ವರ್ಜಿನ್!
ವರ್ಜಿನ್!
ಹಾಳು ಮನಸ್ಸು! ಕೆಟ್ಟವನಾಗಲು ಒಪ್ಪುವುದೇ ಇಲ್ಲ! ಆದರೂ ಕೆಟ್ಟವನಾಗಲೇಬೇಕು ಅಂದುಕೊಂಡಿದ್ದೇನೆ!
ಹೇಗೆ?
ಹೇಳಬಾರದ ಕಥೆಯೊಂದನ್ನು ಹೇಳುವ ಮೂಲಕ!
ಕಥೆಯಲ್ಲಿನ ನಾನು ಒಳ್ಳೆಯವನೋ- ಕೆಟ್ಟವನೋ ತಿಳಿಯದು…! ಆದರೆ ಹೇಳಬಾರದ ಕಥೆಯನ್ನು ಹೇಳುತ್ತಿರುವುದರಿಂದ ನಾನು ಕೆಟ್ಟವ- ಸಾಕಲ್ಲ!
ಇದೊಂದು ಕಥೆ! ಗಂಡು ಬರೆಯಬಾರದ, ಹೆಣ್ಣು ಓದಬಾರದ ಕಥೆ!
ಒತ್ತಡವನ್ನು ತಾಳಲಾರದೆ ಭೂಗರ್ಭದಿಂದ ಚಿಮ್ಮುವ ಜ್ವಾಲಾಮುಖಿಯಂತೆ, ಪ್ರಳಯಕ್ಕೆ ಕಾರಣವಾಗುವ ಸುನಾಮಿಯಂತೆ, - ಪ್ರಸ್ತುತ ಕಥೆಗಾರನ ಮನಸ್ಸು! ಎಷ್ಟೇ ಹೇಳಬಾರದು ಅಂದುಕೊಂಡರೂ, ಎಷ್ಟು ಅದುಮಿ ಹಿಡಿದರೂ, ಮನದೊಳಗಿನ ತುಮುಲ ಅವನ ಪ್ರಯತ್ನವನ್ನು ಮೀರಿ ದುಮ್ಮಿಕ್ಕುತ್ತಿದೆ!
ಫಲಿತಾಂಶ…,
ಅತಿ ಕೆಟ್ಟ ಕಥೆಯೊಂದರ ಉಗಮ!
*
“ಹೆಣ್ಣು ಹೂವು…, ಗಂಡು ದುಂಬಿ!” ಎಂದಳು.
ನಗುಬಂತು! ಅವಳ ಹೆಸರು ಮಲ್ಲಿಗೆ ನನ್ನ ಹೆಸರು ಭ್ರಮರ!
“ಹೆಣ್ಣುಹೂವಿಗೆ ಗಂಡುದುಂಬಿ!” ಎಂದೆ.
ಗೊಂದಲದಿಂದ ನೋಡಿದಳು. ಅಳಿಲುಮರಿಯಂತ ನೋಟ! ಮುದ್ದು ಮಾಡಬೇಕು ಅನ್ನಿಸದಿರುವುದು ಹೇಗೆ?
“ಹೂವು ಹೆಣ್ಣಾದರೆ ದುಂಬಿ ಗಂಡು…, ಹೂವು ಗಂಡಾದರೆ ದುಂಬಿ ಹೆಣ್ಣು…, ನೀ ಕೇವಲ ಗಂಡನ್ನು ದೂಷಿಸಬೇಡ! ಪ್ರಕೃತಿ ನಿಯಮ ಅಂದಮೇಲೆ ಗಂಡು ಹೆಣ್ಣು ಇಬ್ಬರಿಗೂ ಸಮಪಾಲಿದೆ! ಹೆಣ್ಣಿಗೆ ಇದೇ ಹೆಸರು, ಗಂಡಿಗೆ ಇದೇ ಹೆಸರು ಅನ್ನುವುದು ನಾವು ರೂಪಿಸಿಕೊಂಡ ನಿಯಮ! ಹಾಗಂತ ಹೆಸರನ್ನು ಅದಲು ಬದಲು ಮಾಡಿದರೆ ಪ್ರಕೃತಿನಿಯಮವೇನೂ ಬದಲಾಗುವುದಿಲ್ಲ!” ಎಂದೆ.
“ಹೆಣ್ಣನ್ನು ವಿಜೃಂಬಿಸಲು ಎಲ್ಲಪ್ಪ ಬಿಟ್ಟಿದ್ದೀರ- ಗಂಡು ವರ್ಗ!”
“ನಾ…, ಪ್ರಕೃತಿನಿಯವನ್ನು ಹೇಳುತ್ತಿದ್ದರೆ ನೀ ಸಮಾಜದ ಕಟ್ಟುಪಾಡುಗಳನ್ನು ಹೇಳುತ್ತಿದ್ದೀಯ!” ಎಂದೆ.
ಅವಳೇನೂ ಮಾತನಾಡಲಿಲ್ಲ. ವಿಷಯದಬಗ್ಗೆ ಅವಳಿಗೆ ಸ್ಪಷ್ಟತೆಯಿದೆ! ಆದರೆ ಅದನ್ನು ಹೇಗೆ ನ.ನ.ಗೆ ವಿವರಿಸಬೇಕು ಅನ್ನುವುದು ಗೊಂದಲ. ಆ ಗೊಂದಲದ ಮುಖದಲ್ಲಿ ಅವಳು ತುಂಬಾ ಚಂದ ಕಂಡಳು! ಮುಂದಕ್ಕೆ ಬಾಗಿದೆ! ಒಂದಿಂಚು ಬಾಗುವಷ್ಟರಲ್ಲಿ- ಅವಳಿಗೆ ಅರ್ಥವಾಯಿತು ಯಾಕೆಂದು- ತಡೆಯುವಂತೆ ಕೈಚಾಚಿ…,
“ಯಾಕೆ…? ಯಾಕೆ ಈಗ ಮುತ್ತುಕೊಡೋಕೆ ಬಂದೆ?” ಎಂದಳು.
“ಸದ್ಯಕ್ಕೆ ನೀನು ಹೂವು, ನಾನು ದುಂಬಿ!” ಎಂದೆ.
“ಹೆಚ್ಚುಸಾರಿ ಹಾಗೆ ತಾನೆ?” ಎಂದಳು.
ಅವಳ ಭಾವ ಅರ್ಥವಾಯಿತು! ಬಾಗಿದ್ದು ವ್ಯರ್ಥವಾಗದಿರಲು ತುಟಿಯಂಚಿಗೆ ತಾಗಿಯೂ ತಾಗದಂತೆ ಮುತ್ತೊಂದು ಕೊಟ್ಟು…,
“ಹೆಚ್ಚುಸಾರಿ…! ಅಂದರೆ ಕೆಲವುಸಾರಿ ನೀನೂ ದುಂಬಿಯಾಗಿದ್ದೀಯ!” ಎಂದೆ.
ಅವಳೇನೂ ಮಾತನಾಡಲಿಲ್ಲ. ನಾನೇ…,
“ಯಾರ ನೋಟದಲ್ಲಿ ಹೆಚ್ಚಾಗಿ ಆಹ್ವಾನ ಕಾಣುವುದು?” ಎಂದೆ.
“ಅದು ಆಹ್ವಾನವಲ್ಲ! ನನ್ನ ಮುಖ ಕಂಡಾಗೆಲ್ಲಾ ನಿನಗೆ ಆಹ್ವಾನವಿದೆ ಅನ್ನಿಸುವುದು! ಅದು ಗಂಡುಜನ್ಮದ ಕಳಂಕ!” ಎಂದಳು.
“ಎಲ್ಲಿ…, ಕಣ್ಣು ನೋಡಿ ಹೇಳು!” ಎಂದೆ.
ತಲೆಯೆತ್ತಲಿಲ್ಲ. ಕೆಂಪಾದಳು. ಅವಳನ್ನೇ ನೋಡುತ್ತಾ ಕುಳಿತೆ. ಗೊಂದಲ, ಅಸ್ಪಷ್ಟತೆ, ಹೇಳಲೋ ಬೇಡವೋ ಭಾವ, ಹೇಗೆ ಪ್ರಸ್ತುತಪಡಿಸಲಿ ಭಾವ…, ಎಷ್ಟು ಹೊತ್ತಾದರೂ ಕಾಯುತ್ತೇನೆನ್ನುವುದು ಅವಳಿಗೂ ಗೊತ್ತು! ನಿಧಾನವಾಗಿ ತಲೆಯೆತ್ತಿದಳು. ನಾಚುವಾಗ ಕಣ್ಣು ನೋಡುವುದಿಲ್ಲವಾಗಲಿ…, ಅಧಿಕಾರಯುತವಾಗಿ ವಿಷಯ ಮಂಡನೆ ಮಾಡುವಾಗಮಾತ್ರ ಅವಳ ನೋಟವನ್ನು ಎದುರಿಸುವುದು ಕಷ್ಟ!
ಅವಳು…, ಯಾವತ್ತಿಗೂ ನನ್ನ ಅದ್ಭುತ!
“ಮೂರು ವರ್ಷದ ಹೆಣ್ಣುಪಾಪುವನ್ನು ರೇಪ್ ಮಾಡಿದ ದುರುಳ- ನ್ಯೂಸ್ ಓದಿದೀಯ?” ಎಂದಳು.
ವಿಷಯ ಅರ್ಥವಾಯಿತು…, ಮುಗುಳನಕ್ಕೆ.
“ಹಾಗೆ ಎಷ್ಟು ನ್ಯೂಸ್ ಓದಿದೀಯ?” ಎಂದೆ.
ಗೊಂದಲಗೊಂಡಳು.
“ಕೋಟಿಯಲ್ಲಿ ಒಂದು ಘಟನೆ ನಡೆದಿರಬಹುದೆ? ಅಥವಾ ನಡೆದಿರುವುದೇ ಒಂದು ಘಟನೆಯೋ?”
ಅವಳೇನೂ ಮಾತನಾಡಲಿಲ್ಲ.
“ಆ ರೀತಿಯ ಸರಣಿ ಘಟನೆಗಳ ಉದಾಹರಣೆ ಕೊಡಬಲ್ಲೆ! ಹೆತ್ತ ಮಗುವನ್ನು ಬಾತ್‌ರೂಂನಲ್ಲಿ ಬಿಟ್ಟು ಹೋದ ತಾಯಿ, ಕಸದ ಬುಟ್ಟಿಗೆ ಎಸೆದ ತಾಯಿ, ಕತ್ತು ಹಿಸುಕಿ ಕೊಂದ ತಾಯಿ, ನಾಲೆಗೆ ಎಸೆದ ತಾಯಿ, ಪ್ರಿಯಕರನಿಗಾಗಿ ತನ್ನ ಮಗುವನ್ನೂ ಗಂಡನನ್ನೂ ಕೊಂದ ಹೆಣ್ಣು, ತನ್ನ ಸ್ವಾರ್ಥಕ್ಕಾಗಿ ಚೈನಿನಲ್ಲಿ ಕಟ್ಟಿ ಕೋಣೆಯೊಂದರಲ್ಲಿ ಹುಡುಗನನ್ನು ಸಾಕಿದ ಹೆಣ್ಣು- ಈ ವಿಷಯ ನೀನು ಹೇಳಿದ ರೇಪ್‌ಕೇಸ್‌ಗೆ ಹೋಲುತ್ತದೆ ನೋಡು! ಇದೆಲ್ಲಾ ಮನುಷ್ಯನ ಕಟುಕತನಕ್ಕೆ ಉದಾಹರಣೆಗಳಷ್ಟೆ ಹೊರತು ಗಂಡು ಹೆಣ್ಣಿನ ಮನಸ್ಥಿತಿಗಳನ್ನು ಹೋಲಿಸಲು ಮಾನದಂಡಗಳಲ್ಲ!” ಎಂದೆ.
ನನ್ನ ಕಣ್ಣುಗಳನ್ನೇ ದಿಟ್ಟಿಸಿ ನೋಡುತ್ತಿದ್ದಳು. ಮುಗುಳುನಕ್ಕು ಮುಂದುವರೆಸಿದೆ…,
“ಏನಾಗಿದೆಯೆಂದರೆ…, ಹೆಣ್ಣಿನ ಕಣ್ಣಿನಲ್ಲಿನ ಕೋರಿಕೆಯನ್ನರಿತು ಗಂಡು ಮುಂದುವರೆದರೆ ಆತನನ್ನು ತಪ್ಪಿತಸ್ಥನನ್ನಾಗಿ ಬಿಂಬಿಸುತ್ತಾರೆ ಹೊರತು ನಿಜವಾದ ಕಾರಣ ಯಾರ ಅರಿವಿಗೂ ಬರುವುದಿಲ್ಲ!”
ನಿಷೇಧಾತ್ಮಕವಾಗಿ ತಲೆಯಾಡಿಸಿದಳು. ಸಮಯವನ್ನು ನೀಡಿದೆ.
“ನನ್ನ ದೊಡ್ಡಮ್ಮನ ಮಗ ನನಗೆ ಅಣ್ಣ ತಾನೆ?” ಎಂದಳು.
ನಾನೇನೂ
ಮಾತನಾಡಲಿಲ್ಲ.
“ನನ್ನ
ಅಮ್ಮನ ಅಣ್ಣ- ಮಾವ
ನನಗೆ ತಂದೆಯ ಸಮಾನ ತಾನೆ?”
ಎಂದಳು.
ನನ್ನ ಗಂಟಲು ಕಟ್ಟಿತು.
“ಆಚಾರ ವಿಚಾರಗಳು ಏನೇ ಇರಲಿ! ನೀನೇ ಹೇಳಿದಂತೆ ಮನುಷ್ಯ ನಿಯಮಿಸಿಕೊಂಡ ನಿಯಮಗಳು ಏನೇ ಇರಲಿ…, ವಯಸ್ಸಿಗೆ ಬರುವ ಮುಂಚೆ ಮಾವ ನನ್ನೊಂದಿಗೆ ಸೆಕ್ಸ್ ಮಾಡಿದರೆ ಏನರ್ಥ?” ಎಂದಳು.
ಹೇಳಲು ನನಗೇನೂ ಇರಲಿಲ್ಲ.
