ಕನ್ನಡಿಯಲ್ಲಿನ ನಾನು!

 

ಕನ್ನಡಿಯಲ್ಲಿನ ನಾನು!

ನಾನೆಂಬುವ ಒಬ್ಬನೇ…,

ಸ್ನಾನವನ್ನು ಮುಗಿಸಿ ಬಂದು...,

ಕನ್ನಡಿಯ ಮುಂದೆ ನಿಂತೆ.

ತುಂಬಾ ಅಪರೂಪಕ್ಕೆ…,

ನನ್ನ ಕಣ್ಣುಗಳನ್ನು ನಾನೇ ದಿಟ್ಟಿಸಿ ನೋಡಿದೆ.

ಯಾಕೋ…,

ತುಂಬಿ ಬಂತು!

ನನಗೆ ನಾನೆ ಅದೆಷ್ಟು ಅದ್ಭುತವಾಗುವಷ್ಟು ಇಷ್ಟವಾದೆನೆಂದರೆ…,

ಮುತ್ತೊಂದು ಕೊಟ್ಟುಕೊಳ್ಳುವಷ್ಟು!

ಜೀವನವೊಂದು ಓಟ- ಗಮ್ಯವನ್ನು ತಲುಪಲು ಓಡುವ ಓಟ! ಓಡು! ಓಡು! ಓಡುತ್ತಿರು! ಬಿದ್ದರೆ ಬೀಳು, ಉರುಳಾಡು, ಗಾಯಮಾಡಿಕೋ ಹೊರತು ಅಳಬೇಡ- ಆಯಾಸಗೊಂಡೆನೆಂದು ನಿಲ್ಲಬೇಡ! ಆಸರೆಗೆ ಯಾರೂ ಇರುವುದಿಲ್ಲ! ಎದ್ದು ಪುನಃ ಓಡು! ಆಸರೆ ಅಗತ್ಯವಾದವರಿಗೆ ಆಸರೆಯಾಗು ಹೊರತು- ನಿರೀಕ್ಷಿಸಬೇಡ! ನಿನಗೆ ನೀನೆ…! ಗಮ್ಯ ತಲುಪುತ್ತೀಯೋ ಇಲ್ಲವೋ…, ಓಡುತ್ತಿರುವುದಷ್ಟೇ ನಿನ್ನ ಧರ್ಮ- ಎಂದಿತು…,

ಕನ್ನಡಿಯಲ್ಲಿನ ನಾನು!

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!