ಸನಾತನಧರ್ಮ
ಸನಾತನಧರ್ಮ!
೧
ಎಷ್ಟೇ ಮನಃಶಕ್ತಿಯಿದ್ದರೂ- ಮನಸ್ಸಿನಮೇಲೆ ನಿಯಂತ್ರಣವಿದ್ದರೂ ಕೆಲವೊಮ್ಮೆ ಕೆಲವು ತೀರ್ಮಾನಗಳನ್ನು ತೆಗೆದುಕೊಳ್ಳುವುದು ಕಷ್ಟ! ಆಗ ದೇವರು ಪ್ರವೇಶಿಸುತ್ತಾರೆ! ಸಂದರ್ಭಗಳನ್ನು ಸೃಷ್ಟಿಸುತ್ತಾರೆ! ತೀರ್ಮಾನಗಳು ತೆಗೆದುಕೊಳ್ಳುವ ಪ್ರಮೇಯವೇ ಇಲ್ಲದೆ- ಅದು ಹೀಗೆಯೇ ಆಗಬೇಕೆನ್ನುವ ಒತ್ತಡವನ್ನು ಹೇರುತ್ತಾರೆ!
ಆಗಲೂ ನಾವು ಅದನ್ನು ಅರಿಯದೆ ವಿರುದ್ಧವಾಗಿ ಪ್ರವರ್ತಿಸಿದರೆ ಹೊಣೆಯಾರು?
ಹಾಗೊಂದು ಘಟ್ಟಕ್ಕೆ ಪ್ರವೇಶಿಸುತ್ತಿದ್ದೇನೆ!
ತೀರ್ಮಾನ ತೆಗೆದುಕೊಳ್ಳಲು ಕಷ್ಟವಾಗುತ್ತಿರುವುದು- ಹೆಣ್ಣಿನ ವಿಷಯದಲ್ಲಿ!
೨
“ಸನಾತನಧರ್ಮಕ್ಕಿಂತ ಇತರೆ ಮತಗಳು ಈ ಮಟ್ಟಿಗೆ ಬೆಳೆಯಲು ಕಾರಣವೇನು?” ಎಂದ ತಮ್ಮ.
“ಸನಾತನಧರ್ಮದ ಆಚರಣೆ ಕಷ್ಟ!” ಎಂದೆ.
“ಅರ್ಥವಾಗಲಿಲ್ಲ!” ಎಂದ.
೩
ಈ ಪ್ರಪಂಚದಲ್ಲಿಯೇ ಅತಿ ಕಠಿಣವಾದದ್ದು ಅಥವಾ ಅತಿ ಪ್ರಭಲವಾದದ್ದು- ಮನುಷ್ಯ ಮನಸ್ಸು!
ಈ ಪ್ರಪಂಚದಲ್ಲಿಯೇ ಅತಿ ಮೃದುವಾದದ್ದು ಅಥವಾ ಅತಿ ದುರ್ಭಲವಾದದ್ದು- ಮನುಷ್ಯ ಮನಸ್ಸೇ!
ಎಷ್ಟು ನಿಜ!
ನನಗಿದು ಬೇಕು! ಈ ಬೇಕು ನನಗೆ "ಈ ಮತದಲ್ಲಿ" ಸಿಗುತ್ತದೆ! ಆದ್ದರಿಂದ "ಈ ಮತ" ನನಗೆ ಇಷ್ಟ- ಇದು ದುರ್ಭಲ ಮನಸ್ಸಿನ ಸಂಕೇತ! ಎಲ್ಲರಿಗೂ ಬೇಕು!!
ನನಗಿದು ಬೇಕು! ಆದರೆ ಬೇಕು ಅಂದುಕೊಳ್ಳಬೇಡ! ಬೇಕು ಅನ್ನುವುದರಿಂದ ಮನಸ್ಸನ್ನು ನಿಯಂತ್ರಿಸು ಅನ್ನುತ್ತದೆ ಸನಾತನಧರ್ಮ- ಇದು ಪ್ರಭಲ ಮನಸ್ಸಿನ ಸಂಕೇತ! ಯಾರಿಗೆ ಬೇಕು!!