“ನನಗಿಂತ ಮೂವತ್ತು ವರ್ಷ ಹಿರಿಯನಾದ ಮಾವ! ಹೆಂಡತಿ ಸತ್ತಾಗ ನನ್ನನ್ನು ಮದುವೆಯಾದ! ಆಗ ನನಗೆ ಹದಿನೈದೋ ಹದಿನಾರೋ ವರ್ಷ ವಯಸ್ಸು! ಮೂವತ್ತುವರ್ಷ ಹಿರಿಯ ಅಂದರೆ ಅರ್ಥವಾಯಿತು ತಾನೆ? ಈಗ ನನಗೆ ಮೂವತ್ತುವರ್ಷ!” ಎಂದು ನಿಲ್ಲಿಸಿದಳು.
ತಗ್ಗಿಸಿದ ತಲೆ ಮೇಲೆತ್ತದೆ ಕೇಳಿಸಿಕೊಳ್ಳುತ್ತಿದ್ದೆ! ದೀರ್ಘವಾದ ನಿಟ್ಟುಸಿರೊಂದನ್ನು ಬಿಟ್ಟು ಮುಂದುವರೆಸಿದಳು…,
“ನಿಜವೇ…, ನನಗೂ ಆಸೆಯಿದೆ, ಆಗಾಗ ದೇಹದ ಕಾವು…, ಕೋರಿಕೆಯಿಂದ ಒದ್ದಾಡುತ್ತದೆ. ನನ್ನನ್ನು ತಣಿಸುವ ಒಂದುಪರ್ಸೆಂಟ್ ಸಾಮರ್ಥ್ಯಕೂಡ ನನ್ನ ಗಂಡನಿಗಿಲ್ಲ! ನನ್ನ ದಾಹವನ್ನು ತಣಿಸುವ ದೊಡ್ಡಮನಸ್ಸು ಮಾಡಲು ಹಲವಾರು ಸಭ್ಯ ಗಂಡಸರು ಕಾಯುತ್ತಿದ್ದಾರೆ ಕೂಡ! ಆದರೆ…, ಆದರೆ…, ಆ ಗಂಡಸರಲ್ಲಿ ನನ್ನ ಅಣ್ಣನೂ….!” ಅವಳ ಗಂಟಲು ಕಟ್ಟಿತು. ಮುಂದುವರೆಸಲಾಗದೆ ಮೌನವಾದಳು.
“ಇರಬಹುದು ಪುಟ್ಟ! ನೀನೇನು ಹೇಳುತ್ತಿದ್ದೀಯ, ಎಲ್ಲಿಗೆ ಬರುತ್ತಿದ್ದೀಯ ಅನ್ನುವುದು ನನಗೆ ಅರ್ಥವಾಗುತ್ತದೆ! ನಿನಗೇ ನಡೆದಿರುವುದರಿಂದ ಅದರ ಧಾರುಣತೆ ಹೆಚ್ಚಿದೆ ಕೂಡ! ಆದರೆ ನನ್ನ ಪಾಯಿಂಟ್…, ಇದೂ ಕೂಡ ಟೂ ವೇ ಅನ್ನುವುದು! ತನ್ನ ಕಾವನ್ನು ತಣಿಸಲು ಹೆಣ್ಣು ಕೂಡ ಗಂಡನ್ನು ಸೆಳೆಯುತ್ತಾಳೆ ಅನ್ನುವುದು!” ಎಂದೆ.
ಅಧೀರಳಾಗಿ ನನ್ನನ್ನು ನೋಡಿದಳು.
“ಛೇ! ನಮ್ಮ ವಿಷಯವನ್ನು ಹೇಳುತ್ತಿಲ್ಲವೇ! ನೀನೇನೂ ನನ್ನನ್ನು ಸೆಳೆಯಲಿಲ್ಲ!” ಎಂದೆ.
ಆದರೂ ಸ್ವಲ್ಪ ಡಿಸ್ಟರ್ಬ್ ಆದಳು!
“ಅದು ಬಿಡು! ನಿನ್ನೆ ಏನಾಯ್ತು ಗೊತ್ತಾ…?” ಎಂದೆ.
ಕುತೂಹಲದಿಂದ ನೋಡಿದಳು.
“ನೀನು…, ನಿನ್ನ ಅಣ್ಣ ನಿನ್ನ ದೇಹವನ್ನು ಬಯಸಿದ ಅನ್ನುತ್ತೀಯ! ಆದರೆ ಒಡಹುಟ್ಟಿದವಳಲ್ಲದೆಯೂ ಅಕ್ಕ ಅನ್ನಿಸಿಕೊಂಡ ಅವರೊಂದಿಗಿನ ನನ್ನ ಬಾಂಧವ್ಯಕ್ಕೆ ಏನು ಹೇಳುತ್ತೀಯ?” ಎಂದೆ.
“ಯಾರು? ನಿನ್ನ ನಗುವಿನರಸಿಯಾ?” ಎಂದಳು.
ಹೌದೆನ್ನುವಂತೆ ತಲೆಯಾಡಿಸಿದೆ.
“ನಿಮ್ಮದು ಅಪರೂಪದ ಬಂಧ!” ಎಂದಳು.
“ಆ ಬಂಧವನ್ನೂ ಕೆಟ್ಟ ದೃಷ್ಟಿಯಲ್ಲಿ ನೋಡಿದರೆ ಏನನ್ನಬೇಕು?” ಎಂದೆ.
ಅರ್ಥವಾಗದವಳಂತೆ ನೋಡಿದಳು.
“ಇಲ್ಲೇ ಮನುಷ್ಯ ಮನಸ್ಸಿನ ಬಿಂಬ! ನಿನ್ನಣ್ಣ ನಿನ್ನನ್ನು ಕೋರಿಕೆಯ ದೃಷ್ಟಿಯಲ್ಲಿ ನೋಡಿದ…, ಕಾರ್ಯಕ್ರಮವೊಂದರಲ್ಲಿ ನನ್ನಕ್ಕ- ನನ್ನ ನಗುವಿನರಸಿಯನ್ನು ಭೇಟಿಯಾದಾಗ ಸುತ್ತಲೂ ಇರುವ ಜನರನ್ನು ಮರೆತು…, ಪುಟಾಣಿ ಮಕ್ಕಳಿಗೆ ಮಾಡುವಂತೆ- ಅವರ ಎರಡೂ ಕೆನ್ನೆಗಳನ್ನು ಗಿಂಡಿದ್ದೆ! ಅದು ಹೃದಯದ ಸ್ಪಂದನೆ! ಅಷ್ಟು ಜನರ ಮುಂದೆ ನಾನದನ್ನು ಮಾಡಿದ್ದೇನೆಂದರೆ ಅಲ್ಲಿ ಕಳಂಕವಿಲ್ಲವೆಂದೇ ಅರ್ಥ! ಅದನ್ನು ನೋಡಿ ಜನ ಮೆಚ್ಚಬೇಕು- ಎಂಥಾ ಬಾಂಧವ್ಯವೆಂದು ಹೇಳಬೇಕು! ಆದರೆ…, ಒಬ್ಬರ ಪ್ರಶ್ನೆ…, ‘ಎಷ್ಟೇ ಅಕ್ಕ ತಮ್ಮನಂತೆ ಅಂದರೂ…, ಪಬ್ಲಿಕ್ ಆಗಿ ಹಾಗೆ ಕೆನ್ನೆ ಹಿಂಡಬಹುದೇ?’ ಎಂದು. ನನರ್ಥವಾಗಲಿಲ್ಲ! ಏನು ಸಮಸ್ಯೆ? ನನ್ನಕ್ಕ! ನನ್ನಹಕ್ಕು! ಕದ್ದೂ ಮುಚ್ಚಿಯೂ ಕೆನ್ನೆ ಹಿಂಡಲಿಲ್ಲ! ಅದು ಆತ್ಮಕ್ಕೆ ಸಂಬಂಧಪಟ್ಟ ವಿಷಯ! ಕೆನ್ನೆ ಹಿಂಡಿದರೇನು? ಕೆನ್ನೆಗೊಂದು ಮುತ್ತುಕೊಟ್ಟರೆ ತಾನೆ ಏನು?” ಎಂದು ನಿಲ್ಲಿಸಿ ಅವಳ ಕಣ್ಣುಗಳನ್ನೇ ನೋಡುತ್ತಾ…,
“ಈಗ ಹೇಳು…, ನಿನ್ನಣ್ಣನ ದೃಷ್ಟಿಗೂ…, ನನ್ನನ್ನು ಪ್ರಶ್ನೆ ಕೇಳಿದವರ ದೃಷ್ಟಿಗೂ ಏನು ವ್ಯತ್ಯಾಸ? ಅವರವರ ಮನಸ್ಸಿನಂತೆ ದೃಷ್ಟಿಕೋನ! ಆದ್ದರಿಂದ ಹೆಚ್ಚು ಸೆಂಟಿಮೆಂಟಲ್ ಆಗದೆ ನಿನ್ನ ಬದುಕನ್ನು ನೀನು ರೂಪಿಸಿಕೋ!” ಎಂದೆ.
ಅವಳಿಗೆ ನನ್ನ ಪ್ರಶ್ನೆಯಕಡೆ ಗಮನವಿರಲಿಲ್ಲ! ಕುತೂಹಲದಿಂದ ನನ್ನ ಕಣ್ಣಿನಾಳಕ್ಕೆ ನೋಡುತ್ತಾ…,
“ಕಳಂಕ ಅಂದರೇನು?!” ಎಂದಳು.
“ಅದು ತೀರಾ ವೈಯಕ್ತಿಕ!” ಎಂದೆ.
“ಹೇಗೆ?” ಎಂದಳು.
“ನಾನು- ನೀನು ಅನ್ನುವಲ್ಲಿ…, ನಾವು ಪರಸ್ಪರ ಹೇಗೆ ಅನ್ನೋದು ಮುಖ್ಯ! ನಿನ್ನೊಂದಿಗೆ ನಾನು, ನನ್ನೊಂದಿಗೆ ನೀನು ಸುಳ್ಳಾಡಿದರೆ, ಪರಸ್ಪರ ಮುಖವಾಡ ಧರಿಸಿದ್ದರೆ…, ಅದು ಕಳಂಕ! ಒಂದುವೇಳೆ ನಾನು…, ನಮ್ಮಿಬ್ಬರನಡುವೆ ವೈಮನಸ್ಸು ಬಂದು…, ನಮ್ಮಿಬ್ಬರ ನಡುವಿನ ಬಂಧವನ್ನು ಇತರರಿಗೆ ಹೇಳಿ ನಿನಗೆ ಕೆಟ್ಟ ಹೆಸರು ತರಲು ಶ್ರಮಿಸಿದರೆ- ಅದು ಕಳಂಕ!” ಎಂದೆ.
ಅವಳಿಗೆ ಅರ್ಥವಾಗಲಿಲ್ಲ!
*
ಚೆಂಬಕಂ!
ಕನ್ನಡದ ಸಂಪಿಗೆ ಹೂವಿನ ಮಲಯಾಳಂ ಹೆಸರು- ಚೆಂಬಕಂ.
ಅವಳು ಕೂಡ ಹಾಗೆಯೇ…, ಹೆಸರಿನಂತೆ- ಘಮ- ಅದ್ಭುತ ಸೌಂಧರ್ಯ. ಒಳ್ಳೆಯ ಬರಹಗಾರ್ತಿ. ಸಮಾಜದಲ್ಲಿ ಅವಳದೇ ಆದ ಸ್ಥಾನಮಾನ.
ಅವಳನ್ನು ಕಂಡೂ ಅವಳೆಡೆಗೆ ಆಕರ್ಷಿತರಾಗದ ಯಾರಾದರೂ ಇದ್ದರಾ…?
ಇಲ್ಲ! ನನ್ನನ್ನೂ ಸೇರಿ ಯಾರೂ ಇಲ್ಲ!
ಆದರೇನು?
ಅವಳು- ಚೆಂಬಕಂ!
ಹೇಗೆ ಅದ್ಭುತ ಘಮಲಿನ ಹೂವೋ…, ಅಷ್ಟೇ ದಾರ್ಷ್ಟ್ಯದ ಒಡತಿ- ಬೆಂಕಿ!
ತಾನು, ತನ್ನ ಗಂಡ, ತನ್ನ ಮಕ್ಕಳು, ತನ್ನ ಮನೆ, ತನ್ನ ಕೆಲಸ, ತನ್ನ ಓದು- ಬರಹ, ತನ್ನದೇ ಆದ ಪ್ರಪಂಚ!
ಮೋಹಗೊಳ್ಳುವುದರಲ್ಲಿ ಹಲವು ವಿಧವಿದೆ! ನನ್ನದು ಮೋಹವಲ್ಲ! ಆಕರ್ಷಣೆ! ಅದ್ಭುತ ಸೌಂಧರ್ಯದ ಆಕರ್ಷಣೆ! ಹೇಗೆ ಅರಳಿದ ತಾವರೆಯನ್ನು ಕೀಳದೆ ನೋಡುತ್ತಾ ಕುಳಿತುಕೊಳ್ಳುತ್ತೇನೋ…, ಹಾಗೆ ಅವಳನ್ನೇ ನೋಡುತ್ತಾ ದಿನಗಟ್ಟಲೆ ಕಳೆಯಬಲ್ಲೆ!
ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಟ್ವಿಟರ್…, ಎಲ್ಲಾ ಕಡೆಯೂ ನಾನವಳನ್ನು ಫಾಲೋ ಮಾಡುತ್ತಿದ್ದೆ! ಕೆಲವೊಮ್ಮೆ ಅವಳ ಬರಹಗಳಿಗೆ ಕಮೆಂಟ್ ಮಾಡುತ್ತಿದ್ದೆ. ಕೆಲವು ಕಮೆಂಟ್‌ಗೆ ರಿಪ್ಲೆ ಕೊಡುತ್ತಿದ್ದಳು, ಕೆಲವನ್ನು ಇಗ್ನೋರ್ ಮಾಡುತ್ತಿದ್ದಳು! ಯಾವುದೇ ಕಾರಣಕ್ಕೂ ಅವಳ ಪರ್ಸನಲ್ ಫೋಟೋಗಳಿಗಾಗಲಿ, ಪರ್ಸನಲ್ ವಿಷಯಕ್ಕೆ ಸಂಬಂಧಿಸಿದ ಬರಹಗಳಿಗಾಗಲೀ ಕಮೆಂಟ್ ಮಾಡುತ್ತಿರಲಿಲ್ಲ- ಲೈಕ್ ಒತ್ತುತ್ತಿರಲಿಲ್ಲ! ಅವಳೂ ಕೂಡ ನನ್ನ ಕೆಲವು ಕಥೆಗಳಿಗೆ ಲೈಕ್ ಕೊಡುತ್ತಿದ್ದಳು, ಕಮೆಂಟ್ ಮಾಡುತ್ತಿದ್ದಳು. ಒಂದೆರಡು ಕಥೆಗಳ ವಿಷಯದಲ್ಲಿ ಪರಸ್ಪರ ಜಗಳವೂ ಆಗಿತ್ತು! ಜಗಳವೆಂದರೆ ಅಭಿಪ್ರಾಯ ಭಿನ್ನತೆಯ ತರ್ಕ! ಹಾಗೆಂದು ಯಾವತ್ತಿಗೂ ಇಬ್ಬರೂ ಪರಸ್ಪರ ವೈಯಕ್ತಿಕ ವಿಷಯಗಳಿಗೆ ತಲೆ ಹಾಕುತ್ತಿರಲಿಲ್ಲ! ಹೀಗಿರುವಾಗ ಒಂದುದಿನ…, ಸಾಹಿತ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿ ಭೇಟಿಯಾದೆವು.
