ಕನಿಕರ- ಕಥೆ

ಕೆಲವು ದಿನಗಳಿಂದ ಗಮನಿಸುತ್ತಿದ್ದೇನೆ. ಬಡವರಿಗೆ ಸಹಾಯ ಮಾಡುತ್ತಿದ್ದಾಳೆ, ಎಲ್ಲರೊಂದಿಗೂ ನಗುತ್ತಾ ಬೆರೆಯುತ್ತಿದ್ದಾಳೆ, ಯಾರು ಏನು ಹೇಳಿದರೂ ನನಗೇನು ಎನ್ನುವಂತೆ ತನ್ನ ಪಾಡಿಗೆ ತಾನು ಬದುಕುತ್ತಿದ್ದಾಳೆ.

ಅವಳನ್ನು ಗಮನಿಸಬೇಕಾದ ಯಾವ ಅಗತ್ಯವೂ ನನಗಿಲ್ಲ. ಆದರೆ ಎರಡುತಿಂಗಳ ಹಿಂದೆ ಪತ್ರಿಕೆಗಳ ಮುಖಪುಟಗಳಲ್ಲಿ ರಾರಾಜಿಸುತ್ತಿದ್ದ ಸುದ್ದಿಯ ಕೇಂದ್ರಬಿಂದು ಅವಳೇ ಎಂದು ತಿಳಿದಾಗ ಗಮನಿಸದಿರಲಾಗಲಿಲ್ಲ.

ಏಳು ಜನರಿಂದ ಲೈಂಗಿಕ ದೌರ್ಜನ್ಯಕ್ಕೆ ಈಡಾದ ಹೆಣ್ಣು....

ಯಾರೋ ಏನೋ ಹೇಳಿದರೆಂದು ಗಲಭೆ ಎಬ್ಬಿಸುವವರನ್ನು ನೋಡಿದ್ದೇನೆ, ಸಣ್ಣಪುಟ್ಟ ವಿಷಯಗಳಿಗೆ ಆತ್ಮಹತ್ಯೆ ಮಾಡಿದವರನ್ನು ನೋಡಿದ್ದೇನೆ, "ಅವನು ನನ್ನನ್ನು ಕೊಲ್ಲುತ್ತೇನೆ ಎಂದ, ನಾನೇ ಕೊಂದುಬಿಟ್ಟೆ' ಎನ್ನುವವರನ್ನು ನೋಡಿದ್ದೇನೆ, ಆದರೆ ಇದು? ಏನೂ ನಡೆದೇ ಇಲ್ಲವೇನೋ ಎನ್ನುವಂತೆ... ಹೇಗೆ ಸಾದ್ಯ?

ತನ್ನನ್ನು ಬಲತ್ಕರಿಸಿದವರು ಯಾರೆಂದು ತಿಳಿದಿದ್ದರೂ ಅವರಬಗ್ಗೆ ಕ್ರಮ ಕೈಗೊಳ್ಳಲಿಲ್ಲವಂತೆ, ನನ್ನ ಒಪ್ಪಿಗೆಯಿಂದ ನಡೆಯಿತು ಎಂದಳಂತೆ. ಅವರಿಗೆ ಶಿಕ್ಷೆ ಆಗಬಾರದು ಅನ್ನುವ ಉದ್ದೇಶವಲ್ಲದಿದ್ದರೂ..., ನಮ್ಮ ನ್ಯಾಯವ್ಯವಸ್ತೆಯಲ್ಲಿ ಶಿಕ್ಷೆ ಕೊಡಿಸಲು ಪಡಬೇಕಾದ ಕಷ್ಟವನ್ನು ನೆನೆದಾದರೂ ಇರಬಹುದು..., ಆದರೂ..., ಅಬ್ಬಾ.....

ಅಷ್ಟು ಮಾತ್ರ ಅಲ್ಲ ಅವಳು.... ಮೊನ್ನೆ ನಡೆದ ವಿಷಯ....

ಬಸ್ಸೊಂದು ವ್ಯಕ್ತಿಯೊಬ್ಬನನ್ನು ಹೊಡೆದುರುಳಿಸಿ ನಿಲ್ಲಿಸದೆ ಹೊರಟು ಹೋಯಿತು. ಜನ ಗಮನಿಸದವರಂತೆ ಹೋದರು, ನಾನೂ ಸಹ!

ಆದರೆ ಅವಳು?

ಪ್ರಾಣಕ್ಕಾಗಿ ಒದ್ದಾಡುತ್ತಿದ್ದ ಆತನಬಳಿಗೆ ಓಡಿದಳು. ವ್ಯಕ್ತಿಯನ್ನು ಕಂಡು ಬೆಚ್ಚಿದಳು. ತನ್ನನ್ನು ಬಲತ್ಕರಿಸಿದವರಲ್ಲಿ ಒಬ್ಬ! ಆದರು ದೃತಿಗೆಡಲಿಲ್ಲ. ಪ್ರಾತಮಿಕ ಚಿಕಿತ್ಸೆಯಬಗ್ಗೆ ಅವಳಿಗೆ ಗೊತ್ತು. ಬಾಯಿ ಮೂಗಿನಿಂದ ರಕ್ತ ಸುರಿಯುವಾಗ ಅಂಗಾತ ಮಲಗಿಸಿದರೆ ಉಸಿರುಕಟ್ಟುತ್ತದೆ. ಬೋರಲಾಗಿ ಮಲಗಿಸಿದಳು. ತಲೆಯಮೇಲಿನ ದೊಡ್ಡ ಗಾಯಕ್ಕೆ ತನ್ನ ಸೆರಗನ್ನು ಹರಿದು ಕಟ್ಟಿದಳು. ಓಡಿ ಹೋಗಿ ಪೋಲೀಸ್ ಸ್ಟೇಷನ್ನಿಗೂ ಆಂಬ್ಯೂಲೆನ್ಸಿಗೂ ಫೋನ್ ಮಾಡಿದಳು. ಓಡಿಬಂದು ಉಸಿರಿಗಾಗಿ ಒದ್ದಾಡುತ್ತಿದ್ದ ಆತನನ್ನು ಅಂಗಾತ ಮಲಗಿಸಿ ತುಟಿಗೆ ತುಟಿಸೇರಿಸಿ ಗಾಳಿಯನ್ನು ಊದಿದಳು. ಪುನಹ ಬೋರಲಾಗಿ ಮಲಗಿಸಿ ಹೊರಟುಹೋದಳು. ಇದು ಮಾಡಿದ್ದು ತಾನು ಎಂದು ಯಾರೂ ತಿಳಿಯದಿರಲಿ...

