ಬ್ಲೂಫಿಲಂ- ಕಥೆ
ಬ್ಲೂ ಫಿಲಂ
ಅರ್ಥವಾಗುತ್ತಿಲ್ಲ ನನ್ನೇ ನನಗೆ!
ಹಾಸ್ಯವಾಗಿ ಗೆಳೆಯ ಕಳಿಸಿದ ಬ್ಲೂ ಫಿಲಂ- ಅದು ಬ್ಲೂಫಿಲಂ ಕ್ಯಾಟಗರಿಗೆ ಬರುತ್ತದೆಯೇ?
ತಿಳಿಯದು- ಆದರೆ ಕಣ್ಣು ತುಂಬಿದ್ದು ನಿಜ!
ಆ ಹೆಣ್ಣು- “ಬನ್ನಿ ಹೋಗೋಣ!” ಎಂದು ಆತನ ಕೈಹಿಡಿದು ನಡೆದ ರೀತಿ- ಆ ಆತ್ಮವಿಶ್ವಾಸ!
ಪ್ರತಿಯೊಂದನ್ನೂ ಕ್ಯಾಮೆರಾದಲ್ಲಿ ಸೆರೆಹಿಡಿಯುವ 'ಹುಚ್ಚು ಹವ್ಯಾಸ' ಮನುಷ್ಯನನ್ನು ಯಾವಾಗ ಬಿಟ್ಟು ಹೋಗುತ್ತದೋ...
ಕೆಟ್ಟ ಆಧುನಿಕ ಯುಗ!
ಆಕಸ್ಮಿಕವಾಗಿ ಸೆರೆಹಿಡಿಯುವ ವೀಡಿಯೋದಲ್ಲಿರುವುದು- ವೀಡಿಯೋ ಮಾಡಿದವನ ಅಕ್ಕ ತಂಗಿಯೋ ಕುಟುಂಬವೋ ಆಗಿದ್ದರೆ?
ಏನೋಪ್ಪ!
*
ನಿಂತು, ಆಕೆಯ ಸೀರೆಯನ್ನು ಮೇಲೆತ್ತಿ- ಆಕೆಯೋ ಉಕ್ಕಿಬಂದ ಆವೇಶವನ್ನು- ಶಬ್ದವನ್ನು ತಡೆಹಿಡಿದು- ಯಾರಿಗೂ ತಿಳಿಯದಂತೆ......
ತಟ್ಟನೆ ಯಾರೋ ಬಂದಂತಾಗಿ, ಸೀರೆಯಿಳಿಸಿ- ಆತ ಪ್ಯಾಂಟಿನ ಜಿಪ್ ಹಾಕಿದ!
“ಹೇ... ಯಾಕ್ರೀ? ಯಾರು ನೀವು?” ನೇರವಾಗಿ ವೀಡಿಯೋ ಮಾಡುತ್ತಿದ್ದವನನ್ನೇ ನೋಡುತ್ತಾ ದಿಟ್ಟವಾಗಿ ಕೇಳಿದಳು.
“ನೀವ್ಯಾರು? ಇಲ್ಲೇನ್‌ಮಾಡ್ತಿದೀರ?”
ತಲೆ ತಗ್ಗಿಸಿದರು.
“ಯಾವೂರು ನಿಂದು?”
“ರಾಯಾಪುರ!” ಎಂದಳು.
“ನಿಂದು?”
“ನಂದೂ ಅಷ್ಟೆ!” ಎಂದ ಆತ.
“ಕಾಲೆತ್ತಿ ಸರಿಯಾಗಿ ಮಾಡಿಸ್ಕೋತಿದ್ಳು ಮಗಾ!” ಎಂದ ವೀಡಿಯೋ ಮಾಡುತ್ತಿದ್ದವನು-ಜೊತೆಯವನಿಗೆ!
“ಬರೋಕೆ ಹೇಳು- ಐದಾರು ಜನ ಇದ್ದಾರೆ!” ಎಂದ ಅವನು.
