Posts

ಉಷೆಗೊಂದು ಪತ್ರ

ಉಷಾನಿರುದ್ಧ ! ಒಂದು :- ಉಷೆಗೊಂದು ಪತ್ರ ! * ಉಷೆ ...., ಐ ಲವ್ ಯು ! ನಿನಗೆ ಗೊತ್ತು ನಾನು ನಿನ್ನನ್ನೆಷ್ಟು ಪ್ರೇಮಿಸುತ್ತೇನೆಂದು - ನನಗೂ ಗೊತ್ತು - ನೀನು ನನ್ನನ್ನೆಷ್ಟು ಪ್ರೇಮಿಸುತ್ತಿದ್ದೀಯೆಂದು ! ಈ ಪ್ರೇಮ ಅನ್ನುವುದು ಅನಿರ್ವಚನೀಯ - ಅದ್ಭುತ ! ನಾವು ಪರಸ್ಪರರಿಗಾಗಿ ! ಸಮಾಜ - ಕಟ್ಟುಪ್ಪಾಡುಗಳು - ಕರ್ತವ್ಯಗಳು ಅನ್ನುವುದು ಇಲ್ಲದಿದ್ದರೆ ನಿನ್ನ ಉಡಿಯೊಳಗೆ ಹುದುಗಿಬಿಡುತ್ತಿದ್ದೆ . ಈಗೇನಾಯಿತು ? ತಿಳಿಯದ್ದೇನು ಅಲ್ಲ ! ಪ್ರೇಮ ಒಂದು ಆನಂದ ! ಪ್ರೇಮ ಒಂದು ಸಂತೃಪ್ತಿ ! ಪ್ರೇಮ ಒಂದು ಉನ್ಮಾದ ! ಪ್ರೇಮ ಒಂದು ನಶೆ ! ಹಾಗಿದ್ದೂ ಪ್ರೇಮದಲ್ಲಿ ದುಃಖವಿಲ್ಲ - ಅನ್ನುವ ನಂಬಿಕೆಯವನು ! ಪ್ರೇಮವೇ ಪರಮಪದ ! ಆದರೂ ಉಷೆ - ಎಷ್ಟೇ ಆನಂದದಲ್ಲಿದ್ದರೂ ಪ್ರೇಮದಲ್ಲಿ ದುಃಖವಿಲ್ಲ ಅನ್ನುವ ನಂಬಿಕೆಯವನಾದರೂ - ನಾನು ನೆಮ್ಮದಿ ಕಳೆದುಕೊಂಡಿದ್ದೇನೆ ! ಯಾಕೆ ? ನೀನು ನನ್ನ ಭ್ರಮೆ ! ನೀನು ನನ್ನ ಕಲ್ಪನೆ ! ನೀನು ನನ್ನ ಕನಸು ! ಈ ' ಅವಾಸ್ತವದಿಂದ ' ಹೊರಬಂದಾಗ - ನಾನು ಬೇರೆ !! ಅದೇ ಸಮಸ್ಯೆಯಾಗುತ್ತಿರುವುದು ! ಪ್ರೇಮ ಹೇಗೆ ಅನಿರ್ವಚನೀಯವೋ ಹಾಗೇ ಅವ್ಯಾಹತ ಕೂಡ ! ನನಗೆ ಯಾವ ಸಮಯದಲ್ಲಿ ಯಾರಮೇಲೆ ಪ್ರೇಮ ಉಂಟಾಗುತ್ತದೋ ನನಗೇ ತಿಳಿಯುವುದಿಲ್ಲ ! ಗೊತ್ತಲ್ಲವೇ .... ಅನಿರುದ್ಧ ನಾನು - ಕಾಮನ ಮಗ ! ಕೃಷ್ಣನ ಮೊಮ್ಮಗ ! ಎಷ್ಟೇ ನಿನ್ನಲ್ಲಿ - ಭ್ರಮೆಯಲ್ಲಿ ಮುಳುಗಬೇಕೆಂದುಕೊಂಡರೂ .... ನಿನ...

