ಹೆಣ್ಣು- ಕಥೆ
ಹೆಣ್ಣು!
ದುಃಖ! ಪಾರ್ಕ್! ಬೆಂಚೊಂದರಮೇಲೆ ಕುಳಿತಿದ್ದೇನೆ. ಚಲನೆ! ನೋಡಿದೆ! ಹೆಣ್ಣು! ವಯ್ಯಾರ! ಕಡೆದ ಶಿಲ್ಪ! ಪ್ರತಿ ದಿನ ಸಂಜೆ ಬರುತ್ತಾಳೆ- ಯಾರಾದರೂ ಸಿಗುತ್ತಾರೇನೋ ಎಂದು! ಅವಳಿಗದೇ ಜೀವನ! ನನ್ನನ್ನು ನೋಡಿ ನಕ್ಕಳು! ಸಂಜೆಯ ಮಬ್ಬು! ಸಂಶಯದಿಂದ ಹತ್ತಿರ ಬಂದಳು! ನನ್ನ ಕಣ್ಣಿನಲ್ಲಿ ಅದೇನು ಕಂಡಳೋ... ಮತ್ತಷ್ಟು ಸಮೀಪಕ್ಕೆ ಬಂದೇ ಬಂದಳು! ಎದುರಿಗೆ ನಿಂತು ನನ್ನ ಮುಖವನ್ನು ಎದೆಗೊತ್ತಿಕೊಂಡಳು! ಕ್ಷಣಗಳೆಷ್ಟೋ..... ಒದ್ದೆಯಾದ ಎದೆಯಿಂದ ಬಿಡಿಸಿ ತಲೆಗೊಂದು ಮುತ್ತುಕೊಟ್ಟು ಹೊರಟು ಹೋದಳು! ಹೆಣ್ಣು ಅವಳು! ಗಂಡಿಗೇನು ಬೇಕೋ ಅವನ ಕಣ್ಣ ನೋಟದಿಂದ ತಿಳಿಯಬಲ್ಲಳು! ಅವಳ ಬೇಕು ಗಂಡಿಗೆ ಗೊತ್ತೇ? ಕಣ್ಣ ನೋಟವಿರಲಿ, ವಿವರಣೆ ಕೊಟ್ಟರಾದರೂ ಅರಿಯಬಲ್ಲನೇ....? ಅವಳನ್ನು ಹುಡುಕಿದೆ! ಅವಳು ನನಗೆ ಪರ್ಮನೆಂಟಾಗಿ ಬೇಕು! ಇಲ್ಲ, ಸಿಗುವುದಿಲ್ಲ! ನನ್ನ ಜೀವನವೇ ಹಾಗೆ! ಆ ಸಮಯಕ್ಕೆ ಏನು ಬೇಕೋ ಸಿಗುತ್ತದೆ ಹೊರತು- ಯಾವುದೂ ಶಾಶ್ವತವಲ್ಲ! ಅವಳು- ಮತ್ತೆಂದೂ ಅಲ್ಲಿಗೆ ಬರಲಿಲ್ಲ! ಇಷ್ಟುದಿನ ಬೇರೆ ರೀತಿಯಲ್ಲಿ ಗಂಡನ್ನು ತಣಿಸುತ್ತಿದ್ದವಳಿಗೆ ಗಂಡಿನಿಂದಲೂ ಹೊಸದೇನೋ ದೊರಕಿರಬೇಕು! ಮುಂದೆ ದೊರಕದಿದ್ದರೇ… ಅನ್ನುವ ಹೆದರಿಕೆಯಲ್ಲಿ…. ಮುಗಿದು ಹೋದಳು! ಅವಳೊಂದಿಗೆ- ನನ್ನ ದುಃಖವೂ!
ವಾಹ್..ಅದ್ಭುತ ಕಥೆ!! ಹೆಣ್ಣಿಗೆ ಸಲ್ಲುವ ದೊಡ್ಡ ಗೌರವ ಕಥೆಯ ಸಾರವಾಗಿದೆ.ತುಂಬಾನೇ ಇಷ್ಟವಾಯ್ತು
ReplyDelete