ತೀರ್ಮಾನ!

ತೀರ್ಮಾನ

ತೀರ್ಮಾನ! ತೆಗೆದುಕೊಳ್ಳುವುದು ಎಷ್ಟು ಕಷ್ಟವೋ, ಅಳವಡಿಸಿಕೊಳ್ಳುವುದು- ಅದಕ್ಕನುಗುಣವಾಗಿ ಬದುಕುವುದು ಅದಕ್ಕಿಂತ ಕಷ್ಟ!

ನಲವತ್ತು ವರ್ಷ ಮುಂಚೆ ನಾನು ತೆಗೆದುಕೊಂಡ ತೀರುಮಾನ.... ತೃಪ್ತಿಯಿದೆ ಈಗ!

ಅಸಾಧ್ಯ ಪ್ರೇಮ ಅವಳಿಗೆ ನನ್ನಲ್ಲಿ. ಹತ್ತು ವರ್ಷದ ಪ್ರೇಮ- ಅವಳ ಆಸೆಯಂತೆ ಅವಳಿಗೆ ಟೀಚರ್ ಕೆಲಸ ಸಿಕ್ಕಿ ಮದುವೆಯಲ್ಲಿ ಸಾರ್ಥಕತೆಯನ್ನು ಹೊಂದಿದಾಗ ಭವಿಷ್ಯದಬಗ್ಗೆ ಯಾವ ಯೋಚನೆಯೂ ಇರಲಿಲ್ಲ!

ನಾನಾಗ ಮುಂಬೈಯಲ್ಲಿದ್ದೆ. ಹದಿನೈದನೇ ವರ್ಷದಲ್ಲಿ ಜೀವನೋಪಾಯಕ್ಕಾಗಿ ಕಳ್ಳತನದಲ್ಲಿ ರೈಲುಹತ್ತಿ ಬಂದವನು.... ತಮ್ಮಂದಿರ ಸಹಕಾರದೊಂದಿಗೆ ಸ್ವಂತವಾಗಿ ಅಂಗಡಿಯೊಂದನ್ನು ಪ್ರಾರಂಭಿಸುವಷ್ಟು ಮಟ್ಟಿಗೆ ಬೆಳೆದಿದ್ದೆ!

ಮದುವೆಯಾದಾಗಲೇ ನಮಗೊಂದು ವಾಸ್ತವದ ಅರಿವಾಗಿದ್ದು!

ನಮ್ಮ ಬದುಕು- ‘ನಾನೊಂದು ತೀರ, ನೀನೊಂದು ತೀರ!’

ದುಃಖ ದುಮ್ಮಾನಗಳಿಂದ- ಅಪಮಾನ ಅಸಹಕಾರಗಳಿಂದ ತುಂಬಿದ್ದ ಬದುಕು ನಮ್ಮದು! ಹಠ- ಗೆಲ್ಲಬೇಕು, ಅಂದುಕೊಂಡಿದ್ದು ಸಾಧಿಸಬೇಕೆಂಬ ಹಠ- ಅವಳನ್ನು ಟೀಚರನ್ನಾಗಿಸಿತ್ತು- ನನ್ನನ್ನು ಸ್ವಂತ ಅಂಗಡಿಯ ಮಾಲೀಕನನ್ನಾಗಿಸಿತ್ತು!

ಈಗ....

ಯಾರಾದರೊಬ್ಬರು ಬಿ-ಟ್ಟು-ಕೊ--ಬೇ-ಕು!

ಸ್ವಲ್ಪ ದಿನ ನೋಡೋಣ ಎಂದು ನಾನು ಮುಂಬೈಗೆ ಹಾರಿದೆ.

ಎರಡು ರೀತಿಯ ಸಮಸ್ಯೆ ಎದುರಾಯಿತು!

ಒಂದು- ಮದುವೆಯಾದಾಗಲೇ ತಿಳಿದದ್ದು ನಾವು ಎಷ್ಟು ಆಳವಾಗಿ ಪ್ರೇಮಿಸುತ್ತಿದ್ದೇವೆಂದು! ಬಿಟ್ಟಿರಲಾರದ ಪ್ರೇಮ! ತಾಳಲಾಗದ ವಿರಹ! ಮದುವೆ ಆದೆವು ಅನ್ನುವುದಕ್ಕಿಂತ- ಆಗಿ ಸರ್ವಸ್ವವನ್ನೂ ಕಳೆದುಕೊಂಡೆವು ಅನ್ನುವ ಭಾವನೆ!