ಮುಗುಳುನಗು…, ಪರಿಚಯ!
ಪರಿಚಯವೆಂದರೆ…, ನನ್ನ ನೋಟದಲ್ಲಿನ ಆರಾಧನೆ ತಾಕಿತೋ ಏನೋ…,
“ಹಾಯ್!” ಎಂದಿದ್ದಳು.
ಗೊತ್ತು…, ಬೆಂಕಿಯ ಒಡನಾಟಕ್ಕೆ ಹಾತೊರೆಯುತ್ತಿದ್ದೇನೆ! ಫಲಿತಾಂಶ ಏನೇ ಆದರೂ ಒಡನಾಡುವುದಷ್ಟೆ! ಕಾರಣ…, ನೋಟದಲ್ಲಿನ ಆರಾಧನೆ ಹೇಗೆ ಕಳಂಕವಿಲ್ಲದ್ದೋ ಅವಳಮೇಲಿನ ಭಾವನೆಯೂ ಕಳಂಕವಿಲ್ಲದ್ದೆಂದು ಎದೆಮುಟ್ಟಿ ಹೇಳಬಲ್ಲೆ!
ಸಮಸ್ಯೆ…, ಹೆಣ್ಣೊಬ್ಬಳಿಗೆ ಹಾಯ್ ಅಂದರೆ ಸಾಕು ಉದ್ದೇಶ ಅವಳೊಂದಿಗೆ ಸೆಕ್ಸ್ ಮಾಡುವುದು ಅನ್ನುವಂತೆ ಬಿಂಬಿಸಲ್ಪಟ್ಟಿರುವ ಸಮಾಜ- ಹೆಣ್ಣಿನ ಮನಸ್ಥಿತಿ!!
ಇವಳು ಹೇಗೋ ಅಂದುಕೊಂಡಿದ್ದೆ! ಸಧ್ಯ…, ಅರಿತು ನಕ್ಕಳು!
ನನಗಿಂತ ವಯಸ್ಸಿನಲ್ಲಿ ತುಂಬಾ ಹಿರಿಯಳಾದರೂ ಏಕವಚನದಲ್ಲಿ ಹೇಳುತ್ತಿರುವುದಕ್ಕೆ ಕಾರಣ ಅವಳೇ- ಚೆಂಬಕಂ ಅನ್ನುವ ಅವಳು!!
*
“ಹೇಳು! ಇರ್ತೀಯ?” ಎಂದಳು.
“ಅಯ್ಯೋ ಅದು ನನ್ನ ಅಗತ್ಯ! ಅಕ್ಕನಂತಾದರೂ ಸರಿ ನಿಮ್ಮ ಸಾನ್ನಿಧ್ಯ ಬೇಕೆಂದುಕೊಳ್ಳುವವ!” ಎಂದೆ.
“ನಿನ್ನ ತಲೆ! ನನಗೇನೂ ತಮ್ಮನ ಅಗತ್ಯವಿಲ್ಲ! ಒಂದೊಳ್ಳೆಯ ಗೆಳೆಯನಾಗಿ ಇರಬಲ್ಲೆಯಾ?”
“ಅದು ನನ್ನ ಅಹಂಕಾರ!” ಎಂದೆ.
ಒಂದು ಕ್ಷಣದ ಮೌನ…
“ನೀನು ಯಾಕೆ ಮುಂಚೆಯೇ ಸಿಗಲಿಲ್ಲ?” ಎಂದಳು.
“ನನ್ನ ಅಗತ್ಯ ನಿಮಗೆ ಇರಲಿಲ್ಲವೇನೋ!” ಎಂದೆ.
“ಮೊದಲು ನೀವು, ನಿಮ್ಮ ಅನ್ನುವ ಬಹುವಚನ ಬಿಡು! ನಿನ್ನ ಬೌಧಿಕಮಟ್ಟ ವಯಸ್ಸಿಗಿಂತ ತುಂಬಾ ಹೆಚ್ಚಿದೆ!” ಎಂದಳು.
“ಇರಬಹುದು…, ಆದರೆ ಹೆಣ್ಣು ನೀವು… ಸಮವಯಸ್ಕ ಹೆಣ್ಣೇ ಗಂಡಿಗಿಂತ ಐದಾರುವರ್ಷ ಮುಂದೆ ಇರುತ್ತಾಳೆ! ನೀವು ನೋಡಿದರೆ ನನಗಿಂತ ಹತ್ತುವರ್ಷ ಹಿರಿಯೆ!” ಎಂದೆ.
“ಸುಮ್ಮನೆ ಹಿರಿಯೆ ಹಿರಿಯೆ ಎಂದು ಹೇಳಿ ಕೀಳರಿಮೆ ತುಂಬದಿರು! ಇರ್ತೀಯ ತಾನೆ?” ಎಂದಳು.
“ಅದು ನನ್ನ ಧನ್ಯತೆ!” ಎಂದೆ.
ಅತ್ತಲಿಂದ ಮೌನ! ಪರಿಚಯವಾದ ಮೊದಲ ಭೇಟಿಯನಂತರ ನಮ್ಮ ಭೇಟಿಯಾಗಿರಲಿಲ್ಲ. ಸಂಭಾಷಣೆ ಏನಿದ್ದರೂ ಫೋನಿನಲ್ಲಿ… ಈಗಾಗಲೇ ವಾಟ್ಸಪ್ ಚಾಟ್ ಮೂಲಕ ಮಾತುಕತೆಗಳಾಗಿದ್ದರೂ…, ತೀರಾ ವೈಯಕ್ತಿಕ ವಿಷಯಗಳನ್ನು ಮಾತನಾಡಿರಲಿಲ್ಲ!
ಈಗ ನನ್ನಬಗ್ಗೆ ಏನೋ ಕೇಳಬೇಕೆಂದಿದೆ, ಹೇಗೆ ಕೇಳುವುದು ಅನ್ನುವ ಗೊಂದಲದಲ್ಲಿದ್ದಾಳೆ ಅನ್ನಿಸಿತು!
ಅದು ನಿಜ ಅನ್ನುವಂತೆ, ಅದಕ್ಕೆ ಪೀಠಿಕೆಯಂತೆ…,
“ಹೇಳು…, ನೀನು ಬರೆದ ಆ ಕಥೆಯ ಬಗ್ಗೆ!?” ಎಂದಳು!
ಯಾವ ಕಥೆಯಬಗ್ಗೆ ಕೇಳುತ್ತಿದ್ದಾಳೋ ತಿಳಿಯಿತು…, ಮುಂಚೆ ಅದೇ ಕಥೆಯ ಕಾರಣವಾಗಿ ಜಗಳವಾಡಿದ್ದೆವು!
“ಕಥೆಯಬಗ್ಗೆ ಹೇಳು ಅಂದರೆ ಏನು ಹೇಳಲಿ?” ಎಂದೆ.
“ಒಬ್ಬಳು ಹೆಣ್ಣಿನಬಗ್ಗೆ ಅಷ್ಟು ಸ್ಪಷ್ಟವಾಗಿ ಹೇಗೆ ಬರೆಯಬಲ್ಲವನಾದೆ? ಕಣ್ಣಿಗೆ ಕಟ್ಟುವಂತೆ ಬರೆದಿದ್ದೀಯಲ್ಲಾ…, ಅದು ನಿನ್ನ ಪರ್ಸನಲ್ ಅನುಭವವಾ?” ಎಂದಳು.
ನಿಜ ಹೇಳಲು ನನಗೆ ಭಯವಿಲ್ಲ! ಅಲ್ಲದೆ…., ಗಂಡು ಹೆಣ್ಣು ಸಂಬಂಧ ಎಲ್ಲಿಗೆ ಹೋಗುತ್ತದೆನ್ನುವ ಅರಿವು ನನಗಿದೆ. ಗಂಡಾದರೂ ಹೆಣ್ಣಾದರೂ ತಮ್ಮ ಸಂಬಂಧ ಅಲ್ಲಿಗೆ ಹೋಗಲು ಕಾರಣ ಎದುರಿನವರು ಹೊರತು ತಾವಲ್ಲ ಎಂದೇ ಬಿಂಬಿಸುವುದು! ಅದೊಂದು ರೀತಿಯ ಅಹಂ! ನನಗೇನೂ ಅದು ಬೇಕಾಗಿರಲಿಲ್ಲ ನಿನಗಾಗಿ ಒಪ್ಪಿದೆ…! ನನ್ನನ್ನು ನಾನು ಸಮರ್ಪಿಸಿಕೊಂಡೆ! ನೀನು ಮೋಸಮಾಡಿದೆ! ಬಂದು ನಿಲ್ಲುವುದು ಇಲ್ಲಿಯೇ!!! ಅದರಿಂದಾಗಿಯೇ ಅಕ್ಕನಂತಾದರೂ ನಿಮ್ಮ ಸಾನ್ನಿಧ್ಯ ಬೇಕು ಅಂದಿದ್ದೆ! ಆದರೆ ಅವರಿಗೆ ಗೆಳಯ ಬೇಕು! ಈ ಗೆಳೆತನವಾದರೂ ಎಲ್ಲಿಗೆ ಹೋಗುತ್ತದೋ ಊಹೆಯಿದೆ! ಅವರ ಪ್ರಶ್ನೆಯೂ ಯಾಕೋ ಅಲ್ಲಿಗೇ ಕರೆದುಕೊಂಡು ಹೋಗುವಂತಿದೆ! ನನ್ನ ಮೌನ ಅವರಲ್ಲಿ ಗೊಂದಲ ಹುಟ್ಟಿಸಿತೇನೋ…,
“ಹೇಳುವುದು ಇಷ್ಟವಿಲ್ಲವಾ?” ಎಂದಳು.
“ನನ್ನ ಅನುಭವ!” ಎಂದೆ.
“ಯಾರೊಂದಿಗೆ?” ಬುಲೆಟ್‌ನಂತೆ ಬಂತು ಮುಂದಿನ ಪ್ರಶ್ನೆ!
“ಅದನ್ನು ಹೇಳುವುದಿಲ್ಲ!” ಎಂದೆ.
“ನನಗೂ?” ಎಂದಳು.
“ಯಾರಿಗೂ!” ಎಂದೆ.
ಕ್ಷಣ ಮೌನ! ನಂತರ…,
“ಈಗಲೂ ಕಾಂಟಾಕ್ಟ್‌ಲಿ ಇದ್ದಾಳ?” ಎಂದಳು!
“ಲೈಫ್‌ಟೈಂ ಇರುತ್ತಾಳೆ!” ಎಂದೆ.
“ನಿನಗೆ ಬೇಕಾದಾಗಲೆಲ್ಲಾ ಸಿಗುತ್ತಾಳ?” ಎಂದಳು!
“ಇಲ್ಲ! ಅವಳಿಗೆ ಬೇಕಾದಾಗಲೆಲ್ಲಾ ನಾನು ಸಿಗುತ್ತೇನೆ!” ಎಂದೆ.
“ಆಹಾ ಮಗನೆ! ಭಾರಿ ಸಾಚ! ನಿನಗೆ ಬೇಕೆನ್ನಿಸಿದಾಗ ಏನು ಮಾಡುತ್ತೀಯ?” ಎಂದಳು.
“ಹಸ್ತಮೈಥುನ!” ಎಂದೆ.
ಈ ಉತ್ತರವನ್ನವಳು ನಿರೀಕ್ಷಿಸಿರುವುದಿಲ್ಲ! ಗಾಢ ಮೌನ! ನಾನೂ ಮಾತನಾಡಲಿಲ್ಲ! ಕೊನೆಗೆ ಅವಳೇ…,
“ಆಗ ಯಾರನ್ನು ಕಲ್ಪಿಸಿಕೊಳ್ಳುತ್ತೀಯ?” ಎಂದಳು.
“ಬ್ಲೂಫಿಲಂಗಳು!” ಎಂದೆ.
“ಇನ್ನುಮುಂದೆ ನನ್ನನ್ನು ಕಲ್ಪಿಸಿಕೋ!” ಎಂದಳು.
ಇದನ್ನು ನಾನು ನಿರೀಕ್ಷಿಸಿರಲಿಲ್ಲ! ಆದರೂ ಸುಳ್ಳು ಹೇಳುವುದು ಬೇಡ ಅನ್ನಿಸಿತು!
“ಶ್ರಮಿಸಿ ನೋಡಿದೆ! ಯಾಕೋ ಸಾಧ್ಯವಾಗಲಿಲ್ಲ!” ಎಂದೆ.
“ನನ್ನ ಹೆಣ್ಣುತನಕ್ಕೇ ಅವಮಾನ ಮಾಡಿಬಿಟ್ಟೆಯಲ್ಲೋ ಶಿವನೇ!” ಎಂದಳು.
ನಾನು ಮೌನ! ಅವಳೇ…,
“ಯಾಕೆ ಸಾಧ್ಯವಾಗಲಿಲ್ಲ?”
“ಗೊತ್ತಿಲ್ಲ! ಸಾಮಾನ್ಯವಾಗಿ ನಾನು ಪ್ರಾಕ್ಟಿಕಲ್ ಆಗಿ ಸೆಕ್ಸ್ ಮಾಡದ ಯಾರನ್ನೂ ಕಲ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ!” ಎಂದೆ.