೪
“ನೀನು- ಕರ್ತವ್ಯಕ್ಕಿಂತ ಹೆಚ್ಚಲ್ಲ ನನಗೆ!” ಎಂದೆ.
“ಬರಿ ಕರ್ತವ್ಯವೋ...?” ಎಂದಳು.
ಸಮಸ್ಯೆ ಅರ್ಥವಾಯಿತು! ಮತ್ತೊಬ್ಬಳ ಪ್ರವೇಶವಾಗಿದೆ! ಅದು ಸಮಸ್ಯೆ!
ಪ್ರೇಮವೊಂದು ಮಹಾಸಾಗರ!
ಅದು ನನ್ನೊಬ್ಬಳಿಗೇ ಬೇಕೆಂದುಕೊಳ್ಳುತ್ತಾಳೆ ಹೆಣ್ಣು!
ಅವಳನ್ನು ನಂಬಿಸಲು- ನೀನೊಬ್ಬಳೇ.... ಅನ್ನಲೆ?
ಅನ್ನದಿದ್ದರೆ ಬಿಟ್ಟು ಹೋಗುತ್ತಾಳೆ....!
ಬರುವ ಪ್ರತಿ ಹೆಣ್ಣಿನಬಗ್ಗೆ ವಿವರಿಸಬೇಕು- ಅವಳಿಗಿಂತ ನೀನು ಹೆಚ್ಚು ಅನ್ನಬೇಕು... ನೆಮ್ಮದಿ ಎಲ್ಲಿ?
ಅರ್ಥ ಮಾಡಿಕೊಂಡರೆ ಮಾಡಿಕೊಳ್ಳಲಿ- ಬಿಟ್ಟರೆ ಬಿಡಲಿ- ಅಂದುಕೊಳ್ಳಬಹುದು!! ಆದರೆ... ಆದರೆ... ಹೆಣ್ಣು ಹೃದಯ! ಹೆಣ್ಣಿನ ಪ್ರೇಮ! ಕಳೆದುಕೊಳ್ಳುವುದೂ ಇಷ್ಟವಿಲ್ಲ.... ಏನು ಮಾಡಲಿ?
ನನ್ನನ್ನು ನನ್ನಂತೆಯೇ ಸ್ವೀಕರಿಸಲು ಹೆಣ್ಣು ತಯಾರಿಲ್ಲ! ಅವಳೊಬ್ಬಳಿಗಾಗಿ ಬದಲಾಗಲು ನಾನೂ ತಯಾರಿಲ್ಲ!
ಮತ್ತೆ ಹೇಗೆ?!
೫
ನಮಸ್ತೇ....! ನಾನು ಪ್ರೇಮಿ! ನನ್ನ ಸಮಸ್ಯೆ- ಕಾಮ!
ಇದೊಂದು ನಿರಂತರತೆ!
ಸಮಸ್ಯೆಗಳು- ಪರಿಹಾರ- ಹುಡುಕಾಟ....
ಯಾವ ಕಾಲಕ್ಕೂ ನಿಲ್ಲದ ಪ್ರಕ್ರಿಯೆ!
ಎಲ್ಲೆಲ್ಲಿಯದೋ ಸಮಸ್ಯೆಗಳಿಗೆ ಇನ್ನೆಲ್ಲೆಲ್ಲಿಯೋ ಪರಿಹಾರಗಳು!
ಪರಿಹಾರವಿಲ್ಲದ ಸಮಸ್ಯೆಗಳು- ಸಮಸ್ಯೆಗಳಲ್ಲ!!
ಇರಲಿ- ವಿಷಯಕ್ಕೆ ಬರುತ್ತೇನೆ...
ಅದೇನು ವಿಚಿತ್ರವೋ.... ಪ್ರೇಮವಿಲ್ಲದೆ ನಾನಿಲ್ಲ!
ಆನಂದದ ಹೊರತು ಬೇರೇನೂ ಪ್ರೇಮದಲ್ಲಿಲ್ಲ ಅನ್ನುವ ನಂಬಿಕೆಯವನು!
