ಎಂದು ಯಾರೋ ಭಾವುಕ ಜೀವಿ ಹೇಳಿದ್ದಾನೆ ! ಅದು ಆ ಹೇಳಿದವನ ಭಾವವೇ ಹೊರತು - ಕವಿ ಶಪಿಸಲಾರ ! ಪಕ್ಷಿಯ ಸಾವಿಗೆ ದುಃಖವಿದೆ ! ಸತ್ತ ಪಕ್ಷಿಯ ಸಂಗಾತಿಯ ದುಃಖಕ್ಕೆ ವಿಷಾದವಿದೆ ! ಹಾಗೆಂದು ತನ್ನ ಧರ್ಮವನ್ನು ತಾನು ನೆರವೇರಿಸಿದ ವ್ಯಾಧನನ್ನು ಶಪಿಸುವಷ್ಟು ಅವಿವೇಕಿಯೋ ಕಠಿಣ ಹೃದಯನೋ ಅಲ್ಲ - ಕವಿ ! ಸಂಗಾತಿಯನ್ನು ಕಳೆದುಕೊಂಡ ಕ್ರೌಂಚದ ದುಃಖ… ಕವಿ ಹೃದಯದಲ್ಲಿ ಮಹಾಕಾವ್ಯವನ್ನೇ ಹುಟ್ಟಿಸಿತು ! ಮಹಾಕಾವ್ಯ ! ಕರುಣರಸ ಪ್ರೇರಿತವಾದರೂ… ಕರುಣರಸವೇ ಪ್ರಧಾನವಾದರೂ… ನವರಸಗಳಲ್ಲಿ ಯಾವೊಂದಕ್ಕೂ ಕೊರತೆಯಾಗದೆ - ಪ್ರತಿ ರಸದ ಪರಾಕಾಷ್ಠೆಯನ್ನು ತಲುಪಿದ - ಮಹಾಕಾವ್ಯ ! ಅಲ್ಲವೇ… ? ಒಂದು ವಿಷಾದಮೂಲ ಘಟನೆಯೇ ಕಾರಣವಾಗಿ ಮಹಾಕಾವ್ಯವೊಂದು ಸೃಷ್ಟಿಯಾಯಿತು ! ಅಂದಮೇಲೆ… , ದುಃಖ - ಕೆಟ್ಟದ್ದೇ ? * “ ನಾನೂ ನಿಮ್ಮ ಮಗಳೇ ! ಸ್ವಲ್ಪದಿನ ನನ್ನೊಂದಿಗೆ ಬಂದು ಇರಲಾಗದೆ ?” ಎಂದರು ಅಕ್ಕ . “ ವಾಲ್ಮೀಕಿ ಒಬ್ಬನೇ ಆಗುತ್ತಾನಲ್ಲ ?” ಎಂದರು ಅಮ್ಮ ! “ ...