ಎರಡು- ವಯಸ್ಸು! ಸೌಂಧರ್ಯದ ಸಾಕಾರ ಮೂರ್ತಿ ಅವಳು. ಒಬ್ಬಳೇ...! ಗಂಡ ಎಲ್ಲೋ ದೂರ! ಗಂಡಸರ ನೋಟ- ವರ್ತನೆ.... ಅಸಹನೀಯ! ನನಗಾದರೋ.... ಚಂದದ ಹೆಣ್ಣನ್ನು ಕಂಡಾಗಲೆಲ್ಲಾ ಹೆಂಡತಿಯ ನೆನಪು! ಗಂಡಸರನ್ನು ಸೆಳೆಯುವುದರಲ್ಲಿ ಹೆಂಗಸರೂ ಏನೂ ಕಡಿಮೆಯಲ್ಲ! ಮನಸ್ಸು ಕೈಬಿಟ್ಟು ಹೋದರೆ ಕಷ್ಟ!

ಹೇಗೋ ತಾಳಿಕೊಂಡು ಹೋಗಬೇಕೆಂದುಕೊಂಡರೂ.... ತೀರುಮಾನವೊಂದನ್ನು ತೆಗೆದುಕೊಳ್ಳಲೇ ಬೇಕೆನ್ನುವ ಸಂದರ್ಭ- ಒತ್ತಡ- ತಾನಾಗಿಯೇ ಕ್ರಿಯೇಟ್ ಆಯಿತು!

ಅವಳು ಮಾನಸಿಕವಾಗಿ ಕುಸಿದಳು! ಅವಳಿಗೆ ಅವಳ ಸಂಗಾತಿ ಜೊತೆಯಲ್ಲಿಯೇ ಇರಬೇಕಿತ್ತು! ಹುಚ್ಚು ಹುಚ್ಚಾಗಿ ಆಡುವುದು- ಮಾನಸಿಕ ನಿಯಂತ್ರಣ ಬಿಟ್ಟು ಹೋಗುವುದು.... ಇನ್ನು ತಾಳಲಾರದೆ ಬಂದೆ.

ಮುಂದೆ....?

ಒಂದೋ ಅವಳು ಕೆಲಸ ಬಿಟ್ಟು ನನ್ನೊಂದಿಗೆ ಮುಂಬೈಗೆ ಬರಬೇಕು..... ಇಲ್ಲಾ.....

ಯೋಚನೆ....

ಸರಕಾರೀ ಕೆಲಸ ಅವಳದ್ದು.

ನಮ್ಮ ಮನೆಯಲ್ಲಿ ಅಪ್ಪನೇ ಅಮ್ಮ- ಅಮ್ಮನೇ ಅಪ್ಪ!” ಎಂದ ಮಗ.

ಅವನ ಮಾತಿನಲ್ಲಿ ಅಭಿಮಾನವಿತ್ತು. ಇಷ್ಟು ವರ್ಷಗಳಲ್ಲಿ ಒಂದಿಷ್ಟಾದರೂ ಕೀಳರಿಮೆ ತುಂಬದಂತೆ ನೋಡಿಕೊಂಡರು ಮಕ್ಕಳು.

ಅಪ್ಪ ಮನೆಯಲ್ಲಿ- ಅಮ್ಮ ತಂದು ಹಾಕುತ್ತಾರೆ.... ಅನ್ನುವಂತಾ ಅಭಿಪ್ರಾಯಗಳಿಗೆ,

ಸಮಾನತೆ ಅಂದರೆ ಇದು....!” ಅನ್ನುವಂತೆ ತಕ್ಕ ಉತ್ತರವನ್ನು ಕೊಡುತ್ತಿದ್ದರು.

ಎಲ್ಲರಿಗೂ- ಅಪ್ಪ ಮನೆಯಲ್ಲಿ ಅನ್ನುವುದು ಕಾಣಿಸುತ್ತದೆಯೇ ಹೊರತು, ಯಾಕೆ ಮನೆಯಲ್ಲಿ ಅನ್ನುವುದು ತಿಳಿಯದಲ್ಲಾ....!