ಹಾಗಿದ್ದಮೇಲೆ.... ಯಾವುದೇ ನಿರೀಕ್ಷೆಯಿಲ್ಲದೆ ಮನದಾಳದಿಂದ ಪ್ರೇಮಿಸಬಲ್ಲ ನಾನು....,
ಆನಂದದಲ್ಲಿದ್ದೇನೆಯೇ...?
ಆತ್ಮಸಾಕ್ಷಿಗನುಗುಣವಾಗಿ ಉತ್ತರವನ್ನು ಕೊಡಲಾರೆ!
ಯಾಕೆ?
ಯಾಕೆಂದರೆ ನನ್ನ ಭಾವನೆ ಮತ್ತೊಬ್ಬರನ್ನು ಅವಲಂಬಿಸಿದೆ! ನಾನು ಬಂಧನಕ್ಕೊಳಪಟ್ಟಿದ್ದೇನೆ!!
ಕೇವಲ ಹೆಣ್ಣಿನಲ್ಲಿ- ಒಬ್ಬಳಲ್ಲ- ನನ್ನ ಪ್ರೇಮ ಕೇಂದ್ರೀಕರಿಸುತ್ತಿದೆ- ಸಮಸ್ಯೆ ಇದಲ್ಲ!
ಸಮಸ್ಯೆ.... ಇವನ ಪ್ರೇಮ ನನ್ನೊಬ್ಬಳಲ್ಲಿ ಮಾತ್ರ ಅಲ್ಲ ಅನ್ನುವ ಹೆಣ್ಣಿನ ಅರಿವು!
ಅವಳೊಂದಿಗೆ ನಾನು ಹೇಗೆ ಅನ್ನುವುದು ಅವಳಿಗೆ ಅನಗತ್ಯ!
ಅವಳ ಸುಖ- ಸಂತೋಷ- ನೆಮ್ಮದಿಗಳು ಅಡಗಿರುವುದು... ಅವಳೊಂದಿಗೆ ಮಾತ್ರ ನಾನು ಹಾಗೆ ಇರಬೇಕು ಅನ್ನುವುದರಲ್ಲಿ!
“ನಿನಗೆ ಯಾವ ಕೊರತೆಯೂ ಇಲ್ಲದೆ ಜೀವನಪೂರ್ತಿ ನಿನ್ನೊಂದಿಗಿರುತ್ತೇನೆ- ನಿನ್ನನ್ನು ಸಂರಕ್ಷಿಸುತ್ತೇನೆ!” ಎಂದೆ.
“ನಿನ್ನನ್ನು ನಂಬಲಾಗುವುದಿಲ್ಲ!” ಎಂದಳು.
ಆಶ್ಚರ್ಯವಾಯಿತು... ನಾನು ಅವಳನ್ನು ಸಂರಕ್ಷಿಸುವುದಿಲ್ಲ- ಸಂರಕ್ಷಿಸುವ ಅಗತ್ಯವಿಲ್ಲ, ಹೆಣ್ಣು ಸಬಲೆ... ಆದರೂ- ಸಂರಕ್ಷಿಸಲಾರೆ ಅನ್ನುತ್ತಿದ್ದಾಳೆಯೇ...?
“ಯಾಕೆ? ನಂಬಲಾಗದಂತೆ ನಾನೇನು ಮಾಡಿದೆ?” ಎಂದೆ.
“ಬೇರೆ ಹೆಣ್ಣನ್ನೂ ನೀನು ಹೀಗೆಯೇ ಸೆಳೆಯುತ್ತೀಯ!” ಎಂದಳು.
