Posts

Showing posts from December, 2023

ಕನ್ನಡಿಯಲ್ಲಿನ ನಾನು!

  ಕನ್ನಡಿಯಲ್ಲಿನ ನಾನು ! ನಾನೆಂಬುವ ಒಬ್ಬನೇ… , ಸ್ನಾನವನ್ನು ಮುಗಿಸಿ ಬಂದು ..., ಕನ್ನಡಿಯ ಮುಂದೆ ನಿಂತೆ . ತುಂಬಾ ಅಪರೂಪಕ್ಕೆ… , ನನ್ನ ಕಣ್ಣುಗಳನ್ನು ನಾನೇ ದಿಟ್ಟಿಸಿ ನೋಡಿದೆ . ಯಾಕೋ… , ತುಂಬಿ ಬಂತು ! ನನಗೆ ನಾನೆ ಅದೆಷ್ಟು ಅದ್ಭುತವಾಗುವಷ್ಟು ಇಷ್ಟವಾದೆನೆಂದರೆ… , ಮುತ್ತೊಂದು ಕೊಟ್ಟುಕೊಳ್ಳುವಷ್ಟು ! ಜೀವನವೊಂದು ಓಟ - ಗಮ್ಯವನ್ನು ತಲುಪಲು ಓಡುವ ಓಟ ! ಓಡು ! ಓಡು ! ಓಡುತ್ತಿರು ! ಬಿದ್ದರೆ ಬೀಳು , ಉರುಳಾಡು , ಗಾಯಮಾಡಿಕೋ ಹೊರತು ಅಳಬೇಡ - ಆಯಾಸಗೊಂಡೆನೆಂದು ನಿಲ್ಲಬೇಡ ! ಆಸರೆಗೆ ಯಾರೂ ಇರುವುದಿಲ್ಲ ! ಎದ್ದು ಪುನಃ ಓಡು ! ಆಸರೆ ಅಗತ್ಯವಾದವರಿಗೆ ಆಸರೆಯಾಗು ಹೊರತು - ನಿರೀಕ್ಷಿಸಬೇಡ ! ನಿನಗೆ ನೀನೆ… ! ಗಮ್ಯ ತಲುಪುತ್ತೀಯೋ ಇಲ್ಲವೋ… , ಓಡುತ್ತಿರುವುದಷ್ಟೇ ನಿನ್ನ ಧರ್ಮ - ಎಂದಿತು… , ಕನ್ನಡಿಯಲ್ಲಿನ ನಾನು !