ನಿಜ- ಅವಳು ಕೆಲಸಕ್ಕೆ ಹೋಗುತ್ತಾಳೆ, ನಾನು ಮನೆಯಲ್ಲಿ ಉಳಿದು ಮಕ್ಕಳನ್ನು ನೋಡಿಕೊಂಡೆ ಅನ್ನುವದು ಬಿಟ್ಟರೆ.... ಉಳಿದಂತೆ ನಾನೇ ರಾಜ! ನಮ್ಮ ಮನೆಯಲ್ಲಿ ನನ್ನ ಅಭಿಪ್ರಾಯಕ್ಕೇ ಒತ್ತು....

ಮೂವರು ಮಕ್ಕಳು.... ಹೆಣ್ಣು ಮಕ್ಕಳಿಬ್ಬರೂ ಸರಕಾರಿ ಕೆಲಸದಲ್ಲಿದ್ದಾರೆ.... ಮಗ.... ಕಥೆ ಕಾದಂಬರಿ ಸಿನೆಮಾ ಎಂದು ಅದರ ಹಿಂದೆ ಬಿದ್ದು.... ಈಗ.... ಸ್ವತಂತ್ರವಾಗಿ ನಿರ್ದೇಶಕನಾಗುತ್ತಿದ್ದಾನೆ!

ಹೆಮ್ಮೆಯೇ....

ನಮ್ಮಿಬ್ಬರ ಪ್ರೇಮದ ಪ್ರತಿರೂಪ ಮಕ್ಕಳು! ಭಾವನೆಗಳಿಗೆ- ಪ್ರೇಮಕ್ಕೆ ಅವರು ಕೊಡುವ ಬೆಲೆ ನೋಡಿದರೆ ಕಣ್ಣು ತುಂಬುತ್ತದೆ!

ನಾನೂ ಅವಳೂ.... ಈ ನಲವತ್ತು ವರ್ಷಗಳಲ್ಲಿ ಒಮ್ಮೆಯೂ ಒಂದು ವಾರಕ್ಕಿಂತ ಹೆಚ್ಚು ದಿನ ಒಬ್ಬರನ್ನೊಬ್ಬರು ಬಿಟ್ಟು ಇದ್ದವರಲ್ಲ. ನಮ್ಮದು ಸ್ವಲ್ಪ ಅತಿರೇಕವೇ...! ಎಲ್ಲಿಗೆ ಹೋದರೂ ಒಟ್ಟಿಗೆ ಹೋಗಬೇಕು... ಮಲಗುವುದಂತೂ- ಯಾರೇನಂದುಕೊಂಡರೆ ನಮಗೇನು....? ಒಟ್ಟಿಗೆ ಮಲಗಬೇಕು....!

ಈ ವಿಷಯಕ್ಕೆ ಮಗ ಆಗಾಗ ಗೇಲಿ ಮಾಡುತ್ತಿರುತ್ತಾನೆ. ಆದರೆ.... ಎಲ್ಲಿಗೇ ಹೋದರೂ ಅಪ್ಪ ಅಮ್ಮ ಒಟ್ಟಿಗೆ ಇರುವಂತೆ- ಅವರನ್ನು ಕಂಫರ್ಟ್ ಮಾಡಲು ಶ್ರಮಿಸುತ್ತಲೇ ಇರುತ್ತಾನೆ....

ಇನ್ನು ಮರಣ.... ಯಾರನ್ನು ಬಿಟ್ಟಿದೆ....?

ಬಂದರೆ ಬರಲಿ ಎಂದು ನಮ್ಮ ಪಾಡಿಗೆ ಬದುಕುತಿದ್ದೇವೆ....! ಅದರಲ್ಲೂ....

ಆಯುಸ್ಸು ಮುಗಿಸಿಯಲ್ಲದೆ ಒಟ್ಟಿಗೆ ಮರಣಿಸುತ್ತೇವೆನ್ನುವ ಚಿಂತೆಯೂ ಬರದಂತೆ....

ಮಗ- ನಮ್ಮನ್ನು ಬಂಧಿಸಿದ್ದಾನೆ!!

Comments

Post a Comment

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!