ಬಾಡಿಗೆ ಮನೆ

ಬಾಡಿಗೆ ಮನೆ

ಐದಾರು ವರ್ಷ ಮುಂಚೆ- ಒಂದು ವರ್ಷದ ಮಟ್ಟಿಗೆ ಬಾಡಿಗೆ ಮನೆಯಲ್ಲಿ ಇರಬೇಕಾಗಿ ಬಂದಿತ್ತು!

ಗೆಳೆಯನೊಬ್ಬನ ಸಹಾಯದಿಂದ-

ಹಳೆಯ ಕಾಲದ ಮನೆ.... ಹೆಂಚಿನ ಮನೆ... ಹುಡುಕಾಟ ಶುರು ಮಾಡಿದ್ದೇ ಆ ಮನೆಯಿಂದ- ಅಂದರೆ- ಅದೊಂದೇ ಮನೆ ನೋಡಿದ್ದು- ಇಷ್ಟವಾಗಿ ಅಲ್ಲೇ ಇರುವುದೆನ್ನುವ ತೀರುಮಾನ!

ಬೆಳಗ್ಗೆ 4-30 ಕ್ಕೆ ಎದ್ದು ವ್ಯಾಯಾಮ- ಬೆಳಗ್ಗಿನ ನಿತ್ಯಕರ್ಮಗಳನ್ನು ಮುಗಿಸಿ- ಬೆಳಗ್ಗೆ 6-00 ರಿಂದ ಮಧ್ಯಾಹ್ನ 2-00 ರವರೆಗೆ ಕೆಲಸ!

ಪುನಹ ಸಂಜೆ 4-00 ರಿಂದ 8-30 ರವರೆಗೆ ಬೇರೆ ಕಡೆ...!

ಊಟ ತಿಂಡಿಯೆಲ್ಲಾ ಹೊರಗೆ.... ಉಳಿಕೆ ಸಮಯದಲ್ಲಿ ಓದು- ಬರಹ!!

ಒಂದುದಿನ ಮಧ್ಯಾಹ್ನ- ಬಿಸಿಲ ಧಗೆಯಲ್ಲಿ ಆಫೀಸಿನಿಂದ ಒಂದು ಕಿಲೋಮೀಟರ್ ದೂರ ನಡೆದು, ಮಧ್ಯೆ ಊಟವನ್ನು ಮುಗಿಸಿ - ಮನಗೆ ಬಂದೆ. ಬಾಗಿಲು ತೆರೆದು ಒಳನುಗ್ಗಿದಾಗ- ತಟ್ಟನೆ ಕಣ್ಣು ಮಂಜಾದಂತೆ!

ಸುಡು ಬಿಸಿಲಿನ ಬೆಳಕಿನಿಂದ- ಮನೆಯ ಕತ್ತಲೆಗೆ ಕಣ್ಣು ಹೊಂದಿಕೊಂಡಾಗ, ಬೆಡ್‌ರೂಮಿನಲ್ಲಿ- ಮಂಚದ ಮೇಲೆ ಯಾರೋ ಇಬ್ಬರು ಕುಳಿತಿರುವಂತೆ ಭ್ರಮೆ!!

ಬಿಸಿಲಿನಲ್ಲಿ ಕಾದ ರಸ್ತೆ ದೂರದಿಂದ ಕಾಣುವಾಗ ನೀರಿನ ಆವಿಯಂತೆ ಕಾಣಿಸುತ್ತದೆ- ನಿಜವಾದ ನೀರೇನೋ ಅನ್ನುವ ಭ್ರಮೆ ಹುಟ್ಟಿಸುವಂತೆ- ಹಾಗೆ ಕಾಣಿಸಿತು- ಬೆಡ್ಡಿನ ಮೇಲೆ ಕುಳಿತಿರುವ ರೂಪ- ನೀರಿನ ರೂಪದ ವೃದ್ಧ ದಂಪತಿಗಳು!!

ಒಂದುಕ್ಷಣ ಗೊಂದಲವಾಯಿತು... ನಿಧಾನವಾಗಿ ಮನೆಯ ಬೆಳಕಿಗೆ ಕಣ್ಣು ಹೊಂದಿಕೊಂಡಮೇಲೆ ಅದು ಮಾಯವಾಯಿತು

ಸ್ವಲ್ಪ ಹೊತ್ತು ಓದುತ್ತಾ ಕುಳಿತಿದ್ದು ಸಂಜೆಯ ಕೆಲಸಕ್ಕೆ ಹೊರಟೆ....

ಕೆಲಸ ಮುಗಿಸಿ, ಗೆಳೆಯರೊಂದಿಗೆ ಹರಟೆ- ಊಟ!!

ಮನೆಗೆ ಬಂದಾಗ ನಿದ್ದೆ ಎಳೆಯುತ್ತಿತ್ತು.... ಮಲಗಿದೆ!!

