ಸಮಸ್ಯೆ

ಸಮಸ್ಯೆ


ಮಗು, ನಿನ್ನ ತಪ್ಪಿಲ್ಲ ಅಂದಮೇಲೆ ಯಾಕೆ ಇಷ್ಟು ಕೊರಗುತ್ತೀಯೋ?”

ನನ್ನದು ತಪ್ಪಲ್ಲ ಅನ್ನುವುದು ನನ್ನ ನಂಬಿಕೆ ಅಷ್ಟೆ ಹೊರತು- ಅವಳ ಪ್ರಕಾರ ನಾನು ತಪ್ಪುಗಾರನಲ್ಲವೇ?”

ಅವಳಿಗೆ ಅವಳು ಸರಿ! ನಿನಗೆ ನೀನು... ಚಿಂತೆಯೇಕೆ?”

ಯೋಚಿಸುತ್ತಿದ್ದೇನೆ! ಅವಳದೇ ಸರಿ ಎಂದು ಸಮರ್ಥಿಸಲಾದರೂ ಕಾರಣವೇನೂ ಸಿಗುತ್ತಿಲ್ಲವಲ್ಲ!”

ಹಾ.... ನೀನು ಗುಲಾಮನಲ್ಲ! ಅವಳು ಹೇಳಿದಂತೆ ನೀನು ಕೇಳಬೇಕಾಗಿಲ್ಲ!”

ಅದೇ.... ನಾನು ಹೇಳಿದ್ದೇನೂ ಅವಳೂ ಕೇಳುತ್ತಿಲ್ಲ- ಕೇಳಲಿಲ್ಲ! ಅವಳೂ ನನ್ನ ಗುಲಾಮಳಲ್ಲ! ಮುಂದೆ?”

ಅಷ್ಟೆ! ನೀನು ಹೇಳಿದ್ದು ಅವಳೋ..., ಅವಳು ಹೇಳಿದ್ದು ನೀನೋ ಕೇಳಿ ನಿಮ್ಮ ಪ್ರೇಮವನ್ನು ಸಾಬೀತುಪಡಿಸಬೇಕಿಲ್ಲ!”

ಎಷ್ಟೆಲ್ಲಾ ಮಾಡಿದೆ!!”

ಕೊರಗದಿರು! ಅಷ್ಟು ಮಾಡಿದ್ದು ನಿನ್ನ ಒಳ್ಳೆಯತನ! ಅದನ್ನೇ ಇಟ್ಟುಕೊಂಡು ತನ್ನ ಸ್ವಾರ್ಥ ಸಾಧಿಸುವುದು ಅಷ್ಟು ಒಳ್ಳೆಯದಲ್ಲ!”

ಇದನ್ನು ಹೇಗೆ ಸಹಿಸಲಿ? ಮಾಡಲಿ? ಸಾಧ್ಯವಿಲ್ಲ! ನಾನೂ ಮನುಷ್ಯನೇ....! ಸ್ವಾರ್ಥಿಯೇ!”

ಇಷ್ಟಕ್ಕೂ ಅವಳ ಕೋರಿಕೆಯೇನು?”

ಅದನ್ನು ಕೋರಿಕೆ ಅನ್ನಲಾಗದು! ಆಜ್ಞೆ ಎಂದೂ ಹೇಳಲಾಗದು! ವಿಚಿತ್ರ ರೀತಿಯ ಬೇಡಿಕೆ!”

ಅದೇನಪ್ಪಾ ಅಂಥಾ ಬೇಡಿಕೆ....?!”

ಅವಳ ಹಳೆಯ ಪ್ರಿಯತಮನನ್ನು ಭೇಟಿಯಾಗಬೇಕಂತೆ!”

ಕೈ ಹಿಡಿಯಬೇಕಾದ ಸಮಯದಲ್ಲಿ ಕೈ ಕೊಟ್ಟು- ಮದುವೆಯಾಗದೆ ತಪ್ಪಿಸಿಕೊಂಡವನಲ್ಲವೇ?”

ಹೌದು! ಆ ಅಪಮಾನದಿಂದ ತಪ್ಪಿಸಲೇ ಅಲ್ಲವೇ ಅವಳನ್ನು ನಾನು ಮದುವೆಯಾದದ್ದು?”

ಹಾಗಿದ್ದರೆ ಅವಳ ಆ ಬೇಡಿಕೆ ತಪ್ಪು!”

ನಾ ಒಪ್ಪಿದೆ! ಅದಕ್ಕೇನು... ಭೇಟಿಯಾಗೋಣ! ಅವನನ್ನು ನೀನು ಮಿಸ್ ಮಾಡಿಕೊಳ್ಳಬೇಕಾಗಿಲ್ಲ- ಎಂದೆ!”

ವ್ಹಾಟ್? ನಿನಗೇನು ಹುಚ್ಚೇ....?”

ಆದರೆ ಸಮಸ್ಯೆ ಅದಲ್ಲ!”

ಇನ್ನೇನು? ಒಪ್ಪಿಕೊಂಡಮೇಲೆ ಕೊರಗೇಕೆ?”

ಅವಳ ಮೇಲಿರುವ ನನ್ನ ಪ್ರೇಮ ನಿಜವೇ ಆದರೆ..., ಅವರು ಭೇಟಿಯಾಗುವಾಗ ನಾನು ಇರಬಾರದಂತೆ!”

ನಿನ್ನ ತಲೆ! ಹಾಗಿದ್ದರೆ ನಿನ್ನ ಮೇಲಿನ ಅವಳ ಪ್ರೇಮ ನಿಜವೇ ಆಗಿದ್ದರೆ ಅವನನ್ನು ಭೇಟಿಯಾಗಬೇಡ ಅನ್ನು!”

ಅದೇ ಅಲ್ಲವಾ ಸಮಸ್ಯೆ...! ಅವಳು ಭೇಟಿಯಾಗಲು ಹೋಗುತ್ತಿರುವುದು ಅವಳ ಪ್ರಿಯತಮನನ್ನು ಅನ್ನುವಲ್ಲಿ, ನಾನು ಹಾಗೆ ಹೇಳುವುದರ ಪ್ರಸಕ್ತಿಯೇನು?!!”

ನಾ ಹೊರಟೆ!”

ಹು...! ಯಾರಿಗೂ ನನ್ನ ಸಮಸ್ಯೆ ಅರ್ಥವಾಗುವುದಿಲ್ಲ- ನಿರೀಕ್ಷೆಯಿಲ್ಲದ ಪ್ರೇಮದ ಕಷ್ಟ!!”

ಅನುಭವಿಸು- ಬೈ!”

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!