ಅವಳ ನೆಟ್ಟ ನೋಟವನ್ನು ಕಂಡು ಸಂಶಯ ಬಂದು-
“ಗಂಡ ಹೆಂಡ್ತೀರ ನೀವು?” ಎಂದ- ವೀಡಿಯೋ ಮಾಡುತ್ತಿದ್ದವನು!
“ಹೂ!”
“ಮನೇಲಿ ಜಾಗ ಇಲ್ವಾ?”
“ಇಲ್ಲ!”
“..........”
“ಬಾ ಹೋಗೋಣ!” ಎಂದು ಆತನ ಕೈ ಹಿಡಿದು ನಡೆದಳು ಆಕೆ- ಕ್ಯಾಮೆರಾವನ್ನೇ ನೋಡುತ್ತಾ....,
“ನಮ್ಮದು ಲವ್ವು ಲವ್ವು! ಮನೆಲಿ ಜಾಗ ಇಲ್ಲಾಂತ ಇಲ್ಲಿಗೆ ಬಂದ್ವು! ನೀವ್ಯಾಕ್ ಬಂದ್ರಿ ಇಲ್ಲಿಗೆ?” ಎಂದಳು.
ಅಷ್ಟೇ ವೀಡಿಯೋ! ಇಷ್ಟಕ್ಕೇ ನನ್ನ ಕಣ್ಣು ತುಂಬಿದ್ದು ಏಕೆ?
ತಿಳಿಯದು! ಆದರೂ ಅವರ ಅಮಾಯಕತೆ.... ಅವಳ ಕಣ್ಣು- ಆ ಸಂದರ್ಭವನ್ನವಳೆದುರಿಸಿದ ರೀತಿ-ಆತನ ಕೈಹಿಡಿದು ನಡೆಯುವಾಗಿನ ತನ್ಮಯತೆ ಕಾರಣವೇನೋ...!
ಅಷ್ಟು ಹೇಳಿಯೂ ಆ ವೀಡಿಯೋವನ್ನು ಅಂತರ್ಜಾಲಕ್ಕೆ ಹರಿಯ ಬಿಟ್ಟ ಅವನಿಗೆ ಹೋಲಿಸಿಕೊಂಡರೆ ಅವರೆಷ್ಟೋ ಉತ್ತಮರು!
ಅಲ್ಲ!
ಅವರೆಷ್ಟೋ ಉತ್ತಮರು ಎಂದೇಕೆ ಹೇಳುತ್ತಿದ್ದೇನೆ?
ಹಾಗೆ ಹೇಳಿದರೆ- ಅವರು ಕೆಟ್ಟವರು ಎಂಬ ಅರ್ಥ ಬರುವುದಿಲ್ಲವೇ?
ವೀಡಿಯೋ ಮಾಡಿದವನೊಂದಿಗೆ ಹೋಲಿಸಿದರೆ ಮಾತ್ರ ಒಳ್ಳೆಯವರೆನ್ನುವ ಭಾವ??
ದೇವರೇ..... ಗಂಡು ಹೆಣ್ಣಿನ ಈ ಆಕರ್ಷಣೆ....
ಅವರನ್ನು ಕೆಟ್ಟವರು- ಅವರು ಮಾಡಿದ್ದು ಕೆಟ್ಟ ಕೆಲಸ ಎಂದು ಎದೆತಟ್ಟಿ ಹೇಳಬಲ್ಲೆನೆ?
ಪ್ರಪಂಚದಲ್ಲಿರುವ ಯಾರೊಬ್ಬರಾದರೂ ಹೇಳಬಲ್ಲರೇ.....
ಹೇಳಿದರೆ....,
ಅತಿ ನೀಚಾತಿ ನೀಚರೆಂದು ಹೇಳಬಹುದಾದ- ವೀಡಿಯೋ ಮಾಡಿದವರಿಗೂ ಅವರಿಗೂ ಯಾವ ವ್ಯತ್ಯಾಸವೂ ಇಲ್ಲ!!
Nice
ReplyDelete✍️👌
ReplyDelete🙆🙆😰
ReplyDeleteಕೆಲವು ಸಂದರ್ಭಗಳು ಅಬ್ಬಾ ಕಷ್ಟ ಕಷ್ಟ