“ಇದು ಸೆಳೆಯುವುದೇ? ಪ್ರೇಮಕ್ಕೆ ಎಲ್ಲೆಯಿದೆಯೇ...? ನೀನಿದನ್ನು ದೈಹಿಕ ವಾಂಛೆಗೆ ಅನ್ವಯಿಸುತ್ತಿದ್ದೀಯ... ಇರಲಿ... ಬೇರೆಯವರನ್ನೂ ಸೆಳೆಯುತ್ತೇನೆ ಎಂದೇ ಅಂದುಕೊಳ್ಳೋಣ! ಆದರೆ ಅದಕ್ಕೂ ನಾನು ನಿನಗೆ ಕೊಡುತ್ತಿರುವ ಮಾತಿಗೂ ಏನು ಸಂಬಂಧ? ನಿನ್ನೊಂದಿಗೆ ದೈಹಿಕವಾಗಿ ಸೇರದಿದ್ದರೂ- ಸೇರಬೇಕೆಂಬ ನಿರೀಕ್ಷೆಯೇನೂ ನನಗಿಲ್ಲ- ಸೇರಿದರೂ ಪ್ರೇಮ ಪ್ರೇಮವೇ! ಮಾತು ಮಾತೆ!” ಎಂದೆ.
ಅವಳೇನೂ ಮಾತನಾಡಲಿಲ್ಲ.
ಬಂಧಿಸಲು ಪ್ರಯತ್ನಿಸುತ್ತಿದ್ದಾಳೆ! ನಾನು ಇತರರೊಂದಿಗೆ ಸಂತೋಷದಿಂದಿದ್ದರೆ ಅವಳು ದುಃಖಪಡುತ್ತಿದ್ದಾಳೆ! ಎಲ್ಲಿ ಕೈಬಿಟ್ಟು ಹೋಗುತ್ತಾನೋ ಅನ್ನುವ ಹೆದರಿಕೆ- ನಂಬಲಾಗುವುದಿಲ್ಲವೆಂದು ಅವಳೇ ಹೇಳುತ್ತಿದ್ದಾಳೆ!
ಇಲ್ಲಿ ಸಮಸ್ಯೆ ಪ್ರೇಮವಲ್ಲ! ಪ್ರೇಮ ಯಾವತ್ತಿಗೂ ಸಮಸ್ಯೆಯಾಗುವುದಿಲ್ಲ!
ಸಮಸ್ಯೆ... ಪ್ರೇಮದ ಅರ್ಥ ವಾಂಛೆ ಎಂದಾದಾಗ- ಅದು ಗಂಡು ಹೆಣ್ಣಿಗೆ ಮಾತ್ರ ಅನ್ವಯವಾದಾಗ!
ಏನು ಮಾಡಲಿ?
ಇದೊಂದು ಪರಿಹಾರವಿಲ್ಲದ ಸಮಸ್ಯೆ! ಆದರೂ ನನಗೆ ಪರಿಹಾರ ಬೇಕು!
೬
ದೈಹಿಕ ವಾಂಛೆಯೇ ಮುಖ್ಯವಾದವನಿಗೆ ಅನುಗುಣವಾಗಿ- ಮತವೊಂದಿದೆ!
ಏಕವ್ಯಕ್ತೀಕೃತ ಗ್ರಂಥವನ್ನು ಪವಿತ್ರಗ್ರಂಥವೆಂದು ನಂಬುವ ಮತ!
ಬರೆದ ಆ ಒಬ್ಬ ವ್ಯಕ್ತಿಯ ಮನದಲ್ಲಿನ ಕ್ರೌರ್ಯದ- ಚಂಚಲತೆಯ- ವಾಂಛೆಯ ಉತ್ತುಂಗ ಆ ಗ್ರಂಥ!
ಹೆಣ್ಣನ್ನು ಕಂಡರೆ ಗಂಡು ಉತ್ತೇಜಿತನಾಗುತ್ತಾನಂತೆ! ತನ್ನ ಈ ವಾಂಛೆಗೆ ಹೆಣ್ಣು ಕಾರಣವೆಂದು- ಹೆಣ್ಣಿನ ಅಂಗಾಗಗಳು ಕಾಣದಂತೆ ಬಟ್ಟೆಯಿಂದ 'ಮುಚ್ಚಿದನಂತೆ'! ಆದರೂ ತೃಪ್ತಿಯಾಗದೆ ದೇಹದ ಯಾವೊಂದು ಭಾಗವೂ ಕಾಣದಂತೆ ಪೂರ್ತಿಯಾಗಿ- ಚೀಲದಲ್ಲಿ ಹಾಕಿಡುವಂತೆ- ಪರ್ದೆಯೊಳಗೆ ಮುಚ್ಚಿದನಂತೆ! ಈಗ ಅವಳ ಕಣ್ಣುಗಳು ಅವನನ್ನು ಉತ್ತೇಜಿಸಿತಂತೆ! ಅದನ್ನೂ ಬಲೆಯಿಂದ ಮುಚ್ಚಿದಾಗ ಅವನಿಗೆ ಅರಿವಾಯಿತಂತೆ- ಇದು ಹೆಣ್ಣು! ಹೆಣ್ಣೇ ಉತ್ತೇಜನ!
