Posts

Showing posts from April, 2021

ಬ್ಲೂಫಿಲಂ- ಕಥೆ

ಬ್ಲೂ ಫಿಲಂ ಅರ್ಥವಾಗುತ್ತಿಲ್ಲ ನನ್ನೇ ನನಗೆ ! ಹಾಸ್ಯವಾಗಿ ಗೆಳೆಯ ಕಳಿಸಿದ ಬ್ಲೂ ಫಿಲಂ - ಅದು ಬ್ಲೂಫಿಲಂ ಕ್ಯಾಟಗರಿಗೆ ಬರುತ್ತದೆಯೇ ? ತಿಳಿಯದು - ಆದರೆ ಕಣ್ಣು ತುಂಬಿದ್ದು ನಿಜ ! ಆ ಹೆಣ್ಣು - “ ಬನ್ನಿ ಹೋಗೋಣ !” ಎಂದು ಆತನ ಕೈಹಿಡಿದು ನಡೆದ ರೀತಿ - ಆ ಆತ್ಮವಿಶ್ವಾಸ ! ಪ್ರತಿಯೊಂದನ್ನೂ ಕ್ಯಾಮೆರಾದಲ್ಲಿ ಸೆರೆಹಿಡಿಯುವ ' ಹುಚ್ಚು ಹವ್ಯಾಸ ' ಮನುಷ್ಯನನ್ನು ಯಾವಾಗ ಬಿಟ್ಟು ಹೋಗುತ್ತದೋ ... ಕೆಟ್ಟ ಆಧುನಿಕ ಯುಗ ! ಆಕಸ್ಮಿಕವಾಗಿ ಸೆರೆಹಿಡಿಯುವ ವೀಡಿಯೋದಲ್ಲಿರುವುದು - ವೀಡಿಯೋ ಮಾಡಿದವನ ಅಕ್ಕ ತಂಗಿಯೋ ಕುಟುಂಬವೋ ಆಗಿದ್ದರೆ ? ಏನೋಪ್ಪ ! * ನಿಂತು , ಆಕೆಯ ಸೀರೆಯನ್ನು ಮೇಲೆತ್ತಿ - ಆಕೆಯೋ ಉಕ್ಕಿಬಂದ ಆವೇಶವನ್ನು - ಶಬ್ದವನ್ನು ತಡೆಹಿಡಿದು - ಯಾರಿಗೂ ತಿಳಿಯದಂತೆ ...... ತಟ್ಟನೆ ಯಾರೋ ಬಂದಂತಾಗಿ , ಸೀರೆಯಿಳಿಸಿ - ಆತ ಪ್ಯಾಂಟಿನ ಜಿಪ್ ಹಾಕಿದ ! “ ಹೇ ... ಯಾಕ್ರೀ ? ಯಾರು ನೀವು ?” ನೇರವಾಗಿ ವೀಡಿಯೋ ಮಾಡುತ್ತಿದ್ದವನನ್ನೇ ನೋಡುತ್ತಾ ದಿಟ್ಟವಾಗಿ ಕೇಳಿದಳು . “ ನೀವ್ಯಾರು ? ಇಲ್ಲೇನ್‌ಮಾಡ್ತಿದೀರ ?” ತಲೆ ತಗ್ಗಿಸಿದರು . “ ಯಾವೂರು ನಿಂದು ?” “ ರಾಯಾಪುರ !” ಎಂದಳು . “ ನಿಂದು ?” “ ನಂದೂ ಅಷ್ಟೆ !” ಎಂದ ಆತ . “ ಕಾಲೆತ್ತಿ ಸರಿಯಾಗಿ ಮಾಡಿಸ್ಕೋತಿದ್ಳು ಮಗಾ !” ಎಂದ ವೀಡಿಯೋ ಮಾಡುತ್ತಿದ್ದವನು - ಜೊತೆಯವನಿಗೆ ! “ ಬರೋಕೆ ಹೇಳು - ಐದಾರು ಜನ ಇದ್ದಾರೆ !” ಎಂದ ಅವನು . ಅವಳ...

