Posts

Showing posts from September, 2025

ಕೋಲ್ಡ್ ಬ್ಲಡೆಡ್!

ಇಂದು ಅವಳಿಲ್ಲ. ಅದಕ್ಕೇ ಈ ಕಥೆ! ಅವಳ ಪರಿಚಯವೇ ನನ್ನ ಕಥೆಗಳ ಮೂಲಕ. “ನಿನ್ನ ಕಥೆಗಳನ್ನು ಓದಿ ನನಗನ್ನಿಸೋದು…, ನೀನೆಂತಾ ಕೋಲ್ಡ್‌ಬ್ಲಡೆಡ್ ಮನುಷ್ಯ ಅಂತ! ಯಪ್ಪ…, ಅದು ಹೇಗೆ ಬರೀತೀಯ ಅಷ್ಟು ರಿಯಲಿಸ್ಟಿಕ್ ಆಗಿ? ನೀನೇ ಕೊಲೆ ಮಾಡಿದಂತೆ?” ಎಂದಿದ್ದಳು. ನಕ್ಕೆ. ಒಬ್ಬ ಕಥೆಗಾರನಿಗೆ ಇದಕ್ಕಿಂತ ಯಾವ ಕಾಂಪ್ಲಿಮೆಂಟ್ ಬೇಕು? “ಇಷ್ಟವಾಯಿತ ಕಥೆ?” ಎಂದೆ. “ತುಂಬಾ…, ಕಣ್ಣಿಗೆ ಕಟ್ಟಿದಂತಿದೆ!” ಎಂದಳು. “ಆದರೆ ಎಲ್ಲರೂ ನನ್ನ ಕಥೆ ಅಷ್ಟು ಸುಲಭವಾಗಿ ಅರ್ಥವಾಗುವುದಿಲ್ಲ ಅನ್ನುತ್ತಾರಲ್ಲ?” ಎಂದೆ. “ಅದು ನಿಜ! ನನಗೂ ಮೊದಮೊದು ಕಷ್ಟವಾಗುತ್ತಿತ್ತು! ಎರಡು ಮೂರು ಸಾರಿ ಓದಬೇಕಿತ್ತು. ಅಷ್ಟು ಸೂಕ್ಷ್ಮ ನಿನ್ನ ಕಥೆಗಳು! ಅದರಲ್ಲೂ ಕ್ರೈಂ ಕಥೆಗಳು! ಆ ಸಸ್ಪೆನ್ಸ್‌…, ಅದು ಹಾಗೇ ಇರಬೇಕು! ನಿನ್ನ ಶೈಲಿಯ ಪರಿಚಯವಾದಮೇಲೆ ಈಗ ಪರವಾಗಿಲ್ಲ.” ಎಂದಳು. ನಾನೇನೂ ಮಾತನಾಡಲಿಲ್ಲ. ಅವಳೇ…, “ಒಂದು ವಾಕ್ಯ ಇರಲಿ…, ಒಂದು ಪದ ಬಿಟ್ಟು ಹೋದರೆ, ಒಂದು ಕಾಮ, ಫುಲ್‌ಸ್ಟಾಪ್ ಬಿಟ್ಟುಹೋದರೆ ಪೂರ್ತಿ ಕಥೆಯೇ ಅರ್ಥವಾಗದಷ್ಟು ಕ್ಲಿಷ್ಟ! ಆತುರಾತುರವಾಗಿ ಓದುವ ಕಥೆಗಳಲ್ಲ ನಿನ್ನದು!” ಎಂದಳು. ನಾನೇನೂ ಮಾತನಾಡಲಿಲ್ಲ. ಕ್ಷಣಬಿಟ್ಟು ಅವಳೇ…, “ಆದರೂ ಹೇಗೋ….? ಆ ಇಂಟಿಮೇಟ್ ಸೀನ್‌ಗಳಿರುವ ಕಥೆಗಳು ಬರೆಯುತ್ತೀಯಲ್ಲಾ…? ಅದು ನಿನ್ನದೇ ಅನುಭವ ಅನ್ನಿಸೋದು! ಅದರಲ್ಲೂ ನೀನು ಬರೆಯೋದೋ…, ಒಬ್ಬನೇ ಎಲ್ಲಿಗಾದರೂ ಹೋಗಿ ಬಂದಮೇಲೆ!” ಎಂದಳು. ನಿಜಕ್ಕೂ ನಗು ಬಂತು. “ತಾಯಿ…, ನನಗೂ ಮದುವ...

