Posts

Showing posts from October, 2025

ಆತ್ಮಾವಲೋಕನ!

ಕೆಲವೊಮ್ಮೆ ನನಗೆ ತುಂಬಾ ಆಶ್ಚರ್ಯವಾಗುತ್ತದೆ! ಈ ಮನುಷ್ಯರು ಯಾಕೆ ಇಷ್ಟೊಂದು ದುಃಖಿತರಾಗಿದ್ದಾರೆ…, ಯಾವಾಗಲೂ ಏನೋ ಕಳೆದುಕೊಂಡವರಂತೆ…, ಪ್ರಪಂಚದಲ್ಲಿರುವ ಅಷ್ಟೂ ದುಃಖ- ವಿಷಾದ ತಮಗೇ ಬಂದಂತೆ…! ಸಂತೋಷದ ಕ್ಷಣಗಳೇ ಹೆಚ್ಚಾಗಿದ್ದರೂ ಅದನ್ನು ಮರೆಮಾಚಿ, 'ವಿಷಾದಿತ' ಅನ್ನಿಸಿಕೊಳ್ಳುವುದು ಏನೋ ದೊಡ್ಡಸ್ತಿಕೆ ಅನ್ನುವಂತೆ…! ಯಾಕೆ? ಹಾಗೆಯೇ…,  ಈ ಪ್ರಪಂಚಕ್ಕೇ ಸಂಬಂಧಪಡದವನಂತೆ ನಾನು ಹೇಗೆ ಇಷ್ಟು ಖುಷಿಯಾಗಿ- ನೆಮ್ಮದಿಯಾಗಿ ಬದುಕಿದ್ದೇನೆ? ತೀರಾ ಆಕಸ್ಮಿಕವಾಗಿ ಇದರಬಗ್ಗೆ ಯೋಚಿಸುವ ಸಂದರ್ಭ ಒದಗಿತು! ಬೆಳಿಗ್ಗೆ ಮತ್ತು ಸಂಜೆ…, ಅಮ್ಮ ಮಗ ಒಟ್ಟಿಗೆ ಕುಳಿತು ಟಿ ಕುಡಿಯುತ್ತೇವೆ. ಆ ಸಮಯ ನಮ್ಮದು…, ಪ್ರಪಂಚದ ಅಷ್ಟೂ ಆಗುಹೋಗುಗಳ ಬಗ್ಗೆ ಮಾತುಕತೆಯಾಗುತ್ತದೆ. ಕೆಲವೊಮ್ಮೆ ಎರಡುಮೂರು ನಿಮಿಷಕ್ಕೆ ನಮ್ಮ ಮಾತುಗಳು ಮುಗಿದು ಇನ್ನು ಮಾತನಾಡಲು ಏನೆಂದರೆ ಏನೂ ಉಳಿದೇ ಇಲ್ಲವೇನೋ ಅನ್ನಿಸುತ್ತದೆ! ಮತ್ತೆ ಕೆಲವೊಮ್ಮೆ…, ಮಾತನಾಡಿದಷ್ಟೂ ಮುಗಿಯುವುದೇ ಇಲ್ಲ! ಹಾಗೇ ಮಾತುಕತೆಯಾಡುತ್ತಿದ್ದಾಗ…, ನನ್ನ ಬದುಕಿನ ನಷ್ಟಗಳ ಬಗ್ಗೆ ಮಾತು ಬಂತು! ಅದು…, ಹುಟ್ಟಿನಿಂದಲೇ ಶುರುವಾಗಿದ್ದು!!! ನಾನು ಹುಟ್ಟಿದ ವರ್ಷ…, ಜನಸಂಖ್ಯಾ ನಿಯಂತ್ರಣಕ್ಕೆ ಅನುಗುಣವಾಗಿ ನಿಯಮವೊಂದು ಚಾಲ್ತಿಗೆ ಬಂತು! ಎರಡಕ್ಕಿಂತ ಹೆಚ್ಚಿನ ಮಕ್ಕಳಾದರೆ…, ಅವರಿಗೆ ಸರಕಾರದ ಅನುಕೂಲತೆಗಳು ಸಿಕ್ಕುವುದಿಲ್ಲ!!! ಇಬ್ಬರು ಅಕ್ಕಂದಿರ ನಂತರ ನಾನು ಮೂರನೇಯವ! ನಿಯಮ ಚಾಲ್ತಿಗೆ ಬಂದಿದ್ದು ನಾನ...

