ಅಮ್ಮ ಮಗನ ರಹಸ್ಯ!
೧ “ ರಿಸ್ಕ್ ಬೇಕ ಅಣ್ಣಾ ?” ಎಂದ ತಮ್ಮ . “ ರಹಸ್ಯ ಬೇಧಿಸಿಯಾಯಿತಲ್ಲ ? ಇನ್ನೇನು ಹೆದರಿಕೆ ?” ಎಂದೆ . “ ಆದರೂ… ! ಸಾವಿರದ ಒಂಬೈನೂರ ಎಪ್ಪತ್ತ ಎರಡರಲ್ಲಿ ಕೊಲೆಯಾದವಳು ! ಇಷ್ಟು ದಿನ - ಅಂದರೆ ಎರಡುಸಾವಿರದ ಇಪ್ಪತ್ತ ಎರಡರವರೆಗೆ… , ಐವತ್ತು ವರ್ಷ - ಇದೇ ಬಿಲ್ಡಿಂಗಲ್ಲಿ ಇದ್ದಳೆಂದರೆ… ! ಅದೇ ಮನೆ ಬೇಕ ?” ಎಂದ . “ ಕೊಲೆಯಾದವಳು ಇದ್ದಳು - ಅಂದರೆ ಏನರ್ಥ !?” ಎಂದೆ . “ ಮತ್ತೆ ? ಇಷ್ಟುದಿನ ಆ ಮನೆಯಲ್ಲಿ ಅಸಹಜವಾಗಿ ನಡೆಯುತ್ತಿದ್ದ ಘಟನೆಗಳಬಗ್ಗೆ ನಿನಗೆ ಗೊತ್ತಿಲ್ಲದ್ದೇನೂ ಅಲ್ಲವಲ್ಲ !?” “ ಅದೆಲ್ಲಾ ಕಟ್ಟು ಕಥೆಯೋ… ! ಆ ಸ್ಕೆಲ್ಟನ್ ಸಿಕ್ಕ ನಂತರ ಹುಟ್ಟಿಕೊಂಡಿದ್ದು !” ಎಂದೆ . “ ಆದರೂ… !” ಎಂದ . “ ನೋಡೇ ಬಿಡೋಣ ! ಏನಾಗುತ್ತದೆಂದು !” ಎಂದೆ . ೨ ಒಬ್ಬನೇ ಮನೆಯನ್ನು ಪ್ರವೇಶಿಸಿದೆ . ಕೊನೆಯ ಕ್ಷಣದಲ್ಲಿ ತಮ್ಮ ಕೈಕೊಟ್ಟ ! ಹೆದರಿಕೆ ! ನನಗೋ ಅದೇ ಮನೆಬೇಕು ! ಹಾರರ್ ಸಿನೆಮಾದ ಶೂಟಿಂಗ್‌ಗೆ ಹೇಳಿ ಮಾಡಿಸಿದಂತಹ ಮನೆ . ಆರು ತಿಂಗಳಿಗೆ ಬಾಡಿಗೆಗೆ ತೆಗೆದುಕೊಂಡಿದ್ದೆ . ಈ ಮನೆಯಬಗ್ಗೆ ಏನೇನೋ ಕಥೆಗಳು ಹುಟ್ಟಿಕೊಂಡಿತ್ತು . ಅದಕ್ಕೆ ಆಧಾರವಾಗಿ ಆ ಮನೆಯಿಂದ ಮೊನ್ನೆಮೊನ್ನೆತಾನೆ ರಹಸ್ಯವೊಂದನ್ನು ಕಂಡುಕೊಂಡಿದ್ದರು . ಬಟ್ಟೆ ಒಗೆಯಲು ನಿರ್ಮಿಸಿದ್ದ ಕಟ್ಟೆ - ಕಾಂಕ್ರೀಟ್ ಕಟ್ಟೆ ! ಬಿರುಕು ಬಿಟ್ಟು ಅದರಲ್ಲಿದ್ದ ಮಾನವನ ಅಸ್ಥಿಪಂಜರ ಕಾಣಿಸಿಕೊಂಡಿತ್ತು ! ಪರೀಕ್ಷೆ ನಡೆಸಿದಾಗ - ಮೂವತ್ತು ವರ್ಷದ...