ಗಾಳಿಸುದ್ದಿ- ಕಥೆ

ಗಾಳಿ ಸುದ್ದಿ ಕಥೆಯೊಂದು ಪ್ರಚಲಿತದಲ್ಲಿತ್ತು ! ಕಥೆ ಎಂದರೆ .... ಗಾಳಿಸುದ್ದಿ - ಪ್ರಚಲಿತದಲ್ಲಿರುವ ಕಥೆ ! ಕಥೆಯ ನಾಯಕ ಯಾವುದೋ ಒಬ್ಬ ಓದುಗ ! ಪುಸ್ತಕಗಳನ್ನು ಓದುವುದು .... ಅದರಲ್ಲಿನ ವಾಸ್ತವತೆಗಳನ್ನು ಪರೀಕ್ಷಿಸುವುದು ಅವನ ಹವ್ಯಾಸವಂತೆ ! ಹೇಳಿದ್ದೇನೆ - ಗಾಳಿಸುದ್ದಿ ಇದು - ವಾಸ್ತವ ಕಂಡು ಹಿಡಿಯಲಾಗದೇ ಹೋದ - ಗಾಳಿಸುದ್ದಿ ! ೧ ಪುಸ್ತಕವೊಂದನ್ನು ಓದಿದನಂತೆ ! ಬ್ಯಾಂ ಕ ನ್ನು ಕೊಳ್ಳೆಹೊಡೆಯುವ ಕಥೆ ! ತಿಂಗಳುಗಟ್ಟಲೆ ಯಾರಿಗೂ ತಿಳಿಯದಂತೆ ಕಂದಕವೊಂದನ್ನು ಕೊರೆದು .... ಹಾಗೆಯೇ ಮಾಡಿದ ! ೨ ಮತ್ತೊಂದು ಪುಸ್ತಕ ... ಜನರ ನಡುವೆಯಿರುವ ಸಾಮಾನ್ಯ ಪ್ರಜೆಯೊಬ್ಬ ಕೊಲೆ ಮಾಡಿದರೆ ಸಿಕ್ಕಿಕೊಳ್ಳುವ ಅವಕಾಶ ಕಮ್ಮಿ ಅನ್ನುವ ಕಥಾವಸ್ತು !! ಅವನ ಮೂವರು ಶತ್ರುಗಳನ್ನು - ವೈಮನಸ್ಯ ಇರುವವರನ್ನು ಕೊಂದ - ಅವರ ಮರಣಕ್ಕೆ ಕಾರಣ ನಿಜ ಪ್ರಪಂಚಕ್ಕೆ ತಿಳಿಯದು ! ಎಲ್ಲವೂ ಪುಸ್ತಕವೊಂದರ ಪ್ರೇರಣೆ ಎಂದಷ್ಟೇ ತಿಳಿದಿದೆ ! ಲೇಖಕನನ್ನು ಸಂಶಯಿಸುವುದು ಹೇಗೆ - ಕಾರಣ ಮಾಡುವುದು ಹೇಗೆ ? ೩ ಸುಮಾರು ಹದಿನೇಳು ಪುಸ್ತಕಗಳನ್ನು ತನ್ನ ಜೀವನದಲ್ಲಿ ಪ್ರಯೋಗಿಸಿದ - ಓದುಗ ! ಈಗ ... ಹದಿನೆಂಟು - ಹೆಣ್ಣನ್ನು ಸೆಳೆಯುವುದು ಹೇಗೆ ಅನ್ನುವ ಪುಸ್ತಕ !! ಸೆಳೆದೇ ಸೆಳೆದ ! ಹಾರಿಸಿಕೊಂಡು ಹೋಗಿ ಮದುವೆಯೂ ಆದ ! ಪ್ರಾಣ ಪ್ರಿಯೆಯ ಪ್ರಶ್ನೆ - “ ಒಂದೇ ಒಂದು ಪ್ರಶ್ನೆ ! ಒಂದೇ ಒಂದು ವಾಕ್ಯದಲ್ಲಿ ಉತ್ತರ ಕೊಡಿ - ಇಷ್ಟೊಂದು...