ಹೆಣ್ಣು

ಹೆಣ್ಣು

ನೀನು ನನಗೆ- ನೂರರಲ್ಲಿ ತೊಂಬತ್ತು ಭಾಗ ಪ್ರೇಮಿ!” ಎಂದೆ.

ಉಳಿದದ್ದು?” ಎಂದಳು.

ಅಮ್ಮ- ಸಹೋದರಿ- ಮಗಳು- ಹೆಂಡತಿ- ಗೆಳತಿ!” ಎಂದೆ. ನಂತರ,

ಕೆಲವೊಮ್ಮೆ ಇದರಲ್ಲೊಂದು- ಪ್ರೇಮಿ ಅನ್ನುವ ಭಾವವನ್ನು ಮೀರಿಸುತ್ತದೆ!” ಎಂದೆ.

ನನ್ನನ್ನೇ ನೋಡಿದಳು. ವಯಸ್ಸಿನಲ್ಲಿ ಹಿರಿಯಳು ಅನ್ನುವ ಕಾರಣಕ್ಕೆ ಅಕ್ಕಾ ಎಂದಿದ್ದೆ!! ಅದವಳಿಗೆ ಹಿಡಿಸಿರಲಿಲ್ಲ!ಬದಲಾಗದ ಅವಳ ನೋಟವನ್ನು ಕಂಡು,

ಸಂಬೋಧನೆಯಲ್ಲಿ ಏನಿದೆ? ಭಾವವನ್ನು ಮೀರಿ?” ಎಂದೆ.

ಆದರೂ.....!” ಎಂದಳು.

ಸಂಬೋಧಿಸದಿದ್ದರೂ ಕೆಲವೊಂದು ಭಾವಗಳಿಗೆ ಅರ್ಥ ಅದೇ ತಾನೆ?” ಎಂದೆ.

ಗೊಂದಲಗೊಂಡವಳಂತೆ ನೋಡಿದಳು.

ಹೆಣ್ಣು ನೀನು- ಅಂದೇಕೆ ಹಾಗಾಯಿತು?” ಎಂದೆ.

ಏನು ಎನ್ನುವಂತೆ ನೋಡಿದಳು.

ನಿನ್ನನ್ನು ಭೇಟಿಯಾದ ಮೊದಲ ದಿನ?” ಎಂದು ನಿಲ್ಲಿಸಿದೆ.

ಅವಳು! ಅವಳೊಂದು ಅದ್ಭುತ! ವ್ಯಕ್ತಿಯಾಗಿ ಅಲ್ಲದೆ ಅವಳೇನು ನನಗೆ?

ಸಾಂತ್ವಾನ! ನೆರಳು! ಆನಂದ! ಆಧಾರ!!

ಪ್ರೇಮದ ಮೇಲಿನ ನಂಬಿಕೆಯನ್ನು ಕಳೆದುಕೊಂಡು- ಪಾತಾಳ ಸೇರಿದ್ದವನನ್ನು ತನ್ನ ಬಾಹುಗಳಲ್ಲಿ ಸೇರಿಸಿಕೊಂಡವಳು...

ಅವಳ ಎದೆಯಲ್ಲಿ ಮುಖಹುದುಗಿಸಿದ್ದೆ! ಕಣ್ಣೀರು ಸುರಿಯುತ್ತಿತ್ತು! ಕೂದಲುಗಳನಡುವೆ ಕೈಯ್ಯಾಡಿಸಿ ತಲೆಗೊಂದು ಮುತ್ತು ಕೊಟ್ಟು ಮತ್ತಷ್ಟು ಆಳಕ್ಕೆ ಒತ್ತಿಕೊಂಡವಳ ಭಾವವೇನಾಗಿತ್ತು?

ಕೇಳಿದೆ.

ಅವಳೇನೂ ಹೇಳಲಿಲ್ಲ! ಅರಳುಗಣ್ಣುಗಳಿಂದ ನೋಡಿದಳು.

ಅಷ್ಟೇ.... ಆ ಭಾವದಲ್ಲಿ ಅಮ್ಮಾ ಎಂದಿದ್ದರೆ ನೋವಾಗುತ್ತಿತ್ತೆ?!” ಎಂದೆ.

ಅರ್ಥವಾದಂತೆ ನಕ್ಕು ಕೈಯ್ಯಗಲಿಸಿದಳು!

ಪ್ರೇಮ ಅಥವಾ ಪ್ರೇಮಿಗೆ ವ್ಯಾಖ್ಯಾನವೇ?

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!