“ಪುಣ್ಯಾತ್ಮ! ಹಾಗಂತ ಎಷ್ಟುಜನರೊಂದಿಗೆ ಸೆಕ್ಸ್ ಮಾಡಿದ್ದೀಯೋ?” ಎಂದಳು.
“ಅದು ರಹಸ್ಯ!” ಎಂದೆ.
“ನನಗೂ ಹೇಳುವುದಿಲ್ಲವಾ?”
ಎರಡುಕ್ಷಣ ಯೋಚಿಸಿ, ಲೆಕ್ಕ ಹಾಕಿ…, ಹೇಳಿದೆ!
“ಯಾರು ಆ ರಮಣಿಯರೆಂದು ಕೇಳಬಹುದ? ಸೂಳೆಯರಲ್ಲಿಗಂತೂ ನೀನು ಹೋಗುವುದಿಲ್ಲ- ಹಸ್ತಮೈಥುನ ಮಾಡಿಕೊಳ್ಳುವ ಬಡವ!” ಎಂದಳು.
“ಪರ್ಸನಲ್ ಆಗಿ ನನ್ನೊಬ್ಬನ ಯಾವ ರಹಸ್ಯವನ್ನಾದರೂ ಹೇಳಬಲ್ಲೆ! ಆದರೆ ಅದಕ್ಕೆ ಸಂಬಂಧಪಟ್ಟ ಯಾರೊಬ್ಬರಬಗ್ಗೆಯೂ ಯಾರೊಬ್ಬರೊಂದಿಗೂ ನಾನು ಹೇಳುವುದಿಲ್ಲ!” ಎಂದೆ.
“ಹೋಗಲಿ ಬಿಡು! ನಾನೂ ಕೇಳಬಾರದು! ಆದರೆ ನೀನು ಈರೀತಿಯಲ್ಲಿ ಲೆಕ್ಕ ಹೇಳಿದರೆ ಅದು ನಿನ್ನೊಂದಿಗೆ ಒಡನಾಡುವ ಪ್ರತಿ ಹೆಣ್ಣಿಗೂ ಕಳಂಕವಲ್ಲವಾ?” ಎಂದಳು.
“ನನ್ನೊಂದಿಗೆ ಈ ಲೆಕ್ಕವನ್ನು- ಅಂಟಿಕೊಂಡ ಹೆಣ್ಣಲ್ಲದೆ ಬೇರೆ ಯಾರೂ ಕೇಳುವುದಿಲ್ಲ! ಅಂಟಿಕೊಳ್ಳದವರಿಗೆ ನಾನು ಉತ್ತರವನ್ನು ಹೇಳಬೇಕಾಗಿಲ್ಲ!” ಎಂದೆ.
“ಆದರೂ….!” ಎಂದು ರಾಗ ಎಳೆದಳು.
“ನನ್ನ ವಿಷಯದಲ್ಲಿ ಆ ರಿಸ್ಕ್ ಇದ್ದೇ ಇದೆ! ಅದನ್ನು ನಾನು ಮುಂಚೆಯೇ ಹೇಳುತ್ತೇನೆ ಕೂಡ!” ಎಂದೆ.
“ನನಗೆ ಹೇಳಲಿಲ್ಲ!” ಎಂದಳು.
“ಇನ್ನೂ ಸಂದರ್ಭ ಒದಗಿರಲಿಲ್ಲ! ನೀವಾಗಿ ಕೇಳದೇ ಇದ್ದಿದ್ದರೆ ಖಂಡಿತಾ ಹೇಳಿರುತ್ತಿದ್ದೆ!” ಎಂದೆ.
“ಈಗ ನಾನೇನು ಮಾಡಲಿ?” ಎಂದಳು.
“ಯೋಚಿಸು!” ಎಂದೆ.
ನನ್ನರಿವಿಲ್ಲದೆ ಏಕವಚನಕ್ಕೆ ಇಳಿದಿದ್ದೆ!
*
“ಹಾಗಿದ್ದರೆ…, ಒಬ್ಬರಿಗಿಂತ ಹೆಚ್ಚು ಜನರೊಂದಿಗೆ ಸೆಕ್ಸ್ ಮಾಡುವುದು ಕಳಂಕವಾ?” ಎಂದಳು ಮಲ್ಲಿಗೆ!
“ಅದು ಪ್ರಪಂಚದ ದೃಷ್ಟಿಯಲ್ಲಿ! ನೀ ಯಾಕೆ ಮಧ್ಯೆ ತಲೆ ಹಾಕ್ತೀಯ? ಕಥೆ ಇನ್ನೂ ಮುಗಿದಿಲ್ಲ!” ಎಂದೆ.
*
ಕಳಂಕದ ಭಯದಿಂದ ಭೇಟಿಯಬಗ್ಗೆ ಯೋಚಿಸಿದಳಾಗಲಿ…, ನಮ್ಮ ನಡುವಿನ ಮಾತುಕತೆ, ಚಾಟಿಂಗ್ ಮುಂದುವರೆದಿತ್ತು! ನಿಸ್ಸಂಕೋಚವಾಗಿ ಏನನ್ನೇ ಆದರೂ ಮಾತನಾಡುತ್ತಿದ್ದೆವು. ಜಗಳ ಮಾಡುತ್ತಿದ್ದೆವು. ಕೆಲವೊಮ್ಮೆ ಮುನಿಸಿಕೊಳ್ಳುತ್ತಿದ್ದಳು. ಆದರೂ ಇಬ್ಬರಿಗೂ ಪರಸ್ಪರ ಸ್ಪಷ್ಟವಾದ ಅರಿವು ಮೂಡಿತು. ಫೇಸ್‌ಬುಕ್ ಪೋಸ್ಟ್‌ಗಳಿಗೆ ನಾವು ಮಾಡುತ್ತಿದ್ದ ಕಮೆಂಟ್‌ಗಳು, ಪರಸ್ಪರ ಕಾಲೆಳೆಯುತ್ತಾ ಮಾಡುತ್ತಿದ್ದ ಜಗಳ…, ನಮಗೆ ಸಂಬಂಧಪಟ್ಟವರಿಗೆ…, ಇದು ಯಾವ ಕಾರಣಕ್ಕೂ ಬೇರೆ ರೀತಿಯ ಸಂಬಂಧವಲ್ಲ ಎಂದೇ ಬಿಂಬವನ್ನು ಕೊಡುತ್ತಿತ್ತು. ಆದರೆ ವೈಯಕ್ತಿಕವಾಗಿ ನಾವು ತುಂಬಾ ಮುಂದುವರೆದಿದ್ದೆವು! ಅದರ ಫಲಿತಾಂಶವಾಗಿ…, ಮೊದಲಭೇಟಿಯ ನಂತರ…, ಸರಿಯಾಗಿ ಒಂದೂವರೆ ವರ್ಷದಲ್ಲಿ- ಭೇಟಿಯಾದೆವು!!
*
“ಇಶ್ಶೀ…! ಅಲ್ಲಿಗೆಲ್ಲಾ ಯಾರಾದರು ಮುತ್ತುಕೊಡುತ್ತಾರ? ಅಸಹ್ಯ!” ಎಂದಳು.
“ಇದು ಅಸಹ್ಯವಾ? ಈ ಭ್ರಮರನಿಗೆ ಹೆಣ್ಣಿನಲ್ಲಿ ಇದಕ್ಕಿಂತಲೂ ಪವಿತ್ರವಾದುದು ಯಾವುದು? ತಿಂಗಳ ಕಷ್ಟ! ಆ ಕಷ್ಟ ನಿಂತರೆ ಒಂಬತ್ತು ತಿಂಗಳಲ್ಲಿ ಮೆಗಾ ಕಷ್ಟ! ಇಲ್ಲಿಂದಲೇ ತಾನೆ ನಾವೆಲ್ಲಾ ಹೊರಬಂದಿದ್ದು?” ಎಂದು ಹೇಳಿ ಮತ್ತೊಮ್ಮೆ ತುಟಿಯೊತ್ತಿದೆ.
ಮುದ್ದಿಸುತ್ತಿದ್ದಷ್ಟು ಹೊತ್ತು ಅವಳ ಪುಳಕ…, ತಲೆಯನ್ನು ಒತ್ತಿ ಹಿಡಿದಳು!
ಗಡ್ಡ ಮೀಸೆಯೊಂದಿಗೆ ಮುಖ ಪೂರ್ತಿ ಒದ್ದೆಯಾದಾಗ…, ತೆಲೆಯೆತ್ತಿ ನೋಡಿದೆ. ತನ್ಮಯತೆಯಿಂದ ಕಣ್ಣು ಮುಚ್ಚಿದ್ದಳು.
ಮುಖದಮೇಲಿನ ಅಂಟನ್ನು ಅವಳ ಹೊಟ್ಟೆಗೆ ಸವರಿ ಮೇಲಕ್ಕೆ ಸರಿದೆ.
“ಇನ್ನೊಬ್ಬರ ತುಟಿಗೆ ಮುತ್ತುಕೊಡುವುದನ್ನೇ ಕಲ್ಪಿಸಲು ಆಗದವಳು ನಾನು! ಅದೇ ಅಷ್ಟು ಅಸಹ್ಯ ನನಗೆ! ಅಂತದ್ದರಲ್ಲಿ…!” ಎಂದು ಹೇಳಿ ನನ್ನ ಮುಖವನ್ನು ಬೊಗಸೆಗೆ ತೆಗೆದುಕೊಂಡು 'ಅವಳದೇ ಅಂಟು' ಇರುವ ನನ್ನ ತುಟಿಗೆ ತುಟಿಯೊತ್ತಿದಳು.
ತನ್ಮಯಳಾಗಿ ಕಣ್ಣುಮುಚ್ಚಿ…, ಅವಳು ಕೊಟ್ಟ ಮುತ್ತು…, ಅದಕ್ಕಿಂತಲೂ ಇನ್ನೇನೂ ಇಲ್ಲ ಅನ್ನುವಷ್ಟು ಅದ್ಭುತವಾಗಿತ್ತು.
ಅವಳು ದಾರಿ ತೋರಿಸಲಿಲ್ಲ! ನಾನೂ ಹುಡುಕಲಿಲ್ಲ! ಆದರೂ ಪ್ರಕೃತಿನಿಯಮ ಅದಾಗಿಯೇ ಅನ್ವಯಿಸಲ್ಪಟ್ಟಿತ್ತು! ಅದ್ಭುತ ಚಲನೆ! ಒಂದು ಹಂತದಲ್ಲಿ ಬಲವಾಗಿ ತಬ್ಬಿಕೊಂಡು ತೋಳನ್ನು ಕಚ್ಚಿದಳು.
“ಸಾಕು ಬಿಡು ರಾಕ್ಷಸ!” ಎಂದಳು- ಮತ್ತಷ್ಟು ಎದುರೊತ್ತು ಕೊಡುತ್ತ!
ಹರಡಿದ ಕೂದಲು…, ತುಂಬಿದೆದೆಯ ಚಲನೆ…, ಅವಳ ಕಣ್ಣಿನ ಭಾವ…!
ಆ ಅದ್ಭುತ ಸೌಂಧರ್ಯದೊಡೆಯ ನಾನು!!
ಜನ್ಮ ಸಾರ್ಥಕ!
ಚಿಮ್ಮಿದ ಜ್ವಾಲಾಮುಖಿ ಶಾಂತವಾದಂತೆ…, ಅವಳೆದೆಗೆ ಒರಗಿದೆ.
ವಾತ್ಸಲ್ಯದಿಂದ ಹಣೆಯಮೇಲೊಂದು ಮುತ್ತುಕೊಟ್ಟಳು.
“ಇದರಲ್ಲಿ ಇಷ್ಟು ಸುಖವಿದೆಯೆಂದು ಗೊತ್ತಿರಲಿಲ್ಲ!” ಎಂದಳು.
ನಾನೇನೂ ಮಾತನಾಡಲಿಲ್ಲ.
ಏನೋ ಗೊಂದಲವಾಗಿ ನನ್ನ ಮುಖವನ್ನು ಬೊಗಸೆಗೆ ತೆಗೆದುಕೊಂಡು ಕಣ್ಣನ್ನು ನೋಡಿದಳು.
ಬೆವರು ಅಂದುಕೊಂಡಿದ್ದಳೇನೋ…,
ಕಣ್ಣೀರು!!!
ಅಲ್ಲಿ ಮಾತುಗಳಿಲ್ಲ! ಮೌನವೇ ಮಹಾಕಾವ್ಯ!
ತುಟಿಗೆ ತುಟಿಯೊತ್ತಿ ಮುಖವನ್ನು ಎದೆಗೊತ್ತಿಕೊಂಡಳು.
*
ಅವಳನ್ನು ನಾನು ತಪ್ಪು ಹೇಳುವುದಿಲ್ಲ…!
ಹೆಣ್ಣಲ್ಲವಾ?
ಅವಳ ಅರಿವಿಲ್ಲದಂತೆ ನನ್ನನ್ನು ಬಂಧಿಸಿಕೊಳ್ಳಲು ಶ್ರಮಿಸುತ್ತಿದ್ದಳು.
ಇಂಗ್ಲೀಷ್ ಪದ ಬಳಸುವುದಾದರೆ…, ಅವಳಿಗೆ ನನ್ನಲ್ಲಿ ಪಾಸೆಸಿವ್‌ನೆಸ್ ಬೆಳೆಯಲಾರಂಬಿಸಿತ್ತು!
ಅವಳ ಸಮಯಕ್ಕೆ ಅನುಗುಣವಾಗಿ ನನ್ನ ಸಮಯವನ್ನು ಹೊಂದಿಸಿದೆ. ಅವಳು ಕರೆದಾಗಲೆಲ್ಲಾ ಅವಳಲ್ಲಿಗೆ ಹೋದೆ. ಕೆಲವೊಮ್ಮೆ ಅವಳು ಹೇಳಿದಾಗ ಹೋಗಲಾಗದಿದ್ದರೆ…, ಅತಿ ಕಠಿಣವಾಗಿ ಬೈಯ್ಯುತ್ತಿದ್ದಳು!
ಆದರೇನು?
ನನ್ನತನವನ್ನು ಕಳೆದುಕೊಳ್ಳಲು ನಾನು ತಯಾರಿರಲಿಲ್ಲ!
ಅವಳ ಗುಲಾಮನಾಗಲು ನಾನೇ ಅಂದುಕೊಂಡರೂ ನನ್ನಿಂದ ಸಾಧ್ಯವಿರಲಿಲ್ಲ!
