ಮಹಾಕಾವ್ಯ
ಎದೆಗೂ ಹೊಟ್ಟೇಗೂ ನಡುವೆ ಏನಿದೆ?
ಪ್ರೇಮ-ಮಹಾಸಮುದ್ರ!
ನೋವು- ಹೃದಯವನ್ನು ಬಡಿದು,
ಭಾವನೆ- ಹೃದಯವನ್ನು ಹಿಂಡಿ,
ನಂಬಿಕೆ- ಹೃದಯವನ್ನು ಕತ್ತರಿಸಿ....
ವೇದನೆ- ಇನ್ನು ತಡಯಲಾಗದಷ್ಟು ಮಡುಗಟ್ಟಿ "ಗಮ್ಯ" ವನ್ನು ತಲುಪುತ್ತದೆ!
ಮಹಾಸಮುದ್ರ ಭೋರ್ಗರೆಯುತ್ತದೆ!
ಶಬ್ದ ಗಂಟಲನ್ನು ಬಿಗಿದು
ಮಾತು ನಿಟ್ಟುಸಿರಾಗಿ
ನಿಟ್ಟುಸಿರು ಕಣ್ಣೀರಾಗಿ....
"ಆನಂದ" ಮೆದುಳನ್ನು ಪ್ರವೇಶಿಸುತ್ತದೆ!
ಅದೊಂದು ಲಹರಿ!
ಅದರಿಂದ ಸೃಷ್ಟಿ-
ವಿಶ್ವಜನೀಯ ಪ್ರೇಮ!
ಮತ್ತೆಲ್ಲರೂ ವಾಲ್ಮೀಕಿಗಳೇ...
ಉದಿಸುವ ಪ್ರತಿ ವಾಕ್ಯವೂ ಕಾವ್ಯವೇ-
ಮಹಾಕಾವ್ಯ!
Comments
Post a Comment