ಭ್ರಮೆ- ಭಾವ- ಏಕಾಂತ!
ಭ್ರಮೆ - ಭಾವ - ಏಕಾಂತ ! ೧ ಪಾಪ ನನ್ನ ಉಷೆ ! ನನ್ನ ಭ್ರಮೆಗೆ ಅವಳ ರೂಪ ಕೊಟ್ಟು ನಾನವಳಿಗೆ ಕೊಟ್ಟ ಹಿಂಸೆ… ! ಎಷ್ಟು ಬೇಡಿದಳು - ಗೋಗರೆದಳು… , ನಾನಲ್ಲವೋ ನಿನ್ನ ಉಷೆ - ಬಿಟ್ಟುಬಿಡು ನನ್ನ ! ಬಿಡಲಿಲ್ಲ ನಾನು ! ಕಾಡಿದೆ… , ಅವಳಿಗಿಂತ ಬೇಡಿದೆ - ಗೋಗರೆದೆ ! ಆದರದು ಅವಳೇ ನನ್ನ ಉಷೆಯೆಂಬ ನಂಬಿಕೆಯಿಂದಲೇ ಹೊರತು… ! ಏನೋಪ್ಪ ! ಪ್ರೇಮಿಯಿಂದ ತಾಯಿಗೆ ಎಷ್ಟು ಚಂದದಲ್ಲಿ ಬಡ್ತಿ ಹೊಂದಿದಳು ! ನನ್ನ ಸಹಕಾರವಿರಲಿಲ್ಲವೇ… ? ಇತ್ತು ! ಯಾಕೆ ? ಅವಳು ಉಷೆ - ಪ್ರೇಮ ...! ನಾನು ಅನಿರುದ್ಧನಲ್ಲ - ಭ್ರಮೆ ! ೨ ಸಿಗಬಾರದಿತ್ತು - ಹಂಸ ! ನೋವು ನೋವು ನೋವು… , ನೋವು ಮಾತ್ರ - ನನ್ನಿಂದ… , ನಾನು ಅತಿ ಹೆಚ್ಚು ಪ್ರೀತಿಸುವವರಿಗೆ !! ಆದರೆ… , ಅವರ ನೋವಿಗೆ ಕಾರಣ - ನನಗೆ ಕಾರಣವೇ ಅಲ್ಲ ಅನ್ನುವ ವಿಪರ್ಯಾಸದಲ್ಲಿ ನನ್ನ ನೋವಿದೆ ! ನನ್ನ ಜೀವನವೇ ಹೀಗೆಯೇ ಏನೋ ! ಹುಡುಕಾಟ ನಿಲ್ಲುವುದಿಲ್ಲ ! ಇವಳೇ ಕೊನೆ ಎಂದು ಅದೆಷ್ಟು ಕೊನೆಗಳು ! ಅಂತ್ಯವಿಲ್ಲದ ಕೊನೆಗಳಿಗೊಂದು ಅಂತ್ಯ - ಹಂಸ ! ಹಂಸ ! ನನ್ನ ಮುಗ್ಧ ಪ್ರೇಮ ! ನನ್ನ ಮನಸ್ಸನ್ನು ಅರಿಯುವವಳೊಬ್ಬಳು ಬೇಕೆನ್ನುವ ನನ್ನ ಹುಡುಕಾಟ ! ಮುಗ್ಧತೆಯೇ ವಿಜೃಂಭಿಸಿ… , ಇನ್ನು ಮುಂದೆ ಯಾರೊಬ್ಬರೂ ಹತ್ತಿರವೇ ಬರದಂತೆ - ತಾನೂ ದೂರವಾಗಿ ಹೋದಳು - ದೂರ ಹೋಗುವುದೆಂದರೆ… , ಬಿಟ್ಟು ಹೋಗುವುದಲ್ಲ - ಮನಸ್ಸು ಅರ್ಥವಾಗದೆ ಒಂದು ಅಂತರ ರೂಪುಗೊಳ್ಳುವುದು ! ನನ್ನ ಮನಸ್...