ಆದರೂ…,
“ಪ್ರಪಂಚದ ಮುಂದೆ ನನ್ನನ್ನು ಒಪ್ಪಿ…, ಗಂಡ ಮಕ್ಕಳನ್ನು ಬಿಟ್ಟು ನನ್ನೊಂದಿಗೆ ಬರುವುದಾದರೆ…, ನಾನು ಪರಿಪೂರ್ಣವಾಗಿ ನಿನ್ನೊಬ್ಬಳವನಾಗಿ ಉಳಿಯುತ್ತೇನೆ!” ಅಂದಿದ್ದೆ!
ಅದಕ್ಕೆ ಅವಳು ಹೇಳಿದ ಮಾತು…,
“ನಾನು ಬರುವುದಿಲ್ಲ ಅನ್ನುವ ಗ್ಯಾರಂಟಿಯಲ್ಲಿ ಈ ಮಾತು ಹೇಳುತ್ತಿದ್ದೀಯೇ ಹೊರತು ನನ್ನ ಮೇಲಿನ ಪ್ರೀತಿಯಿಂದಲ್ಲ!”
ನಾನೇನೂ ಮಾತನಾಡಿರಲಿಲ್ಲ. ಆದರೆ ಉರಿಯುತ್ತಿರುವ ಬೆಂಕಿಗೆ ಮತ್ತುಷ್ಟು ತುಪ್ಪ ಸುರಿಯುವಂತೆ ನಿನ್ನ ಪ್ರವೇಶವಾಗಿತ್ತು- ಮಲ್ಲಿಗೆಯ ಪ್ರವೇಶವಾಗಿತ್ತು!
*
“ಅಂದರೆ ಅವರು ನಿನ್ನಿಂದ ದೂರ ಹೋಗೋಕೆ ಕಾರಣ ನಾನಾ?” ಎಂದಳು ಮಲ್ಲಿಗೆ.
“ಇಲ್ಲವೇ…! ಅದನ್ನು ಒಪ್ಪಲಾಗುವುದಿಲ್ಲ…! ಅವರೊಳಗಿನ ಅಭದ್ರತೆಗೆ ನೀನೊಂದು ನೆಪ! ಎಲ್ಲಿ ಅವರಿಂದ ದೂರ ಹೋಗುತ್ತೇನೋ ಅನ್ನುವ ಹೆದರಿಕೆ- ಸಂಶಯ!” ಎಂದೆ.
“ಅವರನ್ನು ಪರಿಚಯವಾಗುವುದಕ್ಕಿಂತ ಮುಂಚೆಯೇ ನಿನಗೆ ಬೇರೆಬೇರೆ ಹೆಣ್ಣುಗಳೊಂದಿಗೆ ರಿಲೇಷನ್ ಇತ್ತಲ್ವಾ? ಮತ್ತೆ ನಾನೇ ಯಾಕೆ ನೆಪವಾದೆ?”
“ಯಾಕೆಂದರೆ…!” ಎಂದು ನಿಲ್ಲಿಸಿ ಅವಳ ಕಣ್ಣನ್ನೇ ದಿಟ್ಟಿಸಿ ನೋಡಿ ಹೇಳಿದೆ.
“ನೀನು ಅವರಿಗಿಂತ ಚೆನ್ನಾಗಿ ಬರೆಯುತ್ತೀಯ! ನಿನ್ನ ಬರಹಗಳಿಗೆ ನಾನು ಸ್ಪಂದಿಸುತ್ತೇನೆ- ಅತಿ ಆತ್ಮೀಯತೆಯಿಂದ!”
*
“ಪ್ಲೀಸ್ ಭ್ರಮರ! ಅವಳೊಬ್ಬಳೊಂದಿಗಿನ ಒಡನಾಟ ಬಿಡು! ಅವಳು ನನ್ನಿಂದ ನಿನ್ನನ್ನು ಪರಿಪೂರ್ಣವಾಗಿ ದೂರ ಮಾಡುತ್ತಾಳೆ!” ಎಂದಳು ಚೆಂಬಕಂ.
“ನೀನು ನನ್ನನ್ನು ಎಷ್ಟು ಜನರಿಂದ ದೂರ ಮಾಡಿದ್ದೀಯೇ?” ಎಂದೆ.
ಒಂದುಕ್ಷಣ ಮೌನ!
“ನಿನ್ನಿಂದಲೇ ಅದು ಸಾಧ್ಯವಾಗದಿರುವಾಗ ಅವಳಿಂದ ಸಾಧ್ಯ ಎಂದು ಹೇಗೆ ಹೇಳ್ತೀಯ? ಅದರಲ್ಲೂ ನಿನ್ನಿಂದ ದೂರಮಾಡಲು…?”
“ಅವಳ ಹೆಸರೇ ನನಗೆ ಅಸಹ್ಯ ಅನ್ನುವಾಗ…, ನೀನು ಅವಳ ಹಿಂದೆಯೇ ಹೋಗುವುದು ಸಹಿಸಲಾಗುತ್ತಿಲ್ಲವೋ!” ಎಂದಳು.
“ನಾನು ಯಾವ ಕಾರಣಕ್ಕೂ ಯಾರೊಬ್ಬರ ಹಿಂದೆಯೂ ಹೋಗುವವನಲ್ಲ! ಹೋಗುವುದೂ ಇಲ್ಲ! ಅವಳ ವಿಷಯವನ್ನು ನಾನೇನೂ ನಿನ್ನಿಂದ ಮುಚ್ಚಿಟ್ಟಿಲ್ಲ! ಚಂದ ಬರೆಯುತ್ತಾಳೆ ಹುಡುಗಿ! ಅವಳ ಪರ್ಸನಲ್ ಬದುಕು ನರಕ! ಅವಳಿಗೆ ನನ್ನ ಅಗತ್ಯವಿದೆ! ಇರುತ್ತೇನೆ! ಆದರೆ ಅದಕ್ಕೂ ನಿನಗೂ ಯಾವುದೇ ಸಂಬಂಧವಿಲ್ಲ! ನಾನು ಅವಳ ಹಿಂದೆ ಹೋಗುತ್ತಿದ್ದೇನೆ, ಅವಳು ನಿನ್ನಿಂದ ನನ್ನ ದೂರ ಮಾಡುತ್ತಾಳೆ ಅನ್ನುವುದೆಲ್ಲಾ ನಿನ್ನ ಭ್ರಮೆಯೇ…! ನಿನ್ನೊಳಗಿನ ಅಭದ್ರೆತೆ…! ನಿಜ ಹೇಳಬೇಕೆಂದರೆ ಅದು ನೀನು ಈ ಭ್ರಮರನಿಗೆ ಮಾಡುತ್ತಿರುವ ಅವಮಾನ! ಅವನಮೇಲೆ ನಂಬಿಕೆಯಿದ್ದಿದ್ದರೆ ನೀನು ಹೀಗೆಲ್ಲಾ ಆಡುತ್ತಿರಲಿಲ್ಲ!” ಎಂದೆ.
ಅವಳೇನೂ ಮಾತನಾಡಲಿಲ್ಲ!
ಪಾಪ…, ಎಷ್ಟೇ ಪ್ರಯತ್ನಿಸಿದರೂ ಅವಳಿಗೆ ನನ್ನೊಂದಿಗೆ ಮುಂಚಿನಂತೆ ಒಡನಾಡಲಾಗಲಿಲ್ಲ.
ಇಲ್ಲಿ ನಾನು ನಿಸ್ಸಹಾಯಕ. ಅವಳು ಪರಿಚಯವಾಗುವಾಗ ಹೇಗಿದ್ದೆನೋ ಈಗಲೂ ಹಾಗೆಯೇ ಇದ್ದೇನೆ! ಅದೇ ಅವಳಿಗೆ ಸಮಸ್ಯೆಯಾಗಿದೆ! ಪರಿಹಾರವಿಲ್ಲದ ಸಮಸ್ಯೆ!!!
ಅವಳು ನನ್ನನ್ನು ಬಂಧಿಸಲು ಪ್ರಯತ್ನಿಸುತ್ತಿದ್ದಾಳೆ.
ನನ್ನ ಬಂಧನಕ್ಕೆ ಒಳಗಾಗಲು ಅವಳು ತಯಾರಿದ್ದಾಳ?
ಇಲ್ಲ!
ಈಗ ಇರುವಂತೆಯೇ ಇರಬೇಕು- ಆದರೆ ಅವಳೊಬ್ಬಳವನಾಗಿರಬೇಕು!!
ಹಾಗೆ…,
ದೂರವಾದೆವು!!!
*
ಗಾಢ ಮೌನದಲ್ಲಿದ್ದ ಮಲ್ಲಿಗೆ ನಿಟ್ಟುಸಿರೊಂದನ್ನು ಬಿಟ್ಟು…,
“ಬೇರೆ ಏನಾದರೂ ಕಾರಣವಿರಬಹುದಾ?” ಎಂದಳು.
“ಗೊತ್ತಿಲ್ಲವೇ…! ನನಗನ್ನಿಸುವುದು…, ಅವರಿಗೆ ನನ್ನ ಅಗತ್ಯ ಸೆಕ್ಸ್‌ಗೆ ಮಾತ್ರ ಸೀಮಿತವಾಗಿತ್ತೇನೋ ಎಂದು! ಅಥವಾ ಅವರು ಸಿಕ್ಕಿದ ಮೇಲೆಯೂ ನಾನು ಬೇರೆ ಹೆಣ್ಣಿನೊಂದಿಗೆ ಸೇರುವುದು ಅವರಿಗೆ ಅರಗಿಸಿಕೊಳ್ಳಲಾಗಲಿಲ್ಲವೇನೋ? ಅಥವಾ ಅವರನ್ನು ತೃಪ್ತಿಪಡಿಸುವ ನಾನು- ಅವರನ್ನು ಮಾತ್ರ ತೃಪ್ತಿಪಡಿಸಬೇಕು ಅಂದುಕೊಂಡರಾ ಅಂತ…? ಈಗ ಅನ್ನಿಸುವುದು…, ಕೆಲವೊಮ್ಮೆ ಅವರು ಕರೆದಾಗ ಹೋಗಲು ಸಾಧ್ಯವಾಗಿರಲಿಲ್ಲ! ಅದು ಬೇರೆ ಹೆಣ್ಣಿನ ಕಾರಣಕ್ಕೆ ಅಂದುಕೊಂಡಿರುತ್ತಾರ? ಅವರು ನನಗೆ ಒಂದು ಆಪ್ಷನ್ ಅನ್ನಿಸಿರುತ್ತದ? ಆಪ್ಷನ್ ಅನ್ನಿಸಬೇಕಾದರೆ ಮುಖ್ಯವಾಗಿ ನನಗೆ ಅವರೊಂದಿಗಿನ ಸಂಬಂಧದ ಕಾರಣ ಸೆಕ್ಸ್ ಆಗಿರಬೇಕು! ಆದರೆ…, ಅವರೊಂದಿಗೆ ಸೆಕ್ಸ್ ಅನ್ನುವುದು ನನಗೆ ಇಂಪಾರ್ಟೆಂಟ್ ಆಗಿರಲೇ ಇಲ್ಲ! ಅದು ಅದಾಗಿಯೇ ಘಟಿಸಿದ ಪುಣ್ಯ! ಸೆಕ್ಸ್‌ಅನ್ನೂ ಮೀರಿ ನಾನವರೊಂದಿಗೆ ಕನೆಕ್ಟ್ ಆಗಿದ್ದೆ! ಸೆಕ್ಸ್ ಇಲ್ಲದೆಯೂ ನಮ್ಮ ಸಂಬಂಧವನ್ನು ಪರಿಶುದ್ಧವಾಗಿ ಉಳಿಸಿಕೊಳ್ಳಬಹುದಿತ್ತು! ಆದರೆ ಅವರು ಅದರಲ್ಲಿಯೇ ಅವರ ಅಸ್ಮಿತೆಯನ್ನು ಕಂಡುಕೊಂಡಿರಬೇಕು! ಅಥವಾ ಅವರಿಗೆ ನನ್ನ ಅಗತ್ಯ ಮುಗಿದಿರಬೇಕು! ಎರಡನೆಯ ಕಾರಣವೇ ಸರಿ! ಯಾಕೆಂದರೆ…, ಅವರನ್ನು ಪರಿಚಯವಾಗುವುದಕ್ಕಿಂತ ಮುಂಚೆಯೇ ಸೆಕ್ಸ್ ಅನ್ನುವುದು ನನ್ನ ಬದುಕಿನಲ್ಲಿ ಅತಿ ಸಾಮಾನ್ಯವಾದ ವಿಷಯವಾಗಿತ್ತು! ಅದು ಅವರು ಸಿಕ್ಕ ನಂತರವೂ…, ಈಗಲೂ…, ಹಾಗೆಯೇ ಇದೆ!” ಎಂದೆ.
ಮತ್ತೊಂದು ನಿಟ್ಟುಸಿರು ಬಿಟ್ಟು…,
“ಅದು ಬಿಡು…, ನೀನು ನನಗೆ ಕಳಂಕಕ್ಕೆ ಉದಾಹರಣೆ ಕೊಡಲು ಈ ಕಥೆಯನ್ನು ಹೇಳಿದೆ! ಆ ಉದಾಹರಣೆ ಈ ಕಥೆಯಲ್ಲಿ ಎಲ್ಲಿದೆಯೋ ಕಥೆಗಾರನೇ!” ಎಂದಳು ಮಲ್ಲಿಗೆ.
*
ಚೆಂಬಕಂ!
ಅವಳ ಸಂತೋಷದ ಹೊರತು ನನಗೇನು ಬೇಕಿತ್ತು?
ಆದರೆ…,
ಸಂತೋಷದ ಹೊರತು ಅನ್ನುವಲ್ಲಿ…, ಸಂಪೂರ್ಣವಾಗಿ ನನ್ನತನವನ್ನು ಕಳೆದುಕೊಳ್ಳುವುದು ಅವಳ ಸಂತೋಷವೆಂದರೆ ಏನು ಮಾಡುವುದು?
ಅವಳು ಇಷ್ಟಪಡುವುದನ್ನು ನಾನೂ ಇಷ್ಟಪಟ್ಟೆ!
ಅವಳ ಸಂಪೂರ್ಣ ಪ್ರಪಂಚದೊಂದಿಗೆ ನಾನವಳನ್ನು ಒಪ್ಪಿಕೊಂಡೆ.