ಅವಳನ್ನು ಮನೆಯಲ್ಲಿ ಬಂಧಿಸಿದನಂತೆ!
ಹೆಣ್ಣನ್ನು ಅವನು ಯಾರಿಗೆ ಬೇಕಿದ್ದರೂ ಮಾರುತ್ತಿದ್ದನಂತೆ! ನಾಲ್ಕು ಐದು ಹೆಣ್ಣನ್ನು ಮದುವೆಯಾಗಿ- ಲೆಕ್ಕವಿಲ್ಲದಷ್ಟು ಹೆಣ್ಣಿನೊಂದಿಗೆ ಅವನು ಸೇರುತ್ತಿದ್ದನಂತೆ!
ಹೆಣ್ಣು....?
ನಾಲ್ಕು ಐದು ಗಂಡಿನೊಂದಿಗೆ ಸೇರುವುದಿರಲಿ- ಗಂಡನ್ನು ಕಣ್ಣೆತ್ತಿಯೂ ನೋಡುವ ಅಧಿಕಾರ ಹೆಣ್ಣಿಗಿಲ್ಲವಂತೆ! ಆದರೆ ತನ್ನನ್ನು ಯಾರಿಗೆ 'ಕೊಡುತ್ತಾರೋ' ಅವರೊಂದಿಗೆ ಸೇರಬೇಕಂತೆ- ಅವಳೊಂದು ಭೋಗವಸ್ತು!
ಹೌದು ಆ ಗ್ರಂಥಾನುಸಾರ ಹೆಣ್ಣು ಒಂದು ವಸ್ತು- ಗಂಡಿನ ಭೋಗಕ್ಕಾಗಿ ಮಾತ್ರವಿರುವ- ವಸ್ತು!
ಇನ್ನೊಂದು ವಿಚಿತ್ರ ನಡಾವಳಿ ಈ ಮತಕ್ಕಿದೆಯಂತೆ....
ವ್ಯಕ್ತಿಯೊಬ್ಬನ ಹೆಂಡತಿಯನ್ನು ಕಂಡು ಧರ್ಮಗುರುವಿಗೆ ಆಸೆಯಾಯಿತು! ಆತ ಆ ವ್ಯಕ್ತಿಯೊಂದಿಗೆ ಡೀಲ್ ಮಾಡಿದ! ಏನು ಡೀಲ್....?
ಅದೇ ಅವರ ಆಚಾರದ ಉತ್ತುಂಗ!
ಆ ಮತದಲ್ಲಿ ಗಂಡನೊಬ್ಬ ಹೆಂಡತಿಯನ್ನು "ಬಿಟ್ಟ"ಮೇಲೆ- ಗಂಡ ಮಾತ್ರ ಸುಲಭದಲ್ಲಿ ಹೆಂಡತಿಯನ್ನು ಬಿಡಬಲ್ಲ, ಹೆಂಡತಿಗೆ ಆ ಹಕ್ಕು ಊಹಿಸಲೂ ಸಾಧ್ಯವಿಲ್ಲ- ಪುನಃ ಅವಳನ್ನು ಹೆಂಡತಿಯೆಂದು ಸ್ವೀಕರಿಸಬೇಕೆಂದರೆ.... ಆಕೆಗೆ ಪರಪುರುಷನೊಂದಿಗೆ ದೇಹಸಂಪರ್ಕ ಆಗಿರಬೇಕು!
