ಕವಿತೆ- ಕವಿತೆ
ಕವಿತೆ-
ನನಗೆ ಅರ್ಥವಾಗುವುದಿಲ್ಲ!
ಅರ್ಥಮಾಡಿಕೊಳ್ಳಲು ಶ್ರಮಿಸಿದವನೂ ಅಲ್ಲ!
ಆದರೂ ಓದುತ್ತಲೇ ಇರುತ್ತೇನೆ!
ಕೆಲವೊಂದು ಕವಿತೆಗಳ ಒಳಕ್ಕೆ ನುಗ್ಗಿ,
ಆಳಕ್ಕೆ ಇಳಿದು,
ಇದೇ ನನ್ನ ಶಾಶ್ವತ ಕವಿತೆ ಅಂದುಕೊಳ್ಳುವಾಸೆ-
ಅರ್ಥವಾಗದಿರುವುದರಿಂದ ಮುಂದೆ ಓದಲಾರೆ ಅನ್ನುವಂತೆ!!
ಮತ್ತೊಮ್ಮೆ ಓದಲ್ಪಡುತ್ತೇನೆ!
ಓದಿ-
ನಿಸ್ಸಹಾಯನಾಗುತ್ತೇನೆ!
ಕವಿತೆ!
ಶ್ರಮಿಸಿದರೂ ಓದದಿರಲಾರೆ!
ಮತ್ತಷ್ಟು- ಮಗದಷ್ಟು-
ಅದೊಂದು ಝರಿ!
ಕೊನೆಗೊಂದು ಕವಿತೆ-
*ಇವಳು!*
ಓದಿದೆ-
ತಡವರಿಸಿದೆ-
ಚಂಚಲಗೊಂಡೆ-
ಗೊಂದಲಗೊಂಡೆ...
ತಿಳಿದೆ-
ಬಿಡಲಾರದವನಾಗಿದ್ದೇನೆ-
ಈ ಕವಿತೆಯೂ ನನ್ನ!!
ಹಿಂದೆ ಓದಿದ ಕವಿತೆಗಳೆಷ್ಟೋ
ಮುಂದೆ ಓದುವ ಕವಿತೆಗಳೆಷ್ಟೋ...
*ಇವಳೆಂಬ* ಈ ಕವಿತೆ-
ನನ್ನ ಪ್ರಾಣವನ್ನು ಪ್ರವೇಶಿಸಿದೆ!
ಈಗ,
ನಾ ಬಿಟ್ಟರೂ-
ಕವಿತೆ ನನ್ನ ಬಿಟ್ಟರೂ
ಫಲಿತಾಂಶ ಒಂದೇ....!
ಕವಿತೆಯೆಂಬುದೇ ಹಾಗೆ
ReplyDeleteಒಳಕ್ಕಿಳಿದು... ಆಳಕ್ಕಿಳಿದು
ಅರ್ಥೈಸಿಕೊಂಡಿದ್ದೇನೆ ಎಂದು ಕೊಳ್ಳುವಾಗಲೇ... ಬೇರೊಂದು ಅರ್ಥವಿರುವಂತೆ ಭಾಸವಾಗುತ್ತದೆ.
ಕವಿತೆ ಅವರವರ ಭಾವಕ್ಕೆ ತಕ್ಕಂತೆ!