ಆಮಿನ ಹೇಳಿದ- ನಿಜ- ಕಥೆ

ನಮಸ್ತೇ...

ನಾನು ಆಮಿನಾ...

ತಿಳಿದಿರಬೇಕು, ಹುಟ್ಟಿದ ಇಪ್ಪತ್ತನೆಯ ದಿನ ತಾಯಿಯಿಂದ ನಾಲೆಗೆ ಎಸೆಯಲ್ಪಟ್ಟ ಮಗುವಿನಬಗ್ಗೆ? ಮಗು ನಾನೆ!

ನಾನು ನಿಮಗೊಂದು ವಿಷಯವನ್ನು ಹೇಳಬೇಕೆಂದಿದ್ದೇನೆ. ಕೋರಿಕೆಯಲ್ಲ, ಉಪದೇಶವೂ ಅಲ್ಲ. ಒಂದು ನಿಜ ಅಷ್ಟೆ.

ನಿಜವನ್ನು ನೀವು ತಿಳಿದುಕೊಳ್ಳಲೇ ಬೇಕೆನ್ನುವ ನಿರ್ಬಂಧವೇನೂ ಇಲ್ಲ. ಆದರೂ, ತಿಳಿದುಕೊಂಡರೆ ನೀವು ನಿಮ್ಮ ಯೋಚನಾಪಥವನ್ನು ಸ್ವಲ್ಪವಾದರೂ ಬದಲಿಸಬಹುದೆಂಬ ಆಸೆ ನನಗೆ.

*

ನನ್ನಪ್ಪನ-ಅಮ್ಮನ ಗಂಡ ಅಲ್ಲ-ವೀರ್ಯ ಕಣಗಳಲ್ಲಿ ಎಲ್ಲರನ್ನೂ ಹಿಂದಿಕ್ಕಿ ಅಮ್ಮನ ಗರ್ಭಪಾತ್ರವನ್ನು ಸೇರಿಕೊಂಡೆ! ಗೆದ್ದೆನೆಂಬ ಅಹಂಕಾರ ನನಗೆ! ಆದರೆ, ಅಮ್ಮನನ್ನು ಸೇರಿದ ಮೊದಲ ದಿನ ನಾನು ಕೇಳಿಸಿಕೊಂಡ ಮೊದಲ ಮಾತುಗಳಿವು, ನನ್ನಪ್ಪ-ಅಮ್ಮನ ಗಂಡ ಹೇಳಿದ್ದು!

"ಒಂದು ದಿನ- ಅರ್ಧ ಘಂಟೆ ಬೇರೊಬ್ಬನೊಂದಿಗೆ ಮಲಗಿದ್ದಕ್ಕೆ ಹತ್ತು ಸಾವಿರ ರೂಪಾಯಿ! ........(ಕೆಲವು ಕೆಟ್ಟ ಪದಗಳನ್ನು ಬಳಸಿ) ನನ್ನ ಹೊಡೆತ ತಿನ್ನುವುದಕ್ಕಿಂತ ಮುಂಚೆ ಮಲಗಿದ್ದರೆ? ಇನ್ನು ಮುಂದೆಯಾದರೂ ನೆನಪಿರಲಿ, ನಾನು ಹೇಳಿದಂತೆ ಕೇಳಬೇಕು ......(ಮತ್ತಷ್ಟು ಕೆಟ್ಟ ಪದಗಳು) ತಿಳಿಯಿತೇ?"

ನನ್ನಮ್ಮನ ದುಃಖ ನನಗೆ ಅನುಭವವಾಗುತ್ತಿತ್ತು. ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಶಾರೀರಿಕ ನೋವು, ಮಾನಸಿಕ ಹಿಂಸೆ...

