ತತ್ವ- ಕಥೆ
ತತ್ತ್ವ ! ನಷ್ಟ ಯಾರಿಗೆ ಅನ್ನುವ ಚಿಂತೆ ! ಲಾಭ ನಷ್ಟಗಳ ಲೆಕ್ಕವೇಕೆ - ಸಂಬಂಧಗಳಲ್ಲಿ ? ನನ್ನ ವಿಚಾರಧಾರೆಗಳು ನನ್ನದು ! ಅದನ್ನು ಒಪ್ಪದವರನ್ನು ನಾನೆಂದೂ ವಿರೋಧಿಸಲಾರೆ - ಹಾಗೆಯೇ ಅದನ್ನು ಇನ್ನೊಬ್ಬರಮೇಲೆ ಹೇರಲಾರೆ ಕೂಡ ! ಹಾಗಿರುವಾಗ - ನನ್ನ ತತ್ತ್ವಗಳಿಂದಾಗಿ ಒಬ್ಬರು ನನ್ನನ್ನು ವಿರೋಧಿಸಿದರೆ ನಾನೇನು ಮಾಡಲಿ ? ೧ “ ನಿನ್ನನ್ನು ನಾನು ಬ್ಲಾಕ್ ಮಾಡುತ್ತಿದ್ದೇನೆ !” ಎಂದಳು . “ ಯಾಕೆ ?” ಎಂದೆ . “ ಇನ್ನೊಬ್ಬರ ವೀರ್ಯ ಮೂಸುವ ನಿನ್ನಂಥ ಅಲ್ಪ ಮನಸ್ಸಿನವನನ್ನು ನನ್ನಿಂದ ಒಪ್ಪಲಾಗುವುದಿಲ್ಲ !” ಎಂದಳು . “ ಸರಿ !” ಎಂದೆ . “ ಅಷ್ಟೆ ಹೊರತು ನಿನ್ನ ಅಭಿಪ್ರಾಯವನ್ನು ಬದಲಿಸುವುದಿಲ್ಲವೇ ?” ಎಂದಳು . “ ಯಾರೊಬ್ಬರ ವೈಯುಕ್ತಿಕ ಬದುಕಿಗೆ ನಾನು ತಲೆಹಾಕಿದವನಲ್ಲ !” ಎಂದೆ . “ ಮತ್ತೆ ರಾಹುಲನ ವಿಷಯ ?” ಎಂದಳು . “ ಕಣ್ಮಣಿ ... ಹಲವು ಸಾರಿ ಹೇಳಿರುವುದೇ ... ವೈಯುಕ್ತಿಕ ರಹಸ್ಯಗಳಿರುವವನು ನಾಯಕ ಹೇಗಾಗುತ್ತಾನೆ ? ಸೇವಕ ಹೇಗಾಗುತ್ತಾನೆ ?” ಎಂದೆ . ಅಸಹನೆಯಿಂದ ನೋಡಿದಳು . “ ವಾಸ್ತವವನ್ನು ಒಪ್ಪಿಕೊಳ್ಳದಿರುವುದು ಗುಲಾಮತೆಯ ಸಂಕೇತ !” ಎಂದೆ . “ ಯಾಕೆ ಒಪ್ಪಿಕೊಳ್ಳಬೇಕು ?” “ ನನ್ನನ್ನು ನಿಮ್ಮ ನಾಯಕನನ್ನಾಗಿ ಆರಿಸಿ ಎಂದು ಅವನೇ ಹೇಳಿಕೊಳ್ಳುತ್ತಿದ್ದಾನೆ - ಅದಕ್ಕೆ !” ಎಂದೆ . “ ಅದಕ್ಕೆ ಪಿತೃತ್ವವೇ ಯಾಕೆ ?” “ ಯಾಕೆಂದರೆ .......