ಪ್ರೇಮಿ- ಕಥೆ
ಪ್ರೇಮಿ ಒಬ್ಬ ಬರಹಗಾರನಿದ್ದನಂತೆ . ಇದ್ದನಂತೆ ಅಲ್ಲ - ಇದ್ದಾನೆ ! ನಿರಂತರವಾಗಿ ಕಥೆ ಬರೆಯುವುದೇ ಅವನ ಜೀವನ ! ನೂರು ಕಥೆಗಳನ್ನು ಬರೆದ ! ತೊಂಬತ್ತೊಂಬತ್ತು ಕಥೆಗಳಲ್ಲಿ ಹೆಣ್ಣು ಪವಿತ್ರಳು ! ಆ ತೊಂಬತ್ತೊಂಬತ್ತು ಕಥೆಗಳೂ ಗಮನಿಸಲ್ಪಡಲಿಲ್ಲ ! ಒಂದೇ ಒಂದು ಕಥೆಯಲ್ಲಿ - ಅರಿಯದೆ ಅಪವಿತ್ರಳನ್ನಾಗಿಸಿದ ! ಪ್ರಚಾರ ಗಿಟ್ಟಿಸಿದ ಒಂದೇ ಒಂದು ಕಥೆ ! ಅವನಿಗೆ ಹೆಣ್ಣು - ಹೃದಯ ಸೌಂಧರ್ಯದ ಸಾಕಾರ ಮೂರ್ತಿ ! ಕರುಣಾಮಯಿ ! ಪ್ರೇಮ ! ತೊಂಬತ್ತೊಂಬತ್ತು ಕಥೆಗಳಲ್ಲೂ ಪ್ರೇಮದ ವಿಜೃಂಭಣೆ ! ಯಾರೂ ಗಮನಿಸಲಿಲ್ಲ - ಅವನ ಪ್ರೇಮಿಯ ಹೊರತು ! ಕಾರಣ - ಹೆಣ್ಣು ಪವಿತ್ರಳು ! ಪ್ರೇಮ ಪವಿತ್ರ ! ಒಂದೇ ಒಂದು ಅಪವಿತ್ರವಾದ ಕಥೆಯನ್ನು ಬರೆದಾಗ .... ಹೆಣ್ಣು - ಅವನ ಪ್ರೇಮಿ ತನಗೆ ಅನ್ವಯಿಸಿಕೊಂಡಳು ! ಪ್ರತಿ ಕಥೆಯನ್ನು ಬರೆಯುವಾಗಲೂ ಅವನ ಮನದಲ್ಲಿ ಒಂದೇ ಚಿಂತೆ - ಹೆಣ್ಣಿಗೆ ಅಪಮಾನವಾಗಬಾರದು ! ಕೈಬಿಟ್ಟು ಹೋದ ಆ ಕಥೆಯಿಂದ ಅವನೊಂದು ತೀರುಮಾನಕ್ಕೆ ಬಂದ - ತಾನಿನ್ನೂ ಪಕ್ವಗೊಳ್ಳಬೇಕು ! ಹೆಣ್ಣು ಗಂಡು ಪ್ರೇಮ ಅನ್ನುವುದುರಿಂದ ಆಚೆ ಬರೆಯಬೇಕು ! ಯೋಚಿಸತೊಡಗಿದ . ತನ್ನ ಬದುಕನ್ನು ! ಬದುಕಿನಲ್ಲಿ ಬಂದ ಹೆಣ್ಣನ್ನು ! ತನಗೆ ಉಳಿದಿರುವುದೇನು ಅನ್ನುವುದನ್ನು ! ಕೊನೆಗೆ ತೀರುಮಾನವೊಂದಕ್ಕೆ ಬಂದ ! ಪ್ರೇಮವಿಲ್ಲದ ಏನನ್ನಾದರೂ ಬರೆಯಬೇಕಾದರೆ - ಅದು ತನ್ನ ಬದುಕು ! ಪ್ರೇಮವನ್ನೇ ಕಾಣದವನು ಪ್ರೇಮದ ಬಗ್ಗೆ ಅ...