ಅವಳೆಂಬ ವಾರಿಧಿ!

ಬಸ್ಸಿನಿಂದ ಇಳಿಯುತ್ತಿರುವ ಅವಳನ್ನೇ ನೋಡುತ್ತಿದ್ದೆ. ಇಳಿಯುವಾಗಲೇ ಒಮ್ಮೆ ನನ್ನನ್ನು ನೋಡಿದವಳ ಕಣ್ಣಿನ ಹೊಳಪು…, ಇಳಿದು ನನ್ನೆಡೆಗೆ ಹೆಜ್ಜೆ ಹಾಕಿದಳು. ಬೂದಿಬಣ್ಣದ ಸೀರೆ ಎಷ್ಟು ಚಂದಕ್ಕೆ ಉಟ್ಟಿದ್ದಾಳೆಂದರೆ.., ಸೀರೆ ಉಡುವುದರಲ್ಲಿ ಪಿಹೆಚ್‌ಡಿ ಮಾಡಿದ್ದಾಳೇನೋ ಅನ್ನಿಸುವಂತಿತ್ತು! ಹತ್ತಿರಕ್ಕೆ ತಲುಪುತ್ತಿದ್ದಂತೆ ಮುಗುಳುನಗು ಅರಳುನಗುವಾಗಿ…, ಪ್ರಪಂಚವನ್ನು ಮರೆತೆ! ಸುತ್ತಲಿನ ಪರಿಸರದ ಪರಿವೆಯೇನೂ ನಮಗಿರಲಿಲ್ಲ. ಎರಡೂ ಕೈಯಗಲಿಸಿದೆ- ಗಿಣಿಮರಿಯಂತೆ ತೆಕ್ಕೆಯೊಳಗೆ ಸೇರಿಕೊಂಡಳು. ಬಿಗಿದಪ್ಪಿ ತಲೆಯಮೇಲೊಂದು ಮುತ್ತು ಕೊಟ್ಟೆ. ಮಾತಿಲ್ಲ. ಮೌನದಷ್ಟು ಅರ್ಥವತ್ತಾದ ಸಂವಹನವಿದೆಯೇ? ಕೈಕೈಹಿಡಿದು ನಡೆಯತೊಡಗಿದೆವು. ದೂರದಲ್ಲಿ ಸಮುದ್ರದ ಮೊರೆತ ಕೇಳಿಸುತ್ತಿತ್ತು. ಇಬ್ಬರ ಮನೆಯಿಂದಲೂ ಸುಮಾರು ಮುನ್ನೂರು ಕಿಲೋಮೀಟರ್ ದೂರದ ಸಮುದ್ರತೀರ! ನಿಧಾನಕ್ಕೆ ನಡೆಯುವಾಗ…, ಮಧ್ಯೆ…, ಇಬ್ಬರೂ ಹೇಳಿಕೊಂಡಂತೆ, ಒಂದೇ ಸಮಯಕ್ಕೆ ಪರಸ್ಪರ ಮುಖ ನೋಡುವುದು, ಮುಗುಳುನಗುವುದು…. ಇಬ್ಬರ ನಾಡಿಮಿಡಿತ- ಇಬ್ಬರಿಗೂ ಗೊತ್ತು. ಸಮುದ್ರದ ಸಮೀಪಕ್ಕೆ ತಲುಪುತ್ತಿದ್ದಂತೆ…, ಬೋರ್ಗರೆಯುತ್ತಿರುವ ಅಲೆಗಳು ಅಬ್ಬರಿಸಿ ಬಂದು ಬಂಡೆಗಳಿಗೆ ಅಪ್ಪಳಿಸಿ ನೊರೆನೊರೆಯಾಗಿ ಮರಳುತ್ತಿದ್ದವು. ನಡು ಮಧ್ಯಾಹ್ನವಾದ್ದರಿಂದ ಅಷ್ಟೊಂದು ಜನಸಂದಣಿಯಿರಲಿಲ್ಲ. ಮರಳಿಗೆ ಕಾಲೂರಿದಾಗ ಕೆಂಡದ ಮೇಲೆ ಕಾಲಿಟ್ಟ ಅನುಭವ…, ಅದರ ಅರಿವು ನಮಗಿರಲಿಲ್ಲ. ಯಾರಾದರೂ ನಮ್ಮನ್ನೋ ನಾವು ಯಾರನ್ನೋ ಗಮನಿಸಲಿಲ್...