ಸನಾತನಧರ್ಮ

ಸನಾತನಧರ್ಮ ! ೧ ಎಷ್ಟೇ ಮನಃಶಕ್ತಿಯಿದ್ದರೂ - ಮನಸ್ಸಿನಮೇಲೆ ನಿಯಂತ್ರಣವಿದ್ದರೂ ಕೆಲವೊಮ್ಮೆ ಕೆಲವು ತೀರ್ಮಾನಗಳನ್ನು ತೆಗೆದುಕೊಳ್ಳುವುದು ಕಷ್ಟ ! ಆಗ ದೇವರು ಪ್ರವೇಶಿಸುತ್ತಾರೆ ! ಸಂದರ್ಭಗಳನ್ನು ಸೃಷ್ಟಿಸುತ್ತಾರೆ ! ತೀರ್ಮಾನಗಳು ತೆಗೆದುಕೊಳ್ಳುವ ಪ್ರಮೇಯವೇ ಇಲ್ಲದೆ - ಅದು ಹೀಗೆಯೇ ಆಗಬೇಕೆನ್ನುವ ಒತ್ತಡವನ್ನು ಹೇರುತ್ತಾರೆ ! ಆಗಲೂ ನಾವು ಅದನ್ನು ಅರಿಯದೆ ವಿರುದ್ಧವಾಗಿ ಪ್ರವರ್ತಿಸಿದರೆ ಹೊಣೆಯಾರು ? ಹಾಗೊಂದು ಘಟ್ಟಕ್ಕೆ ಪ್ರವೇಶಿಸುತ್ತಿದ್ದೇನೆ ! ತೀರ್ಮಾನ ತೆಗೆದುಕೊಳ್ಳಲು ಕಷ್ಟವಾಗುತ್ತಿರುವುದು - ಹೆಣ್ಣಿನ ವಿಷಯದಲ್ಲಿ ! ೨ “ ಸನಾತನಧರ್ಮಕ್ಕಿಂತ ಇತರೆ ಮತಗಳು ಈ ಮಟ್ಟಿಗೆ ಬೆಳೆಯಲು ಕಾರಣವೇನು ?” ಎಂದ ತಮ್ಮ . “ ಸನಾತನಧರ್ಮದ ಆಚರಣೆ ಕಷ್ಟ !” ಎಂದೆ . “ ಅರ್ಥವಾಗಲಿಲ್ಲ !” ಎಂದ . ೩ ಈ ಪ್ರಪಂಚದಲ್ಲಿಯೇ ಅತಿ ಕಠಿಣವಾದದ್ದು ಅಥವಾ ಅತಿ ಪ್ರಭಲವಾದದ್ದು - ಮನುಷ್ಯ ಮನಸ್ಸು ! ಈ ಪ್ರಪಂಚದಲ್ಲಿಯೇ ಅತಿ ಮೃದುವಾದದ್ದು ಅಥವಾ ಅತಿ ದುರ್ಭಲವಾದದ್ದು - ಮನುಷ್ಯ ಮನಸ್ಸೇ ! ಎಷ್ಟು ನಿಜ ! ನನಗಿದು ಬೇಕು ! ಈ ಬೇಕು ನನಗೆ " ಈ ಮತದಲ್ಲಿ " ಸಿಗುತ್ತದೆ ! ಆದ್ದರಿಂದ " ಈ ಮತ " ನನಗೆ ಇಷ್ಟ - ಇದು ದುರ್ಭಲ ಮನಸ್ಸಿನ ಸಂಕೇತ ! ಎಲ್ಲರಿಗೂ ಬೇಕು !! ನನಗಿದು ಬೇಕು ! ಆದರೆ ಬೇಕು ಅಂದುಕೊಳ್ಳಬೇಡ ! ಬೇಕು ಅನ್ನುವುದರಿಂದ ಮನಸ್ಸನ್ನು ನಿಯಂತ್ರಿಸು ಅನ್ನುತ್ತದೆ ಸನಾತನಧರ್ಮ - ಇದು ...