ಅವಳು ನೆಮ್ಮದಿಯಾಗಿರಲು ಏನು ಬೇಕೋ ಅದನ್ನು ಮಾಡಿದೆ.
ಹಲವಾರು ಸಮಸ್ಯೆಗಳಿಗೆ ಪರಿಹಾರವಾದೆ.
ಅವಳ ಮಾನಸಿಕ ತುಮುಲಗಳಿಗೆ ಉತ್ತರವಾದೆ.
ನನ್ನಿಂದ ಅವಳಿಗೆ ಉಪಯೋಗವಲ್ಲದೆ, ಒಳಿತಲ್ಲದೆ ಕೆಡುಕೇನೂ ಆಗಲಿಲ್ಲ.
ಅವಳೊಂದಿಗಿನ ನಾನು ನಿಜವಾಗಿದ್ದೆ.
ಹಾಗಿದ್ದೂ ನಾನು ಅವಳಂದುಕೊಂಡ ರೀತಿಯಲ್ಲಿ ಬದಲಾಗುವುದಿಲ್ಲ ಅನ್ನುವುದು ಅವಳನ್ನು ರೊಚ್ಚಿಗೆಬ್ಬಿಸಿತು!
ಅವಳೇನು ಮಾಡಿದಳು?
ನಿಂದಿಸಿದಳು, ಬೈದಳು, ಅತ್ತಳು, ಕೋಪದಿಂದ ಭರ್ತ್ಸನೆ ಮಾಡಿದಳು!
ಕೊನೆಗೆ ಅವಳ ಶಾಪದ ಮಾತುಗಳನ್ನು ಕೇಳಲಾಗದೆ…,
“ಜೋಪಾನವೇ…! ನಿನ್ನೊಂದಿಗಿನ ನಾನು ನಿಜ! ನಿನ್ನ ಶಾಪಗಳು ನಿನ್ನ ಮಕ್ಕಳನ್ನು ತಾಕಿದರೆ ಕಷ್ಟ!” ಎಂದೆ.
ಅಷ್ಟೇ…!
ನನ್ನನ್ನು ಬ್ಲಾಕ್ ಮಾಡಿದಳು!
ಸಮಸ್ಯೆಯಿಲ್ಲ! ನನ್ನಿಂದ ದೂರ ಹೋಗಬೇಕೆಂದು ತೀರ್ಮಾನ ಮಾಡಿದಮೇಲೆ ಅಷ್ಟಾದರೂ ಮಾಡದಿದ್ದರೆ ಹೇಗೆ?
ಆದರೆ ಅವಳು ಮಾಡಿದ ತಪ್ಪು…,
ಪಬ್ಲಿಕ್ ಪೋಸ್ಟ್‌ಗಳಲ್ಲಿ ಅವಳು ಮತ್ತು ನನ್ನ ಒಡನಾಟವನ್ನು ಆಸ್ವಾದಿಸುತ್ತಿದ್ದ ಗೆಳೆಯರನ್ನೂ ಬ್ಲಾಕ್ ಮಾಡಿದ್ದು!
ಇದರಿಂದ ನಾನು ಉಳಿದವರ ಪ್ರಶ್ನೆಗಳನ್ನು ಎದುರಿಸಬೇಕಾಯಿತು!
“ಅಕ್ಕ ತಮ್ಮಂದಿರಂತೆ ಅಷ್ಟು ಚೆನ್ನಾಗಿದ್ದಿರಲ್ಲಾ? ಏನಾಯಿತು? ನಿಮ್ಮೊಂದಿಗೆ ನಮ್ಮನ್ನೂ ಬ್ಲಾಕ್ ಮಾಡಿದರಲ್ಲಾ? ಯಾಕೆ?”
ಏನು ಹೇಳಲಿ? ನಮ್ಮ ನಡುವೆ ನಡೆದಿದ್ದನ್ನು ಹೇಳಲೇ?
“ಇಲ್ಲಾ…, ಅವರೊಂದಿಗೆ ಬೇಡದ ರೀತಿಯಲ್ಲಿ ನಡೆದುಕೊಂಡೆ- ದೂರ ಮಾಡಿದರು!” ಎಂದೆ.
ಪ್ರಪಂಚದ ದೃಷ್ಟಿಯಲ್ಲಿ ಅವಳು ದಾರ್ಷ್ಟ್ಯದ ಹೆಣ್ಣಲ್ಲವಾ…! ಅವಳಿಗೆ ಕಳಂಕ ತಟ್ಟುವುದು ಬೇಡ!
ಆದರೆ ಅವಳು ಅಲ್ಲಿಗೆ ನಿಲ್ಲಿಸಲಿಲ್ಲ! ನನ್ನೊಂದಿಗೆ ಸೌಮ್ಯವಾಗಿ ಒಡನಾಡುವವರಿಗೆ…,
“ಅವನೊಂದಿಗೆ ಜೋಪಾನ!” ಎಂದು ವಿಷಬೀಜವನ್ನು ಬಿತ್ತಿದಳು!
ಅದೂ ಸಮಸ್ಯೆಯಲ್ಲ! ಸಮಸ್ಯೆಯಾಗಿದ್ದು…,
ಯಾವುದೋ ಸಂದರ್ಭದಲ್ಲಿ ಗಂಡ ಹೆಂಡತಿಯರ ಹೊಂದಾಣಿಕೆಯಬಗ್ಗೆ ಮಾತು ಬಂದಾಗ…,
“ಇದೇ ಕಾರಣ ಅಂತಲ್ಲ…, ಹೆಂಡತಿಗಿರುವ ಉದ್ಯೋಗ ಗಂಡ ಜೊತೆಗಿರಲು ಕಾರಣವಿರಬಹುದು! ಮಕ್ಕಳ ಭವಿಷ್ಯವನ್ನು ನೆನೆದು ಹೆಂಡತಿ ಗಂಡನ ಜೊತೆಗಿರಬಹುದು! ಯಾವುದೋ ಸಮಯದ ಲವ್, ಆಕರ್ಷಣೆಗಳು ಕಾರಣವಾಗಿ ಗಂಡ ಹೆಂಡತಿಯ ಸಂಬಂಧ ಮುರಿದುಬೀಳುವುದು ಅಪರೂಪ! ಇಬ್ಬರಿಗೂ ಬೇರೆ ಬೇರೆ ಕಡೆ ಅಫೇರ್ ಇದ್ದರೆ ಇಬ್ಬರೂ ಪರಸ್ಪರ ಕಣ್ಣು ಮುಚ್ಚಬಹುದು! ಒಬ್ಬರಿಗೆ ಇದ್ದು ಇನ್ನೊಬ್ಬರಿಗೆ ಇಲ್ಲದಿದ್ದರೆ ಸಮಸ್ಯೆ ಜಾಸ್ತಿ…, ಆಗ ಸಮಾಜ ಅನ್ನುವ ಕಾರಣಕ್ಕೆ ಒಟ್ಟಿಗೆ ಬದುಕುತ್ತಿರಬಹುದು…! ಅವರನ್ನು ನೋಡು…, ಅವರನ್ನು ನನಗೆ ಚಿಕ್ಕಂದಿನಿಂದಲೂ ಗೊತ್ತು! ನಲವತ್ತು ವರ್ಷ! ಚಿಕ್ಕವಯಸ್ಸಿನಲ್ಲಿ ಐದಾರು ಹುಡುಗರು ಅವರಿಗೆ ಲೈನ್ ಹಾಕುತ್ತಿದ್ದರು! ಹಾಗೆಂದು ಮದುವೆಯಾದಮೇಲೆ? ಗಂಡನ ಹೊರತು ಅವರಿಗೆ ಬೇರೆ ಪ್ರಪಂಚವಿಲ್ಲ!” ಎಂದಿದ್ದೆ.
ನಾನು ಯಾವ ಹೆಣ್ಣನ್ನು ಉದ್ದೇಶಿಸಿ ಹೇಳಿದ್ದೆನೋ ಆ ಹೆಣ್ಣಿಗೆ ಚೆಂಬಕಂ ಹೇಳಿದ ಮಾತು…,
“ನಿಮ್ಮ ಬಗ್ಗೆ ಭ್ರಮರ ಹೇಳುತ್ತಿದ್ದ…, ನೀವು ಚಿಕ್ಕವಯಸ್ಸಿನಲ್ಲಿ ಐದಾರು ಹುಡುಗರಿಗೆ ಲೈನ್ ಹಾಕುತ್ತಿದ್ದಿರಂತೆ!”
ಇಲ್ಲಿ ಎರಡು ಪಾಯಿಂಟ್ ಇದೆ!
ಒಂದು:- ಭ್ರಮರ ನಿಮ್ಮಬಗ್ಗೆ ಹೇಳುತ್ತಿದ್ದ- ಅನ್ನುವುದು!
ಎರಡು:- ಐದಾರು ಹುಡುಗರು ಅವರಿಗೆ ಲೈನ್ ಹಾಕುತ್ತಿದ್ದರು ಅನ್ನುವುದನ್ನು ಐದಾರು ಹುಡುಗರಿಗೆ ನೀವು ಲೈನ್ ಹಾಕುತ್ತಿದ್ದಿರಂತೆ- ಎಂದು ತಿರುಚಿದ್ದು!!
*
“ಅರ್ಥವಾಯಿತಾ ಕಳಂಕವೆಂದರೇನೆಂದು…?” ಎಂದೆ.
ಗೊಂದಲದಿಂದ ನೋಡಿದಳು ಮಲ್ಲಿಗೆ.
“ಚೆಂಬಕಂ! ಅವರಮೇಲಿನ ನನ್ನ ಭಾವನೆಗೆ ಕಳಂಕ ತಂದರು! ನಾನೂ ಅವರೂ ಅನ್ನುವಲ್ಲಿ ಅವರಮೇಲಿನ ನನ್ನ ಅನುಭೂತಿಗೆ, ನಂಬಿಕೆಗೆ, ನಿಜಾಯಿತಿಗೆ ಕಳಂಕವನ್ನು ಹೇರಿದರು!” ಎಂದೆ.
ಅವಳೇನೂ ಮಾತನಾಡಲಿಲ್ಲ.
“ಬೇರೊಬ್ಬಳೊಂದಿಗೆ ಸೆಕ್ಸ್ ಮಾಡುವುದು ಕಳಂಕವಾದರೆ ಅವರು ನನ್ನನ್ನು ಒಪ್ಪಲೇ ಬಾರದಿತ್ತು! ಒಪ್ಪಿದಮೇಲೆ ಇದ್ದುಬಿಡಬೇಕಿತ್ತು! ಆದರೆ…, ಅವರು ನನ್ನನ್ನು ಕಳಂಕಿತನನ್ನಾಗಿ ಮಾಡಿದರು- ಅವಾಚ್ಯ ಶಬ್ದಗಳಿಂದ ಬೈದು, ಸಾಮಾಜಿಕಜಾಲತಾಣಗಳಲ್ಲಿ ಬೇರೆಯವರು ನನ್ನನ್ನು ಪ್ರಶ್ನೆ ಮಾಡುವಂತೆ ಮಾಡಿ, ಬೇರೆಯವರಲ್ಲಿ ನನ್ನಬಗ್ಗೆ ಕೆಟ್ಟದಾಗಿ ಹೇಳಿ, ನಾನು ಬೇರೆಯವರಬಗ್ಗೆ ಕೆಟ್ಟದಾಗಿ ಹೇಳಿದೆನೆಂದು ಹೇಳಿ… ಕಳಂಕಿತನನ್ನಾಗಿ ಮಾಡಿದರು! ಅವರೊಂದಿಗಿನ ನಾನು ಅವರೇ ರೂಪಿಸಿದ ನಾನು! ಆ ನಾನುವನ್ನು ಇತರರಮುಂದೆ ತೆರೆದಿಡುವುದು ಕಳಂಕ!” ಎಂದೆ.
“ಆದರೂ ಅವರೀಗ ನೆಮ್ಮದಿಯಾಗಿ ಪ್ರಪಂಚದಮುಂದೆ ಚೆನ್ನಾಗಿಯೇ ಇದ್ದಾರಲ್ಲ ದೊರೆಯೇ…!” ಎಂದಳು ಮಲ್ಲಿಗೆ.
“ಅದು…, ಸೆಕ್ಸ್‌ಅನ್ನೂ ಮೀರಿ…, ಅವರಮೇಲಿನ ನನ್ನ ಪ್ರೇಮ ನಿಜ ಅನ್ನುವುದಕ್ಕೆ ಸಾಕ್ಷಿ! ಕಳಂಕ ನನಗಿರಲಿ! ಅವರು ನೆಮ್ಮದಿಯಾಗಿರಲಿ!” ಎಂದೆ.
“ಇದನ್ನು ನೀನು ಯಾರಿಗಾದರೂ ಹೇಳಿದ್ದೀಯ?”
“ಇಲ್ಲವೇ…! ಹೇಳಲು ಶ್ರಮಿಸಿದ್ದೆ! ಆ ಒಂದು ಸಂದರ್ಭ…, ಭ್ರಮರಾಳಿಂದ ನನಗಾದ ನೋವು…, ಆ ನೋವನ್ನು ತೋಡಿಕೊಳ್ಳಲು ಇದ್ದ ಒಬ್ಬಳೇ ಒಬ್ಬಳಿಂದ ನನಗಾದ ನೋವಿನಮುಂದೆ ಏನೇನೂ ಅಲ್ಲವಾಯಿತು! ಆದ್ದರಿಂದ ಹೇಳಲಿಲ್ಲ! ಹೇಳಿದ್ದಿದ್ದರೆ ಇವತ್ತು ಈ ಕಥೆ ಬರೆಯುತ್ತಿರಲಿಲ್ಲ!” ಎಂದೆ.
“ಅದೇ ಅಂದುಕೊಂಡೆ! ಕಥೆಗೆ ವರ್ಜಿನ್ ಅಂತ ಹೆಸರುಕೊಟ್ಟು ಅದಕ್ಕೆ ಸಂಬಂಧವೇ ಇಲ್ಲದಂತೆ ಏನೇನೋ ಹೇಳುತ್ತಿದ್ದೀಯಲ್ಲ ಅಂತ! ಹೇಳು…, ಯಾರವಳು? ಅವಳೇನ ನಿನ್ನ ವರ್ಜಿನ್?” ಎಂದಳು.