ಇಲ್ಲಿಯೇ ಧರ್ಮಗುರುವಿನ ಪ್ರವೇಶ! ಗಂಡನಿಗೆ ಅತಿಯಾದ ಹಣದ ಆಮೀಷವೊಡ್ಡಿ ಹೆಂಡತಿಯನ್ನು ಬಿಡುವಂತೆ ಮಾಡುವುದು- ನಂತರ ತಾನು ಅವಳೊಂದಿಗೆ ಬೆರೆತು- ಆ ಗಂಡಹೆಂಡತಿ ಪುನಃ ಸೇರುವಂತೆ "ಸಹಾಯ" ಮಾಡುವುದು!
ಹೆದರಿಸಿ ಅಂಕೆಯಲ್ಲಿಡುವುದು ಈ ಮತದ ಹೆಚ್ಚುಗಾರಿಕೆ!
ತನ್ನ ಗ್ರಂಥ ಹೇಳುವುದೇ ಪರಮಧ್ಯೇಯ!
ಗ್ರಂಥ ಏನು ಹೇಳುತ್ತದೆ....?
ಗ್ರಂಥದಲ್ಲಿ ಹೇಳಿರುವ ದೇವರನ್ನು ನಂಬದೇ ಇರುವವನಿಗೆ ನರಕ! ನಂಬದೇ ಇರುವವನನ್ನು ಹೆದರಿಸಿ- ಬೆದರಿಸಿ- ಹಿಂಸಿಸಿ ನಂಬುವಂತೆ ಮಾಡುವವನಿಗೆ ಸ್ವರ್ಗ! ಆದರೂ ನಂಬದಿದ್ದರೆ ಅವನನ್ನು- ಉಗುರನ್ನು ಕೀಳುವುದರಿಂದ- ಇಂಚಿಂಚಾಗಿ ಹಿಂಸಿಸಿ ಕೊಂದವನಿಗೆ ವೀರ ಸ್ವರ್ಗವಂತೆ!
ಇಷ್ಟೇಯೇ....?
ಆ ದೇವರು ಕರುಣಾಮಯ! ಯಾರಿಗೆ?
ತನ್ನನ್ನು ನಂಬುವವರಿಗೆ - ನಂಬುವವರಿಂದ ಹಿಂಸೆಗೆ ಒಳಗಾಗಿ ತನ್ನನ್ನು ನಂಬುತ್ತೇನೆ ಅಂದವರಿಗೆ- ತನ್ನನ್ನು ನಂಬುವಂತೆ ಮಾಡಿದವರಿಗೆ- ಮಾಡಲಾಗದಿದ್ದರೂ ಪ್ರಚಂಡ ಹಿಂಸೆಯನ್ನು ಕೊಟ್ಟವರಿಗೆ- ನಂಬದೇ ಇರುವವರನ್ನು ಕೊಂದವರಿಗೆ!
ಅರ್ಥವಾಯಿತೆ?
ಈ ಮತದಲ್ಲಿ ಗಂಡಿನ ಭೋಗಕ್ಕೆ ಏನು ಬೇಕೋ ಎಲ್ಲವೂ ಇದೆ! ಅದರಲ್ಲಿ....,
ಹೆಣ್ಣು!
ತನ್ನ ಸ್ವಾರ್ಥಕ್ಕೆ ಮತ್ತೊಬ್ಬರನ್ನು ಹಿಂಸಿಸುವುದು!
ತನ್ನ ಮನಸೋ ಇಚ್ಛೆ- ಎಲ್ಲವೂ ದೇವರಿಗಾಗಿ ಅನ್ನುವ ನೆಪದಲ್ಲಿ- ಇಷ್ಟ ಬಂದಂತೆ ಬದುಕುವುದು!- ಯಾರಿಗೆ ಬೇಡ??
ಇಲ್ಲಿ ತನ್ನ ಮನವನ್ನು ನಿಯಂತ್ರಿಸಲಾಗದ್ದಕ್ಕೆ ಕಾರಣ ಹೊರಗಿನ ವಿದ್ಯಾಮಾನಗಳು!
ತನ್ನ ಕಾಮನೆಗಳಿಗೆ ಕಾರಣ- ಹೊರಗು!
೭
ತೊಳಲುತ್ತಿದ್ದೆ ನಾನು- ಹೆಣ್ಣಿನಿಂದ!
