ನಂಬಲಾಗದ ಹೃದಯ
ನಂಬಲಾಗದ ಹೃದಯ!
*
ಪ್ರಳಯವಾಗುತ್ತಿದೆ ಗೆಳತಿ ಮನದೊಳಗೆ!
ಇನ್ನೂ ಹೇಗಿರಲಿ?
ತಿಳಿಯುತ್ತಿಲ್ಲ....
ಹೃದಯವೀಗ ಕಲ್ಲುಬಂಡೆ!
ನಿಯತ್ತಿನ ಪರೀಕ್ಷೆಗೆ...
ಒಬ್ಬರಾದಮೇಲೆ ಒಬ್ಬರು....
ಬಡಿದೂ ಬಡಿದೂ....
ಛಿದ್ರವಾಗುವ ಹಂತದಲ್ಲಿರುವ-
ಹೃದಯವೀಗ ಕಲ್ಲುಬಂಡೆ!
ಅಯ್ಯೋ.... ಒಂದಿಷ್ಟು ಪ್ರೇಮ....
ಬೇಕು ನನಗೆ!
ನೀ ಬಂದೆ.
ಪ್ರೇಮದ ಪರ್ಯಾಯ!!
ನಿಜವೇ...
ನೀ ಪ್ರೇಮವೇ...
ನಾನು?
ಮತ್ತೊಂದು ಪರೀಕ್ಷೆ!
ನಂಬೂ ನಂಬೂ ನಂಬೂ....
ಹೃದಯ ಕೂಗಿದ್ದು ನಿಯತ್ತಿನಿಂದಲೇ...
ಆದರೆ... ಆದರೆ...
ನಾ ಅರ್ಹನಲ್ಲ!
ಹಲವು ಪೆಟ್ಟು ಬಿದ್ದಿರುವುದೇ ಸಾಕ್ಷಿ!!
ಕೊಟ್ಟುಬಿಡು ಕೊನೆಯ ಪೆಟ್ಟು!
ಛಿದ್ರವಾಗಲಿ ಹೃದಯ-
ಮತ್ತೆಂದೂ
ಯಾರೂ
ಪರೀಕ್ಷಿಸದಂತೆ!!
Comments
Post a Comment