ಮಾನಸಿಕ- “ಎಲ್ಲೆ!”
ಮಾನಸಿಕ- “ಎಲ್ಲೆ!”
“ಯಾಕೆ ಬರಹದಲ್ಲಿ ಇಷ್ಟೊಂದು ಹಿಡಿತ!” ಎಂದ.
ದಿನಕ್ಕೆ ಒಮ್ಮೆಯಾದರೂ ಕಾಲು ಕೆರೆದು ಜಗಳಕ್ಕೆ ಬರದಿದ್ದರೆ ಅವನಿಗೆ ಊಟ ಸೇರುವುದಿಲ್ಲ!
“ಯಾರು? ನನ್ನ ಬರಹದಲ್ಲೇ?” ಎಂದೆ. ಅವನೊಂದಿಗಿನ ಜಗಳ ಯಾವತ್ತಿಗೂ ನನಗೆ ಖುಷಿಯೇ... ಏನೋ ಇರುತ್ತದೆ! ಅವನು ಸರಿ ನಾನು ತಪ್ಪು ಅನ್ನುವುದೆಲ್ಲಾ ನಮ್ಮ ಮಧ್ಯೆ ಇಲ್ಲ! ಜಗಳ ಕೊನೆಮುಟ್ಟುತ್ತದಾ? ಅದೂ ಇಲ್ಲ! ಇಬ್ಬರೂ ಅವರವರ ತೀರುಮಾನಕ್ಕೆ ಬರುತ್ತೇವೆ! ಕೆಲವೊಮ್ಮೆ ಅಕಾರಣವಾಗಿ ತಪ್ಪು ನನ್ನದಿದ್ದರೂ ವಾದಿಸುತ್ತೇನೆ- ಅವನೂ...! ನಂತರ ಇಬ್ಬರೂ ಪರಸ್ಪರ ನೋಡಿ ಮುಗುಳುನಗುತ್ತೇವೆ- ನಮಗೆ ಅರ್ಥವಾಗಿರುತ್ತದೆ! ಆದರೂ ಒಬ್ಬರಿಗೊಬ್ಬರು ಒಪ್ಪಿಕೊಳ್ಳುವುದಿಲ್ಲ!
“ನೀವು- ಹೆಂಗಸರು!” ಎಂದ.
ಉರಿದುಹೋಯಿತು!
“ನಿನ್ನ ತಲೆ! ನನಗೇ ಯಾವ ನಿಯಮವೂ ಇಲ್ಲ! ಎಲ್ಲೆಗಳೂ ಇಲ್ಲ! ನಿನಗೇ ಗೊತ್ತು! ಇನ್ನು ಬೇರೆ ಹೆಂಗಸರನ್ನು ಹೇಳಬೇಕೆ!?” ಎಂದೆ.
“ಇಲ್ಲವೇ... ಮಾಧವಿಕುಟ್ಟಿ ಕೇಳಿದ್ದೀಯ? ಕಮಲಾದಾಸ್ ಆಗಿ ಕೊನೆಗೆ ಕಮಲಾ ಸುರಯ್ಯ ಆಗಿ ಮರಣಿಸಿದರು!” ಎಂದ.
ಏನೋ ಮಿಸ್ ಹೊಡೆಯುತ್ತಿದೆ. ಇವ ನೇರವಾಗಿ ಬುಡಕ್ಕೆ ಕೈ ಹಾಕುವುದಿಲ್ಲ! ರೆಂಬೆ ಕೊಂಬೆಗಳನ್ನೆಲ್ಲಾ ಕತ್ತರಿಸಿ ಬುಡದ ಕಡೆಗೆ ಬರುತ್ತಾನೆ! ನಂತರ ಕಡಿಯಲ ಬೇಡವಾ ಎಂದು ಬುಡವನ್ನೇ ಕೇಳುತ್ತಾನೆ!
“ಅವರಷ್ಟು ಓಪನ್ ಆಗಿ ಬರೆದ ಹೆಣ್ಣು ಯಾರಿದ್ದಾರೆ- ಹೇಳು!” ಎಂದೆ.
“ಅದೇ ಸಮಸ್ಯೆ!” ಎಂದ.
“ಏನು ಸಮಸ್ಯೆ?”