“ಅವಳು ಯಾರು?” ಎಂದಳು.
“ಹೊಸದಾಗಿ ಪರಿಚಯವಾದೆ! ತುಂಬಾ ಒಳ್ಳೆಯ ಹುಡುಗಿ!” ಎಂದೆ.
ಅವಳ ಭಾವವೇ ಬದಲಾಯಿತು!
ದುಃಖ- ನಾನು ಬೇರೊಂದು ಹೆಣ್ಣನ್ನು ಪರಿಚಯವಾದಾಗಲೆಲ್ಲಾ...!
ಕಾರಣವನ್ನು ಹೇಳುವುದು- ವಿವರಣೆಯನ್ನು ನೀಡುವುದು- ನಂಬಿಸುವುದು....!
ಇನ್ನೂ ಎಷ್ಟುದಿನ? ಎಷ್ಟು ಸಾರಿ?
ಮುಂಚೆ ಅಂದುಕೊಳ್ಳುತ್ತಿದ್ದೆ.... ಗಂಡು- ಹೆಣ್ಣು... ಪ್ರಕೃತಿ- ಪುರುಷ ಎಂದು!
ಗಂಡು ಹೆಣ್ಣಿನ ಸಂಪರ್ಕ ಪ್ರಕೃತಿನಿಯಮ- ಯಾಕೆ ಬೇಡವೆಂದುಕೊಳ್ಳಲಿ ಎಂದು!!
ಎಷ್ಟು ಜನರೊಂದಿಗೆ ಅನ್ನುವಲ್ಲಿ ನನಗೆ ಉತ್ತರವಿಲ್ಲ!
ಹೆಣ್ಣೂ ಹಾಗಂದುಕೊಳ್ಳುವುದಿಲ್ಲ! ನನ್ನ ಈ ನಿಯಮ ಅವಳೊಬ್ಬಳಲ್ಲಿಯೇ ಕೇಂದ್ರೀಕರಿಸಬೇಕು ಅನ್ನುವುದರಿಂದ ಪ್ರಾರಂಭವಾಯಿತು- ಸಮಸ್ಯೆ!
ಏನು ಮಾಡಲಿ?
ನಾನು ಸನಾತನ ಧರ್ಮದ ಮೊರೆಹೋದೆ!
ಪ್ರೇಮ ಅವ್ಯಾಹತ! ಅದನ್ನು ನಿಯಂತ್ರಿಸುವ ಅಗತ್ಯವಿಲ್ಲ! ಸನಾತನಧರ್ಮದ ಉದ್ದೇಶವೇ ಪ್ರೇಮ- ಶಾಂತಿ!
ಆ ಪ್ರೇಮ ವಿಶ್ವಜನೀಯ! ಗಂಡು ಹೆಣ್ಣಿನ ಬೇಧವಿಲ್ಲದೆ ಅನುವರ್ತಿಸುತ್ತದೆ!
ಹಾಗಿದ್ದಮೇಲೆ ಹೆಣ್ಣೊಬ್ಬಳಮೇಲೂ ಅದು ಪ್ರಕಟವಾದರೆ- ಕೇವಲ ಹೆಣ್ಣಿಗೆ ಮಾತ್ರ ಅನ್ವಯಿಸಿ ಮತ್ತೊಬ್ಬಳು ಹೆಣ್ಣು- ನನ್ನೊಬ್ಬಳಿಗೇ ಬೇಕು ಅಂದುಕೊಳ್ಳುವುದು ತಪ್ಪು!
ದೈಹಿಕ ವಾಂಛೆಗೆ ಇದನ್ನು ಅನ್ವಯಿಸಿಕೊಂಡರೆ ಸ್ವಲ್ಪವಾದರೂ ಅರ್ಥವಿದೆ!
ದೇವರು ಎರಡುಮೂರು ದಾರಿಯನ್ನು ತೋರಿಸಿದ! ಸಮಸ್ಯೆಯಿಂದ ಹೊರಬರಲು ಉತ್ತೇಜನವನ್ನು ನೀಡಿದ!
ನಿಜವೇ....! ಮರೆತಿದ್ದ ತತ್ತ್ವ!
