ಪ್ರೇಮ-ಬಂಧನ
ಪ್ರೇಮ ಬಂಧನ!
*
"ಬಂಧಿಸಲ್ಪಟ್ಟ ಪ್ರೇಮ ಇಲ್ಲವಾಗುತ್ತದೆ!" ಎಂದೆ.
"ಅರ್ಥವಾಗಲಿಲ್ಲ" ಎಂದರು.
"ಪ್ರೇಮ ಸ್ವತಂತ್ರವಾಗಿರಬೇಕು- ಸಾಗರದಂತೆ" ಎಂದೆ.
"ನಿನ್ನ ತಲೆ!" ಎಂದರು.
"ಯಾಕಮ್ಮ?" ಎಂದೆ.
"ವಯಸ್ಸು! ನಿನ್ನ ವಯಸ್ಸಿನವರಿಗೆ ಹಾಗೇ ಅನ್ನಿಸೋದು! ಕಂಡ ಕಂಡವರನ್ನೆಲ್ಲಾ ಪ್ರೇಮಿಸಿ-ದೆನೆಂಬ ಭ್ರಮೆಯಲ್ಲಿ ನೀನೇನೋ ಭಾರಿ ಪ್ರೇಮಿ ಅನ್ನುವಂತೆ!" ಎಂದರು.
"ಅಲ್ಲವಾ ಮತ್ತೆ? ಬಂಧನವಿದ್ದರೆ ಇದೆಲ್ಲಾ ಹೇಗೆ ಸಾಧ್ಯ?" ಎಂದೆ.
"ಪ್ರಪಂಚದಲ್ಲಿರುವವರೆಲ್ಲಾ ಹೀಗೆ ಅಂದುಕೊಂಡರೆ ಮುಗೀತು ಕಥೆ!" ಎಂದರು.
ಯೋಚನೆ! ನಿಜ ಎಲ್ಲೋ ಏನೋ ಮಿಸ್‌ಹೊಡೀತಿದೆ!!
"ಹಾಗಾದರೆ ಬಂಧನವೇ ಒಳ್ಳೆಯದು ಅನ್ನುತ್ತೀರ?" ಎಂದೆ.
"ಬಂಧನವೋ ಏನೋ.... ನನಗೆ ನಿಮ್ಮಪ್ಪನೇ ಪ್ರಪಂಚ- ನೀ ಹೇಳುವಂತೆ ಮಹಾಸಾಗರ! ನಮ್ಮ ಪ್ರೇಮಬಂಧನದ ಸಾಫಲ್ಯ ನೀನು!"
ನಾನೇನೂ ಮಾತನಾಡಲಿಲ್ಲ. ಅಮ್ಮನೇ ಹೇಳಿದರು-
"ಇದೊಂದು ಬಂಧನ ಅಂದುಕೊಂಡು ಅದರಿಂದ ಹೊರಬರಲು ಇಬ್ಬರೂ ಶ್ರಮಿಸಿದ್ದರೆ ಏನಾಗುತ್ತಿತ್ತು ಹೇಳು...." ಎಂದರು.
ಏನು ಹೇಳಲಿ.... ಮೌನವಾದೆ!
ಮೌನದ ಅರ್ಥ?
ReplyDelete