ಸ್ತ್ರೀ ಸ್ವಾತಂತ್ರ್ಯ
ಸ್ತ್ರೀ ಸ್ವಾತಂತ್ರ್ಯ!
*
ಹಾಗೆ...., ಹೆಣ್ಣಿನ ಗರ್ಭದಿಂದ ಹೊರಬಿದ್ದು ಸ್ವತಂತ್ರನಾದೆ!
ಗಂಡಿಗೇನು.... ಎರಡು ಕ್ಷಣದ ಆವೇಶದಲ್ಲಿ ತನ್ನ ಕರ್ತವ್ಯ ಮುಗಿಸಿಬಿಟ್ಟ!
ಹೆಣ್ಣು...?
ಒಂಬತ್ತು ತಿಂಗಳು ತನ್ನ ಉದರದಲ್ಲಿ ನನ್ನನ್ನು ಹೊತ್ತು ಅಪಾರ ಹಿಂಸೆ ಅನುಭವಿಸಿ ಹೆತ್ತು ನಿಟ್ಟುಸಿರು ಬಿಟ್ಟಳು!
ಮುಗಿಯಿತೇ ಕರ್ತವ್ಯ?
ಶುರು!
ಎದೆಹಾಲೂಡಿಸಿ, ಪಾಲನೆ ಪೋಷಣೆ ಮಾಡಿ....
ಅರ್ಥವಾಯಿತೆ....?
ಗಂಡಿಗೆ ಜನ್ಮನೀಡುವ ಮೂಲಕ ಸ್ವಾತಂತ್ರ್ಯ ನೀಡುವ ಹೆಣ್ಣು- ಅತಂತ್ರೆ!
ಇದು ನನಗೆ ಅರ್ಥವಾಗುವುದಿಲ್ಲ!
ಸನಾತನ ಕಾಲದಿಂದಲೂ ಹಾಗೆಯೇ ಬಂದಿರಬಹುದು.... ಹೆಣ್ಣಿಗೆ ಅವಲಂಬನೆಯ ಗುಣ- ಗಂಡಿಗೆ ನಾನು ಪೋಷಕನೆಂಬ ಅಹಂ!
ಇರಲಿ...!
ಗಂಡು ಹೆಣ್ಣು.... ಇಬ್ಬರಿಗೂ ಅವರದೇ ಆದ ಕರ್ತವ್ಯಗಳು ಅಂದುಕೊಳ್ಳೋಣ....
ಗಂಡು ಒಂದು ಕುಟುಂಬದ ಪೋಷಣೆಗೆ ಏನು ಬೇಕೋ ಅದು ಮಾಡುತ್ತಾನೆ!
ಹೆಣ್ಣು ಒಂದು ಕುಟುಂಬದ ಪೋಷಣೆ ಮಾಡುತ್ತಾಳೆ!
ಅರ್ಥವಾಯಿತೆ ವ್ಯತ್ಯಾಸ?
ಇಬ್ಬರೂ ಅವರವರ ಕರ್ತವ್ಯ ಮಾಡಿದರು.... ಸಮಸ್ಯೆಯೇನು?
ಸಮಸ್ಯೆ.... ತನ್ನ ಕರ್ತವ್ಯವನ್ನು ಮುಗಿಸಿದ ಗಂಡು ತನ್ನಿಚ್ಚೆಯಂತೆ ಬದುಕಬಲ್ಲ!
ಹೆಣ್ಣಿಗೆ ಆ ಸ್ವಾತಂತ್ರ್ಯವಿಲ್ಲ!
ಯಾಕೆ?
ಹೆಣ್ಣಿಗೂ ಮೆದುಳಿದೆ, ಹೃದಯವಿದೆ, ಭಾವನೆಗಳಿದೆ ಅನ್ನುವುದನ್ನು ಗಂಡು ಮರೆಯುತ್ತಾನೆ!
ತನ್ನ ಸೇವೆ ಮಾಡುವುದಷ್ಟೆ ಅವಳ ಕರ್ತವ್ಯ ಅನ್ನುತ್ತಾನೆ!
ಸರಿ... ಅವಳ ಹಕ್ಕು?
ಕರ್ತವ್ಯ ಮಾತ್ರ ಇಬ್ಬರಿಗೂ.... ಹಕ್ಕು ಗಂಡಿಗೆ ಮಾತ್ರ!
ತಪ್ಪು ಯಾರದು?
ಗುಲಾಮತೆಗೆ ಒಗ್ಗಿಹೋದ ಹೆಣ್ಣಿನದೇ...!
“ನನ್ನ ಕರ್ತವ್ಯವನ್ನು ನಾನು ಮಾಡುತ್ತೇನೆ.... ಹಾಗೆಯೇ ನನ್ನ ಹಕ್ಕನ್ನು ಅಥವಾ ಸ್ವಾತಂತ್ರ್ಯವನ್ನು ಅನುಭವಿಸಲು ಬಿಡು!” ಎಂದು ಹೇಳಲಾಗುವವರೆಗೆ ಹೆಣ್ಣಿನ ಕನಸುಗಳಿಗೆ ಬೆಲೆಯಿಲ್ಲ!
ಅನುಭವಿಸಲು ಬಿಡು ಎಂದು ಹೇಳುವ ಅಗತ್ಯವೂ ಇಲ್ಲದ ಕಾಲ ಬಂದಾಗ....
ಗಂಡು ಹೆಣ್ಣು.... ಎರಡು ವ್ಯಕ್ತಿತ್ವ!
ಹೆಣ್ಣು ಯಾವತ್ತು ತಮ್ಮ ಗುಲಾಮನಾಗಿ ಇರಬೇಕೆಂಬ ಸ್ವಾರ್ಥ. ತಾನು ಗಂಡು ಎನ್ನುವ ಆಹಒ ಆದರೆ ಭಾವನೆಗಳು ಇಬ್ಬರಿಗೂ ಒಂದೇ ಎಂದು ತಿಳಿದು ಹೆಣ್ಣನ್ನು ತುಳಿದೆ ಬದುಕುತ್ತಾನೇ ಗಂಡು. ಹೆಣ್ಣು ತನ್ನಮಕ್ಕಳ ಭವಿಷ್ಯವನ್ನು ನೋಡಿ ಮಕ್ಕಳಿಗೋಸ್ಕರ ತನ್ನ ಆಸೆಗಳನ್ನು ಸಮಾಧಿಮಾಡುತ್ತಾಳೆ.
ReplyDelete