ಒಳಗಿನ ದೇವರು!

ಒಳಗಿನ ದೇವರು!

*

ಎಷ್ಟು ವರ್ಷದ ತಪಸ್ಸೋ.... ದೇವರು ಪ್ರತ್ಯಕ್ಷರಾದರು!

ಏನು ವರ ಬೇಕು?”

ನಿಮ್ಮನ್ನು ನಾನು- ನನ್ನೊಳಗೆ ಕಾಣಬೇಕು!”

ಅದು ಸ್ವಲ್ಪ ಕಷ್ಟ!”

..., ಇನ್ನೂ ಕಷ್ಟವೇ? ಬಾಹ್ಯದಲ್ಲಿ ಕಾಣಲೇ ಇಷ್ಟು ಕಷ್ಟಪಟ್ಟೆ! ಇನ್ನು ಒಳಗೆ ಕಾಣಲು ಅದೆಷ್ಟು ಕಷ್ಟಪಡಬೇಕೋ... ಆದರೂ- ಪಡುತ್ತೇನೆ- ಹೇಳಿ, ಏನು ಮಾಡಲಿ?!”

ಹೆಣ್ಣನ್ನು ಪ್ರೇಮಿಸು!” ಎಂದು ಹೇಳಿ ಅಪ್ರತ್ಯಕ್ಷರಾದರು!

ಹೆಣ್ಣನ್ನು ಪ್ರೇಮಿಸು ಎಂದರು- ಯಾವ ಹೆಣ್ಣನ್ನು ಎಂದು ಹೇಳಲಿಲ್ಲ!

ನಾನು ಪ್ರತಿ ಹೆಣ್ಣನ್ನೂ ಪ್ರೇಮಿಸಿದೆ! ಅದೇ ಕಾರಣವಾಗಿ ಯಾರೊಬ್ಬರೂ ಉಳಿಯಲಿಲ್ಲ!

ನಾನು ನನ್ನೊಳಗೆ ಹುದುಗಿಕೊಂಡೆ- ದೇವರನ್ನು ಕಂಡೆ!!

Comments

  1. ನಿನ್ನನ್ನು ಪ್ರೀತಿಸುವವರನ್ನು ಪ್ರೀತಿಸು ಅಂಡಿದ್ದಾರಂತೆ ಬಲ್ಲವರು 😁

    ReplyDelete

Post a Comment

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!