ಮಧ್ಯರಾತ್ರಿ ಒಂದುಗಂಟೆಯಾಗಿರಬಹುದು... ಯಾರೋ ಕರೆಯುತ್ತಿದ್ದಾರೆ ಅನ್ನಿಸಿ ಕಣ್ಣುಬಿಟ್ಟೆ!

ಅದೇ ವೃದ್ಧ ದಂಪತಿಗಳು! ಮುಖದ ತೀರಾ ಸಮೀಪ ಮುಖವಿಟ್ಟು ಕಣ್ಣನ್ನೇ ದಿಟ್ಟಿಸಿ ನೋಡುತ್ತಿದ್ದಾರೆ!!

ಆ ಕ್ಷಣದ ನನ್ನ ಭಾವನೆ ನಿಜವಾಗಿಯೂ ನನಗೆ ತಿಳಿಯಲಿಲ್ಲ... ಕೈಕಾಲು ಅಲ್ಲಾಡಿಸಲಾಗುತ್ತಿಲ್ಲ- ಮುಖ ತಿರುಗಿಸಲಾಗುತ್ತಿಲ್ಲ... ಕಣ್ಣು ಮುಚ್ಚಲೂ ಸಾಧ್ಯವಾಗುತ್ತಿಲ್ಲ!!

ಎಷ್ಟು ಹೊತ್ತು ನೋಡುತ್ತಿದ್ದರೋ.... ಇನ್ನೂ ಟೈಮಿದೆ ಮಲಗು ಮಗು- ಎಂದು ಹೇಳಿ ಕೆನ್ನೆ ತಟ್ಟಿ ಕಾಣೆಯಾದರು!!

ನಿಧಾನಕ್ಕೆ ಕೈಕಾಲುಗಳು ನಿಯಂತ್ರಣಕ್ಕೆ ಬಂತು- ಕ್ಲೋರೋಫಾಂ ಕೊಟ್ಟಂತೆ ನಿದ್ದೆಯೂ!!!

ಬೆಳಗ್ಗೆ ಕಣ್ಣು ಬಿಟ್ಟೆ... ಹಂಚಿನ ಮಧ್ಯೆಯಿದ್ದ ಗಾಜಿನ ಮೂಲಕ ಬೆಳಕು!!

ಗಾಬರಿಯಾದೆ!

ಎಷ್ಟೋ ವರ್ಷದ ನಂತರ- ನಿದ್ರೆಯಿಂದ ಎಚ್ಚರವಾದಾಗ ಬೆಳಕು!

ಏಳಲು ಶ್ರಮಿಸಿದೆ- ಯಾರೋ ನನ್ನನ್ನು ಬಲವಾಗಿ ಮಂಚಕ್ಕೆ ಅದುಮಿ ಹಿಡಿಯುತ್ತಿರುವಂತೆ!!

ಬೆವರು ಹರಿಯುತ್ತಿತ್ತು.... ಬಲವಂತವಾಗಿ ಮುಚ್ಚಿಕೊಂಡು ಹೋಗುತ್ತಿದ್ದ ಕಣ್ಣುಗಳು....

ಕಾಲುಗಂಟೆಯ ನಂತರ ಸಾಮಾನ್ಯ ಸ್ಥಿತಿಗೆ ಮರಳಿದೆ! ಗಡಿಬಿಡಿಯಲ್ಲಿ ತಯಾರಾಗಿ ಆಫೀಸಿಗೆ ಹೊಗಿ- ಅದೇ ಮೊದಲಬಾರಿ ಆಫೀಸಿಗೆ ಲೇಟಾಗಿ ಹೋಗಿದ್ದು.... ಉಫ್!!

ಹನ್ನೊಂದು ತಿಂಗಳ ಕರಾರು ಮುಗಿಸಿ ಮನೆ ಖಾಲಿ ಮಾಡಿದೆ... ಅಷ್ಟರಲ್ಲಿ ಮತ್ತೆ ಮೂರುಬಾರಿ ನನಗಾ ಅನುಭವವಾಯಿತು- ನನ್ನ ಮುಖವನ್ನು ಬಲವಾಗಿ ದಿಂಬಿಗೆ ಅದುಮಿ "ನಿದ್ರೆ ಮಾಡು" ಅನ್ನುಂತೆ...

ಮುಂದೆ ಒಂದುದಿನ ಗೆಳಯ ಹೇಳಿದ...

ಮೂರು ತಿಂಗಳಿಗಿಂತ ಹೆಚ್ಚು ಯಾರೂ ಆ ಮನೆಯಲ್ಲಿ ಇರುತ್ತಿರಲಿಲ್ಲವಂತೆ... ನನಗಿಂತ ಮುಂಚೆ ಬಂದವರೂ- ನಂತರ ಬಂದವರೂ!!

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!