ವಯಸ್ಸು!

ಕನ್ನಡಿಯ ಮುಂದೆ ನಿಂತು ನೋಡಿಕೊಳ್ಳುತ್ತಿದ್ದೆ. ನಲವತ್ತೊಂದು ವರ್ಷಕ್ಕೇ ಅರ್ಧ ಕೂದಲು ಬೆಳ್ಳಗಾಗಿದೆ. ಹಾಗೆಂದು ದೇಹಾರೋಗ್ಯವೋ…, ಕೂದಲಿಗೆ ಬಣ್ಣ ಹಚ್ಚಿದರೆ ವಯಸ್ಸು ಇಪ್ಪತ್ತೈದಕ್ಕೆ ಇಳಿಯುವಷ್ಟು! ಬಣ್ಣ ಹಚ್ಚಿಕೊಳ್ಳುವುದಿಲ್ಲ ಅನ್ನುವ ತೀರ್ಮಾನ! ಒಬ್ಬಂಟಿ ಅಲೆಮಾರಿಗೆ ಯಾಕೆ ವಯಸ್ಸನ್ನು ಇಳಿಸುವ ಇರಾದೆ? ಕನ್ಯಾಕುಮಾರಿಗೆ ಬಂದಿದ್ದೆ. ಪುಸ್ತಕವೊಂದನ್ನು ಬರೆಯಲು..., ಸ್ವಲ್ಪ ದಿನ ಇಲ್ಲಿಯೇ ಇದ್ದು ಇಲ್ಲಿಯ ಜನರಬಗ್ಗೆ, ಇತಿಹಾಸ- ಐತೀಹ್ಯಗಳ ಬಗ್ಗೆ ತಿಳಿದುಕೊಳ್ಳಬೇಕೆಂಬ ಉದ್ದೇಶ. ಒಂದು ವರ್ಷಕ್ಕೆ ಅನ್ನುವ ಕರಾರಿನಲ್ಲಿ ಮನೆಯೊಂದನ್ನು ಬಾಡಿಗೆಗೆ ತೆಗೆದುಕೊಂಡಿದ್ದೆ. ಮೂರುತಿಂಗಳ ಬಾಡಿಗೆ ಅಡ್ವಾನ್ಸ್ ಕೊಟ್ಟಿದ್ದೇನೆ. ಬಂದು ತಿಂಗಳು ಕಳೆದಿದೆಯಷ್ಟೆ. ಇನ್ನು ಇಲ್ಲಿ…, ಈ ಮನೆಯಲ್ಲಿ ಇರಲಾಗುವುದಿಲ್ಲ. ಕಾರಣ ಪಕ್ಕದ ಮನೆ! ಎಷ್ಟು ವಯಸ್ಸಿರಬಹುದು ಆ ಹುಡುಗಿಗೆ? ಹದಿನಾರು? ಹದಿನೇಳು? ಹದಿನೆಂಟು? ಹತ್ತೊಂಬತ್ತು ದಾಟಿರುವುದಿಲ್ಲ ಅಂದುಕೊಳ್ಳುತ್ತೇನೆ. ಪಾಪ! ಯಾರು ಆ ವ್ಯಕ್ತಿ? ಕರುಣೆಯಿಲ್ಲದೆ ಅಷ್ಟೊಂದು ಹೊಡೆದು ಬಡಿದು ಮಾಡುತ್ತಾನಲ್ಲ? ವ್ಯಕ್ತಿಯನ್ನು ನೋಡಿಲ್ಲ. ಬಂದ ಎರಡನೆಯ ದಿನದಿಂದಲೇ ಕೇಳಿಸತೊಡಗಿತ್ತು…, ಬೆನ್ನಿಗೆ ಗುದ್ದುವ ಶಬ್ದ! ಕೆನ್ನೆಗೋ ಎಲ್ಲಿಗೋ ಹೊಡೆಯುವ ಶಬ್ದ! ಎಳೆದಾಡುವ ಶಬ್ದ! ಹುಡುಗಿ ಬಾಯಿಬಿಟ್ಟು ಅಳಲಾಗದೆ…, ಅಳು ತಡೆಯಲಾಗದೆ ಒದ್ದಾಡುವ ಅರಿವು ಮೂಡಿಸುವ ಶಬ್ದ! ಬೈಗುಳವೇನೂ ಇಲ್ಲ…, ಹೂಂ ಹಾಂ ಅನ್ನುವ ಹೂಂಕಾರಗಳು ಮಾತ...

