Posts

Showing posts from July, 2022

ವಿರಾಗಿ!

ವಿರಾಗಿ ! “ ದೇವೀ… , ಕಥೆಗಾರನೊಬ್ಬ ಕಥೆ ಹೇಳತೊಡಗಿದನೆಂದರೆ ಅದೊಂದು ಓಘ - ಜರಿ ! ಆದರೂ ಕೆಲವೊಮ್ಮೆ ಕಥೆ ಅವನ ಕೈಬಿಟ್ಟು ಹೋಗುತ್ತದೆ ! ಏಕೆ ?” “ ಯಾವಾಗ ಹೇಳುತ್ತಿರುವ ಕಥೆ - ಕಥೆಗಾರನ ತೀರಾ ವೈಯುಕ್ತಿಕ ಜೀವನವಾಗುತ್ತದೋ… ಅವನರಿವಿಲ್ಲದೆ ಕಥೆ ಅವನ ಕೈಬಿಟ್ಟು ಹೋಗುತ್ತದೆ ! ನಿನ್ನ ಅತಿದೊಡ್ಡ ಸಮಸ್ಯೆ !” “ ಏನು ಮಾಡಲಿ ದೇವಿ ? ಜೀವನಕ್ಕೆ ಹತ್ತಿರವಾದ , ವಾಸ್ತವಕ್ಕೆ ಹತ್ತಿರವಾದ ಕಥೆ ಹೇಳಬೇಕೆಂದರೆ ಹಾಗಾಗುವುದು ಸಹಜವಲ್ಲವೇ ?” “ ನಾನು ಹೇಳಿದ್ದು ಅರಿವಾಗದಿರುವಷ್ಟು ಮುಗ್ಧನಲ್ಲ ನೀನು ! ಜೀವನಕ್ಕೆ ಹತ್ತಿರವಾದ ಕಥೆ ಬೇರೆ ! ವೈಯಕ್ತಿಕ ಕಥೆ ಬೇರೆ !” “ ಈಗೇನು ಮಾಡಲಿ ?” “ ಏನು ಮಾಡಲಿ ಅಂದರೆ ? ಯಾರಿಂದಲೂ ಊಹಿಸಲಾಗದ , ವಾಸ್ತವಕ್ಕೆ ತೀರಾ ಹತ್ತಿರವಾದ , ನಿನ್ನ ಬದುಕಿಗೆ ಸಂಬಂಧಪಡದ ವಿಷಯವನ್ನು ಬೆರೆಸಿ ನಿನ್ನ ಕಥೆ ಹೇಳು ! ನೀನು ಹೇಳಿರುವುದರಲ್ಲಿ ಯಾವುದು ಸುಳ್ಳು ಅಥವಾ ಕಲ್ಪನೆ ಅನ್ನುವುದು ಯಾರೊಬ್ಬರಿಗೂ ಅರಿವಾಗದಿರುವಂತೆ ಹೇಳು !” “ ದೇವೀ… , ದಯವಿಟ್ಟು ಇದೊಂದು ವರವನ್ನು ನೀಡಿ… , ಕೈಬಿಟ್ಟುಹೋಗುವ - ನಾನು ಹೇಳುವ ಕಥೆಗಳಲ್ಲಿ ಇದೇ ನನ್ನ ಕೊನೆಯ ಕಥೆಯಾಗಲಿ !” “ ತಥಾಸ್ತು !” ೧ ನಮಸ್ತೇ… ! ನಾನು… , ದೇವೀಪುತ್ರ ! ಗೊತ್ತೇ ..? ನಾನೊಬ್ಬ ಕೋಮುವಾದಿ ! ನಿಜ !! ನಿನ್ನೆ - ಮೊನ್ನೆ ನನ್ನ ಗೆಳೆಯರು ಅದನ್ನು ಸಾಬೀತು ಮಾಡಿದ್ದಾರೆ ! ಕ್ರಿಸ್ತಶಕ ಏಳುನೂರರಲ್ಲಿ ವ್ಯಕ್ತಿಯೊಬ್ಬನಿಂದ ರೂಪು...