ಇನ್ನೂ ಮೂರ್ಚೆ ಹೋಗದ ಆತನಿಗೆ ತನ್ನನ್ನು ಕಾಪಾಡಿದವರು ಯಾರೆಂದು ಸ್ಪಷ್ಟವಾಗಿ ತಿಳಿಯಿತು.

ಐದು ತಿಂಗಳು ಕಳೆದಿರಬಹುದು. ಗುಣಮುಖನಾದ ಆತ ಅವಳನ್ನು ಬಂದು ಕಂಡ.

"ನಿನಗೆ ಏನು ಬೇಕು ಕೇಳು..”ಎಂದ.

ಹೊಟ್ಟೆಯಲ್ಲಿ ಬೆಳೆಯುತ್ತಿರುವ ನನ್ನ ಮಗುವಿನ ತಂದೆಯೆಂದು ಒಪ್ಪಿಕೊಳ್ಳಿ ಸಾಕು.”ಎಂದಳು.

ಏಳು ಜನರಿಂದ.....” ಆತ ಹೇಳುವುದನ್ನು ಕೇಳಿಸಿಕೊಳ್ಳದೆ ಹೊರಟು ಹೋದಳು.

ನನ್ನ ತಲೆಯೊಳಗೊಂದು ಮಿಂಚು! ಅವಳನ್ನು ಹೋಗಿ ಕಂಡೆ.

"ಕನಿಕರವೆಂದರೆ ನನಗೆ ಅಸಹ್ಯ”ಎಂದಳು.

ನನಗೆ ನಿನ್ನಮೇಲೆ ಯಾವ ಕನಿಕರವೂ ಇಲ್ಲ. ನೀನು ನನಗೆ ಸಿಗುವುದು ನನ್ನ ಪುಣ್ಯ ಅಂದುಕೊಂಡಿದ್ದೇನೆ. ನಾನೂ ಒಬ್ಬಂಟಿ, ಇರುವುದೊಂದೇ ಜೀವನ, ಜೀವನವನ್ನು ಹ್ಯಾಪಿಯಾಗಿ ಕಳೆಯಬೇಕು. ನಿನ್ನಂತಾ ವ್ಯಕ್ತಿತ್ವದ ಹೆಣ್ಣು ಸಿಗುವುದೆಂದರೆ ನನ್ನ ಅದೃಷ್ಟ. ಅಷ್ಟೇ ಹೊರತು ಕನಿಕರದಿಂದ ಅಲ್ಲ. ನೀನೂ ಅಷ್ಟೆ, ನಾನು ಕೇಳಿದೆನೆಂದು ಒಪ್ಪಿಕೊಳ್ಳಬೇಡ. ನಾನು ನಿನಗೆ ಯೋಗ್ಯನೆಂದು ನಿನಗನ್ನಿಸಿದರೆ ಮಾತ್ರ ಒಪ್ಪಿದರೆ ಸಾಕು”ಎಂದೆ.

ನಮಗೀಗ ಏಳು ಮಕ್ಕಳಿದ್ದಾರೆ! ನನ್ನವಳು ಹೆತ್ತಿದ್ದು ಒಂದು, ಬಾಕಿಯೆಲ್ಲಾ ದತ್ತು ತೆಗೆದುಕೊಂಡಿದ್ದು! ಮೊದಲ ಹೆರಿಗೆಯೊಂದಿಗೆ ಅವಳಿಗೆ ಮಕ್ಕಳಾಗದಿರುವಂತೆ ಆಪರೇಷನ್ ಮಾಡಿಸಿದೆವು. ಅದಕ್ಕೆ ಮೂರು ಕಾರಣಗಳು, ದೇಶದ ಜನಸಂಖ್ಯೆ ಒಂದುಕಾರಣ. ಅನಾಥಮಕ್ಕಳಿಗೆ ಜೀವನಕೊಡುವುದು ಎರಡನೆಯ ಕಾರಣ. ಮೂರನೆಯ ಕಾರಣ... ನನಗೆ ಮಕ್ಕಳಾಗಿ ನನ್ನ ಪ್ರೇಮ ಅವರಮೇಲೆ ತಿರುಗಿ ಬಾಕಿಯವರಿಗೆ ಅನ್ಯಾಯವಾದರೆ??

ಮದುವೆಯಾಗಿ ತಪ್ಪುಮಾಡಿದೆ ಎನ್ನುವ ಭಾವನೆ ಒಂದು ಕ್ಷಣವೂ ಬರದಂತೆ ಹ್ಯಾಪಿಯಾಗಿ ಬದುಕುತ್ತಿದ್ದೇವೆ.

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!