ನವರಸ

ನವರಸ

1. ಮದುವೆಯಾದ ಮೊದಲರಾತ್ರಿ ಗಂಡನ ಕಣ್ಣಿನ ಭಾವನೆಯನ್ನು ಕಂಡು ನಾಚಿದಳು ಹೆಂಡತಿ!

2. ಮುತ್ತು ಕೊಟ್ಟ ಗಂಡನ ಕಣ್ಣು ನೋಡಿ "ರೀ... ಗರ್ಬಿಣಿ ಆಗ್ಬಿಡ್ತೀನ? ಇಷ್ಟು ಬೇಗ ಬೇಡವಿತ್ತು!” ಎಂದ ಹೆಂಡತಿಯ ಅಮಾಯಕ ಮಾತಿಗೆ ನಕ್ಕ ಗಂಡ!

3. ತನ್ನಿಂದ ಮಕ್ಕಳಾಗುವುದಿಲ್ಲ ಅನ್ನುವ ವಾಸ್ತವವನ್ನು ಹೇಗೆ ಹೇಳುವುದು ಅನ್ನುವ ಯೋಚನೆ ಬಂದಾಗ- ಗಂಡನ ಕಣ್ಣು ತುಂಬಿತು.

4. ಮಾಡಿದ ಮೋಸವನ್ನು ಅರಿತರೆ- ಮೊದಲೇ ಕೋಪಕ್ಕೆ ಹೆಸರಾದ ಹೆಂಡತಿಯ ಸಹೋದರರ ಭಾವವನ್ನು ನೆನೆದು ನಡುಗಿದ ಗಂಡ!

5. ಏನೇ ಆಗಲಿ ಹೆಂಡತಿಯ ಮುಖವನ್ನು ಕಂಡಾಗ- ಹಳೆಯ ಕಾಲದಲ್ಲಿ ಯುದ್ಧವನ್ನು ಮಾಡಿ ರಾಜಕುಮಾರಿಯರನ್ನು ಗೆದ್ದು ಬಂದ ರಾಜರ ನೆನಪಾಗಿ ಕೈ ಮೀಸೆಗೆ ಹೋಯಿತು

6. ಹೆಂಡತಿಗೆಲ್ಲಿ ತನ್ನಲ್ಲಿನ ಕೊರತೆ, ತನ್ನ ಮೋಸ ಅರಿವಿಗೆ ಬರುತ್ತದೋ.... ಅನ್ನುವ ಹೆದರಿಕೆ ಇದ್ದೇ ಇತ್ತು!

7. ಹೆಂಡಿತಿಯ ಸಹೋದರರೆಲ್ಲ ಸೇರಿ ತನ್ನ ಹೊಟ್ಟೆಯನ್ನು ಬಗೆದು ಕರುಳು ಕಿತ್ತು... ರಕ್ತದ ಕೋಡಿ ಹರಿದು... ಆ ನೆನಪೇ ಹೊಟ್ಟೆ ತೊಳೆಸುವಂತೆ ಮಾಡಿತು!

8. ಮಧುಚಂದ್ರದ ಈ ದಿನ.... ತಮ್ಮ ಬಾಳಿನ ಅದ್ಭುತ ಕ್ಷಣ ಅನ್ನುವುದಂತೂ ನಿಜ!

9. ರಿಂಗಣಿಸಿದ ಫೋನ್ ತೆಗೆದು ಕಿವಿಗಿಟ್ಟುಕೊಂಡಾಗ ಅತ್ತಲಿಂದ ಫ್ಯಾಮಿಲಿ ಡಾಕ್ಟರ್‌.... “ನಿಮಗೆ ಮಕ್ಕಳಾಗುವುದಿಲ್ಲ ಅನ್ನುವ ರಿಪೋರ್ಟ್ ತಪ್ಪು! ನೀವು ಖಂಡಿತಾ ತಂದೆಯಾಗಬಲ್ಲಿರಿ...!” ಎಂದಾಗ ಮನವನ್ನಾಕ್ರಮಿಸಿದ ಭಾವ ಯಾವುದು...?

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!