“ನಿಮ್ಮ ಪ್ರಕಾರ ಓಪನ್ ಆಗಿ ಹೇಳುವುದೆಂದರೆ- ಎಲ್ಲೆಗಳಿಲ್ಲ ಎಂದು ಹೇಳುವುದೆಂದರೆ...” ಎಂದು ನನ್ನ ಮುಖವನ್ನು ನೋಡಿದ. ಅವನ ನೋಟದಲ್ಲಿ ತುಂಟತನವಿತ್ತು.
ಏನು ಅನ್ನುವಂತೆ ಹುಬ್ಬು ಕುಣಿಸಿದೆ.
“ಹೆಣ್ಣಿಗೆ ಎಷ್ಟು ಜನರೊಂದಿಗೆ ಸಂಬಂಧವಿದೆ- ತನ್ನನ್ನು ಯಾರು ಯಾರು ಏನು ಮಾಡಿದರು- ಎಂದು ಓಪನ್ ಆಗಿ ಹೇಳುವುದು! ಅಲ್ಲವೇ?” ಎಂದ.
ಸಧ್ಯ ಸಭ್ಯತೆಯ ಎಲ್ಲೆಯನ್ನು ಮೀರಲಿಲ್ಲ ಅಂದುಕೊಂಡೆ!
“ಅದು ಅಷ್ಟು ಸಾಮಾನ್ಯ ವಿಷಯವೇ...?” ಎಂದೆ.
“ಮಾಧವಿಕುಟ್ಟಿಯ ಆತ್ಮಚರಿತ್ರೆಯಲ್ಲಿ ಒಂದುಕಡೆ ಹೇಳುತ್ತಾರೆ.... ವ್ಯಕ್ತಿಯೊಬ್ಬ ತನ್ನನ್ನು ಸಂಭೋಗಿಸಿದ ಎಂದು! ಕುಟುಂಬ ಸ್ನೇಹಿತನೇ... ಒಬ್ಬಳೇ ಇದ್ದಾಗ ಬಂದು ಸಂಭೋಗಿಸಿದನಂತೆ! ಸಂಭೋಗ ಅನ್ನುವ ಪದವನ್ನೇ ಬಳಸಿದ್ದಾರೆ!”
“ಅದೇ ಪದ ಎಷ್ಟು ಸಾರಿ ಹೇಳ್ತೀಯ? ಅದೇನು ಸಾಮಾನ್ಯ ವಿಷಯವೇ?” ಎಂದೆ. ಹೆದರಿಕೆ ಶುರುವಾಯಿತು! ಸಭ್ಯತೆ- ಎಲ್ಲೆ.... ಅದೂ ಈ ಮುಟ್ಠಾಳನಿಗೆ!
“ಈಗ ನಿನ್ನ ಪದ್ಯವನ್ನೇ ತಗೋ.... ಅದನ್ನು ಪದ್ಯ ಅನ್ನುವುದು ಬೇಡ- ಕಾವ್ಯಾತ್ಮಕ ಬರಹವನ್ನೇ ತಗೋ.... ಎಷ್ಟು ಓಪನ್ ಆಗಿ ಹೇಳಿದ್ದೀಯ ಅಲ್ಲವಾ...!”
“ನಾವು ಓಪನ್ ಆಗಿ ಹೇಳುವುದಿಲ್ಲ ಎಂದು ತಾನೆ ನೀನು ವಾದಿಸುತ್ತಿರುವುದು!” ಎಂದೆ.
“ವಾದವಲ್ಲ! ಚರ್ಚೆ ಅನ್ನು! ಅಥವಾ ಮಂಡನೆ!”
“ಒಂದೋ ನೇರವಾಗಿ ವಿಷಯವನ್ನು ಹೇಳು! ಅಥವಾ ಎಲ್ಲಾದರೂ ಹೋಗಿ ಸಾಯಿ!” ಎಂದೆ.
“ಅನುರಕ್ತನಾದನು ಅನ್ನುವ ಪದ್ಯ- ಕಾವ್ಯ! ಅವನು ನಿನಗೆ ಅನುರಕ್ತನಾದನು- ಅಲ್ಲವಾ? ಅವನು ನನ್ನನ್ನು ಸಂಭೋಗಿಸಿದನು- ಎಂದು ಮಾಧವಿಕುಟ್ಟಿ ಹೇಳಿದಂತೆ!” ಎಂದ.