*
ನಾನು ಕೆಟ್ಟವನಲ್ಲ! ಯಾರೊಬ್ಬರಿಗೂ ಯಾವೊಂದು ದ್ರೋಹವನ್ನೂ ಮಾಡಿದವನಲ್ಲ! ಒಳಿತು ಮಾಡಲು ಶ್ರಮಿಸಿದ್ದೇನೆ, ಆಗದಿದ್ದಾಗ ನನ್ನಪಾಡಿಗೆ ಇದ್ದುಬಿಟ್ಟಿದ್ದೇನೆ ಹೊರತು ಕೆಡುಕನ್ನಂತೂ ಮಾಡಿದವನಲ್ಲ! ಆದರೂ ಯಾಕೋ ಅನುಕರಣೀಯವಲ್ಲದ ಬದುಕು ನನ್ನದು ಎಂದು ಹೇಳಬೇಕೆಂದೇ ನನಗನ್ನಿಸುವುದು!
ಯಾಕೆ ಹಾಗೆ ಎಂದು ಕೇಳಿದರೆ…, ತಿಳಿಯದು!!
ವರ್ಜಿನ್‌ನೊಂದಿಗೆ ಸೆಕ್ಸ್ ಮಾಡುವುದಿಲ್ಲ ಅನ್ನುವುದು ನನ್ನ ಬದುಕಿನ ನಿಯಮ!
ಒಂದುವೇಳೆ ಅರಿಯದೆಯೋ (ಇದಕ್ಕೆ ಅವಕಾಶವಿಲ್ಲ! ಆದರೂ ಒಂದುವೇಳೆ…!) ಅಥವಾ ಪ್ರೇಮಾಧಿಕ್ಯದಿಂದಲೋ ವರ್ಜಿನ್‌ನೊಂದಿಗೆ ಸೆಕ್ಸ್ ಆದರೆ…, ಅವಳ ಹೊರತು ಬೇರೆ ಹೆಣ್ಣಿನೊಂದಿಗೆ ಸೆಕ್ಸ್ ಮಾಡುವುದಿಲ್ಲ!
ವರ್ಜಿನ್‌ನೊಂದಿಗೆ ಸೆಕ್ಸ್ ಮಾಡುವುದಿಲ್ಲ ಅನ್ನುವುದಕ್ಕೆ…, ನಾನು ಮದುವೆಯೇ ಆಗುವುದಿಲ್ಲ ಅನ್ನುವುದೂ ಒಂದು ಕಾರಣವಿರಬಹುದು…!
ಮದುವೆ ಆಗದಿದ್ದರೂ ವರ್ಜಿನ್‌ನೊಂದಿಗೆ ಸೆಕ್ಸ್ ಆದರೆ…, ಅವಳ ಹೊರತು ಬೇರೆ ಹೆಣ್ಣಿನೊಂದಿಗೆ ಸೆಕ್ಸ್ ಆಗುವುದಿಲ್ಲ- ಇದು ನಿಯಮ!
ನನ್ನ ಬದುಕಿನ ರೀತಿ ಸರಿಯೋ ತಪ್ಪೋ ಅನ್ನುವ ತುಮುಲದಲ್ಲಿದ್ದಾಗ ದೊರೆತವಳು ಅವಳು- ನನ್ನ ನೆರಳು!
ಎಷ್ಟು ಸಿಂಪಲ್ ಆಗಿ ಆವರಿಸಿಕೊಂಡಳು!
ಯಾವ ಕಾಲಕ್ಕೂ ಬಿಟ್ಟು ಹೋಗುವುದಿಲ್ಲ ಅನ್ನುವ ಅವಳು ಕೊಟ್ಟ ಬರವಸೆಯಮೇಲೆ ನನ್ನನ್ನು ನಾನು ಪೂರ್ತಿಯಾಗಿ ತೆರೆದುಕೊಂಡೆ.
ನನ್ನ ಬದುಕಿನಲ್ಲಿ ನಾನು ಮಾಡಿದ ಏಕೈಕ ತಪ್ಪು!
ಅವಳು ಉಳಿದಿದ್ದಿದ್ದರೆ ಅದು ತಪ್ಪು ಅನ್ನಿಸಿಕೊಳ್ಳುತ್ತಿರಲಿಲ್ಲ!
ಪಾಪ…, ಅವಳಿಗೆ ಅದರ ಗಾಢತೆಯ ಅರಿವಿರಲಿಲ್ಲ.
ಸುಲಭದಲ್ಲಿ ನನ್ನನ್ನು ನಾನಾಗಿ ಒಪ್ಪಿಕೊಂಡುಬಿಡಬಹುದು ಅಂದುಕೊಂಡಿದ್ದಳು!
ಅವಳನ್ನು ಮುಂದಿಟ್ಟುಕೊಂಡು ಉಳಿದ ಎಲ್ಲರಿಂದ ಹೊರಬರಬೇಕು ಅನ್ನುವುದು ನನ್ನ ಚಿಂತೆ!
ಯಾಕೆಂದರೆ ಪ್ರತಿಯೊಬ್ಬರೊಂದಿಗೂ ನನ್ನದು ಭಾವನಾತ್ಮಕ ಅನುಬಂಧ! ಒಂದೇಸಾರಿಗೆ ಹೊರಬರಲಾಗುವುದಿಲ್ಲ!
ಪ್ರತಿ ಕ್ಷಣ ಅವಳು ನನ್ನ ಜೊತೆಯಲ್ಲಿದ್ದರೆ…, ಉಳಿದ ಎಲ್ಲರೂ ತಾವಾಗಿಯೇ ದೂರ ಹೋಗುತ್ತಾರೆನ್ನುವುದು ನನಗೆ ಅನುಭವದಿಂದ ಗೊತ್ತಿರುವ ವಿಷಯ!
ಅವಳಿಗೋ…, ನನಗೆ ಯಾರು ಯಾರೊಂದಿಗೆ ಯಾವ ಯಾವ ರೀತಿಯ ರಿಲೇಷನ್ ಇದೆ ಎಂದು ತಿಳಿದುಕೊಳ್ಳುವ ಕಾತರ!!
ನನ್ನನ್ನು ನಾನು, ನನ್ನ ಸೈಕೋ ಮನಸ್ಥಿತಿಯೊಂದಿಗೆ ಪರಿಪೂರ್ಣವಾಗಿ ತೆರೆದುಕೊಂಡೆನಾದರೂ- ನನ್ನ ಬದುಕಿಗೆ ಸಂಬಂಧಪಟ್ಟ ಬೇರೆ ಹೆಣ್ಣಿನ ಬಗ್ಗೆ ತೆರೆದುಕೊಳ್ಳಲು ಸಾಧ್ಯವಾಗಲಿಲ್ಲ!
ಅದಕ್ಕಾಗಿ ನಾನವಳಲ್ಲಿ ಎರಡು ವರ್ಷ ಸಮಯವನ್ನು ಕೇಳಿದೆ.
ಈ ಎರಡು ವರ್ಷದಲ್ಲಿ ಒಂದೋ…, ಬೇರೆ ಎಲ್ಲರಿಂದ ಹೊರಬಂದು ಅವರಬಗ್ಗೆ ಹೇಳುವ ಅಗತ್ಯವೇ ಇಲ್ಲದಂತೆ ಪೂರ್ತಿಯಾಗಿ ಅವಳವನಾಗಿ ಬದಲಾಗುತ್ತೇನೆ!
ಇಲ್ಲವಾ…, ಉಳಿದವರಬಗ್ಗೆ ತೆರೆದ ಮನದಿಂದ ಹೇಳುವಂತವನಾದರೂ ಆಗುತ್ತೇನೆ ಅನ್ನುವುದು ನನ್ನ ತರ್ಕ!
ಅವಳು ಒಪ್ಪಿದಳು!
ಆದರೆ ಹೆಣ್ಣು ಹೃದಯ!
ಕೋಪ, ದುಃಖ ಅನ್ನುವ ಸಣ್ಣ ಸಣ್ಣ ಭಾವನೆಗಳನ್ನು ನಿಯಂತ್ರಿಸಲಾಗದ ಅವಳು…, ಹುಟ್ಟಿನಿಂದ ರೂಪುಗೊಂಡ ನನ್ನ ವ್ಯಕ್ತಿತ್ವವನ್ನು ಕ್ಷಣದಲ್ಲಿ ಬದಲಿಸಲು ನೋಡಿದಳು!
ನನ್ನಮೇಲೆಯೇ ಸ್ಪೈ ವರ್ಕ್ ಮಾಡಿ ನಾನು ಯಾರೊಂದಿಗೆ ಹೇಗೆ ಅನ್ನುವುದು ಕಂಡುಕೊಳ್ಳತೊಡಗಿದಳು.
ನನಗೇನೂ ಅದು ಸಮಸ್ಯೆ ಅನ್ನಿಸಲಿಲ್ಲ. ಯಾವತ್ತಿದ್ದರೂ ತಿಳಿದುಕೊಳ್ಳಬೇಕಾದವಳು ತಿಳಿದುಕೊಳ್ಳಲಿ ಅಂದುಕೊಂಡೆನಾದರೂ…,
“ನೀನು ಮಾಡಿದ್ದು ಇಷ್ಟವಾಗಲಿಲ್ಲ!” ಎಂದು ಮಾತ್ರ ಹೇಳಿದ್ದೆ.
ಹಾಗೆ ಹೇಳಿದ್ದು ಒಂದು ಕಾರಣ…, ಜೊತೆಗೆ…, ಸ್ಪೈವರ್ಕ್ ಮಾಡಿ ಅವಳು ಕಂಡುಕೊಂಡ ವಿಷಯ ಎರಡನೆಯ ಕಾರಣವಾಗಿ…, ನನ್ನಿಂದ ದೂರ ಹೋಗತೊಡಗಿದಳು!
ಮನಸ್ಸಿನಿಂದ ಆ ತೀರ್ಮಾನಕ್ಕೆ ಬಂದಮೇಲೆ ನೆಪಗಳನ್ನು ಹುಡುಕತೊಡಗಿದಳು!
ಹೇಳಿದ್ದೇನೆ…, ಅವಳು ನನ್ನ ನೆರಳು! ನನಗೆ ಅಗತ್ಯವಾದ ಸಮಯದಲ್ಲಿ ಆ ನೆರಳಿನಲ್ಲಿ ವಿಶ್ರಾಂತಿ ಪಡೆದುಕೊಳ್ಳಬಹುದೆನ್ನುವುದು ನನ್ನ ನಂಬಿಕೆ!
ಆದರೆ ಅವಳಿಗೋ…, ಅವಳು ನೆರಳಾದ್ದರಿಂದ ನಾನು ಯಾವಗಲೂ ಆ ನೆರಳಿನಲ್ಲೇ ಇರಬೇಕೆನ್ನುವ ಚಿಂತೆ!
ಎಷ್ಟೇ ದುಃಖದಲ್ಲಿದ್ದರೂ, ಪೆಟ್ಟುಬಿದ್ದರೂ ಆಶ್ರಯವನ್ನು ಹುಡುಕದಿರುವವನು ನಾನು! ಅದೂ ಅಲ್ಲದೆ ಬದುಕಿನಲ್ಲಿ ಆಲ್ರೆಡಿ ಎಲ್ಲಾ ಪೆಟ್ಟುಗಳನ್ನು ತಿಂದು ಇನ್ನು ದುಃಖವಾಗುವುದಿಲ್ಲ ಅನ್ನುವ ಹಂತವನ್ನು ತಲುಪಿರುವವನು.
ಅವಳಿಂದ ನನಗಾಗಲಿದ್ದ ಒಳಿತು ಒಂದೇ…, ಉಳಿದ ಎಲ್ಲರಿಂದ ನಿಧಾನಕ್ಕೆ ಹೊರಬಂದು ಅವಳಲ್ಲಿ ಮುಳುಗುವುದು!
ಆದರೆ ಅವಳಿಗೆ ಅದರ ಅರಿವೇ ಬರಲಿಲ್ಲ…, ಅವಳ ಅಗತ್ಯ ನನಗೇನು ಅನ್ನುವ ಅರಿವು!
ಬೇರೆ ಹೆಣ್ಣಿನೊಂದಿಗೆ ಹೋಲಿಕೆ ಶುರು ಮಾಡಿದಳು!
ನನ್ನ ಇತರೆ ಗೆಳತಿಯರೊಂದಿಗೆ ಅವಳೂ ಒಬ್ಬಳು ಅನ್ನಿಸಿತೇ ಹೊರತು…,
ಅವಳಿಗೆ ಕೊಟ್ಟ ಮಹತ್ವ ಅವಳಿಗೆ ತಿಳಿಯಲೇ ಇಲ್ಲ!
ಪರಿಣಾಮ…, ಅತಿ ನಿಷ್ಠುರವಾಗಿ ದೂರ ಹೋದಳು.
ಜೊತೆಗೆ…, ದೂರ ಹೋಗಲು ಅವಳಿಗೆ ಮತ್ತೊಂದು ಕಾರಣವೂ ದೊರಕಿತು…,
ಅವಳೆಂಬ ನೆರಳಿಗೆ ಯೋಗ್ಯನಾದ ಮತ್ತೊಬ್ಬನ ಪರಿಚಯ!!
ಅವನು ಅವಳಿಗೆ ದೊರಕಿದ ಮೇಲೆ…,
ಭ್ರಮರನೆಂಬ ನಾನು ಅತಿ ಕಠಿಣ ರೀತಿಯಲ್ಲಿ ಏಕಾಂಗಿಯಾದೆ!
ಚೆಂಬಕಂ ದೂರ ಹೋಗುವಾಗ ಆಡಿದ ಮಾತುಗಳು- ಆಡಿದ ಆಟಗಳು, ಅವಳಿಂದಾಗಿ ಕುಟುಂಬದಿಂದಲೂ ಸಮಾಜದಿಂದಲೂ ನಾನನುಭವಿಸಿದ ಸಂಕಟವನ್ನು ಹೇಳಿ- ನನ್ನ ನೆರಳಿನಲ್ಲಿ ಆಶ್ರಯವನ್ನು ಪಡೆಯಬೇಕು ಅಂದುಕೊಳ್ಳುವಾಗ ನೆರಳಾಡಿದ ಮಾತುಗಳು…,
“ಇದಾರಲ್ಲ ಮಲ್ಲಿಗೆ ಸಂಪಿಗೆ ಸೂರ್ಯಕಾಂತಿ ಅಂತ ಬೇಕಾದಷ್ಟು ಜನ? ಹೋಗಿ ಅವರಬಳಿಗೆ!”
