ಹೆಣ್ಣು!


“ಹೊಸ ಕಥೆ ಹಾಕಿದ್ದೆ ಓದಿದ್ಯ?” ಎಂದು ಕೇಳಿದೆ.

“ಯಾರ್ ಓದ್ತಾರೆ ನಿನ್ ಕಥೆ!” ಎಂದಳು ಪ್ರಾಣದ ಗೆಳತಿ.

ಎದೆ ಧಗ್ ಅಂದಿತು!

“ಇದೇನೆ ಹೀಗ್‌ಹೇಳ್ತಿದೀಯ? ನನ್ನ ಕಥೆಗಳು ಅತಿ ಹೆಚ್ಚು ಜನರನ್ನ ತಲುಪಬೇಕು ಅನ್ತಿದ್ದವ್ಳು…?” ಎಂದೆ.

“ಇನ್ನೇನ್ ಮತ್ತೆ? ಅವಳು ಅವಳು ಅಂತ ಅದೇ ಅವಳ ಕಥೆಗಳು!” ಎಂದಳು.

“ಇದೂ ಅದೇ ಕಥೆ ಅನ್ತೀಯ?” ಎಂದೆ.

“ಇನ್ನೇನ್‌ಬರ್ದಿರ್ತೀಯ? ಅದೇ ಆಗಿರುತ್ತೆ!” ಎಂದಳು.

“ಅವಳು ಅವಳು ಅನ್ನೋ ಎಷ್ಟು ಕಥೆಗಳು ಓದಿದೀಯ?” ಎಂದೆ.

“ಹೇ…, ಹೋಗೋ ಸುಮ್ನೆ! ತಲೆ ತಿನ್ಬೇಡ!” ಎಂದಳು.

“ಸರಿಬಿಡು…, ಇನ್ಮೇಲೆ ಕಥೇನೆ ಬರೆಯಲ್ಲ!” ಎಂದೆ.

“ಪಾಪ ನಿನ್ನ ಹೆಣ್ಣು ಅಭಿಮಾನಿಗಳಿಗೆ ಬೇಜಾರಾಗಲ್ವ? ಆ ಅವಳಿಗೆ ಬೇಜಾರಾಗಲ್ವ? ಓದಿ ಸಪೋರ್ಟ್‌ಮಾಡೋಕೆ ಅದೆಷ್ಟು ಜನ ಇದಾರೆ! ಬೇರೆಯವರ ಪ್ರತಿ ಕಮೆಂಟ್‌ಗೂ ನಿನ್ನ ಕಡೆಯಿಂದ ಉತ್ರ ಕೊಡೋಕೆ ಎಷ್ಟು ಜನ! ನಾನೊಬ್ಳು ಓದಿಲ್ಲ ಅಂದ್ರೆ ನಿನಗೇನೂ ಲಾಸಿಲ್ಲ ಬಿಡು!” ಎಂದಳು.

“ಅಂದ್ರೆ…, ಕಥೆ, ಕಥೆಗೆ ಬಂದ ಅಷ್ಟೂ ಕಮೆಂಟ್ ಓದಿದೀಯ ಅಂತ ಆಯ್ತು?” ಎಂದೆ.

ಮೂತಿ ತಿರುಗಿಸಿ ಹೋಗಿದ್ದಾಳೆ!

ಇನ್ನು ಇವಳಿಗಾಗಿ ಅವಳ ಕಥೆಯನ್ನು ಸಾಕುಮಾಡಿ ಬೇರೊಬ್ಬಳ ಕಥೆ ಹುಡುಕಬೇಕಾಗಿದೆ!

Comments

Popular posts from this blog

ಹಾರರ್ ಥೀಂ

ಕಡಲು ಬೆಟ್ಟ ಮತ್ತು ನಾನು!

ಆಕ್ಷೇಪಣಾ ಪತ್ರ!