ಮತ್ತೆ ಎಲ್ಲೋ ಏನೋ ಮಿಸ್ ಹೊಡೆಯುತ್ತಿದೆ! ನನ್ನ ಮೌನವನ್ನು ಕಂಡು ಅವನೇ ಮುಂದುವರೆಸಿದ-
“ನಿನ್ನನ್ನು ಕಂಡ ಭ್ರಮರ ನಿನ್ನೆಡೆಗೆ ಆಕರ್ಷಿತವಾಯಿತು! ಅವನು- ಭ್ರಮರ ಬಂದದ್ದೋ ನಿನ್ನೆದೆಯ ಜೇನನ್ನು ಹೀರಲು! ಅವನ ಸ್ಪರ್ಶ- ನಾದ- ನಿನ್ನನ್ನು ನೀನು ಅವನಿಗೆ ಸಮರ್ಪಿಸುವಂತೆ ಮಾಡಿತು! ನಿನ್ನೊಳಗೆ ಮುಳುಗೆದ್ದ ಅವನು ಆನಂದದಿಂದ ಹುಚ್ಚನಂತಾದಾಗ- ಭಾವ- ಪ್ರೇಮ ಬಂಧನದಲ್ಲಿ ಶಾಂತನನ್ನಾಗಿ ಮಾಡಿದೆ! ಅದ್ಭುತ... ನಿಜಕ್ಕೂ ಅದ್ಭುತ! ನಿನ್ನ ಭಾವಾಕ್ಷರಗಳಿಗೆ ನನ್ನ ಮನ ತುಂಬಿದ ಪ್ರಣಾಮಗಳು- ಲವ್‌ಯೂ...!” ಎಂದ.
ಗೊಂದಲದಿಂದ ಅವನ ಮುಖವನ್ನು ನೋಡಿದೆ! ಅವನ ಮುಖದಲ್ಲಿ ನಿಜಕ್ಕೂ ಅಭಿಮಾನವಿತ್ತು. ಆದರೆ ಹೇಳಬೇಕಿರುವುದು ಇದಲ್ಲ ಅನ್ನುವ ಭಾವ...!
“ಇನ್ನೂ ಎಷ್ಟು ಎಲ್ಲೆ ಮೀರಬೇಕು ಮಾರಾಯ!” ಎಂದೆ.
“ಎಲ್ಲೆ ಮೀರುವುದು ಎಂದರೆ.... ಇದೇ ಕಾವ್ಯವನ್ನು ನಾನು ಹೆಣ್ಣಾಗಿ ಬರೆದಿದ್ದರೆ ಹೇಗೆ ಬರೆಯುತ್ತಿದ್ದೆ ಗೊತ್ತೆ...? ಪದಗಳನ್ನು ಕಡೆಗಣಿಸು- ನಿಜಕ್ಕೂ ನಿನ್ನಷ್ಟು ಉತ್ಕೃಷ್ಟವಾದ ಪದಗಳನ್ನು ಬಳಸುವಷ್ಟು ನಾನು ಪ್ರಬುದ್ಧನಲ್ಲ... ಆದರೆ ವಿಷಯವನ್ನು ತಿಳಿಯಲು ಯತ್ನಿಸು....” ಎಂದು ಹೇಳಿ ನನ್ನ ಮುಖವನ್ನು ನೋಡಿ...
“ತಮ್ಮ ಜೀವನದಲ್ಲಿ ನಡೆದ- ಜೀವನಕ್ಕೆ ಸಂಬಂಧಪಟ್ಟ ಘಟನೆಗಳನ್ನು ಯಾರೂ ಹೇಳುತ್ತಾರೆ! ತಮ್ಮ ಮನದಲ್ಲೇನಿದೆಯೆಂದು ಹೇಳುವುದಿಲ್ಲ! ಅದೇ ನಿನಗೂ ನನಗೂ ಇರುವ ವ್ಯತ್ಯಾಸ!” ಎಂದ.
ಏನೋ ಸಣ್ಣ ಕಿಡಿ ಬಿದ್ದದ್ದು ನಿಜ! ಆದರೆ ಅರ್ಥವಾಗಲಿಲ್ಲ.... ಸಂಶಯದಿಂದ ನೋಡಿ,
“ನೀನಾಗಿದ್ದರೆ ಹೇಗೆ ಬರೆಯುತ್ತಿದ್ದೆ?” ಎಂದೆ.
