ದ್ವೈತಾದ್ವೈತ!- ಕಥೆ
ದ್ವೈತಾದ್ವೈತ ! ೧ ಕೆಲವೊಮ್ಮೆ ಅನ್ನಿಸುತ್ತದೆ - ಏಕಾಂಗಿ ನಾನೆಂದು ! ಆದರೆ ಹೇಗೆ ? ಯಾರದೋ ಸಂರಕ್ಷಣೆಯಲ್ಲಿರುವಂತೆಯೂ ಅನ್ನಿಸುತ್ತದಲ್ಲ ? ಹೊರಗೆ ನಿಂತು ನೋಡಿದರೆ ..., ಯಾವುದರಿಂದ ಹೊರಗೆ ? ನನ್ನಿಂದ ನಾನೇ - ಹೊರಗೆ ನಿಂತು ನೋಡಿದರೆ ಯಾವ ಕ್ಷಣದಲ್ಲಿಯೂ ನಾನು ಏಕಾಂಗಿಯಾಗಿರಲಿಲ್ಲ ! ಈ ಯೋಚನೆಯಿಂದ ಪ್ರಾರಂಭವಾಗಿ ಕ್ಷಣಕ್ಷಣಕ್ಕೂ ಅದಲುಬದಲಾಗುತ್ತಿದ್ದ ಮತ್ತೊಂದು ಯೋಚನೆ , ಯೋಚನೆಗಿಟ್ಟುಕೊಂಡಿತು !! ದ್ವೈತ - ಅದ್ವೈತ ! ದ್ವೈತ ಅಂದರೆ ದ್ವಿ - ಅಂತೆ ! ಅಂದರೆ ಎರಡು ಎಂದು ! ಅದ್ವೈತ ಅಂದರೆ ದ್ವಿ - ಅಲ್ಲದ್ದು ಅಂತೆ ! ಅಂದರೆ ಒಂದು ಎಂದು ! ತತ್ತ್ವರೂಪವಾದ ವಿಶದೀಕರಣವನ್ನು ಬಿಡುತ್ತೇನೆ ! ನನ್ನ ಯೋಚನೆ ..., ಅಹಂ ಬ್ರಹ್ಮಾಸ್ಮಿ ! ನಾನೇ ಬ್ರಹ್ಮ ಅನ್ನುವುದಾದರೆ ..., ನಾನೂ ನನ್ನ ಯೋಚನೆಯೂ ಎಲ್ಲವೂ ಒಂದೇ ..., ಕೆಟ್ಟ ಯೋಚನೆ ಬಂದರೆ ಅದೂ ದೈವ ಪ್ರೇರಿತವೇ ! ಬ್ರಹ್ಮ ಬೇರೆ ನಾನು ಬೇರೆ ಅನ್ನುವುದಾದರೆ ..., ಯೋಚನಾರೂಪೇಣ ನಾನು ಸ್ವತಂತ್ರ ! ಸರಿ ..., ದ್ವೈತವನ್ನು ಆಚರಿಸುವ ಅದ್ವೈತಿ ನಾನು ಅನ್ನುವುದಾದರೆ ..., ೨ “ ಯಾರು ?” ಹೆಣ್ಣು ಶಬ್ದ ! “ ನಾನು !” ಎಂದೆ . “ ನೀನು ಯಾರು ? ನಿನಗಿಲ್ಲೇನು ಕೆಲಸ ?” “ ನೀನು ದೇವಿಯೇ ?” “ ಸಂಶಯವೇನು ?” “ ನೀನು ಯಾರೆಂದು ಕೇಳಿದ್ದೇ ಸಂಶಯ !” ಎಂದೆ . ಮುಗುಳುನಕ್ಕರು ತಾಯಿ ! “ ವೀರ ....!” ಎಂದರು . “ ತಿಳಿದಿದ್ದೂ ಯಾಕೆ ಕೇಳಿ...