ಸಮಸ್ಯೆಗೆ ಪರಿಹಾರವಿದೆಯೇ...? ಪರಿಹರಿಸಿ ಮುಂದಕ್ಕೆ ಹೋಗು!
ಸಮಸ್ಯೆಗೆ ಪರಿಹಾರವಿಲ್ಲವೇ...? ಸಮಸ್ಯೆಯನ್ನು ಬಿಟ್ಟು ಮುಂದಕ್ಕೆ ಹೋಗು!
ಪ್ರೇಮ ನನ್ನ ಸಮಸ್ಯೆ ಅಲ್ಲ- ನನ್ನ ಶಕ್ತಿ!
ನನ್ನ ಸಮಸ್ಯೆ- ನನ್ನ ವಾಂಛೆ!
ಅದರಿಂದ ನಾನೇ ಹೊರಬರಬೇಕು ಹೊರತು ಇನ್ನೊಬ್ಬರನ್ನು ಹೊಣೆಮಾಡಿ ಚೀಲದಲ್ಲಿ ಬಂಧಿಸುವುದಿಲ್ಲ!!
ಅದಕ್ಕೆ....., ಇಲ್ಲಿದೆ- ಸನಾತನ ಧರ್ಮದಲ್ಲಿದೆ- ಪರಿಹಾರ!
ಒಂದು- ಕರ್ತವ್ಯನಿರತನಾಗುವುದು!
ಎರಡು- ಪ್ರೇಮವೇ ಸಮಸ್ಯೆಯಾದಾಗ- ಅದು ಯಾರಿಗೆ ಸಮಸ್ಯೆಯಾಯಿತೋ- ತೀರ್ಮಾನವನ್ನು ಅವರಿಗೆ ಬಿಡುವುದು!!
ಮೂರು- ಮನಸ್ಸನ್ನು ನಿಯಂತ್ರಿಸುವುದು- ಅತಿ ಕಠಿಣ ಕ್ರಮ!
ಸಾ-ಮಾ-ನ್ಯ-ನಂ-ತೆ.... ಭೋಗವನ್ನೇ ಪರಮಪದ ಅನ್ನುವುದು ಬಿಟ್ಟು ನನ್ನಲ್ಲಿ ನಾನು ಹುದುಗುವುದು....!
ಇಲ್ಲಿ ಭಾವಕ್ಕೆ ಬೆಲೆ ಇಲ್ಲದಂತಾಗುತ್ತದೆ! ಆದರೂ.... ಬಂಧನದಿಂದ ನಾನು ಮುಕ್ತ!
ಹೆಣ್ಣು ತನ್ನ ಭೋಗಕ್ಕೆ ಎಂದು ಹೇಳುವ ಮತದವನಲ್ಲ ನಾನು!
ನಿನ್ನ ವಾಂಛೆಗೆ- ನಿನ್ನ ಆಸಕ್ತಿಗೆ ನೀನೇ ಕಾರಣ- ಆದ್ದರಿಂದ ಭೋಗೇಚ್ಛೆಯನ್ನು ಬಿಡು- ನಿನ್ನ ಮನಸ್ಸನ್ನು ನಿಯಂತ್ರಿಸು ಎಂದು ಹೇಳುವ ಸನಾತನ ಧರ್ಮದವನು!
ಹೇಳುವುದೆಷ್ಟು ಸುಲಭ! ಆಚರಣೆ ಕಷ್ಟ...
ಅರ್ಥವಾಯಿತೇ ನನ್ನ ಸಮಸ್ಯೆಗೆ ಪರಿಹಾರ?
ಈ ಪರಿಹಾರವನ್ನು ಒಪ್ಪಿಕೊಳ್ಳದವನು- ಸ್ವೀಕರಿಸಲಾರದವನು- ಸನಾತನಧರ್ಮವನ್ನು ದೂಷಿಸುತ್ತಾನೆ- ಇತರ ಮತಗಳನ್ನು ಸ್ವೀಕರಿಸುತ್ತಾನೆ!
ನಾನು- ಸನಾತನಧರ್ಮೀಯ!
Beautiful, meaningful!!
ReplyDelete