ದಿನಗಳು ಉರುಳಿದಂತೆ ನನ್ನಮ್ಮ ಅದೆಷ್ಟು ಜನರೊಂದಿಗೆ ಮಲಗಬೇಕಾಯಿತೋ... ರೋಸಿಹೋಗಿ ಕೊನೆಗೊಂದು ದಿನ ಆತ್ಮಹತ್ಯೆಗೆ ಶ್ರಮಿಸಿದರು. ಸಾಯಲಿಲ್ಲ! ಅಂದು ನನ್ನಪ್ಪನಿಂದ ಅನುಭವಿಸಿದ ನರಕ.... ಆತ ಅಮ್ಮನ ಹೊಟ್ಟೆಗೆ ಗುದ್ದಿರಬೇಕು. ನನಗೂ ಬಿತ್ತು ಒಂದು ಏಟು! ಗಟ್ಟಿ ಪಿಂಡ- ನಾನೂ ಸಾಯಲಿಲ್ಲ.

ಅಪ್ಪನಿಗೆ ತಿಳಿದಿತ್ತೇನೋ ನಾನು ಆತನ ಮಗುವಲ್ಲವೆಂದು? ನನ್ನನ್ನು ಇಲ್ಲದಂತೆ ಮಾಡಲು ಹಲವುಬಾರಿ ಶ್ರಮಿಸಿದ. ಸಾದ್ಯವಾಗಲಿಲ್ಲ. ಅಮ್ಮನೇ ಕಾಪಾಡಿದಳು. ಅವಳ ಪ್ರಕಾರ ಅವಳ ಹೊಟ್ಟೆಯಲ್ಲಿರುವುದು ಗಂಡು ಮಗು! ಮಗು ಹುಟ್ಟಿ ಅವಳನ್ನು ಸಂರಕ್ಷಿಸುತ್ತಾನೆ!

ಆದರೇ....

ತಿಂಳುಗಳು ಕಳೆದಂತೆ ಗರ್ಭಿಣಿಯಾದ ಅಮ್ಮನೊಂದಿಗೆ ಮಲಗಲು ಪು-ರು--ರು ಹಿಂಜರಿದರು. ಅಪ್ಪನ ಸಂಪಾದನೆ ನಿಂತಿತು. ಅಮ್ಮನಿಗೆ ಒಂದು ತೊಟ್ಟು ನೀರು ಕೂಡ ಕೊಡದೆ ಮಲಗಿಸಿದ. ಹಣಕ್ಕಾಗಿ ಕಳ್ಳತನ ಮಾಡಿದ. ಒಂದುದಿನ ಪೋಲೀಸರಿಗೆ ಸಿಕ್ಕಿಬಿದ್ದು ಜೈಲುಸೇರಿದ.

ಅಮ್ಮನ ಹೊಟ್ಟೆಯೊಳಗಿದ್ದು ಸಾಕಾಗಿ ಹೊರಬರಲು ನಾನು ತುಡಿಯುತ್ತಿದ್ದೆ. ಅದರ ಸೂಚನೆಗಳನ್ನು ನೀಡುತ್ತಿದ್ದೆ. ಕೊನೆಗೊಂದುದಿನ ಮುನ್ನುಗ್ಗಿದೆ.

ಸಹಾಯಕ್ಕೆ ಯಾರೂ ಇಲ್ಲ. ನೋವಿನಿಂದ ಚೀರಿಟ್ಟು ಮೂರ್ಛೆಹೋದಳು. ಯಾರೋ ಪುಣ್ಯಾತ್ಮರು ಅವಳನ್ನು ಆಸ್ಪತ್ರೆಗೆ ಸೇರಿಸಿದರು.

ನಾನು ಹೊರಬಂದೆ.

ನನ್ನನ್ನು ಕಂಡು ಅಮ್ಮನ ಮುಖ ಬಿಳುಚಿಕೊಂಡಿತು.

ಹೆಣ್ಣುಮಗು...!

ಜೊತೆಗೆ ನ್ಯುಮೋನಿಯಾ...!

ಕಾವಲಿಯಿಂದ ನೇರವಾಗಿ ಬೆಂಕಿಗೆ!

ಏನು ಮಾಡಬೇಕೆಂದು ತಿಳಿಯದೆ ಅಸಹಾಯಕಳಾಗಿ ಮಲಗಿದಳು.

ಧರ್ಮದ ಆಸ್ಪತ್ರೆಯಲ್ಲಿ ಎಷ್ಟುದಿನ?

ಅವಳ ಆರೋಗ್ಯ... ಬಲಹೀನಳಾದ ನನ್ನ ಆರೋಗ್ಯ...

