ಎಡವಿದ ಕಥೆ!
ಎಡವಿದ ಕಥೆ!
*
“ಕಥೆ ಕೇಳು ಹುಡುಗಿ! ನೀನಿದುವರೆಗೆ ಕೇಳದಿರುವ ಕಥೆ!”
“ನೀ ಏನೇ ಹೇಳಿದರೂ ನಾ ಮುಂಚೆ ಕೇಳಿರುವುದಿಲ್ಲ!”
“ಒಂದು ಊರು! ಅಲ್ಲೊಬ್ಬ ಹುಡುಗ!”
“ಒಂದೇ ಊರು- ಒಬ್ಬನೇ ಹುಡುಗನ?”
“ಈ ಕಥೆಗೆ ಸಂಬಂಧಪಟ್ಟ....!”
“ಹು!”
“ಒಮ್ಮೆ ದಾರಿಯಲ್ಲಿ ನಡೆದು ಹೋಗುವಾಗ ಎಡವಿ ಬಿದ್ದ!”
“ಹು!”
“ಎದ್ದ!”
“ಹು!”
“ಹಿಂದಕ್ಕೆ ನಡೆಯದೆ ಮುಂದಕ್ಕೇ ಹೋದ!”
“ಹು!”
“ದಾರಿ ತಲುಪಿದ್ದು ಮಹಾ ಸಮುದ್ರಕ್ಕೆ!”
“ಹು!”
“ಹಿಂತಿರುಗಿ ನಡೆಯಲು ತಿರುಗಿದ!”
“ಹು!”
“ಹೆಬ್ಬುಲಿ!”
“ಹು!”
“ಬಲ ಪಕ್ಕಕ್ಕೆ ಹೋಗೋಣವೆಂದರೆ- ಕಾಡಾನೆ!”
“ಹು!”
“ಎಡಪಕ್ಕ ಕಾಳಿಂಗ ಸರ್ಪ!”
“ಹು!”
“ಅವನು ಸಮುದ್ರಕ್ಕೇ ಬಿದ್ದ!”
“ಹು!”
“ಅಷ್ಟೇ ಕಥೆ!!!”
“ನಿನ್ನ ತಲೆ! ಇದೆಂತ ಕಥೆ?”
“ಯೋಚಿಸಿ ನೋಡು!”
“ಏನು?”
“ಎಡವಿ ಬಿದ್ದಾಗಲೇ ಎದ್ದು ತಿರುಗಿ ನಡೆದಿದ್ದರೆ?”
“ಎಂತ ಸಾವ! ತತ್ತ್ವ ಹೇಳು!”
“ಪ್ರೇಮ ನೈರಾಶ್ಯದಲ್ಲಿ ಮದುವಯೇ ಆಗುವುದಿಲ್ಲವೆಂದು ಶಪಥ ಮಾಡಿದವ- ಇನ್ನೊಬ್ಬಳೊಂದಿಗೆ ಮದುವೆಯ ತಯಾರಿಯಲ್ಲಿದ್ದಾನೆ!!”
Comments
Post a Comment