ಮಾತೃ!

ನೀನು ಹಿಂದುವಲ್ಲ ಅಹಿಂದು, ನಿನ್ನನ್ನು ಅವರು ತುಳಿಯುತ್ತಿದ್ದಾರೆ, ಹಿಂದೂಗಳು ಧರ್ಮಾಂಧರು, ಬಹುಸಂಖ್ಯಾತರು ಅಲ್ಪಸಂಖ್ಯಾತರನ್ನು ನಾಶ ಮಾಡುತ್ತಿದ್ದಾರೆ- ಅನ್ನುವಂತಹ ಹೊಲಸು ರಾಜಕೀಯದ ಆಚೆ ಒಂದು ವೈಯುಕ್ತಿಕ ಜೀವನವಿದೆ. ಶಾಂತ ಗಂಭೀರವಾದ ಜೀವನವದು. ಆ ಜೀವನವನ್ನು ಪರಿಪೂರ್ಣವಾಗಿ ಅನುಭವಿಸಿದವನು ನಾನು. ಇತಿಹಾಸವಾದರೂ, ಮನಶ್ಶಾಸ್ತ್ರವಾದರೂ, ತತ್ತ್ವಚಿಂತನೆಯಾದರೂ ನನಗೆ ನನ್ನದೇ ಆದ ಅಧ್ಯಯನವಿದೆ- ದೃಷ್ಟಿಕೋನವಿದೆ. ಅದು ರೂಪುಗೊಂಡಿದ್ದು ಹೇಗೆ? “ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟದ್ದು ಗಾಂಧೀಜಿ, ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟದ್ದು ಗಾಂಧೀಜಿ!” ಎಂದು ಗಾಂಧಿಜಯಂತಿಯ ದಿನ ಮಾಡಬೇಕಾದ ಭಾಷಣವನ್ನು ಬಾಯಿಪಾಟ ಮಾಡುವಾಗ ಅಪ್ಪನ ಪ್ರಶ್ನೆ ತೂರಿಬಂತು…, “ಹಾಗಿದ್ದರೆ ಸಾವಿರಾರು ಸಂಖ್ಯೆಯಲ್ಲಿ ನೇಣುಗಂಬ ಏರಿದವರು, ಜೈಲುವಾಸ ಅನುಭವಿಸಿದವರು, ಪ್ರಾಣತ್ಯಾಗ ಮಾಡಿದವರು ಯಾರು?” ಪ್ರಶ್ನಾರ್ಥಕವಾಗಿ ಅಪ್ಪನನ್ನು ನೋಡಿದ್ದೆ. “ಇಷ್ಟುಮಾತ್ರ ನೆನಪಿರಲಿ…, ಬ್ರಿಟೀಷರನ್ನು ನಡುಗಿಸಿ, ಅಧಿಕಾರಯುತವಾಗಿ ಪಡೆಯಬಹುದಾಗಿದ್ದ ಸ್ವಾತಂತ್ರ್ಯಕ್ಕೂ, ಅವರು ಕೊಟ್ಟ ಭಿಕ್ಷೆ- ಅನ್ನುವಂತಿರುವ ಈ ಸ್ವಾತಂತ್ರ್ರಕ್ಕೂ ಅಜಗಜಾಂತರ ವ್ಯತ್ಯಾಸವಿದೆ! ಆ ವ್ಯತ್ಯಾಸವೇ ನಿಜವಾದ ಇತಿಹಾಸ!” ನನ್ನ ಕಣ್ಣಿನಲ್ಲಿನ ಕುತೂಹಲವನ್ನು ಕಂಡು ಹತ್ತಿರ ಕುಳಿತ ಅಪ್ಪ…, “ಒಂದೇ ದಿನದಲ್ಲಿ ತಿಳಿದುಕೊಳ್ಳುವಂತದ್ದಲ್ಲ ಇತಿಹಾಸ…, ಅದೊಂದು ಮಹಾಸಾಗರ…, ಮೊಘಲರು ಭಾರತಕ್ಕೆ ಬಂದರು ...