ಬದುಕುವುದು ಹೇಗೆ?

ನನ್ನನ್ನು ಎದೆಗವಚಿಕೊಂಡು ಬಿಕ್ಕಿದಳು.

ಆಸ್ಪತ್ರೆಯ ಖರ್ಚು ಹೆಚ್ಚುತ್ತಿರುವುದು ಕಂಡು ನನ್ನೊಂದಿಗೆ ಮನೆಗೆ ಬಂದಳು.

ಹಾಲೂಡಿಸಲೂ ಎದೆಯಲ್ಲಿ ಹಾಲಿಲ್ಲ.

ಈಗಲೇ ಹೀಗೆ... ಇನ್ನು ಬೆಳೆಯುತ್ತಿದ್ದರೆ ನನ್ನ ಅವಸ್ಥೆಯೇನು? ಅದರಲ್ಲೂ ಹೆಣ್ಣುಮಗು! ಅಪ್ಪ ಕಳ್ಳ! ಅಪ್ಪನೇ ನನಗೆ ಏನಾದರೂ ಮಾಡಿದರೆ?

ಕೊನೆಗೆ ತೀರ್ಮಾನವೊಂದಕ್ಕೆ ಬಂದಳು.

ನನ್ನನ್ನು ಕೊಲ್ಲುವುದು!

ಆದರೆ ಹೇಗೆ?

ಅವಳ ಮುಂದೆ ನಾನು ಸಾಯುವುದೋ.... ಅಥವಾ ಸತ್ತ ನಂತರ ಅವಳ ಮುಂದಿರುವುದೋ ಸಹಿಸಲಿಲ್ಲವೇನೋ... ನನ್ನೊಂದಿಗೆ ನಾಲೆಗೆ ಹಾರಿದಳು.

ದೈವೇಚ್ಛೆಗೆ ವಿರುದ್ಧ ಏನೂ ನಡೆಯುವುದಿಲ್ಲ!

ಅಮ್ಮ ಅನುಭವಿಸಬೇಕಾದ ನರಕ ಇನ್ನೂ ಬಾಕಿಯಿತ್ತೇನೋ..., ಅವಳುಮಾತ್ರ ಬದುಕಿಕೊಂಡಳು!

ಮಾರನೆಯ ದಿನದ ಕೋಲಾಹಲ...!

ಪತ್ರಿಕೆಯವರು ಗೀಚಿದ್ದೇನು? ವಾಚಕರ ಪ್ರತಿಕ್ರಿಯೆಯೇನು? ಅಬ್ಬಾ... ನನ್ನಮ್ಮ ದುಷ್ಟ ರಾಕ್ಷಸಿಯೇ ಆಗಿ ಹೋದಳು!

ಹೆತ್ತ ಮಗುವನ್ನೇ ಕೊಂದ ಕಿರಾತಕಳು!

ಆದರೆ.....

ನಾನು ನನ್ನಮ್ಮನನ್ನು ದ್ವೇಶಿಸುವುದಿಲ್ಲ...

ಇಷ್ಟೇ... ನಾನು ಹೇಳಬೇಕೆಂದಿರುವ ನಿಜ!

ವಂದನೆಗಳು....

Comments

  1. Santoshada yele iro kathe bari

    ReplyDelete
    Replies
    1. ಖಂಡಿತಾ..... ಇದೆಲ್ಲಾ ಹಳೆಯ ಕಥೆಗಳು.... ಸುಮಾರು ಹತ್ತು ವರ್ಷ ಮುಂಚಿನದ್ದು.... ಇನ್ನುಮೇಲೆ ಪಾಸಿಟೀವ್ ಕಥೆಗಳನ್ನೇ ಬರೆಯಲು ಶ್ರಮಿಸುತ್ತೇನೆ- ವಂದನೆಗಳು

      Delete
  2. Malgudi days thara saamaanya jana jeevanakke bartira iro,dina nitya nodo kathe bari

    ReplyDelete
    Replies
    1. ಶ್ರಮಿಸುತ್ತೇನೆ ☺

      Delete

Post a Comment

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!