“ಅವನು ನನಗೆ ಅನುರಕ್ತನಾದ- ನಾನು ಸಮರ್ಪಿತಗೊಂಡೆ ಎನ್ನುವಂತಲ್ಲದೆ.... ನಾನೇ ಅವನಿಗೆ ಅನುರಕ್ತಳಾದೆ ಅದನ್ನರಿತು ಅವನು ನನ್ನನ್ನು ತಣಿಸಿದ- ಅನ್ನುವಂತೆ!” ಎಂದು ಹೇಳಿ ನನ್ನ ಮುಖವನ್ನು ನೋಡಿ....,
“ನೀನು ಕವಿಯತ್ರಿ! ನಾನು ಕಥೆಗಾರ! ನಿನ್ನಂತೆ ಸಭ್ಯ ಪದಗಳನ್ನು ಬಳಸುವುದು ನನಗೆ ಅಸಾಧ್ಯ! ನಿಜ ಹೇಳಬೇಕೆಂದರೆ ಗೊತ್ತಿಲ್ಲ! ಆದ್ದರಿಂದ ನಿನ್ನ ಪದಗಳನ್ನು ನೀನು ಕಲ್ಪಿಸಿಕೋ... ವಿಷಯ ಇದು....” ಎಂದು ನಿಲ್ಲಿಸಿ ಉಸಿರೆಳೆದು ಮುಂದುವರೆಸಿದ...,
“ಅವನನ್ನು ಕಂಡ ಕ್ಷಣ ನನ್ನೊಳಗೇನೋ ಪುಳಕ. ಎದೆಹೂವು ನಿಮಿರಿ- ಅವನು ದಾಹಿಯಾಗಬೇಕೆಂಬ ಆಸೆ! ಅವನ ದಾಹಕ್ಕೆ ನಾನು ಅಮೃತವುಣಿಸಬೇಕು- ಇಲ್ಲದಿರೆ ನನ್ನ ಸ್ಥನಾಗ್ರಗಳ ನಿರಾಸೆಯನ್ನು ನಾನು ತಡೆದುಕೊಳ್ಳಲಾರದವಳಾಗುತ್ತೇನೆ! ಅವನೂ ನೋಡಿದ! ನನ್ನ ಕಣ್ಣಿನಲ್ಲಿನ ವಾಂಛೆ ಅವನನ್ನು ತಲುಪಿತು! ನನ್ನೆಡೆಗೆ ಬಂದ... ಅವನ ತುಟಿ ನನ್ನ ಅಧರದೆಡೆಗೆ ಬಂದಾಗ- ನನ್ನ ಭಾವ ಅವನಿಗೆ ತಲುಪಲಿಲ್ಲ- ಅವ ಯೋಗ್ಯನಲ್ಲ ಅನ್ನುವ ಭಾವ ಬಂತು... ಆದರೆ ಅವನ ನೋಟ- ನಿನ್ನದರ ಈಗ ನನಗೆ ಬೇಡ ಅನ್ನುವಂತೆ- ಅವನ ಮುಖ ನನ್ನೆದೆಯೆಡೆಗೆ ಚಲಿಸಿದಾಗ... ನನ್ನರಿವಿಲ್ಲದೆ ಒತ್ತಿಕೊಂಡೆ... ಇವ ತಣಿಸಬಲ್ಲ! ಅಗ್ರಗಳು ಅವನ ಅಧರಗಳ ಮಧ್ಯೆ ಸಿಕ್ಕಿದಾಗಿನ ಪುಳಕ ಕೆಳಕ್ಕೆ ಸಂಚಲಿಸಿದಾಗ.... ಅದನ್ನರಿತವನಂತೆ ಅವನೂ ಕೆಳಕ್ಕೆ....! ಸಂತೃಪ್ತಿಯಿಂದ ಕಣ್ಣುಮುಚ್ಚಿದೆ.... ನನ್ನೊಳಗನ್ನು ಅರಿತು- ಭಾವಕ್ಕೆ ಸ್ಪಂದಿಸಿ- ಆನಂದದ ಉತ್ತುಂಗಕ್ಕೆ ಒಯ್ದ ಅವನ ತುಟಿಯ ತಣ್ಣನೆಯ ಸ್ಪರ್ಶ ರಪ್ಪೆಯನ್ನು ಒತ್ತಿದಾಗ ಕಣ್ಣುಬಿಟ್ಟೆ! ಮುಖವನ್ನು ಬೊಗಸೆಗೆ ತೆಗೆದುಕೊಂಡು ತುಟಿಗೆ ತುಟಿಯೊತ್ತಿದೆ!” ಎಂದು ನಿಲ್ಲಿಸಿ ನನ್ನ ಮುಖವನ್ನೇ ನೋಡಿದ.
ನಾ ಭಾವಸಮಾಧಿಯಲ್ಲಿದ್ದೆ!!