ದಾರಿಯಲ್ಲಿ ಸಿಕ್ಕವಳು!

ಬರೆಯುತ್ತಿರುವ ಕಥೆಗೂ ಅವಳಿಗೂ ಏನೂ ಸಂಬಂಧವಿಲ್ಲ! ಅವಳು ಹೇಳಿದ್ದರಿಂದ ಬರೆಯುತ್ತಿದ್ದೇನೆ ಅನ್ನುವುದಷ್ಟೇ ಈ ಪೀಠಿಕೆಯ ಉದ್ದೇಶ! ಅ-ವ-ಳು ಹೇ-ಳಿ-ದ್ದ-ರಿಂ-ದ ಬರೆದೆ ಅನ್ನುವಲ್ಲಿ ಅವಳಿಗೆ ನಾನು ಕೊಡುವ ಮಹತ್ವವಿದೆ. ಅಮ್ಮನ ಹೊರತು ಯಾರೊಬ್ಬರಿಗೂ- ಯಾರೊಬ್ಬರ ಮಾತಿಗೂ ಬೆಲೆ ಕೊಡದ ನಾನು 'ಅವಳು' ಹೇಳಿದ್ದರಿಂದ ಕಥೆ ಬರೆಯುತ್ತಿದ್ದೇನೆಂದರೆ…. ಅರ್ಥವಾಯಿತೇ? ಏನಾದರೂ ಬರೆಯಬೇಕು ಅನ್ನಿಸದಿರುವುದು, ಕಥೆಯೇ ಹೊಳೆಯದಿರುವುದು ಸೋಮಾರಿತನವಾ? ಅಲ್ಲ- ಕಥೆ ಹೊಳೆದು ಅದನ್ನು ಬರೆಯದೇ ಇರುವುದು ಸೋಮಾರಿತನ! ಆದ್ದರಿಂದ ಕಥೆ ಬರೆಯಲಿಲ್ಲ ಅನ್ನುವ ಕಾರಣಕ್ಕೆ ನಾನು ಸೋಮಾರಿಯಲ್ಲ! ಆದರೆ.., ಕಥೆ ಬರೆಯುವ ಯೋಚನೆಯೇ ಇಲ್ಲದವನಿಗೆ…, ಅವಳು ಹೇಳಿದ ಮಾತ್ರಕ್ಕೆ ಕಥೆ ಹೊಳೆಯುವುದೆಂದರೆ- ಅರ್ಥವೇನು? ವಿಚಿತ್ರ! ಅಥವಾ…, ನನ್ನೊಳಗೊಂದು ಕಥೆ ಮೊಳೆತ ಸಮಯದಲ್ಲೇ ಅವಳು ಬರೆಯಲು ಹೇಳಿರಬಹುದ? ಇನ್ನುಮುಂದೆ ಕಥೆಯೇ ಬರೆಯುವುದಿಲ್ಲ- ಅನ್ನುವಂತೆ ಇದ್ದವನಿಗೆ ಕಥೆ ಬರೆಯಲೊಂದು ನೆಪ…? ಹಾಗೆಂದು ಅವಳು ಹೇಳಿದಾಗಲೆಲ್ಲಾ ಕಥೆ ಬರೆಯುತ್ತೇನೆಯೇ- ಅನ್ನುವಲ್ಲಿ ಉತ್ತರವಿದೆ!! ಅದು ಅವಳು ಯೋಚಿಸಬೇಕಾದ ವಿಷಯ! ಅವಳಮೇಲಿನ ನನ್ನ "ಇದ"ನ್ನು ಪದೇ ಪದೇ ಪರೀಕ್ಷಿಸಬೇಕೋ ಬೇಡವೋ ಅನ್ನುವುದು! ಹಾಗೆಯೇ…, ಬರೆಯುತ್ತಿರುವ ಈ ಕಥೆ… ಪರಿಪೂರ್ಣವಾಗಿ- ಕಾಲ್ಪನಿಕ ಸತ್ಯ! ಇದುವರೆಗೂ ಯಾರೊಂದಿಗೂ ಹೇಳದೆ ಮುಚ್ಚಿಟ್ಟಿದ್ದ "ರಹಸ್ಯ!” * ಮೂರುನಾಲ್ಕು ದಿನದ ಸುತ್ತಾಟದ...