ಕನಸು - ಕಥೆ
೧ ಅಪ್ಪ ಮಗ ಆಟವಾಡುತ್ತಿದ್ದಾರೆ ... ಅಪ್ಪನ ಕೈಗೆ ಸಿಗದಂತೆ ಓಡುತ್ತಿದ್ದ ಮಗ ನಿಂತ . ಏನೋ ಸಂಶಯ .. ತಿರುಗಿ ನೋಡಿದ . ಅಪ್ಪ ಇಲ್ಲ ! ದೂರದಲ್ಲಿ ಯಾವುದೋ ಹೆಣ್ಣಿನೊಂದಿಗೆ ಮಾತನಾಡುತ್ತಾ ನಿಂತಿದ್ದಾರೆ . ಮುನಿಸಿನಿಂದ ಪ್ರ - ಪಾ - ತ - ದ ಅಂಚಿಗೆ ಬಂದ . ಅವನಿಗೆ ಅಮ್ಮ ನೆನಪಾದರು . ಅಮ್ಮ ಬದುಕಿದ್ದರೆ ತನ್ನನ್ನು ಹೀಗೆ ಕಡೆಗಣಿಸುತ್ತಿದ್ದರೆ ? ಒಂಟಿಯಾಗಿ ಬಿಡುತ್ತಿದ್ದರೆ ? ಯೋಚನೆಯಲ್ಲಿರುವಾಗ , ಪ್ರಕೃತಿಯಲ್ಲಾಗುತ್ತಿದ್ದ ಬದಲಾವಣೆ ಅವನಿಗೆ ತಿಳಿಯಲಿಲ್ಲ ... ಸಮುದ್ರದ ಮೊರೆತ ! ಮೋಡಗಳೆಲ್ಲಾ ಒಟ್ಟುಗೂಡಿ , ವಾತಾವರಣ ಕಪ್ಪಾಗಿ , ಪರಸ್ಪರ ಸಂಬಂಧವಿಲ್ಲದ ಪ್ರಕೃತಿ ವಿಕೋಪದನಡುವೆ ಒಂಟಿಯಾಗಿ , ಆರ್ತನಾಗಿ ಅವನು ನಿಂತಿರುವಾಗ ... ಆ ಕಡುಕತ್ತಲೆಯ ಗೂಢ ವಾತಾವರಣದಲ್ಲಿ , ಯಾರೋ ತಳ್ಳಿದಂತೆ - ಪ್ರಪಾತದೊಳಕ್ಕೆ ಬಿದ್ದ ! ತಳವಿಲ್ಲದ ಪ್ರಪಾತದೊಳಗೆ ಬೀಳುತ್ತಲೇ ಇರುವಾಗ ಒಂದು ವಿಷಯ ನೆನಪಾಯಿತು .... ಆ ಹುಡುಗ ನಾನೆ !!! ೨ ತಟ್ಟನೆ ಎಚ್ಚರವಾಯಿತು . ಕಣ್ಣು ತೆರೆದೆ ... ಕತ್ತಲು ! ಕಣ್ಣು ತೆರೆದಿದ್ದೇನೆಯೇ , ಇಲ್ಲವೇ ತಿಳಿಯದಷ್ಟು ಅಂಧಕಾರ ! ಕತ್ತಲೆಗೆ ಹೊಂದಿಕೊಳ್ಳಲು - ವಾಸ್ತವದ ಅರಿವಾಗಲು - ಎರಡು ನಿಮಿಷ ಬೇಕಾಯಿತು ... ಎದ್ದು ಕುಳಿತೆ ಮೇಜಿನಮೇಲಿದ್ದ ರೇಡಿಯಂ ಮುಳ್ಳಿನ ಗಡಿಯಾರ ಒಂದು ಗಂಟೆ ತೋರಿಸಿತು - ಮದ್ಯರಾತ್ರಿ ಒಂದುಗಂ...