“ಹೀಗೆ ಹೆಣ್ಣು ಬರೆಯತೊಡಗಿದಂದು... ಅವಳ ಬರಹಕ್ಕೊಂದು ದಾರ್ಷ್ಟ್ಯ ಬರುತ್ತದೆ! ಯಾವ ರೀತಿಯ ದಾರ್ಷ್ಟ್ಯ ಗೊತ್ತೇ...? ಈಗ ನಾನು ಬರೆದ ಕಥೆಗಳಿಗಿದೆಯಲ್ಲ- ಹಾಗಲ್ಲ! ಅಂದರೆ ನಾನು ಬರೆಯುವುದು ಹೀಗೆಯೇ... ಬೇಕಿದ್ದರೆ ಓದಿ ಅನ್ನುವ ದಾರ್ಷ್ಟ್ಯವಲ್ಲ- ಅದಕ್ಕೂ ಮೇಲೆ...” ಎಂದು ಹೇಳಿ ನನ್ನ ಮುಖವನ್ನೇ ನೋಡುತ್ತಾ...,
“ನಾನು ಬರೆಯುವುದು ಹೀಗೆಯೇ... ಬೇಕಿದ್ದರೆ ಓದಿ ಅಲ್ಲ- ನೀವು ಓದಲೇ ಬೇಕು ಅನ್ನುವ ದಾರ್ಷ್ಟ್ಯ!” ಎಂದ.
“ಇದಕ್ಕೂ ಮಾಧವಿಕುಟ್ಟಿಗೂ ಏನು ಸಂಬಂಧ ಮಾರಾಯ!” ಎಂದೆ. ನನ್ನ ಸಮಸ್ಯೆ ಅದು!
“ಈ ರೀತಿ ಬರೆಯುವಾಗ ಹೆಣ್ಣಿಗೊಂದು ಬೆನಿಫಿಟ್ ಇದೆ!” ಎಂದ. ಅವ ಹೇಳುವ ರೀತಿಗೆ ನಾ ಅಡ್ಜಸ್ಟ್ ಆಗಬೇಕು ಹೊರತು- ನನಗನುಗುಣವಾಗಿ ಅವ ಹೇಳುವುದಿಲ್ಲ! ಮುಂದುವರೆಸು ಅನ್ನುವಂತೆ ನೋಡಿದೆ.
“ಇದನ್ನೇ ಗಂಡು ಬರೆದರೆ.... ಅವನು ವಿವಾಹಿತನಾಗಿದ್ದರೂ... ಹೆಂಡತಿಯೊಂದಿಗಿನ ಕಾಮದ ಅರಿವಿನಿಂದ ಬರೆದಿದ್ದರೂ.... ಅವನು ಯಾರಬಗ್ಗೆ ಬರೆದನೋ ಅನ್ನುವ ಗೊಂದಲ ಓದುಗರಿಗೆ ಉಂಟಾಗುತ್ತದೆ! ಹೆಣ್ಣು ಬರೆದರೆ... ಅದವಳ ಗಂಡನೋ- ಮದುವೆಯಾಗದವಳಾದರೆ- ಅವಳ ಪ್ರಿಯಕರನ ಬಗ್ಗೆಯೋ ಬರೆದದ್ದಾಗುತ್ತದೆ!- ಇದೊಂದು ರೀತಿಯ ಪ್ರಪಂಚದ ಅಹಂ- ಈಗೋ!” ಎಂದ.
ನಾ- ಮೌನ!
“ಇನ್ನು ಮಾಧವಿಕುಟ್ಟಿಯ ವಿಷಯಕ್ಕೆ ಬರೋಣ! ಅವನು ನನ್ನ ಸಂಭೋಗಿಸಿದ! ಯಾಕೆ ಸಂಭೋಗಿಸಿದ? ಅವನು ಸಂಭೋಗಿಸಬೇಕೆಂಬ ಆಸೆ ನಿನಗಿರಲಿಲ್ಲವೇ ಮಾಧವಿಕುಟ್ಟಿ? ಆ ಆಸೆಯನ್ನು ಒಪ್ಪಿದ ದಿನ- ಹೆಣ್ಣಿನ ಪ್ರಬುದ್ಧತೆಯ ಅರ್ಧದಷ್ಟಾದರೂ ತಲುಪಲು ಗಂಡು ತಪಸ್ಸು ಮಾಡಬೇಕಾಗುತ್ತದೆ!!” ಎಂದ.
Comments
Post a Comment