ಮಾನಸಿಕವಾಗಿ- ಚೆಂಬಕಂಳಿಂದ ಅರ್ಧ ಸತ್ತಿದ್ದೆ! ಈಗ ಪೂರ್ತಿ!
ನನಗೆ ನಾನಲ್ಲದೆ ಬೇರೆ ಯಾರೂ ಇಲ್ಲ, ಬೇರೆ ಯಾರನ್ನೂ ಅವಲಂಬಿಸಬಾರದು ಅನ್ನುವ…, ಮುಂಚಿನಿಂದಲೂ ಉಳಿಸಿಕೊಂಡು ಬಂದಿದ್ದ ನಂಬಿಕೆಯಿಂದ ಹೊರಬಂದಿದ್ದರ ಪರಿಣಾಮ!!
ನಂತರ ಅವಳಿಗಾಗಿ ನಾನು ಪರಿತಪಿಸಿದಷ್ಟೂ, ಪ್ರಯತ್ನಿಸಿದಷ್ಟೂ ಅದೇ ಕಾರಣವಾಗಿ ಅವಳು ನನ್ನಿಂದ ದೂರ ಹೋದಳು…,
“ಬಿಟ್ಟುಬಿಡಿ ನನ್ನ…, ಯಾಕೆ ಹೀಗೆ ಪ್ರಾಣ ಹಿಂಡ್ತೀರಿ!”
ಅದೇ ಮಾತುಗಳು ಕಿವಿಯೊಳಗೆ!
ಅವಳಾಗಿ ಬಂದಳು, ಅವಳಾಗಿ ಆವರಿಸಿಕೊಂಡಳು, ಅವಳಾಗಿ ಬಿಟ್ಟು ಹೋದಳು!!
ದೇವರ ದಯೆಯೋ….? ಅಥವಾ ದೇವರ ಇಚ್ಛೆಯೋ…?
ಅವಳೊಂದಿಗೆ ಸೆಕ್ಸ್ ಆಗಲಿಲ್ಲ!
ಪ್ರೇಮಾಧಿಕ್ಯದಿಂದ ಅದು ಸಂಭವಿಸುವ ಅವಕಾಶವಿತ್ತು- ಎರಡು ವರ್ಷಗಳು ಕಳೆದಿದ್ದರೆ!
ಒಂದುವೇಳೆ ಅದಕ್ಕೂ ಮುಂಚೆ ಸೆಕ್ಸ್ ಆಗಿ…, ಈ ಪ್ರಸಂಗಗಳು ನಡೆದಿದ್ದರೆ?
*
“ಹಾಗಿದ್ದರೇ…, ಅವಳು ನಿನ್ನನ್ನು ನೀನಾಗಿ ಒಪ್ಪಿ ಅಪ್ಪಿಕೊಂಡಿದ್ದರೆ ನೀನು ನನ್ನಿಂದಲೂ ದೂರ ಹೋಗುತ್ತಿದ್ದೆಯಾ?” ಎಂದಳು ಮಲ್ಲಿಗೆ!
“ಇಲ್ಲವೇ…! ನೀನೊಬ್ಬಳು ಉಳಿಯುತ್ತೀಯ ಎಂದು ನಾನೇ ಅವಳಿಗೆ ಹೇಳಿದ್ದೆ! ಜೊತೆಗೆ ಚೆಂಬಕಂ ಮತ್ತು ನಿನ್ನೊಂದಿಗಿನ ಮಾತುಕತೆಯನ್ನು ಅವಳು ನನ್ನ ಫೋನ್‌ನಲ್ಲಿ ಕದ್ದು ನೋಡಿದ್ದೂ ಒಂದು ಕಾರಣ- ಅವಳು ನನ್ನಿಂದ ದೂರ ಹೋಗಲು!” ಎಂದೆ.
“ಓಹ್! ಅವಳಿಗೆ ನನ್ನಬಗ್ಗೆ ಗೊತ್ತಿತ್ತು?”
“ಹೂಂ! ನಾನು ಹೇಳಿಯೂ…, ಫೋನ್‌ನಲ್ಲಿ ನಮ್ಮ ಚಾಟಿಂಗ್ ನೋಡಿಯೂ!”
“'ನಿನ್ನ' ಚೆಂಬಕಂ, ಮತ್ತು 'ನಿನ್ನ' ನೆರಳು ನಿನ್ನನ್ನು ಬಿಟ್ಟು ಹೋಗಲು ಕಾರಣ- ನಾನು!!” ಎಂದಳು.
“ನೆಪ!” ಎಂದೆ.
“ಯಾವ ಹೆಣ್ಣಿಗೂ ತನ್ನ ಗಂಡು ಇನ್ನೊಬ್ಬಳೊಂದಿಗೆ- ತನ್ನೊಂದಿಗೆ ಇರುವಂತೆಯೇ ಇರುವುದನ್ನು ಒಪ್ಪಿಕೊಳ್ಳಲಾಗುವುದಿಲ್ಲವೋ!” ಎಂದಳು.
“ಗೊತ್ತು…! ಬೇರೆ ಏನನ್ನು ಬೇಕಿದ್ದರೂ ತಡೆದುಕೊಳ್ಳುತ್ತಾರೆ…, ಇದನ್ನು ತಡೆದುಕೊಳ್ಳಲಾಗುವುದಿಲ್ಲ!” ಎಂದೆ
ಅವಳು ನನ್ನ ಕಣ್ಣನ್ನೇ ದಿಟ್ಟಿಸಿ ನೋಡುತ್ತಿದ್ದಳು. ನಕ್ಕು…,
“ನಿನಗೂ…, ಅಲ್ವಾ? ತಪ್ಪು ಮಾಡಿದೆ ಅನ್ನುವ ಕೊರಗು ಬೇಡ! ನೀನು ಮಾಡಿದ್ದು ಸರಿ!” ಎಂದೆ.
“ನಾನೇನು ಮಾಡಿದೆ?” ಎಂದಳು.
“ತುಂಬಾ ದಿನದಿಂದ ಯೋಚಿಸುತ್ತಿದ್ದೆನೆ! ನನ್ನ ಸಮಸ್ಯೆಗಳಿಗೆ ಪರಿಹಾರವೇನು ಎಂದು!! ಈಗ ಅರಿವಿಗೆ ಬರುತ್ತಿದೆ! 'ನನ್ನ' ಸಮಸ್ಯೆಗಳಲ್ಲ! ನಾನೇ ಸಮಸ್ಯೆ ಎಂದು!!! ನಾನೆಂಬ ಸಮಸ್ಯೆಗೆ ನೀ ಮಾಡಿದ್ದೇ ಪರಿಹಾರ!” ಎಂದೆ.
ಗೊಂದಲದಿಂದ ನೋಡಿದಳು. ಮುಗುಳುನಕ್ಕೆ…,
“ನೀನು ಕೊಡುವ ಟೀಯಲ್ಲಿ ಸಕ್ಕರೆಯ ಒಂದು ಕಣ ಹೆಚ್ಚೂಕಡಿಮೆಯಾದರೂ ವ್ಯತ್ಯಾಸ ಕಂಡು ಹಿಡಿಯುವವ! ಪೂರ್ತಿ ಟೀಯ ರುಚಿಯೇ ಬದಲಾದರೆ ತಿಳಿಯುವುದಿಲ್ಲವೇನೇ? ಅವರಿಬ್ಬರು ಮಾನಸಿಕವಾಗಿ ಕೊಂದರು! ನೀನು…!?” ಎಂದೆ.
ಅವಳ ಕಣ್ಣು ತುಂಬಿತು. ನನ್ನನ್ನೇ ದಿಟ್ಟಿಸಿ ನೋಡಿದಳು.
“ಎಷ್ಟು ಹೊತ್ತು ಬೇಕು ಪ್ರಭಾವ ಬೀರಲು?” ಎಂದೆ.
“ಆರು ಗಂಟೆ!” ಎಂದಳು.
“ತುಂಬಾ ರಿಸರ್ಚ್ ಮಾಡಿದ್ದೀಯ!” ಎಂದು ನಕ್ಕು…,
“ಸರಿ ಬಾ…, ನಿನ್ನ ಬಸ್‌ಸ್ಟ್ಯಾಂಡಿಗೆ ಬಿಟ್ಟು ಬರುತ್ತೇನೆ! ಹೆದರಬೇಡ, ನಿನ್ನಬಗ್ಗೆ ಯಾರೊಬ್ಬರಿಗೂ ಸಂಶಯ ಬರದ ಹಾಗೆ ನಾನೇ ನೋಡಿಕೊಳ್ಳುತ್ತೇನೆ!” ಎಂದು ಎದ್ದೆ.
*
ಟಿ-ಯಲ್ಲಿ ವಿಷವಿದೆಯೆಂದು ತಿಳಿದಾಗಲೇ ಕುಡಿಯದೇ ಇರಬಹುದಿತ್ತು! ಕುಡಿದರೂ ವಾಂತಿ ಮಾಡಿಯಾದರೂ ಉಳಿಯುವ ಪ್ರಯತ್ನ ಮಾಡಬಹುದಿತ್ತು! ಆಸ್ಪತ್ರೆಗೆ ಹೋಗಬಹುದಿತ್ತು!
ಆದರೇ…,
ಯಾಕೆ???
ನಾನೊಂದು ನಿರಂತರ ಸಮಸ್ಯೆ!!
ಉದ್ದೇಶವೇನೂ ಇಲ್ಲದೇ ಇದ್ದರೂ ಹಲವರ ಜೀವನದಮೇಲೆ ಪ್ರಭಾವ ಬೀರುವ ಪರಿಹಾರವಿಲ್ಲದ ಸಮಸ್ಯೆ!!
ಪರಿಹಾರವಿದ್ದರೆ…, ಅದು ಇದೇ!!
ಮಲ್ಲಿಗೆಗೆ ಒಂದು ಮಾತು ಹೇಳಬೇಕು ಅನ್ನಿಸಿತ್ತು! ಹೇಳಲಿಲ್ಲ! ಸುಮ್ಮನೆ ಅವಳನ್ನು ರಿಗ್ರೆಟ್‌ಗೆ ತಳ್ಳುವುದು ಬೇಡ!
ಪಾಪ…, ಬದುಕಿಕೊಳ್ಳಲಿ!!!
ಹೆಣ್ಣು…, ಎಷ್ಟು ಸುಲಭದಲ್ಲಿ ಬಿಟ್ಟು ಹೋಗುತ್ತಾಳೆ!
ಬಿಟ್ಟು ಹೋಗುವುದು ಕಷ್ಟವಾದರೆ ಹೋಗದೇ ಇರಬಹುದು!
ಆದರೆ ಅವಳ ಕಾರಣಗಳು ಅವಳದ್ದು!
ನಮ್ಮನ್ನು ನಾವಾಗಿ ಒಪ್ಪಿಕೊಳ್ಳುವುದು ಅನ್ನುವುದು ಇಲ್ಲ- ಆಗುವುದಿಲ್ಲ!
“ಎಷ್ಟು ಕಷ್ಟ ಆಯ್ತು ಗೊತ್ತಾ…, ನನ್ನ ನೋವು ನಿನಗೇನು ಗೊತ್ತು!” ಎಂದು ಹೇಳಿ…, ಹೋಗುತ್ತಾಳೆ!!
ಹೋ-ಗು-ತ್ತಾ-ಳೆ!
ಹೋಗುವುದು ಅನ್ನುವುದು ಗಂಡು ಪ್ರಾಣಿಗೆ ಕೊಡುವ ನೋವೆಷ್ಟು ಅನ್ನುವುದು ಅವಳಿಗೆ ಅರ್ಥವಾಗುವುದಿಲ್ಲ!
ಗಂಡು ಹೋಗುತ್ತಿಲ್ಲ…, ದೂರ ಹೋಗುತ್ತಿರುವುದು ತಾನು ಅನ್ನುವ ಅರಿವೂ ಹೆಣ್ಣಿಗೆ ಬರುವುದೇ ಇಲ್ಲ!
ಕಾರಣವಿದ್ದರೂ ಬಿಟ್ಟು ದೂರ ಹೋಗಬಾರದು ಅನ್ನುತ್ತಾನೆ ಗಂಡು!
ಮಲ್ಲಿಗೆಗೆ ಹೇಳಬೇಕು ಅಂದುಕೊಂಡಿದ್ದೂ ಅದನ್ನೇ…,
“ನೀನು ನನ್ನ ಬದುಕಿನ ನೆಮ್ಮದಿಯಾದೆ, ನಿನ್ನಿಂದಾಗಿ ಸ್ವಲ್ಪವಾದರೂ ಬದುಕುವ ಆಸೆ ಉಳಿದಿದೆ, ನಿನ್ನನ್ನು ನಾನು ಯಾವ ಕಾರಣಕ್ಕೂ ಬಿಡುವುದಿಲ್ಲ, ನೀನು ಬೇಕು ಬಾಳು ಪೂರ್ತಿ, ನೀನೆಂಬ ಭ್ರಮರ ನಾನೆಂಬ ಮಲ್ಲಿಗೆಗೆ ಪ್ರಾಣದಂತೆ- ಅಂದಿದ್ದೆ ನೀನು! ಕೊನೆಗೆ ಮಾಡಿದ್ದೇನು? ಹಾಗೆ ಪ್ರಾಣದಂತೆ ಆಗಿದ್ದಿದ್ದರೆ ನನ್ನೊಂದಿಗೆ ನೀನೂ ಯಾಕೆ ವಿಷ ತೆಗೆದುಕೊಳ್ಳಲಿಲ್ಲ….?
ಹೆಣ್ಣೇ…,
ಸಾವು ನನಗಿರಲಿ- ಬದುಕು ನಿನಗಿರಲಿ,
ನೋವು ನನಗಿರಲಿ- ನಲಿವು ನಿನಗಿರಲಿ,
ಕಳಂಕ ನನಗಿರಲಿ- ಶೀಲ ನಿನಗಿರಲಿ!!
ಬದುಕಿದ್ದರೂ ಸತ್ತರೂ…,
ನೀ ಒಪ್ಪಿದರೂ ಬಿಟ್ಟರೂ…,
ನಿನ್ನಮೇಲಿನ ನನ್ನ ಅನುಭೂತಿ ಸತ್ಯ!
ನಿನ್ನಮೇಲಿನ ನನ್ನ ಪ್ರೇಮ ಸತ್ಯ!”
Comments
Post a Comment