ಹೆಣ್ಣು!

“ಹೊಸ ಕಥೆ ಹಾಕಿದ್ದೆ ಓದಿದ್ಯ?” ಎಂದು ಕೇಳಿದೆ. “ಯಾರ್ ಓದ್ತಾರೆ ನಿನ್ ಕಥೆ!” ಎಂದಳು ಪ್ರಾಣದ ಗೆಳತಿ. ಎದೆ ಧಗ್ ಅಂದಿತು! “ಇದೇನೆ ಹೀಗ್‌ಹೇಳ್ತಿದೀಯ? ನನ್ನ ಕಥೆಗಳು ಅತಿ ಹೆಚ್ಚು ಜನರನ್ನ ತಲುಪಬೇಕು ಅನ್ತಿದ್ದವ್ಳು…?” ಎಂದೆ. “ಇನ್ನೇನ್ ಮತ್ತೆ? ಅವಳು ಅವಳು ಅಂತ ಅದೇ ಅವಳ ಕಥೆಗಳು!” ಎಂದಳು. “ಇದೂ ಅದೇ ಕಥೆ ಅನ್ತೀಯ?” ಎಂದೆ. “ಇನ್ನೇನ್‌ಬರ್ದಿರ್ತೀಯ? ಅದೇ ಆಗಿರುತ್ತೆ!” ಎಂದಳು. “ಅವಳು ಅವಳು ಅನ್ನೋ ಎಷ್ಟು ಕಥೆಗಳು ಓದಿದೀಯ?” ಎಂದೆ. “ಹೇ…, ಹೋಗೋ ಸುಮ್ನೆ! ತಲೆ ತಿನ್ಬೇಡ!” ಎಂದಳು. “ಸರಿಬಿಡು…, ಇನ್ಮೇಲೆ ಕಥೇನೆ ಬರೆಯಲ್ಲ!” ಎಂದೆ. “ಪಾಪ ನಿನ್ನ ಹೆಣ್ಣು ಅಭಿಮಾನಿಗಳಿಗೆ ಬೇಜಾರಾಗಲ್ವ? ಆ ಅವಳಿಗೆ ಬೇಜಾರಾಗಲ್ವ? ಓದಿ ಸಪೋರ್ಟ್‌ಮಾಡೋಕೆ ಅದೆಷ್ಟು ಜನ ಇದಾರೆ! ಬೇರೆಯವರ ಪ್ರತಿ ಕಮೆಂಟ್‌ಗೂ ನಿನ್ನ ಕಡೆಯಿಂದ ಉತ್ರ ಕೊಡೋಕೆ ಎಷ್ಟು ಜನ! ನಾನೊಬ್ಳು ಓದಿಲ್ಲ ಅಂದ್ರೆ ನಿನಗೇನೂ ಲಾಸಿಲ್ಲ ಬಿಡು!” ಎಂದಳು. “ಅಂದ್ರೆ…, ಕಥೆ, ಕಥೆಗೆ ಬಂದ ಅಷ್ಟೂ ಕಮೆಂಟ್ ಓದಿದೀಯ ಅಂತ ಆಯ್ತು?” ಎಂದೆ. ಮೂತಿ ತಿರುಗಿಸಿ ಹೋಗಿದ್ದಾಳೆ! ಇನ್ನು ಇವಳಿಗಾಗಿ ಅವಳ ಕಥೆಯನ್ನು ಸಾಕುಮಾಡಿ ಬೇರೊಬ್ಬಳ ಕಥೆ ಹುಡುಕಬೇಕಾಗಿದೆ!