ಅಪ್ಪ- ಮಗ
“ಅಪ್ಪಾ.....”
“ಏನು ಮಗನೇ?”
“ಆ ಹುಡುಗನನ್ನು ಯಾಕೆ ಹೊಡೆದೆ?”
“ಅವನು ದುಡ್ಡು ಕದ್ದನಲ್ಲಾ.... ಅದ..” ಅಪ್ಪ ಪೂರ್ತಿಯಾಗಿ ಹೇಳುವ ಮುಂಚೆ ಮಗ ಹೇಳಿದ,
“ಇಲ್ಲಪ್ಪಾ... ಕದ್ದದ್ದು ನಾನು!”
“ಯಾ..., ಯಾಕೆ ಕದ್ದೆ?”
ಮಗ ಮೌನವಾಗಿದ್ದ.
“ಕೇಳಿದ್ದರೆ ನಾನೇ ಕೊಡುತ್ತಿದ್ದೆನಲ್ಲಾ?”
“ಈ ರೀತಿ ಆ ಹುಡುಗನಬಳಿ ಯಾಕೆ ಕೇಳಲಿಲ್ಲ ಅಪ್ಪಾ?”
“ಅ.. ಅ.. ಅವನು ಬೇರೆ ಕಣೋ....” ಅಪ್ಪ ತಡಕಾಡಿದ.
“ಅವನೇ ಕದ್ದನೆಂದು ಹೇಗೆ ತೀರ್ಮಾನಿಸಿದೆ?”
ಅಪ್ಪ ಮೌನ.
“ಒಂದುದಿನ..., ಅವನು ಎದುರಿಸಿದ ಸಂದರ್ಭ ನನಗೂ ಬರಬಹುದು, ಅಲ್ಲವೇನಪ್ಪಾ?”
ಬಾಗಿ ಮಗನ ಹಣೆಗೆ ಮುತ್ತೊಂದು ಕೊಟ್ಟು...,
“ನೀನು ನನಗೆ ಗುರುವಾದೆ!”ಎಂದರು ಅಪ್ಪ.
ಮಗನ ಭಾವವನ್ನು ಅರ್ಥಮಾಡಿಕೊಂಡ ತಂದೆ 😊
ReplyDelete